ವಾಟ್ಸಾಪ್‌ನಲ್ಲಿ ನೀವು ಬ್ಲಾಕ್ ಆಗಿದ್ದೀರಿ ಪತ್ತೆ ಹೇಗೆ?

Written By:

ವಾಟ್ಸಾಪ್ ಇಂದು ಹೆಚ್ಚು ಪ್ರಬಲ ಸಾಮಾಜಿಕ ತಾಣವಾಗಿ ಹೆಸರು ಗಳಿಸುತ್ತಿದ್ದು ಬಳಕೆದಾರರಿಗೆ ಉಪಯೋಗವಾಗುವ ರೀತಿಯಲ್ಲಿ ಇದು ಹೊಸ ಹೊಸ ವೈಶಿಷ್ಟ್ಯಗಳನ್ನು ತಾಣದಲ್ಲಿ ಸೇರಿಸುತ್ತಿದೆ. ಆದರೆ ಹೆಚ್ಚಿನ ಬಳಕೆದಾರರು ಇತರರನ್ನು ಬ್ಲಾಕ್ ಮಾಡುವುದು ಮೊದಲಾದ ಕಾರ್ಯಗಳನ್ನು ಮಾಡುತ್ತಾರೆ. ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದಾರೆ ಎಂದಾದಲ್ಲಿ ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿಗೆ ಸಂದೇಶಗಳನ್ನು ಕಳುಹಿಸಲು ಆಗುವುದಿಲ್ಲ.

ಆದರೆ ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂಬುದನ್ನು ನೀವು ಪತ್ತೆಹಚ್ಚುವುದು ಹೇಗೆ ಎಂಬುದನ್ನೇ ಇಂದು ನಾವು ತಿಳಿಸಿಕೊಡುತ್ತಿದ್ದೇವೆ. ಬನ್ನಿ ಬೇರೆ ಬೇರೆ ವಿಧಾನಗಳಲ್ಲಿ ಅದು ಹೇಗೆ ಎಂಬುದನ್ನು ಕಂಡುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾಸ್ಟ್ ಸೀನ್ ಸ್ಟೇಟಸ್

ಲಾಸ್ಟ್ ಸೀನ್ ಸ್ಟೇಟಸ್

#1

ನಿಮ್ಮ ಪ್ರೊಫೈಲ್‌ನಲ್ಲಿ ಲಾಸ್ಟ್ ಸೀನ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ಇತರ ಬಳಕೆದಾರರ ಲಾಸ್ಟ್ ಸೀನ್ ಸ್ಟೇಟಸ್ ಅನ್ನು ನಿಮಗೆ ಕಾಣಬಹುದಾಗಿದೆ. ಆದರೆ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದಲ್ಲಿ, ಈ ಮಾಹಿತಿಯನ್ನು ನಿಮಗೆ ನೋಡಲು ಆಗುವುದಿಲ್ಲ. ಈ ಭಾಗ ಬ್ಲಾಂಕ್ ಆಗಿ ಕಾಣುತ್ತದೆ.

ಪ್ರೊಫೈಲ್ ಫೋಟೋ

ಪ್ರೊಫೈಲ್ ಫೋಟೋ

#2

ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದಲ್ಲಿ ಅವರ ಪ್ರೊಫೈಲ್ ಫೋಟೋಗಳನ್ನು ನಿಮಗೆ ಕಾಣಲಾಗುವುದಿಲ್ಲ. ಇದು ನಿಮಗೆ ಬರಿಯ ಚಿತ್ರವನ್ನು ಮಾತ್ರ ತೋರಿಸುತ್ತದೆ ನೀವು ನಿಮ್ಮ ಫೋನ್‌ನ ಸಂಪರ್ಕ ಪುಸ್ತಕಕ್ಕೆ ಆ ವ್ಯಕ್ತಿಯ ಫೋಟೋವನ್ನು ಲಗತ್ತಿಸಿದ್ದರೆ ಇದು ಕಂಡು ಬರುವುದಿಲ್ಲ.

ಎರಡು ಟಿಕ್‌

ಎರಡು ಟಿಕ್‌

#3

ನೀವು ಆ ವ್ಯಕ್ತಿಗೆ ಸಂದೇಶಗಳನ್ನು ಕಳುಹಿಸುತ್ತೀರಿ ಮತ್ತು ಅದು ಅವರಿಗೆ ವಿತರಣೆಯಾಗಿರುವುದಿಲ್ಲ, ಮತ್ತು ಎರಡು ಟಿಕ್‌ಗಳನ್ನು ಅವರು ಪಡೆಯುವುದಿಲ್ಲ ಹಾಗೂ ಒಂದೇ ಟಿಕ್‌ನಲ್ಲಿ ನಿಲ್ಲುತ್ತಾರೆ, ಆಗ ನಿಮಗೆ ಅವರು ಬ್ಲಾಕ್ ಮಾಡಿರುವುದು ಅನುಭವವಾಗುತ್ತದೆ.

ರೀಡ್ ರಿಸಿಪ್ಟ್‌

ರೀಡ್ ರಿಸಿಪ್ಟ್‌

#4

ಬಳಕೆದಾರರು ರೀಡ್ ರಿಸಿಪ್ಟ್‌ಗಳನ್ನು ಆಫ್ ಮಾಡಿದ್ದಲ್ಲಿ, ನಿಮ್ಮ ಸಂದೇಶಗಳು ಅವರಿಗೆ ವಿತರಣೆಯಾದಲ್ಲಿ ಎರಡು ಟಿಕ್‌ಗಳನ್ನು ಅವರು ಪಡೆದುಕೊಳ್ಳಬಹುದು. ಇದು ನಡೆಯದೇ ಇದ್ದಲ್ಲಿ ನಿಮ್ಮನ್ನು ಅವರು ಬ್ಲಾಕ್ ಮಾಡಿದ್ದಾರೆ ಎಂದರ್ಥವಾಗಿದೆ.

ನೀಲಿ ಟಿಕ್ ಮಾರ್ಕ್‌

ನೀಲಿ ಟಿಕ್ ಮಾರ್ಕ್‌

#5

ಕೆಲವೊಮ್ಮೆ ಈ ನೀಲಿ ಟಿಕ್ ಮಾರ್ಕ್‌ಗಳು ನೆಟ್‌ವರ್ಕ್ ಸಮಸ್ಯೆ ಸಂದರ್ಭದಲ್ಲಿ ವಿಳಂಬಾಗುವ ಸಾಧ್ಯತೆ ಕೂಡ ಇರುತ್ತದೆ. ಆದ್ದರಿಂದ ತೀರ್ಮಾನಕ್ಕೆ ಬರುವ ಮುನ್ನ ಸ್ವಲ್ಪ ನಿಧಾನಿಸಿ.

ಬ್ಲಾಕ್ ಮಾಡಿರುವುದು

ಬ್ಲಾಕ್ ಮಾಡಿರುವುದು

#6

ನಿಮ್ಮ ಸಂದೇಶ ಐದು ಅಥವಾ ಅದಕ್ಕೂ ಹೆಚ್ಚು ದಿನಗಳ ನಂತರವೂ ವ್ಯಕ್ತಿಗೆ ತಲುಪಿಲ್ಲ ಎಂದಾದಲ್ಲಿ ಮತ್ತು ಬಳಕೆದಾರ ಆನ್‌ಲೈನ್‌ನಲ್ಲಿರುವುದು ನಿಮಗೆ ತಿಳಿದಿದ್ದಲ್ಲಿ, ನಿಮ್ಮನ್ನು ಅವರು ಬ್ಲಾಕ್ ಮಾಡಿರುವುದು 100% ನಿಜ.

ವಾಟ್ಸಾಪ್ ಕರೆ

ವಾಟ್ಸಾಪ್ ಕರೆ

#7

ವಾಟ್ಸಾಪ್ ಕರೆಗಳನ್ನು ಮಾಡಿದರೂ ಆ ವ್ಯಕ್ತಿಯು ನಿಮ್ಮನ್ನು ಬ್ಲಾಕ್ ಮಾಡಿದಲ್ಲಿ ಈ ಕರೆ ಅವರನ್ನು ತಲುಪುವುದಿಲ್ಲ. ಹೀಗೆ ಆ ವ್ಯಕ್ತಿ ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳಬಹುದು.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
how do you know that you have been blocked? Well, there are various ways.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot