ಆಧಾರ್ ಮಾಹಿತಿಯೂ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿಯುವುದು ಹೇಗೆ..?

By Lekhaka
|

ಇಂದಿನ ದಿನದಲ್ಲಿ ಆಧಾರ್ ಕಾರ್ಡ್ ಅನ್ನು ಎಲ್ಲಾ ಕಡೆಗಳಲ್ಲಿಯೂ ಬಳಕೆ ಮಾಡಿಕೊಳ್ಳುವುದು ಅಧಿಕವಾಗುತ್ತಿದೆ. ಇದೇ ಮಾದರಿಯಲ್ಲಿ ಆಧಾರ್ ಕಾರ್ಡ್ ಮಾಹಿತಿಗಳು ಲೀಕ್ ಆಗುತ್ತಿದೆ ಎನ್ನುವ ಮಾಹಿತಿಯೂ ಆಗಾಗ್ಗೆ ದೊರೆಯುತ್ತಿರುವ ಹಿನ್ನಲೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲೆಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ನೀವು ತಿಳಿಯಬಹುದಾಗಿದೆ. ಇದಕ್ಕಾಗಿ ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರವೂ ಅವಕಾಶವನ್ನು ಮಾಡಿಕೊಟ್ಟಿದೆ.

ಆಧಾರ್ ಮಾಹಿತಿಯೂ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿಯುವುದು ಹೇಗೆ..?


ಈ ಹಿನ್ನಲೆಯಲ್ಲಿ ನಿಮ್ಮ ಆಧಾರ್ ಮಾಹಿತಿಯನ್ನು ಯಾವ ಕಾರಣಕ್ಕೆ, ಎಲ್ಲಿ ಬಳಕೆ ಮಾಡಿಕೊಂಡಿದ್ದೀರಾ ಎಂಬುದನ್ನು ಟ್ರಾಕ್ ಮಾಡಬಹುದಾಗಿದೆ. ಆಕೌಂಟ್ ಲಿಂಕ್. ಸಿಮ್ ಕಾರ್ಡ್. ಪ್ಯಾನ್ ಕಾರ್ಡ್ ಸೇರಿದಂತೆ ಎಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವ ಅವಕಾಶವನ್ನು ನೀಡಿದೆ. ಇದರೊಂದಿಗೆ ನಿಮ್ಮ ಆಧಾರ್ ಮಾಹಿತಿಯೂ ಮೀಸ್ ಯೂಸ್ ಆಗಿದೆ ಎಂದರೆ ನೀವು ದೂರ ಸಹ ನೀಡಬಹುದಾಗಿದೆ.

ನಿಮ್ಮ ಆಧಾರ್ ಮಾಹಿತಿಯೂ ಎಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿಯುವುದು ಹೇಗೆ?

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?

ಹಂತ 01: ಮೊದಲಿಗೆ UIDAI ವೆಬ್ ಸೈಟಿಗೆ ಭೇಟಿ ನೀಡಿ. ಮತ್ತು ಆಧಾರ್ ಅಥ್ರಟಿಫಿಕೇಷನ್ ಹಿಸ್ಟರಿ ಪೇಜ್ ಒಪನ್ ಮಾಡಿರಿ. https://resident.uidai.gov.in/notification-aadhaar.

ಹಂತ 02: ಪೇಜ್ ಓಪನ್ ಮಾಡಿ ಮತ್ತು 12 ಅಂಕಿಗಳ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಿ ಮತ್ತು ಸೆಕ್ಯೂರಿಟಿ ಕೋಡ್ ಅನ್ನು ದಾಖಲಿಸಿ.

ಹಂತ 03: ನಂತರ ಅಲ್ಲಿಯೇ ಕೆಳಗೆ ಇರುವ ಜನರೆಟ್ OTP ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 04: ನಿಮ್ಮ ರಿಜಿಸ್ಟರ್ ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಗೆ OTPಯು ಬರಲಿದೆ. OTP ಬರಬೇಕಾದರೆ ನಿಮ್ಮ ಮೊಬೈಲ್ ನಂಬರ್ ವೇರಿಫಿಕೇಷನ್ ಆಗಿರಬೇಕು.

ಹಂತ 05: ನಿಮಗೆ ಬೇಕಾದ ಮಾಹಿತಿಯ ವಿಧ ಮತ್ತು ಅವಧಿಯನ್ನು ಎಂಟ್ರಿ ಮಾಡಬೇಕಾಗಿದೆ. ನಂತರದಲ್ಲಿ OTP ಯನ್ನು ಎಂಟ್ರಿ ಮಾಡಿದ ನಂತರದಲ್ಲಿ ಸುಮಾರು 50 ಬಳಕೆಯ ಮಾಹಿತಿಯೂ ನಿಮಗೆ ದೊರೆಯಲಿದೆ. ಅಲ್ಲದೇ ಆರು ತಿಂಗಳ ಅವಧಿಯದ್ದು ಮಾತ್ರವೇ ಲಭ್ಯವಿರಲಿದೆ.

ಹಂತ 06: ಮಾಹಿತಿಯಲ್ಲಿ ನೀವು ಆಧಾರ್ ಬಳಕೆ ಮಾಡಿದ ಸ್ಥಳ, ಸಮಯ ಮತ್ತು ಬಳಕೆ ಮಾಡಿದ ಕಾರ್ಯವು ಯಶಸ್ವಿಯಾಗಿದೆಯೇ ಎಂಬುದರ ಸಂಪೂರ್ಣ ಮಾಹಿತಿಯೂ ದೊರೆಯಲಿದೆ ಎನ್ನಲಾಗಿದೆ.

ಗೂಗಲ್ ತೇಜ್ ಆಯ್ಕೆಯನ್ನು ಕಾಪಿ ಮಾಡಿದ ವಾಟ್ಸ್‌ಆಪ್ ಪೇಮೆಂಟ್..! ಯಾವುದು..?ಗೂಗಲ್ ತೇಜ್ ಆಯ್ಕೆಯನ್ನು ಕಾಪಿ ಮಾಡಿದ ವಾಟ್ಸ್‌ಆಪ್ ಪೇಮೆಂಟ್..! ಯಾವುದು..?

Best Mobiles in India

Read more about:
English summary
Aadhaar card is very important for the citizens of India. With the mandatory linking of the Aadhaar with other utilities and services, you might be worried about privacy concerns. Here we show you how to check where your Aadhaar card was used in the past six months from the UIDAI website and raise a complaint in case of misuse.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X