ಬೆಂಗಳೂರಿನಲ್ಲಿ ಸದ್ಯದಲ್ಲೇ ಏರ್‌ಟೆಲ್ 4ಜಿ ಸೇವೆ ಆರಂಭ

Posted By:

ಬೆಂಗಳೂರಿನಲ್ಲಿ ಏರ್‌ಟೆಲ್‌ ಸದ್ಯದಲ್ಲೇ 4ಜಿ ಸೇವೆ ಆರಂಭಿಸಿಲಿದೆ. ಟ್ವೀಟರ್‌ನಲ್ಲಿ ಏರ್‌ಟೆಲ್‌ ಈ ಸುದ್ದಿ ಪ್ರಕಟಿಸಿದ್ದು ಮೂರು ವಾರದೊಳಗೆ ಬೆಂಗಳೂರಿನಲ್ಲಿ ತನ್ನ 4ಜಿ ಸೇವೆಯನ್ನು ಆರಂಭಿಸಿಲಿದ್ದೇವೆ ಎಂದು ಹೇಳಿದೆ.

ಏರ್‌ಟೆಲ್‌ ಈ ವರ್ಷದ ಫೆಬ್ರವರಿಯಲ್ಲಿ ಪುಣೆ, ಬೆಂಗಳೂರಿನಲ್ಲಿ 4ಜಿ ಸೇವೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಬಳಿಕ ಈಗ ಆರಂಭಿಸಲು ಮುಂದಾಗುತ್ತಿದೆ.4ಜಿ ಸೇವೆಯಲ್ಲಿ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಪಡೆಯಬೇಕಾದ್ರೆ ವೈಮಾಕ್ಸ್‌ ಅಥವಾ ಎಲ್‌ಟಿಇ ಸರ್ವೀಸ್‌ ಮತ್ತು ಅಪ್ಲಿಕೇಶನ್‌ಗಳು ಇರುವ ಸ್ಮಾರ್ಟ್‌‌ಫೋನ್‌ಗಳನ್ನೇ ಬಳಸಬೇಕಾಗುತ್ತದೆ.

Only for #airtel #Bangalore mobile customers, enjoy #airtel4G on #LTE enabled smartphones in 3 weeks. More details to follow soon!
— Airtel India (@airtelindia) December 5, 2013

ಹೀಗಾಗಿ ಮುಂದಿನ ಪುಟದಲ್ಲಿ4ಜಿ ತಂತ್ರಜ್ಞಾನ,4ಜಿ ಮತ್ತು 3ಜಿ ಮೊಬೈಲ್‌ ಸಂಪರ್ಕ ತಂತ್ರಜ್ಞಾನ ವ್ಯತ್ಯಾಸವನ್ನು ತಿಳಿಸಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು 4ಜಿ ?

ಏನಿದು 4ಜಿ ?

3ಜಿ ವರ್ಸಸ್‌ 4ಜಿ

ಟೆಲಿಕಮ್ಯೂನಿಕೇಷನ್‌ ವಲಯದಲ್ಲಿ ನಾಲ್ಕನೇಯ ಪೀಳಿಗೆಯ ಮೊಬೈಲ್‌ ಸಂಪರ್ಕ ತಂತ್ರಜ್ಞಾನಕ್ಕೆ 4ಜಿ ಎಂದು ಕರೆಯುತ್ತೇವೆ. ಮೂರನೇಯ ಪೀಳಿಗೆಯ ಬಳಿಕ ಅಭಿವೃದ್ಧಿ ಪಡಿಸಲಾದ ಮೊಬೈಲ್‌ ಸಂಪರ್ಕ ತಂತ್ರಜ್ಞಾನವಿದು. ಮೊಬೈಲ್ ಅಲ್ಟ್ರಾ-ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ತಂತ್ರಜ್ಞಾನ ಇರುವುದರಿಂದ ಈಗ ಇರುವ 3ಜಿ ಸೇವೆಗಿಂತಲೂ ವೇಗವಾಗಿ ನಮ್ಮ ಇಂಟರ್‌ನೆಟ್‌ ಕೆಲಸವನ್ನು ಮಾಡಬಹುದು.

ಮೊಬೈಲ್‌ ಸಂಪರ್ಕ ತಂತ್ರಜ್ಞಾನ ವಿಕಸನ ವರ್ಷ:

ಮೊಬೈಲ್‌ ಸಂಪರ್ಕ ತಂತ್ರಜ್ಞಾನ ವಿಕಸನ ವರ್ಷ:

3ಜಿ ವರ್ಸಸ್‌ 4ಜಿ

1981- ಅನಲಾಗ್‌ 1ಜಿ
1992- ಡಿಜಿಟಲ್‌ 2ಜಿ
2001- ಮಲ್ಟಿಮೀಡಿಯಾ 3ಜಿ
2006- 4ಜಿ

ಮೊದಲ 4ಜಿ ಸಂಪರ್ಕ ಪಡೆದ ನಗರಗಳು

ಮೊದಲ 4ಜಿ ಸಂಪರ್ಕ ಪಡೆದ ನಗರಗಳು

3ಜಿ ವರ್ಸಸ್‌ 4ಜಿ

2006 ಏಪ್ರಿಲ್‌ ನಲ್ಲಿ ಕೆಟಿ(ಕೋರಿಯಾ ಟೆಲಿಕಾಂ) ಕಂಪೆನಿ ಪ್ರಪ್ರಥಮ ಬಾರಿಗೆ 4ಜಿ ವೈಮಾಕ್ಸ್‌ ಸೇವೆಯನ್ನು ಸಿಯೋಲ್‌ನಲ್ಲಿ ಆರಂಭಿಸಿತು.

ಭಾರತದಲ್ಲಿ ಪ್ರಪ್ರಥಮ ಬಾರಿಗೆ 4ಜಿ ಸೇವೆಯನ್ನು ಆರಂಭಿಸಿದ ಕಂಪೆನಿ ಏರ್‌ಟೆಲ್‌.2012 ಏಪ್ರಿಲ್‌ 10 ರಂದು ಕೋಲ್ಕತ್ತಾದಲ್ಲಿ ಈ ಸೇವೆಯನ್ನು ಆರಂಭಿಸಿತು.

ಅಪ್‌ಲೋಡ್‌ ರೇಟ್‌ ಮತ್ತು ಡೌನ್‌ಲೋಡ್‌ ಸ್ಪೀಡ್‌:

ಅಪ್‌ಲೋಡ್‌ ರೇಟ್‌ ಮತ್ತು ಡೌನ್‌ಲೋಡ್‌ ಸ್ಪೀಡ್‌:

3ಜಿ ವರ್ಸಸ್‌ 4ಜಿ

ಅಪ್‌ಲೋಡ್‌ ರೇಟ್‌
3ಜಿ- 5 Mbps
4ಜಿ- 500 Mbps

ಡೌನ್‌ಲೋಡ್‌ ಸ್ಪೀಡ್‌
3ಜಿ-100 Mbps
4ಜಿ-1 Gbps

ಸ್ಮಾರ್ಟ್‌‌ಫೋನ್‌ಲ್ಲಿ ಇರಬೇಕಾದ ಸರ್ವೀಸ್‌ ಮತ್ತು ಅಪ್ಲಿಕೇಶನ್‌ಗಳು:

ಸ್ಮಾರ್ಟ್‌‌ಫೋನ್‌ಲ್ಲಿ ಇರಬೇಕಾದ ಸರ್ವೀಸ್‌ ಮತ್ತು ಅಪ್ಲಿಕೇಶನ್‌ಗಳು:

3ಜಿ ವರ್ಸಸ್‌ 4ಜಿ

3ಜಿ- CDMA 2000, UMTS, EDGE
4ಜಿ-ವೈಮಾಕ್ಸ್‌ ಮತ್ತು ಎಲ್‌ಟಿಇ

4ಜಿ ಸಂಪರ್ಕ ಇರುವ ದೇಶಗಳು

4ಜಿ ಸಂಪರ್ಕ ಇರುವ ದೇಶಗಳು

3ಜಿ ವರ್ಸಸ್‌ 4ಜಿ

ಭಾರತದಲ್ಲಿ 3ಜಿ ಕ್ರಾಂತಿ ಈಗ ನಡೆಯುತ್ತಿದ್ದು 4ಜಿ ಸಂಪರ್ಕ ಇನ್ನಷ್ಟೇ ಆಗಬೇಕಿದೆ. ಆದರೆ ಯುರೋಪ್‌, ಅಮೆರಿಕ,ಹಲವಾರು ದೇಶಗಳಲ್ಲಿ 4ಜಿ ಸೇವೆ ಈಗಾಗಲೇ ಆರಂಭಗೊಂಡಿದೆ.

Infographic curtsy :www.clavister.com

3ಜಿ ವರ್ಸಸ್‌ 4ಜಿ

3ಜಿ ವರ್ಸಸ್‌ 4ಜಿ

3ಜಿ ವರ್ಸಸ್‌ 4ಜಿ

ಆರಂಭದಲ್ಲಿ 4ಜಿ ಸೇವೆಯನ್ನು ಬಳಸಬೇಕಿದ್ದಲ್ಲಿ ನಿಮ್ಮಲ್ಲಿ ದುಬಾರಿ ಬೆಲೆಯ ಬ್ರ್ಯಾಂಡೆಡ್‌ ಕಂಪೆನಿಯ ಸ್ಮಾರ್ಟ್‌‌‌ಫೋನ್‌ ಇರಬೇಕಾಗುತ್ತದೆ.ಆಪಲ್‌ ಐಫೋನ್‌, ಸ್ಯಾಮ್‌ಸಂಗ್‌, ಎಚ್‌ಟಿಸಿ,ಎಲ್‌ಜಿ,ಸೋನಿ,ಹುವಾವೇ,ಝಡ್‌ಟಿಇ ಕಂಪೆನಿಯ ಹೊಸದಾಗಿ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳು 4ಜಿಗೆ ಸಪೋರ್ಟ್‌ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot