TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸ್ವಾತಂತ್ರ್ಯ ಸಂಭ್ರಮದಲ್ಲಿ ಎಚ್ಚರಿಕೆಯಿಂದ ಆನ್‌ಲೈನ್ ಶಾಪಿಂಗ್ ಮಾಡಿ..!
ಭಾರತೀಯ ಇ-ಕಾಮರ್ಸ್ ಮಾರುಕಟ್ಟೆಯ ದೈತ್ಯ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳು ಫ್ರೀಡಮ್ ಡೇ ಸೇಲ್ ಅನ್ನು ಆಯೋಜಿಸಿವೆ. ಈ ಹಿನ್ನಲೆಯಲ್ಲಿ ನೀವು ಈ ಸೇಲ್ ಗಳಲ್ಲಿ ಭಾಗಿಯಾಗಿ ದೊಡ್ಡ ಮಟ್ಟದಲ್ಲಿ ಲಾಭವನ್ನು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ಮವು ಇದಾಗಿದೆ.
ಈ ಟ್ರಿಕ್ ಗಳನ್ನು ಬಳಕೆ ಮಾಡಿಕೊಂಡು ನೀಡುವ ಹೆಚ್ಚಿನ ವಸ್ತುಗಳನ್ನು ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ.
ಆಪ್ ಡೌನ್ ಲೋಡ್ ಮಾಡಿ:
ಈ ಸೇಲ್ ನಲ್ಲಿ ಹೆಚ್ಚಿನ ಲಾಭಕ್ಕಾಗಿ ನೀವು ಮೊದಲಿಗೆ ಪ್ಲೇ ಸ್ಟೋರಿನಲ್ಲಿ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ. ಇದರಿಂದಾಗಿ ಹೆಚ್ಚಿನ ಆಫರ್ ಗಳು ಆಪ್ ನಲ್ಲಿ ದೊರೆಯುತ್ತವೆ.
ಕಾರ್ಡ್ ಸೇವ್ ಮಾಡಿ:
ಸೇಲ್ ಗಳಲ್ಲಿ ತಕ್ಷಣವೇ ಆಫರ್ ಗಳನ್ನು ಪಡೆದುಕೊಳ್ಳಲು ಮೊದಲೇ ನಿಮ್ಮ ಕಾರ್ಡ್ ಗಳನ್ನು ಸೇವ್ ಮಾಡಿ. ಇರಿಂದಾಗಿ ಚೆಕ್ ಔಟ್ ಸಂದರ್ಭದಲ್ಲಿ ಹೆಚ್ಚಿನ ಸಮಯ ಉಳಿತಾಯವಾಗಲಿದೆ.
ಡೆಲಿವರಿ ಅಡ್ರಸ್:
ಇದಲ್ಲದೇ ಮೊದಲೆ ನಿಮ್ಮ ಡೆಲಿವರಿ ಆಡ್ರಸ್ ಅನ್ನು ಆಪ್ ಡೇಟ್ ಮಾಡಿರಿ, ಇಲ್ಲವಾದರೆ ಚೆಕ್ ಔಟ್ ಲೈಟ್ ಆಗಿ ನಿಮ್ಮ ವಸ್ತುಗಳು ಸಿಗದೆ ಹೋಗಬಹುದು.
ಸೈನ್ ಇನ್ ಆಗಿರಿ:
ಆಪ್ ಗಳಲ್ಲಿ ಮತ್ತು ಬ್ರೌಸರ್ ಗಳಲ್ಲಿ ಎಲ್ಲಾ ಸಮಯದಲ್ಲಿಯೂ ಸೈನ್ ಇನ್ ಆಗಿರಿ. ಇಲ್ಲವಾದರೆ ನೀವು ಪ್ಲಾಷ್ ಸೇಲಿನಲ್ಲಿ ವಸ್ತುವನ್ನು ಖರೀದಿಸಿದರು ವ್ಯರ್ಥವಾಗಲಿದೆ.
ರಿಜಿಸ್ಟರ್ ಆಗಿ:
ಕೆಲವು ಸೇಲ್ ಗಳು ಮೊದಲೆ ರಿಜಿಸ್ಟರ್ ಆಗಿ ಎನ್ನುವ ಆಯ್ಕೆಯನ್ನು ನೀಡಿರುತ್ತವೆ. ಈ ಹಿನ್ನಲೆಯಲ್ಲಿ ಮೊದಲಿಗೆ ಅವುಗಳಿಗೆ ರಿಜಿಸ್ಟರ್ ಆಗಿರಿ.
ವಿಷ್ ಲಿಸ್ಟ್:
ನೀವು ಖರೀದಿ ಮಾಡಬೇಕಾದ ವಸ್ತಗಳ ಲಿಸ್ಟ್ ಮಾಡಿಕೊಳ್ಳಿ ಇದರಿಂದಾಗಿ ನಿಮಗೆ ಬೇಕಾದ ಡೀಲ್ ಗಳನ್ನು ಹುಡುಕುವುದು ಸುಲಭವಾಗಲಿದೆ.
ಕೂಪನ್ ಹುಡುಕಿ:
ಇದಲ್ಲದೇ ಆನ್ ಲೈನಿನಲ್ಲಿ ಹಲವು ಕೂಪನ್ ಗಳು ಲಭ್ಯವಿರಲಿದೆ. ಇವುಗಳು ನಿಮಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಇದರಿಂದಾಗಿ ಮೊದಲೆ ಕೂಪನ್ ಗಳನ್ನು ಹುಡುಕಿಕೊಳ್ಳಿ.
ಆಫರ್ ಗಳು:
ಇದಲ್ಲದೇ ಮೊದಲೆ ಯಾವ ಆಫರ್ ಗಳು ದೊರೆಯಲಿದೆ ಎಂಬುದನ್ನು ತಿಳಿದುಕೊಳ್ಳಿ, ಇದರಿಂದಾಗಿ ಮುಂದಿನ ಸೇಲ್ ವಸ್ತುವಿನ ಬಗ್ಗೆ ಮಾಹಿತಿ ಇರಲಿದೆ. ಕಡಿಮೆ ಬೆಲೆ ಇದ್ದಾಗ ಖರೀದಿ ಮಾಡುವುದು ಉತ್ತಮ.
ಅಮೆಜಾನ್ ಅಸಿಸ್ಟೆಂಟ್:
ಇದಲ್ಲದೇ ಅಮೆಜಾನ್ ಅಸಿಸ್ಟೆಂಟ್ ಅನನ್ನು ಇನ್ ಸ್ಟಾಲ್ ಮಾಡಿಕೊಳ್ಳಿ, ಇದರಿಂದಾಗಿ ಹೆಚ್ಚಿನ ಆಫರ್ ಗಳ ಬಗ್ಗೆ ಮಾಹಿತಿಯೂ ದೊರೆಯಲಿದೆ ಮತ್ತು ಶಾಪಿಂಗ್ ಸಂದರ್ಭದಲ್ಲಿ ಸಹಾಯವಾಗಲಿದೆ.
ಅಮೆಜಾನ್ ಪ್ರೈಮ್:
ಮೊದಲಿಗೆ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಿ, ಇದರಿಂದಾಗಿ ಎಲ್ಲಾ ಆಫರ್ ಗಳು ನಿಮಗೆ ಮೊದಲಿಗೆ ದೊರೆಯಲಿದೆ ಮತ್ತು ಡೆಲಿವರಿ ಸಹ ವೇಗವಗಿ ದೊರೆಯಲಿದೆ.