ಸಿಬಿಲ್ ಸ್ಕೋರ್ ನ್ನು ಪೇಟಿಎಂನಲ್ಲಿ ಉಚಿತವಾಗಿ ಹೀಗೆ ಚೆಕ್ ಮಾಡಿ!

By Gizbot Bureau
|

ಬ್ಯಾಂಕ್ ವ್ಯವಹಾರವನ್ನು ಅತ್ಯುತ್ತಮವಾಗಿಟ್ಟುಕೊಂಡರೆ ಸಿಬಿಲ್ ಅಂಕದಲ್ಲಿ ಹೆಚ್ಚಳವಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಪೇಟಿಎಂ ಆಪ್ ಮೂಲಕ ನಿಮ್ಮ ಸಿಬಿಲ್ ಅಂಕಗಳನ್ನು ಪರೀಕ್ಷಿಸಿಕೊಳ್ಳಬಹುದು ಎಂಬ ಬಗ್ಗೆ ಅತೀ ಕಡಿಮೆ ಮಂದಿಗೆ ತಿಳಿದಿದೆ. ಹೌದು ಪೇಟಿಎಂನಲ್ಲಿ ಇಂತಹದ್ದೊಂದು ಅಧ್ಬುತ ಫೀಚರ್ ಲಭ್ಯವಿದೆ. ಸಾಲ ತೆಗೆದುಕೊಳ್ಳಲು ಹೋದಾಗ ಬ್ಯಾಂಕ್ ನವರು ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿಲ್ಲವೆಂದು ಸಾಲ ನೀಡಲು ನಿರಾಕರಿಸಿಬಿಡಬಹುದು.

ಸಿಬಿಲ್ ಸ್ಕೋರ್ ನ್ನು ಪೇಟಿಎಂನಲ್ಲಿ ಉಚಿತವಾಗಿ ಹೀಗೆ ಚೆಕ್ ಮಾಡಿ!

ಆದರೆ ನಿಮ್ಮ ಮೊಬೈಲ್ ಮೂಲಕವೇ ಸಿಬಿಲ್ ಸ್ಕೋರ್ ಬಗ್ಗೆ ಅಂದಾಜು ಇಟ್ಟುಕೊಳ್ಳುವುದಕ್ಕೆ ಇದೀಗ ಪೇಟಿಎಂ ನಿಮಗೆ ನೆರವು ನೀಡುತ್ತದೆ. ಆ ಮೂಲಕ ನೀವು ನಿಮ್ಮ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಅಂದಾಜು ಇಟ್ಟುಕೊಳ್ಳಲು ಅವಕಾಶವಾಗುತ್ತಿದೆ.

ಹೋಲಿಕೆಗೆ ಅವಕಾಶ:

ಪೇಟಿಎಂನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮತ್ತು ಸಾಲದ ಸ್ಟೇಟ್ ಮೆಂಟ್ ನ್ನು ಕೂಡ ಪಡೆದುಕೊಳ್ಳಬಹುದು. ಒಂದು ನಗರದಲ್ಲಿರುವ, ರಾಜ್ಯದಲ್ಲಿರುವ ಅಥವಾ ದೇಶದಲ್ಲಿರುವ ಇತರರ ಕ್ರೆಡಿಟ್ ಸ್ಕೋರ್ ನೊಂದಿಗೆ ನಿಮ್ಮ ಸ್ಕೋರ್ ನ್ನು ಹೋಲಿಸಿ ನೋಡಿಕೊಳ್ಳುವುದಕ್ಕೂ ಕೂಡ ಇದು ಅವಕಾಶ ನೀಡುತ್ತದೆ.

ಕಲಿಕೆಗೂ ಅವಕಾಶ:

ಇನ್ನೊಂದೆಡೆ ಈ ಆಪ್ ನಲ್ಲಿ ಕಲಿಕೆಗೂ ಕೂಡ ಮಹತ್ವ ನೀಡಲಾಗಿದೆ. ಹೌದು ಸಿಬಿಲ್ ಸ್ಕೋರ್ ನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಏನು ಮಾಡಬೇಕು, ಕ್ರೆಡಿಟ್ ರಿಪೋರ್ಟ್ ನ್ನು ಉತ್ತಮವಾಗಿಸುವುದು ಹೇಗೆ, ಲೋನ್ ಅಪ್ಲಿಕೇಷನ್ ಗೆ ಅಗತ್ಯವಿರುವ ಚೆಕ್ ಲಿಸ್ಟ್ ಗಳು ಮತ್ತು ಸಾಲ ಪಡೆಯುವುದಕ್ಕೆ ಕ್ರೆಡಿಟ್ ಸ್ಕೋರ್ ಎಷ್ಟು ಮುಖ್ಯ ಎಂಬಿತ್ಯಾದಿ ಹಲವು ಮಾಹಿತಿಗಳ ಗುಚ್ಛವೂ ಇದರಲ್ಲಿದೆ.

ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಎಂದರೇನು?

ಹೆಚ್ಚಿನವರಿಗೆ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಬಗ್ಗೆ ತಿಳಿದಿರುವುದೇ ಇಲ್ಲ.ಇದು ಮೂರು ಸಂಖ್ಯೆ ಇರುವ ಅಂದರೆ 300 ರಿಂದ 900 ರ ವರೆಗಿನ ಯಾವುದೇ ಅಂಕೆ ಆಗಿರಬಹುದು.ಇದು ಒಬ್ಬ ವ್ಯಕ್ತಿಯ ವಯಕ್ತಿಕವಾದ ಆರ್ಥಿಕ ರಿಪೋರ್ಟ್ ಕಾರ್ಡ್ ಆಗಿರುತ್ತದೆ. ಇದು ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಆಧರಿಸಿರುತ್ತದೆ. ಅಂದರೆ ನೀವು ಹಣ ತೆಗೆದದ್ದು, ಹಣ ಹಾಕಿರುವುದು, ಶುಲ್ಕ ಪಾವತಿ ಮಾಡಿರುವುದು, ದಂಡ ಕಟ್ಟಿರುವುದು ಇತ್ಯಾದಿ ಎಲ್ಲವೂ ಸಮಯಕ್ಕೆ ಸರಿಯಾಗಿ ಇದೆಯೇ ಅರ್ಥಾತ್ ನಿಮ್ಮ ಬ್ಯಾಂಕಿಂಗ್ ವ್ಯವಹಾರವನ್ನು, ನಿಮ್ಮ ಜೀವನದ ಹಣದ ಲೆಕ್ಕಾಚಾರವನ್ನು ನೀವೆಷ್ಟು ಶಿಸ್ತಾಗಿ ಇಟ್ಟುಕೊಂಡಿದ್ದೀರಿ ಎಂಬುದನ್ನು ಇದು ತಿಳಿಸುತ್ತದೆ. ಸಿಬಿಲ್ ಸ್ಕೋರ್ ಹೆಚ್ಚಿರುವುದು ಬಹಳ ಮುಖ್ಯ. ಉತ್ತಮ ಅಂಕ ಗಳಿಸಿದ್ದರೆ ನಿಮಗೆ ಸಾಲ ಸಿಗುವಿಕೆ ಸೇರಿದಂತೆ ಬ್ಯಾಂಕಿಂಗ್ ವ್ಯವಹಾರವು ವೇಗವಾಗಿ ಮುಗಿಸುವುದಕ್ಕೆ ಇದು ಸಹಾಯ ಮಾಡುತ್ತದೆ. ನಿಮ್ಮ ಮುಖ ನೋಡಿ ಸಾಲ ಸಿಗುವುದಲ್ಲ ಎಂಬುದು ನಿಮಗೆ ನೆನಪಡಿ. ಕೇವಲ ನಿಮ್ಮ ಮುಖ ನೋಡಿ ಯಾರೂ ಸಾಲ ನೀಡುವುದಿಲ್ಲ. ಇನ್ನು ಮುಂದೆ ನಿಮ್ಮ ಹಣದ ವಹಿವಾಟು ಎಷ್ಟು ಶಿಸ್ತುಬದ್ಧವಾಗಿದೆ ಎಂಬುದನ್ನು ಸಿಬಿಲ್ ಅಂಕದ ಮೂಲಕ ಪರೀಕ್ಷಿಸಿ ಸಾಲ ನೀಡಲಾಗುತ್ತದೆ.

ಹಾಗಾದ್ರೆ ಪೇಟಿಎಂನಲ್ಲಿ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಅಂಕ ಪರೀಕ್ಷಿಸುವುದು ಹೇಗೆ?

ಈ ಕೆಳಗಿನ ಹಂತಗಳನ್ನು ಅನುಸರಿಸಿ.

.ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಪೇಟಿಎಂ ಆಪ್ ನ್ನು ತೆರೆಯಿರಿ ಮತ್ತು ಲಾಗಿನ್ ಆಗಿ.

.ಹೋಮ್ ಸ್ಕ್ರೀನ್ ನಲ್ಲಿರುವ ಶೋಮೋರ್ ಐಕಾನ್ ನ್ನು ಟ್ಯಾಪ್ ಮಾಡಿ.

.ಫೀಚರ್ಡ್ ಸೆಕ್ಷನ್ ನಿಂದ ಫ್ರೀ ಕ್ರೆಡಿಟ್ ಸ್ಕೋರ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

. ನಿಮ್ಮ ಪ್ಯಾನ್ ಕಾರ್ಡ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ಬರೆಯಿರಿ(ಅಗತ್ಯವಿದ್ದರೆ ಮಾತ್ರ)

. ನೀವು ಮೊದಲ ಬಾರಿ ಬಳಕೆ ಮಾಡುವುದಾದರೆ ಓಟಿಪಿ ಕಳಿಸಿ ಪರೀಕ್ಷೆ ಮಾಡಲಾಗುತ್ತದೆ.

ಈ ಮೇಲಿನ ಹಂತಗಳು ಮುಗಿದ ನಂತರ ನೀವು ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಪರೀಕ್ಷೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.ಈ ಹಂತದಲ್ಲಿ ನೀವು ಎಲ್ಲಾ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ಅಕೌಂಟ್ ಗೆ ಆಕ್ಸಿಸ್ ಮತ್ತು ಸಿಬಿಲ್ ಕ್ರೆಡಿಟ್ ರಿಪೋರ್ಟ್ ಜೊತೆಗೆ ಕ್ರೆಡಿಟ್ ಎಜುಕೇಷನ್ ವಿಭಾಗವನ್ನು ಕೂಡ ಆಯ್ಕೆ ಮಾಡಿಕೊಂಡು ಗಮನಿಸಬಹುದು.

ಉಚಿತವಾಗಿ ಪೇಟಿಎಂನಲ್ಲಿ ಕ್ರೆಡಿಟ್ ಸ್ಕೋರ್ ಪರೀಕ್ಷಿಸುವುದಕ್ಕೆ ಅವಕಾಶವಿರುವುದರಿಂದಾಗಿ ನಿಮ್ಮ ಬ್ಯಾಂಕಿಂಗ್ ವ್ಯವಹಾರದಲ್ಲಿ ಬದ್ಧತೆ ಕಾಪಾಡಿಕೊಂಡು ಸಿಬಿಲ್ ಸ್ಕೋರ್ ಅತ್ಯುತ್ತಮವಾಗಿರುವಂತೆ ನೋಡಿಕೊಳ್ಳಬಹುದು.

Best Mobiles in India

Read more about:
English summary
Check Your CIBIL Score For Free On Paytm App: Here's How

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X