ವಿಂಡೋಸ್ 10 ನಲ್ಲಿ ನಿಮ್ಮ ಪಿಸಿಯ ಎಲ್ಲಾ ವೈಶಿಷ್ಟ್ಯತೆಗಳನ್ನು ಪರಿಶೀಲಿಸುವುದು ಹೇಗೆ?

By Gizbot Bureau
|

ಒಂದು ವೇಳೆ ನೀವು ಡೆಸ್ಕ್ ಟಾಪ್ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಬಳಕೆ ಮಾಡುತ್ತಿದ್ದರೆ ಅದರ ಒಳಗಡೆಯ ಎಲ್ಲಾ ಅಂಶಗಳನ್ನು ಮತ್ತು ಓಎಸ್ ಮಾಹಿತಿಗಳನ್ನು ಅರ್ಥೈಸಿಕೊಂಡಿದ್ದರೆ ಖಂಡಿತ ನಿಮಗೆ ಅದು ಹಲವು ವಿಚಾರಗಳಲ್ಲಿ ಅನುಕೂಲವಾಗುತ್ತದೆ.

ಸಾಫ್ಟ್ ವೇರ್

ಉದಾಹರಣೆಗೆ ನೀವು ಹೆಚ್ಚಿನ RAM ನ್ನು ಸೇರಿಸಲು ಇಚ್ಛಿಸುತ್ತಿದ್ದರೆ ನಿಮ್ಮ ಕಂಪ್ಯೂಟರ್ರಿನ ಮದರ್ ಬೋರ್ಡ್ ಎಷ್ಟು RAM ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ.ಅದೇ ರೀತಿ ಸಾಫ್ಟ್ ವೇರ್ ಗಳನ್ನು ಇನ್ಸ್ಟಾಲ್ ಮಾಡುವಾಗ ನೀವು ಬಳಸುತ್ತಿರುವ ಆಪರೇಟಿಂಗ್ ಸಿಸ್ಟಮ್ 32 ಬಿಟ್ ನದ್ದಾ ಅಥವಾ 64 ಬಿಟ್ ನದ್ದಾ ಎಂಬುದನ್ನು ಅರಿತಿರಬೇಕು.

ಹಲವು ಸಮಸ್ಯೆಗಳನ್ನು ಟ್ರಬಲ್ ಶೂಟ್ ಮಾಡುವುದಕ್ಕೂ ಕೂಡ ನೀವು ನಿಮ್ಮ ಕಂಪ್ಯೂಟರ್ ಬಗ್ಗೆ ತಿಳಿದುಕೊಂಡಿರುವುದು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಪಿಸಿಯ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದಿರುವುದು ಬಹಳ ಪ್ರಮುಖವಾಗುತ್ತದೆ. ಹಾಗಂತ ನಿಮ್ಮ ಪಿಸಿಯ ವೈಶಿಷ್ಟ್ಯತೆಗಳ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವುದಕ್ಕೆ ನಿಮಗೆ ಯಾವುದೇ ಥರ್ಡ್ ಪಾರ್ಟಿ ಸಾಫ್ಟ್ ವೇರಿನ ಅಗತ್ಯವಿಲ್ಲ.

ವಿಂಡೋಸ್ 10 ನಲ್ಲಿ ನಿಮ್ಮ ಪಿಸಿಯ ಸಂಪೂರ್ಣ ವೈಶಿಷ್ಟ್ಯತೆಗಳನ್ನು ಹೇಗೆ ಪರೀಕ್ಷಿಸುವುದು?

ವಿಂಡೋಸ್ 10 ನಲ್ಲಿ ನಿಮ್ಮ ಪಿಸಿಯ ಸಂಪೂರ್ಣ ವೈಶಿಷ್ಟ್ಯತೆಗಳನ್ನು ಹೇಗೆ ಪರೀಕ್ಷಿಸುವುದು?

ವಿಂಡೋಸ್ 10 ನಲ್ಲಿ ನೀವು ನಿಮ್ಮ ಡಿವೈಸಿನ ಎಲ್ಲಾ ವೈಶಿಷ್ಟ್ಯತೆಗಳನ್ನು ಪರೀಕ್ಷಿಸಬಹುದು. ಇನ್ ಪುಟ್/ಔಟ್ ಪುಟ್ ಸಿಸ್ಟಮ್, ಫರ್ಮ್ ವೇರ್, ಮಾಡೆಲ್ ನಂಬರ್, ಪ್ರೊಸೆಸರ್, ಮೆಮೊರಿ, ಡ್ರೈವ್, ಗ್ರಾಫಿಕ್ಸ್ ಮತ್ತು ಇತರೆ ಹಲವು ಅಂಶಗಳನ್ನು ಬಹಳ ಸುಲಭದಲ್ಲಿ ತಿಳಿದುಕೊಳ್ಳಬಹುದು. ಈ ಲೇಖನದಲ್ಲಿ ನಾವು ಡಿವೈಸಿನ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ವೈಶಿಷ್ಟ್ಯತೆಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಇರುವ ಕೆಲವು ವಿಧಾನಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

1. ಪ್ರೊಸೆಸರ್,RAM, ಡಿವೈಸ್ ಐಡಿ ಮತ್ತು ವಿಂಡೋಸ್ ವರ್ಷನ್ ಪರೀಕ್ಷೆ

ಒಂದು ವೇಳೆ ನೀವು ಕೆಲವು ಸಾಮಾನ್ಯ ವೈಶಿಷ್ಟ್ಯತೆಗಳಾಗಿರುವ ಉದಾಹರಣೆಗೆ ಪ್ರೊಸೆಸರ್, RAM ಮತ್ತು ವಿಂಡೋಸ್ ನ ಸದ್ಯದ ವರ್ಷನ್ ಗಳನ್ನು ತಿಳಿದುಕೊಳ್ಳಲು ಇಚ್ಛಿಸಿದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ.

ಹಂತ 1. ಮೊದಲನೆಯದಾಗಿ, ಸ್ಟಾರ್ಟ್ ಬಟನ್ ನ್ನು ಕ್ಲಿಕ್ಕಿಸಿ ಮತ್ತು ಸೆಟ್ಟಿಂಗ್ಸ್ ಗೆ ತೆರಳಿ

ಹಂತ 2. ಸೆಟ್ಟಿಂಗ್ಸ್ ಪೇಜಿನಲ್ಲಿ ಸಿಸ್ಟಮ್ ನ್ನು ಕ್ಲಿಕ್ಕಿಸಿ.

ಹಂತ 3. ಸಿಸ್ಟಮ್ ನ ಅಡಿಯಲ್ಲಿ ‘About ' ನ್ನು ಕ್ಲಿಕ್ ಮಾಡಿ.

ಹಂತ 4. About ಸೆಕ್ಷನ್ ನಲ್ಲಿ ‘Device Specifications' ಮತ್ತು ‘Windows Specifications ನ್ನು ಪರೀಕ್ಷಿಸಿ.

ಡಿವೈಸ್ ಸ್ಪೆಸಿಫಿಕೇಷನ್ ನ ಅಡಿಯಲ್ಲಿ ಡಿವೈಸ್ ಹೆಸರು, ಪ್ರೊಸೆಸರ್,RAM ಇತ್ಯಾದಿಗಳನ್ನು ಪರೀಕ್ಷಿಸಬಹುದು. ವಿಂಡೋಸ್ ಸ್ಪೆಸಿಫಿಕೇಷನ್ ವಿಭಾಗದ ಅಡಿಯಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನ ಸದ್ಯದ ವರ್ಷನ್ ನ್ನು ತಿಳಿದುಕೊಳ್ಳಬಹುದು.

2. ಗ್ರಾಫಿಕ್ ಕಾರ್ಡ್ ನ್ನು ಚೆಕ್ ಮಾಡುವುದು (GPU)

2. ಗ್ರಾಫಿಕ್ ಕಾರ್ಡ್ ನ್ನು ಚೆಕ್ ಮಾಡುವುದು (GPU)

ಮೇಲಿನ ವಿಧಾನದಲ್ಲಿ ನಿಮ್ಮ ಪಿಸಿ ಬಳಸುವ ಗ್ರಾಫಿಕ್ ಪ್ರೊಸೆಸರ್ ನ ಮಾಹಿತಿ ಲಭ್ಯವಾಗುವುದಿಲ್ಲ. ನಿಮ್ಮ ಪಿಸಿ ಬಳಸುವ ಜಿಪಿಯುವನ್ನು ಪರೀಕ್ಷಿಸುವುದಕ್ಕಾಗಿ ಇಲ್ಲಿ ತಿಳಿಸುವ ಕೆಳಗಿನ ಸಿಂಪಲ್ ವಿಧಾನವನ್ನು ಅನುಸರಿಸಿ.

ಹಂತ 1. ಮೊದಲನೆಯದಾಗಿ ‘My Computer'ನ್ನು ರೈಟ್ ಕ್ಲಿಕ್ ಮಾಡಿ.

ಹಂತ 2. ‘Properties' ನ್ನು ಕ್ಲಿಕ್ಕಿಸಿ.

ಹಂತ 3. ಇದೀಗ ಸಿಸ್ಟಮ್ ಪೇಜ್ ನಲ್ಲಿ, ‘Device Manager' ನ್ನು ನೀವು ಕ್ಲಿಕ್ಕಿಸಬೇಕು.

ಹಂತ 4. ಇಲ್ಲಿ ನೀವು ಹುಡುಕಬಹುದು ಮತ್ತು ಡಿಸ್ಪ್ಲೇ ಎಡಾಪ್ಟರ್ಸ್ ನ್ನು ಎಕ್ಸ್ ಪಾಂಡ್ ಮಾಡಬೇಕು. ನಿಮ್ಮ GPU ಅಲ್ಲಿ ಪಟ್ಟಿ ಮಾಡಲಾಗಿರುತ್ತದೆ.

3. ಮದರ್ ಬೋರ್ಡ್ ಪರೀಕ್ಷಿಸುವುದು

3. ಮದರ್ ಬೋರ್ಡ್ ಪರೀಕ್ಷಿಸುವುದು

ಯಾವ ಮದರ್ ಬೋರ್ಡ್ ನ್ನು ನಿಮ್ಮ ಪಿಸಿ ಹೊಂದಿದೆ ಎಂಬುದನ್ನು ನೀವು ಪರೀಕ್ಷಿಸುವುದು ಹೇಗೆ ಎಂಬ ವಿಧಾನವನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಸರಳವಾಗಿರುವ ಈ ಕೆಳಗಿನ ಹಂತಗಳನ್ನು ಅನುಸರಿಸಿ ನಿಮ್ಮ ಪಿಸಿಯ ಮದರ್ ಬೋರ್ಡಿನ ಪರೀಕ್ಷೆ ನಡೆಸಬಹುದು.

ಹಂತ 1. ಮೊದಲನೆಯದಾಗಿ, ವಿಂಡೋಸ್ ಸರ್ಚ್ ಬಾರ್ ನ್ನು ತೆರೆಯಿರಿ ಮತ್ತು ‘System information'ನ್ನು ಟೈಪ್ ಮಾಡಿ.

ಹಂತ 2. ಸಿಸ್ಟಮ್ ಇನ್ಫರ್ಮೇಷನ್ ನ್ನು ತೆರೆಯಿರಿ ಮತ್ತು ‘Motherboard Manufacturer'ಅಥವಾ ‘BaseBoard Manufacturer' ಬರುವವರೆಗೆ ಸ್ಕ್ರೋಲ್ ಡೌನ್ ಮಾಡಿ.

ಹಂತ 3. ಬೇಸ್ ಬೋರ್ಡ್ ಮ್ಯಾನ್ಯುಫ್ಯಾಕ್ಚರರ್ ನಿಮಗೆ ಮದರ್ ಬೋರ್ಡ್ ಕಂಪೆನಿಯನ್ನು ತಿಳಿಸುತ್ತದೆ ಮತ್ತು ಬೇಸ್ ಬೋರ್ಡ್ ಮಾಡೆಲ್ ನಿಮಗೆ ಮಾಡೆಲ್ ನಂಬರ್ ನ್ನು ತಿಳಿಸುತ್ತದೆ.

4. ಕಮಾಂಡ್ ಪ್ರಾಂಮ್ಟ್ ಬಳಸಿ ಸಿಸ್ಟಮ್ ಮಾಹಿತಿಗಳನ್ನು ಚೆಕ್ ಮಾಡುವುದು

4. ಕಮಾಂಡ್ ಪ್ರಾಂಮ್ಟ್ ಬಳಸಿ ಸಿಸ್ಟಮ್ ಮಾಹಿತಿಗಳನ್ನು ಚೆಕ್ ಮಾಡುವುದು

ಮೇಲಿನ ವಿಧಾನಗಳನ್ನು ನೀವು ಅನುಸರಿಸುವುದಕ್ಕೆ ಇಷ್ಟಪಡದೇ ಇದ್ದಲ್ಲಿ ವಿಂಡೋಸ್ ಕಮಾಂಡ್ ಪ್ರಾಂಮ್ಟ್ ನ್ನು ಕೂಡ ನೀವು ಬಳಕೆ ಮಾಡಿ ಸಿಸ್ಟಮ್ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಹಾಗಾದ್ರೆ ವಿಂಡೋಸ್ 10 ನಲ್ಲಿ ಹೇಗೆ ಸಿಸ್ಟಮ್ ಮಾಹಿತಿಯನ್ನು ತಿಳಿದುಕೊಳ್ಳುವುದು ಎಂಬ ಬಗ್ಗೆ ನೋಡೋಣ ಬನ್ನಿ.

ಹಂತ 1. ಮೊದಲನೆಯದಾಗಿ ಸ್ಟಾರ್ಟ್ ಬಟನ್ ನ್ನು ರೈಟ್ ಕ್ಲಿಕ್ ಮಾಡಿ ಮತ್ತು ‘Command Prompt (Admin)'ನ್ನು ಸೆಲೆಕ್ಟ್ ಮಾಡಿ.

ಹಂತ 2. ಕಮಾಂಡ್ ಪ್ರಾಂಮ್ಟ್ ನಲ್ಲಿ ‘systeminfo' ಎಂದು ಟೈಪ್ ಮಾಡಿ ಮತ್ತು ಎಂಟರ್ ಬಟನ್ ನ್ನು ಪ್ರೆಸ್ ಮಾಡಿ.

ಹಂತ 3. ಇದೀಗ ನೀವು ಸಿಸ್ಟಮ್ ಮಾಹಿತಿಯನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು ‘systeminfo /?'ಎಂದು ಟೈಪ್ ಮಾಡಬೇಕು. ಇಷ್ಟು ಮಾಡಿದರೆ ನಿಮ್ಮ ಕಂಪ್ಯೂಟರ್ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬಹುದು.

ಇವು ನಾಲ್ಕು ನಿಮ್ಮ ಪಿಸಿಯ ಬಗ್ಗೆ ತಿಳಿದುಕೊಳ್ಳಲು ವಿಂಡೋಸ್ 10 ನಲ್ಲಿ ಇರುವ ಬೆಸ್ಟ್ ವಿಧಾನಗಳಾಗಿವೆ. ಇದನ್ನು ಹೊರತು ಪಡಿಸಿ ಇತರೆ ವಿಧಾನಗಳು ತಿಳಿದಿದ್ದರೆ ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ.

Best Mobiles in India

English summary
Check The Complete Specifications Of Your PC Using This Method

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X