ಆಂಡ್ರಾಯ್ಡ್ ಬಳಕೆದಾರರಿಗೆ ಅತ್ಯಗತ್ಯವಾಗಿರುವ ಟಾಪ್ ಟಿಪ್ಸ್

By Shwetha
|

ವಿಶ್ವದಾದ್ಯಂತ ಬಿಲಿಯಗಟ್ಟಲೆ ಜನರು ಆಂಡ್ರಾಯ್ಡ್ ಡಿವೈಸ್ ಅನ್ನು ಬಳಸುತ್ತಿದ್ದಾರೆ. ಆದರೆ ಆಂಡ್ರಾಯ್ಡ್ ಬಳಕೆದಾರರು ತಮ್ಮ ಮಾಂತ್ರಿಕ ಡಿವೈಸ್‌ಗಳಲ್ಲಿ ಅರಿಯದರಿರುವ ಕೆಲವೊಂದು ಸಲಹೆಗಳಿವೆ. ಈ ಸಲಹೆಗಳನ್ನು ಪಾಲಿಸಿಕೊಂಡು ತಮ್ಮ ಡಿವೈಸ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಕೆದಾರರಿಗೆ ಬಳಸಬಹುದಾಗಿದೆ.

ಓದಿರಿ: ದೇಹದ ಉಷ್ಣತೆಯಿಂದ ಫ್ಲ್ಯಾಶ್ ಲೈಟ್ ತಯಾರಿ: 15 ರ ಬಾಲಕಿಯ ಸಾಧನೆ

ಹಾಗಿದ್ದರೆ ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಈ ಸಲಹೆಗಳನ್ನು ಪಾಲಿಸಿಕೊಂಡು ನಿಮ್ಮ ಫೋನ್ ಮಾಡುವ ಚಮತ್ಕಾರಗಳನ್ನು ಆಸ್ವಾದಿಸಬಹುದಾಗಿದೆ. ಹಾಗಿದ್ದರೆ ಬನ್ನಿ ಅದೇನು ಎಂಬುದನ್ನು ಅರಿಯೋಣ.

ಗೂಗಲ್ ಮ್ಯಾಪ್ಸ್

ಗೂಗಲ್ ಮ್ಯಾಪ್ಸ್

ನೀವು ವೈಫೈ ಅಥವಾ ಡೇಟಾವನ್ನು ಕಳೆದುಕೊಂಡಿದ್ದರೂ, ಗೂಗಲ್ ಮ್ಯಾಪ್ಸ್ ಅನ್ನು ಬಳಸಬಹುದಾಗಿದೆ. ಈ ವ್ಯವಸ್ಥೆಯು ಇದೀಗ ಆಫ್‌ಲೈನ್‌ನಲ್ಲೂ ಲಭ್ಯವಿದ್ದು ನೀವು ಆಯ್ಕೆಮಾಡಿ ಮತ್ತು ಮ್ಯಾಪ್‌ನಲ್ಲಿ ನಿರ್ದಿಷ್ಟ ಪ್ರದೇಶವನ್ನು ಡೌನ್‌ಲೋಡ್ ಮಾಡಿ ನಂತರ ಬ್ರೌಸ್ ಮಾಡಬಹುದಾಗಿದೆ. ಇದಕ್ಕಾಗಿ ಸರ್ಚ್ > ಈ ಮ್ಯಾಪ್ ವಲಯವನ್ನು ಆಫ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಿ ಇದನ್ನು ಒತ್ತಿರಿ.

ಸ್ಪೀಡ್ ಡಯಲ್‌

ಸ್ಪೀಡ್ ಡಯಲ್‌

ಸ್ಪೀಡ್ ಡಯಲ್‌ನಲ್ಲಿ ಸಾಕಷ್ಟು ಸಂಖ್ಯೆಯನ್ನು ಇರಿಸಿಕೊಳ್ಳುವುದರ ಬದಲಿಗೆ, ನೀವು ಹೆಚ್ಚು ಡಯಲ್ ಮಾಡಿದ ಸಂಪರ್ಕಗಳನ್ನು ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿ ಇರಿಸುವ ವ್ಯವಸ್ಥೆಯನ್ನು ಮಾಡಲಿದೆ. ನಿಮ್ಮ ಹೋಮ್ ಸ್ಕ್ರೀನ್‌ನ ಖಾಲಿ ಸ್ಪೇಸ್‌ನಲ್ಲಿ ಒತ್ತಿಹಿಡಿದುಕೊಳ್ಳಿ

ಫೋನ್ ಕಳೆದು ಹೋದಲ್ಲಿ

ಫೋನ್ ಕಳೆದು ಹೋದಲ್ಲಿ

ನಿಮ್ಮ ಕಳೆದು ಹೊಗಿರುವ ಫೋನ್ ಅನ್ನು ಮರುಪಡೆದುಕೊಳ್ಳುವ ಅವಕಾಶ ನಿಮಗೆ ಒದಗಿ ಬಂದಲ್ಲಿ ಅದನ್ನು ತಳ್ಳಿಹಾಕದಿರಿ. ಆಂಡ್ರಾಯ್ಡ್ ನಿಮಗೆ ಈ ಅವಕಾಶವನ್ನು ಒದಗಿಸುತ್ತಿದೆ. ಸೆಟ್ಟಿಂಗ್ಸ್ > ಸೆಕ್ಯುರಿಟಿ > ಸ್ಕ್ರೀನ್ ಸೆಕ್ಯುರಿಟಿ > ಮಾಲೀಕರ ಮಾಹಿತಿ. ನಿಮ್ಮ ಹೆಸರನ್ನು ನಮೂದಿಸಿ, ಇಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯನ್ನು ನಮೂದಿಸಿಕೊಳ್ಳಿ.

ಗೂಗಲ್ ಕ್ರೋಮ್

ಗೂಗಲ್ ಕ್ರೋಮ್

ಫೋನ್ ಅಪ್ಲಿಕೇಶನ್‌ನಲ್ಲಿ ಗೂಗಲ್ ಕ್ರೋಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಿಮಗೆ ಲಿಂಕ್‌, ಸಂದೇಶಗಳು ಮತ್ತು ಫೋನ್ ಸಂಖ್ಯೆಗಳನ್ನು ನಿಮ್ಮ ಡೆಸ್ಕ್‌ಟಾಪ್ ಬ್ರೌಸರ್‌ನಿಂದ ಫೋನ್‌ಗೆ ನೇರವಾಗಿ ಕಳುಹಿಸಲು ಸಾಧ್ಯವಾಗುತ್ತದೆ. ನಿಮ್ಮ ಫೋನ್‌ನಲ್ಲಿ ತಕ್ಷಣವೇ ಬುಕ್‌ಮಾರ್ಕ್‌ಗಳು ಮತ್ತು ಉಳಿಸಿದ ಹುಡುಕಾಟಗಳನ್ನು ಪ್ರವೇಶಿಸಲು ನಿಮಗೆ ಸಹಾಯ ಮಾಡುತ್ತದೆ.

ಸ್ಕ್ರೀನ್ ಶಾಟ್

ಸ್ಕ್ರೀನ್ ಶಾಟ್

ನಿಮ್ಮ ಸ್ಕ್ರೀನ್‌ನಲ್ಲಿ ಚಿತ್ರವನ್ನು ಸೆರೆಹಿಡಿಯುವುದು ನಿಮ್ಮ ಸಣ್ಣ ಬೆರಳಿನಿಂದ ಸ್ವೈಪ್ ಮಾಡುವುದರಿಂದ ಸಾಧ್ಯವಾಗುತ್ತದೆ ಸ್ಕ್ರೀನ್‌ನಲ್ಲಿ ಎಡದಿಂದ ಬಲಕ್ಕೆ ಸ್ವೈಪ್ ಮಾಡಬೇಕು.

ಡೇಟಾ ಬಳಕೆ

ಡೇಟಾ ಬಳಕೆ

ಅನಿಯಮಿತ ಡೇಟಾವನ್ನು ನೀವು ಹೊಂದಿಲ್ಲ ಎಂದಾದಲ್ಲಿ, ಆಂಡ್ರಾಯ್ಡ್ ಜೆಲ್ಲಿಬೀನ್ ನಿಮ್ಮ ಡೇಟಾ ಬಳಕೆಯನ್ನು ಮಾನಿಟರ್ ಮಾಡಲು ಫೋನ್ ಅನ್ನು ಪ್ರೊಗ್ರಾಮ್ ಮಾಡಲು ಅನುಮತಿಸುತ್ತದೆ. ನೀವು ಹೆಚ್ಚು ಪಾವತಿಯನ್ನು ವಿನಂತಿಸುತ್ತಿದ್ದೀರಿ ಎಂದಾದಲ್ಲಿ, ಇದು ನಿಮಗೆ ಎಚ್ಚರಿಕೆಯನ್ನು ನೀಡುತ್ತದೆ ಅಂತೆಯೇ ನಿರ್ದಿಷ್ಟ ಮಿತಿಯನ್ನು ತಲುಪಿದಾಗ ನಿಮ್ಮನ್ನು ನಿಲ್ಲಿಸುತ್ತದೆ.

ಡಿಕ್ಶನರಿಗೆ ಸೇರಿಸಿ

ಡಿಕ್ಶನರಿಗೆ ಸೇರಿಸಿ

ಕ್ಲಿಷ್ಟಕರ ಹೆಸರುಗಳು ಮತ್ತು ಪದಗಳನ್ನು ತನ್ನ ಡಿಕ್ಶನರಿಗೆ ಸೇರಿಸಿಕೊಳ್ಳಲು ಆಂಡ್ರಾಯ್ಡ್ ನಿಮ್ಮನ್ನು ಅನುಮತಿಸುತ್ತದೆ. ನೀವು ಒಮ್ಮೆ ಬರೆದ ಹೆಸರನ್ನು ಇನ್ನೊಮ್ಮೆ ಬರೆಯುವಾಗ ತನ್ನಷ್ಟಕ್ಕೆ ಅದು ಗೋಚರಿಸುತ್ತದೆ.

ಸಂಗ್ರಹಣೆ

ಸಂಗ್ರಹಣೆ

ನಿಮ್ಮ ಫೋನ್ ಅನ್ನು ಪೋರ್ಟೇಬಲ್ ಯುಎಸ್‌ಬಿ ಡ್ರೈವ್‌ನಂತೆ ಬಳಸಿಕೊಂಡು ಫೈಲ್‌ಗಳ ಸಂಗ್ರಹಣೆಯನ್ನು ಮಾಡಿಕೊಳ್ಳಬಹುದಾಗಿದೆ. ನಂತರ ಅದನ್ನು ಕಂಪ್ಯೂಟರ್‌ಗೆ ವರ್ಗಾಯಿಸಬಹುದಾಗಿದೆ. ಯುಎಸ್‌ಬಿ ಕೇಬಲ್ ಬಳಸಿಕೊಂಡು ನಿಮ್ಮ ಕಂಪ್ಯೂಟರ್‌ಗೆ ಫೋನ್ ಪ್ಲಗಿನ್ ಮಾಡುವುದು ಫೈಲ್‌ಗಳನ್ನು ಸ್ವಾಪ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.

ಬ್ಯಾಟರಿ ಉಳಿಕೆ

ಬ್ಯಾಟರಿ ಉಳಿಕೆ

ವೈಫೈ, ಜಿಪಿಎಸ್, ಬ್ಲ್ಯೂಟೂತ್, ಬ್ರೈಟ್‌ನೆಸ್ ಲೆವೆಲ್ ಅನ್ನು ಪ್ರವೇಶಿಸಲು ಅನುಮತಿಸುತ್ತದೆ ಮತ್ತು ಹೋಮ್ ಪೇಜ್‌ನಿಂದ ಗೂಗಲ್ ಸಿಂಕಿಂಗ್ ಅನ್ನು ಮಾಡಬಹುದಾಗಿದೆ. ಈ ಫೀಚರ್‌ಗಳನ್ನು ಪ್ರವೇಶಿಸಲು ಆಗಾಗ್ಗೆ ಸೆಟ್ಟಿಂಗ್ ಪ್ರವೇಶಿಸಬೇಕೆಂದೇನಿಲ್ಲ. ಜೊತೆಗೆ ಬ್ಯಾಟರಿ ದೀರ್ಘತೆಯನ್ನು ಇದು ಮಾಡುತ್ತದೆ. ಸೆಟ್ಟಿಂಗ್ಸ್ > ರನ್ನಿಂಗ್ ಸರ್ವೀಸಸ್, ಸ್ಟಾಪ್ ಒತ್ತುವ ಮೂಲಕ ನೀವು ಬಳಸದೇ ಇರುವ ಅಪ್ಲಿಕೇಶನ್‌ಗಳನ್ನು ಮುಚ್ಚಬಹುದಾಗಿದೆ.

ವಿಶೇಷ ಅಕ್ಷರ

ವಿಶೇಷ ಅಕ್ಷರ

ಹೆಚ್ಚು ಸಾಮಾನ್ಯವಾಗಿ ಬಳಸಿದ ವಿಶೇಷ ಅಕ್ಷರಗಳನ್ನು ನೀವು ಪ್ರವೇಶಿಸಬೇಕು ಎಂದಾದಲ್ಲಿ, ಪ್ರತ್ಯೇಕ ಕೀಬೋರ್ಡ್‌ನ ಸಿಂಬಲ್ ಬಟನ್‌ಗಳನ್ನು ನೀವು ಒತ್ತಬೇಕಾಗಿಲ್ಲ ಬದಲಿಗೆ ಪೂರ್ಣ ವಿರಾಮ ಬಟನ್ ಅನ್ನು ಒತ್ತಿಹಿಡಿದಾಗ ಹೆಚ್ಚು ಸಾಮಾನ್ಯವಾಗಿ ಬಳಸಿದ ಅಕ್ಷರಗಳು ಎದ್ದುಗಾಣುತ್ತದೆ ಇದರಿಂದ ನಿಮ್ಮ ಸಮಯ ಕೂಡ ಉಳಿತಾಯವಾಗುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಲ್ಯಾಪ್‌ಟಾಪ್ ಬ್ಯಾಟರಿ ಕಾಪಾಡುವ ನಾಲ್ಕು ಸಲಹೆಗಳು</a><br /><a href=ಫ್ಲೈಟ್‌ನಲ್ಲಿ ನಿಮ್ಮ ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿರಬೇಕು:ಕಾರಣ ಇಲ್ಲಿದೆ
ಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ಆಶ್ಚರ್ಯಕರ ಸ್ಥಳ" title="ಲ್ಯಾಪ್‌ಟಾಪ್ ಬ್ಯಾಟರಿ ಕಾಪಾಡುವ ನಾಲ್ಕು ಸಲಹೆಗಳು
ಫ್ಲೈಟ್‌ನಲ್ಲಿ ನಿಮ್ಮ ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿರಬೇಕು:ಕಾರಣ ಇಲ್ಲಿದೆ
ಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ಆಶ್ಚರ್ಯಕರ ಸ್ಥಳ" loading="lazy" width="100" height="56" />ಲ್ಯಾಪ್‌ಟಾಪ್ ಬ್ಯಾಟರಿ ಕಾಪಾಡುವ ನಾಲ್ಕು ಸಲಹೆಗಳು
ಫ್ಲೈಟ್‌ನಲ್ಲಿ ನಿಮ್ಮ ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿರಬೇಕು:ಕಾರಣ ಇಲ್ಲಿದೆ
ಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ಆಶ್ಚರ್ಯಕರ ಸ್ಥಳ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ನಮ್ಮ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡುತ್ತಿರಿ

Best Mobiles in India

English summary
In this article we are giving you essential tips and tricks every phone user should know about this.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X