ದೇಹದ ಉಷ್ಣತೆಯಿಂದ ಫ್ಲ್ಯಾಶ್ ಲೈಟ್ ತಯಾರಿ: 15 ರ ಬಾಲಕಿಯ ಸಾಧನೆ

By Shwetha
|

ಇಂದು ವಿಶ್ವದಲ್ಲಿ ಬಿಲಿಯಗಟ್ಟಲೆ ಜನರು ವಿದ್ಯುತ್ ಪೂರೈಕೆಯಿಲ್ಲದೆ ಜೀವಿಸುತ್ತಿದ್ದಾರೆ. ತಮಗೆ ದೊರೆಯುತ್ತಿರುವ ಜೀವನ ಸೌಲಭ್ಯಗಳಿಂದ ಬಹುಶಃ ವಿದ್ಯುತ್ ಪೂರೈಕೆಯಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಜನರು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಕೆಲವು ಬುದ್ಧಿವಂತರು ಈ ಸಮಸ್ಯೆಯಿಂದ ಜನರನ್ನು ಹೊರತರಲೆಂದೇ ಕೆಲವೊಂದು ಆವಿಷ್ಕಾರಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಮತ್ತು ಅವರಿಗೆ ಇಂತಹ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ನೆರವಾಗುತ್ತಿದ್ದಾರೆ.

ಓದಿರಿ: ಅಚ್ಚರಿ: ನೀವು ಧರಿಸಿರುವ ದಿರಿಸಿನಲ್ಲೇ ಫೋನ್ ಚಾರ್ಜ್ ಮಾಡಿ

ಆದರೆ ಇಂದಿನ ಲೇಖನದಲ್ಲಿ ನಾವು ಹೇಳಹೊರಟಿರುವುದು ಹೀಗೆ ಧ್ವನಿಯಾಗಿರುವ 16 ರ ಹರೆಯದ ಸಾಧಕಿ ಆನ್ ಮಕೊಸಿನಿಕ್ಸಿ ಯ ಬಗ್ಗೆಯಾಗಿದೆ. ವಿಕ್ಟೋರಿಯಾ ಬ್ರಿಟಿಷ್ ಕೊಲಂಬಿಯಾದ ಈ ಬಾಲಕಿ, 2013 ರ ಗೂಗಲ್ ಸೈನ್ಸ್ ಫೇರ್‌ನಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡ ಸಾಧಕಿ. ದೇಹದ ಶಾಖವನ್ನು ಬಳಸಿಕೊಂಡು ಉರಿಯುವ ಫ್ಲ್ಯಾಶ್ ಲೈಟ್ ಅನ್ನು ಈಕೆ ಅನ್ವೇಷಿಸಿದ್ದಾಳೆ. ವಿಶ್ವದ ಸಾವಿರಾರು ನಮೂದುಗಳಲ್ಲಿ ಆಯ್ಕೆಗೊಂಡ 15 ರಲ್ಲಿ ಆನ್ ಮಕೊಸಿನಿಕ್ಸಿ ಸಾಧನೆಯೂ ಒಂದು. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದು ಇದನ್ನು ಕುರಿತು ಮಾಹಿತಿ ಪಡೆದುಕೊಳ್ಳಬಹುದಾಗಿದೆ.

#1

#1

15-16 ರ ಹರೆಯದ ಶ್ರೇಣಿಯಲ್ಲಿ ಈಕೆ ಬಹುಮಾನವನ್ನು ಗೆದ್ದುಕೊಂಡಿದ್ದು $25,000 ಸ್ಕಾಲರ್ ಶಿಪ್ ಅನ್ನು ಇದು ಪಡೆದುಕೊಂಡಿದೆ ಅಂತೆಯೇ ಜೀವನ ಕಾಲದ ಉತ್ತಮ ಸಾಧನೆ ಎಂಬ ಹೆಗ್ಗಳಿಕೆಗೂ ಪಾತ್ರಗೊಂಡಿದೆ.

#2

#2

ತನ್ನ ಸಣ್ಣ ಹರೆಯದಿಂದಲೇ ಆನ್ ಅನ್ವೇಷಣೆಗಳನ್ನು ನಡೆಸುತ್ತಲೇ ಬಂದಿದ್ದಾಳೆ. ಆದ್ದರಿಂದ ಆಕೆಯ ಬಗ್ಗೆ ಅರಿತವರು ಈ ಸಾಧನೆಯ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ.

#3

#3

ಹಲವಾರು ವಿಜ್ಞಾನ ಮೇಳಗಳಲ್ಲಿ ತನ್ನ ಅನ್ವೇಷಣೆಗಳನ್ನು ಈಕೆ ಪ್ರದರ್ಶಿಸುತ್ತಾ ಬಂದಿದ್ದು ಪರ್ಯಾಯ ಶಕ್ತಿಯ ಬಗ್ಗೆ ಈಕೆ ಆಸಕ್ತಿಯನ್ನು ಹೊಂದಿದ್ದಾಳೆ.

#4

#4

ತನ್ನ ಸ್ನೇಹಿತರೊಂದಿಗೆ ಈ ಅನ್ವೇಷಣೆಯ ಕುರಿತು ಆಕೆ ಸಂವಾದಗಳನ್ನು ನಡೆಸಿದ್ದು, ಅಭಿವೃದ್ಧಿ ಹೊಂದುತ್ತಿರುವ ದೇಶಗಳು, ಹಿಂದುಳಿದ ದೇಶಗಳಲ್ಲಿ ಬಂದೊದಗಿರುವ ವಿದ್ಯುತ್ ಸಮಸ್ಯೆಯ ಬಗ್ಗೆ ಆಕೆ ಅರಿತುಕೊಳ್ಳುತ್ತಾಳೆ.

#5

#5

ಅಂತೆಯೇ ತನ್ನ ಎಷ್ಟೋ ಸ್ನೇಹಿತರು ಶಾಲಾ ಚಟುವಟಿಕೆಗಳಲ್ಲಿ ಹಿಂದುಳಿದಿದ್ದು ವಿದ್ಯುತ್ ಸಮಸ್ಯೆಯನ್ನು ಅವರುಗಳು ಅನುಭವಿಸುತ್ತಿದ್ದಾರೆ ಎಂಬ ಸತ್ಯವನ್ನು ಆಕೆ ಅರಿತುಕೊಳ್ಳುತ್ತಾಳೆ.

#6

#6

ಆದರೆ ಸಾಮಾನ್ಯರಂತೆ ಇದೊಂದು ಮಾಮೂಲಿ ಸಮಸ್ಯೆ ಎಂಬುದಾಗಿ ಆಕೆ ಪರಿಗಣಿಸದೇ ಆನ್ ಇದರಲ್ಲಿ ಪ್ರಗತಿಯನ್ನು ತರಲು ಬಯಸಿದಳು. ಇದಕ್ಕೆ ತಕ್ಕ ಪರಿಹಾರವನ್ನು ಕಂಡುಕೊಳ್ಳುವ ವ್ಯವಸ್ಥೆಯನ್ನು ಆಕೆ ಆರಂಭಿಸಬಯಸಿದಳು.

#7

#7

ಈ ವ್ಯವಸ್ಥೆಯೇ ಆಕೆಯನ್ನು ಫ್ಲ್ಯಾಶ್ ಲೈಟ್ ಸಿದ್ಧಪಡಿಸುವಲ್ಲಿ ನೆರವಾಗಿರುವಂಥದ್ದು. ಯಾವುದೇ ಹೆಚ್ಚುವರಿ ಖರ್ಚಿಲ್ಲದೆ ಇದ್ದ ಅಗತ್ಯಗಳಲ್ಲೇ ಆಕೆ ವಿದ್ಯುತ್ ಅನ್ನು ಬಡಜನರಿಗೆ ಅಂತೆಯೇ ವಿಶ್ವದಲ್ಲಿ ವಿದ್ಯುತ್ ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ಒದಗಿಸಲು ಬಯಸಿದಳು.

#8

#8

ತನ್ನ ಏಳನೇ ತರಗತಿಯಲ್ಲಿ ಆಕೆ ಪೆಲ್ಟಿಯರ್ ಟೈಲ್ಸ್ ಅನ್ನು ಅಧ್ಯಯನ ಮಾಡಿದ್ದರಿಂದಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳುವಲ್ಲಿ ಆಕೆಗೆ ಯಾವುದೇ ತೊಡಕು ಉಂಟಾಗಿರಲಿಲ್ಲ. ಮಾನವನ ದೇಹದಿಂದ ಉತ್ಪನ್ನವಾಗುವ ಶಾಖವು ಥರ್ಮಲ್ ಎನರ್ಜಿಯನ್ನು ಕ್ಯಾಪ್ಚರ್ ಮಾಡಲು ಸಮರ್ಥವಾಗಿದೆ ಎಂಬುದನ್ನು ಆಕೆ ಕಂಡುಕೊಂಡಳು.

#9

#9

ಕೆಲವೊಂದು ವಿಶ್ಲೇಷಣೆಗಳನ್ನು ನಡೆಸಿದ ನಂತರ, ಮಾನವನ ದೇಹದ ಶಾಖವು ಎಲ್‌ಇಡಿ ಲೈಟ್ ಅನ್ನು ಉರಿಸುವಷ್ಟು ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂಬುದನ್ನು ಆಕೆ ಮನಗಂಡಳು.

#10

#10

ಇಬೇಯಿಂದ ಪೆಲ್ಟಿಯರ್ ಟೈಲ್‌ಗಳನ್ನು ಆಕೆ ಖರೀದಿಸಿ ತನ್ನ ಕಷ್ಟಕರ ಅನ್ವೇಷಣೆಯನ್ನು ಆನ್ ಆರಂಭಿಸಿದಳು. ಸಾಕಷ್ಟು ಹೆಚ್ಚುವರಿ ಶಕ್ತಿಯನ್ನೇ ಇದು ಉತ್ಪಾದಿಸುತ್ತಿದೆ ಎಂಬ ಅಂಶವನ್ನು ಆನ್ ಮನಗಂಡಳು.

#11

#11

ವೋಲ್ಟೇಜ್ ಕೂಡ ಕೆಲವೊಂದು ಫ್ರಾಕ್ಶನ್ ಮಟ್ಟದಲ್ಲಿದ್ದು ನಿಜವಾದ ಸಮಸ್ಯೆಯನ್ನು ಆಕೆ ಮನಗಾಣುವಲ್ಲಿ ಪ್ರಯತ್ನ ಪಟ್ಟಳು. ವೋಲ್ಟೇಜ್ ಹೆಚ್ಚಿಸಲು ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ಸ್ ಅಗತ್ಯವಿದೆ ಎಂಬುದನ್ನು ಆಕೆ ಅರ್ಥೈಸಿಕೊಂಡಳು.

#12

#12

ಇಂಟರ್ನೆಟ್‌ನಲ್ಲಿ ಇದಕ್ಕಾಗಿ ಕೆಲವಾರು ತಿಂಗಳುಗಳ ಶ್ರಮವನ್ನು ಆಕೆ ಪಟ್ಟಳು. ಬೇರೆ ಬೇರೆ ಸರ್ಕ್ಯೂಟ್ಸ್ ಮತ್ತು ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಆಕೆಯ ಶೋಧನೆ ನಡೆಯಿತು. ಆದರೆ ಇದಾವುದೂ ಹೆಚ್ಚುವರಿ ವೋಲ್ಟೇಜ್ ಅನ್ನು ಉತ್ಪಾದಿಸಲಿಲ್ಲ.

#13

#13

ಇಂಟರ್ನೆಟ್‌ನಲ್ಲಿ ನೀಡಲಾದ ಮಾಹಿತಿಯನ್ನು ಆಧರಿಸಿ ಆಕೆಗೆ ಸೂಕ್ತವಾದ ಸರ್ಕ್ಯೂಟ್ ದೊರೆತು ಇದು ಆನ್ ಬಯಸಿರುವ ವೋಲ್ಟೇಜ್ ಅನ್ನು ಒದಗಿಸಿತು. ಕೊನೆಗೂ ಸರ್ಕ್ಯೂಟ್ ಕಾರ್ಯನಿರ್ವಹಿಸಿತು.

#14

#14

ಆನ್ ಎರಡು ವಿಭಿನ್ನ ಫ್ಲ್ಯಾಶ್‌ಲೈಟ್‌ಗಳನ್ನು ಉತ್ಪಾದಿಸಿದಳು. ಪೆಲ್ಟಿಯರ್ ಟೈನಂತೆಯೇ ಭಿನ್ನವಾದುದು ಒಂದು, ಇತರ ಭಾಗಗಳಿಂದ ಇಲೆಕ್ಟ್ರಾನಿಕ್‌ಗಳನ್ನು ಸಂಯೋಜಿಸಿ ತಯಾರಿಸಿದಳು. ಅಲ್ಯುಮಿನಿಯಮ್ ಟ್ಯೂಬ್ ಅನ್ನು ಬಳಸಿಕೊಂಡು ಇದರಲ್ಲಿ ತಂಪಾದ ತಾಪಮಾನಗಳನ್ನು ಹರಿಯಿಸಿ ಪೆಲ್ಟಿಯರ್ ಟೈಲ್‌ಗಳ ಮುಖಾಂತರ ವರ್ಗಾಯಿಸಿದಳು.

#15

#15

ಎರಡನೇ ಮಾಡೆಲ್ ಅನ್ನು ಕಾರ್ಯಾಚರಿಸಲು ಆಕೆ ಪಿವಿಸಿ ಪೈಪ್‌ಗಳನ್ನು ಬಳಸಿದಳು. ಇದರಲ್ಲಿ ಮಾನವನ ಕೈಗಳು ಸಂಪರ್ಕಕ್ಕೆ ಬರುವಂತೆ ಮಾಡಿಕೊಂಡು ಇನ್ನೊಂದು ಭಾಗದಲ್ಲಿ ಪೆಲ್ಟಿಯರ್ ಪೈಪ್‌ಗಳನ್ನು ಇರಿಸಿದಳು.

#16

#16

ಈ ಫ್ಲ್ಯಾಶ್‌ಲೈಟ್‌ಗಳು ಬರೇ 5 ಡಿಗ್ರಿ ಸೆಲ್ಶಿಯಸ್‌ನಲ್ಲೂ ಪ್ರಕಾಶಮಾನವಾಗಿದ್ದವು, ದೇಹದ ಉಷ್ಣತೆ ಮತ್ತು ಗಾಳಿಯ ತಾಪಮಾನ ಎರಡೂ ವಿಧಾನವನ್ನು ಆನ್ ಬಳಸಿಕೊಂಡಿದ್ದಳು.

#17

#17

ಕಡಿಮೆ ದರದಲ್ಲೇ ವಿದ್ಯುತ್ ಪೂರೈಕೆಯನ್ನು ಮಾಡಬಹುದಾದ ನವೀನ ಯೋಜನೆಯನ್ನು ಆನ್ ಅನ್ವೇಷಿಸಿದಳು. ಯಾವುದೇ ಪ್ರಾಕೃತಿಕ ದೋಷವನ್ನು ಉಂಟುಮಾಡದೇ ಅತಿ ಕಡಿಮೆ ಖರ್ಚಿನಲ್ಲೇ ಆನ್ ಅನ್ವೇಷಣೆಯನ್ನು ಮುಗಿಸಿದಳು.

#18

#18

ಇಂತಹುದೇ ಫ್ಲ್ಯಾಶ್ ಲೈಟ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಿದರೆ, ಇನ್ನಷ್ಟು ಕಡಿಮೆ ವೆಚ್ಚದಲ್ಲಿಯೇ ವಿದ್ಯುತ್ ಸಮಸ್ಯೆಯನ್ನು ನೀಗಿಸಬಹುದಾಗಿದೆ ಎಂಬುದು ಆಕೆಯ ಯೋಚನೆಯಾಗಿದೆ.

#19

#19

ತುರ್ತು ಪರಿಸ್ಥಿತಿಗಳಲ್ಲಿ 20 ನಿಮಿಷಗಳ ಕಾಲ ಈ ಫ್ಲ್ಯಾಶ್ ಲೈಟ್ ಕಾರ್ಯನಿರ್ವಹಿಸಲಿದ್ದು ಪ್ರಯಾಣ ಸಂದರ್ಭದಲ್ಲಿ ಕೂಡ ಇದನ್ನು ಕೊಂಡೊಯ್ಯಬಹುದಾಗಿದೆ.

#20

#20

ಹೊರಭಾಗದಲ್ಲಿ ದೇಹದ ಉಷ್ಣತೆಯನ್ನು ಒಳಭಾಗದಲ್ಲಿ ತಂಪಾದ ಗಾಳಿಯನ್ನು ಈ ಲೈಟ್ ಬಳಸಿಕೊಂಡಿದ್ದು ಪೆಟ್ಲಿಯರ್ ಟೈಲ್ಸ್ ಅನ್ನು ಇದು ಬಳಸಿಕೊಂಡಿದೆ.

Best Mobiles in India

English summary
One such innovator is Ann Makosinski, a 16-year old student from Victoria, British Columbia. Last year, she participated in 2013 Google Science Fair, where she unveiled a design for a flashlight that uses a person's own bodyheat to create light.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X