ಹಳೇ ಸ್ಮಾರ್ಟ್‌ಫೋನ್‌ನ್ನೇ ಸಿಸಿಟಿವಿ ಕ್ಯಾಮೆರಾವಾಗಿ ಪರಿವರ್ತಿಸಿ.! ಹೇಗೆ ಅಂತಿರಾ..?

By Gizbot Bureau
|

ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಧೂಳು ಹಿಡಿದಿದ್ದರೆ, ಅದನ್ನು ಮಾರಾಟ ಮಾಡುವ ಬದಲು ನೀವು ಚೆನ್ನಾಗಿ ಬಳಸಿಕೊಳ್ಳಬಹುದು. ಕಳೆದೊಂದೆರಡು ವರ್ಷದಲ್ಲಿ ಬಂದಿರುವ ಸ್ಮಾರ್ಟ್‌ಫೋನ್‌ಗಳು ಉತ್ತಮ ಗುಣಮಟ್ಟದ ಕ್ಯಾಮೆರಾ, ಮೆಮೊರಿ ಸಾಮರ್ಥ್ಯ ಮತ್ತು ಬ್ಯಾಟರಿ ಬಾಳಿಕೆಯನ್ನು ಹೊಂದಿವೆ. ಆದ್ದರಿಂದ, ಸಮರ್ಥವಾಗಿರುವ ಹಳೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಬದಲು, ಅದನ್ನು ನೀವೇ ನಿಮ್ಮ ಮನೆಯ ಸಿಸಿ ಕ್ಯಾಮರಾ ಆಗಿ ಪರಿವರ್ತಿಸಬಹುದು.

ಆಂಡ್ರಾಯ್ಡ್‌ ಆಪ್‌

ಆಂಡ್ರಾಯ್ಡ್‌ ಆಪ್‌

ಹೌದು, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸಿಸಿಟಿವಿ ಕ್ಯಾಮೆರಾಕ್ಕಿಂತ ಉತ್ತಮವಾಗಿರುತ್ತದೆ. ಮತ್ತು ನಿಮ್ಮ ಮನೆಯೊಳಗೆ ಎಲ್ಲಿಯಾದರೂ ಅದನ್ನು ಗೌಪ್ಯವಾಗಿಡಬಹುದು. ಆದರೆ, ಇದೆಲ್ಲಾ ಮಾಡುವುದಕ್ಕೆ ನಿಮಗೆ ಹಳೆಯ ಆಂಡ್ರಾಯ್ಡ್ ಫೋನ್ ಅನ್ನು ಭದ್ರತಾ ಕ್ಯಾಮರಾ ಆಗಿ ಪರಿವರ್ತಿಸುವ ಆಪ್‌ ಬೇಕಾಗಿದೆ. ಈ ಕಾರ್ಯಕ್ಕಾಗಿಯೇ ಪ್ಲೇ ಸ್ಟೋರ್‌ನಲ್ಲಿ ಬಹಳಷ್ಟು ಆಪ್‌ಗಳಿವೆ. ಆದರೆ, ಎಲ್ಲವೂ ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ಸೋತಿವೆ. ಆದರೆ, ಗೂಗಲ್‌ ಪ್ಲೇ ಪ್ರೊಟೆಕ್ಟ್‌ ಬೆಂಬಲ ಹೊಂದಿರುವ ಆಲ್ಫ್ರೆಡ್ ಕ್ಯಾಮೆರಾ ಆಪ್‌ ಯಾವುದೇ ಹಳೆಯ ಸ್ಮಾರ್ಟ್‌ಫೋನ್‌ನ್ನು ಕೆಲವೇ ನಿಮಿಷಗಳಲ್ಲಿ ಭದ್ರತಾ ಕ್ಯಾಮರಾ ಆಗಿ ಪರಿವರ್ತಿಸುತ್ತದೆ.

ಲೈವ್‌ ಫೀಡ್‌ ನೋಡಬಹುದು

ಲೈವ್‌ ಫೀಡ್‌ ನೋಡಬಹುದು

ಈ ಆಂಡ್ರಾಯ್ಡ್‌ ಆಪ್‌ಗಳನ್ನು ಬಳಸಿ ಮತ್ತೊಂದು ಮೊಬೈಲ್‌ನಲ್ಲಿ ಲೈವ್ ಫೀಡ್ ವೀಕ್ಷಿಸಲು ಸಹ ನಿಮಗೆ ಅವಕಾಶ ಇದೆ. ಕೇವಲ ಮೊಬೈಲ್‌ನಲ್ಲಷ್ಟೇ ಅಲ್ಲದೇ ಕಂಪ್ಯೂಟರ್‌ನಲ್ಲಿಯೂ ಕೂಡ ನೇರವಾಗಿ ವೀಕ್ಷಿಸಬಹುದು.

ಅಗತ್ಯತೆಗಳು ಏನು..?

ಅಗತ್ಯತೆಗಳು ಏನು..?

- ನಿಮ್ಮ ಮನೆಯಲ್ಲಿ ವೈ-ಫೈ ಸಂಪರ್ಕ ಅಥವಾ ನಿಮ್ಮ ಹಳೆಯ ಫೋನ್‌ಗೆ ಕನಿಷ್ಠ 4ಜಿ ಸಂಪರ್ಕ ಇರಬೇಕು.

- ಹತ್ತಿರದಲ್ಲಿ ಪವರ್ ಬ್ಯಾಂಕ್ ಅಥವಾ ವಿದ್ಯುತ್ ಮೂಲ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

- ಈ ಉದ್ದೇಶಕ್ಕಾಗಿ ಪ್ರತ್ಯೇಕ ಗೂಗಲ್ ಖಾತೆಯನ್ನು ಬಳಸುವುದು ಉತ್ತಮ. ನಿಮ್ಮ ಮುಖ್ಯ ಗೂಗಲ್‌ ಖಾತೆಯನ್ನು ಬಳಸಿದರೆ ಗೌಪ್ಯತೆಯ ಸೋರಿಕೆಯಾಗುವ ಸಾಧ್ಯತೆ ಹೆಚ್ಚು.

- ಸಂಪೂರ್ಣವಾಗಿ ಫ್ಯಾಕ್ಟರಿ ರಿಸೆಟ್‌ ಮಾಡಿದ ಹಳೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸಿ.

ಅಲ್ಫ್ರೆಡ್‌ ಕ್ಯಾಮೆರಾ ಆಪ್‌

ಅಲ್ಫ್ರೆಡ್‌ ಕ್ಯಾಮೆರಾ ಆಪ್‌

ನಿಮ್ಮ ಹಳೆಯ ಆಂಡ್ರಾಯ್ಡ್ ಫೋನ್‌ನಲ್ಲಿ ಆಲ್ಫ್ರೆಡ್ ಕ್ಯಾಮೆರಾ ಆಪ್‌ ಡೌನ್‌ಲೋಡ್ ಮಾಡಿ. ನಂತರ ನೀವು ಹಳೆಯ ಆಂಡ್ರಾಯ್ಡ್ ಫೋನ್ ಅನ್ನು ಕ್ಯಾಮೆರಾ ಎಂದು ಆಯ್ಕೆ ಮಾಡಬೇಕಾಗುತ್ತದೆ. ಇಲ್ಲಿ ಗೂಗಲ್‌ ಖಾತೆಯಿಂದ ಸೈನ್‌ಇನ್‌ ಆಗಬೇಕಾಗುತ್ತದೆ. ಸೈನ್‌ಇನ್‌ ಆಗಲು ಹೊಸ ಗೂಗಲ್‌ ಖಾತೆ ಬಳಸಿದರೆ ಉತ್ತಮ. ಈಗ ನಿಮ್ಮ ಮನೆ ನೇರಪ್ರಸಾರವಾಗುತ್ತಿದೆ.

ಮತ್ತೊಂದು ಫೋನ್‌ನಲ್ಲಿ ಫೀಡ್‌ ವೀಕ್ಷಣೆ

ಮತ್ತೊಂದು ಫೋನ್‌ನಲ್ಲಿ ಫೀಡ್‌ ವೀಕ್ಷಣೆ

ಲೈವ್‌ ಫೀಡ್ ವೀಕ್ಷಿಸಲು ಅಲ್ಫ್ರೆಡ್‌ ಕ್ಯಾಮೆರಾ ಆಪ್‌ನ್ನು ಮತ್ತೊಂದು ಫೋನ್‌ನಲ್ಲಿ ಡೌನ್‌ಲೋಡ್ ಮಾಡಿ. ನಂತರ ಅದೇ ಗೂಗಲ್‌ ಖಾತೆಯೊಂದಿಗೆ ಲಾಗಿನ್ ಆಗಿ. ವೀವರ್‌ ಆಯ್ಕೆಯನ್ನು ಕ್ಲಿಕ್‌ ಮಾಡಿ. ಬಳಿಕ ಇದು ಲೈವ್ ಫೀಡ್ ಅನ್ನು ನಿಮಗೆ ತೋರಿಸುತ್ತದೆ. ನೀವು ಕಂಪ್ಯೂಟರ್‌ನಲ್ಲಿಯೂ ಲೈವ್ ಫೀಡ್ ನೋಡಲು ಬಯಸಿದರೆ ಬ್ರೌಸರ್ ತೆರೆಯಿರಿ ಮತ್ತು "alfred.computer" ವೆಬ್‌ಸೈಟ್ ಒಪ್ನ್‌ ಮಾಡಿ, ಅದೇ ಗೂಗಲ್‌ ಖಾತೆಯಿಂದ ಸೈನ್‌ಇನ್‌ ಆಗಿ. ಆದರೆ, ಯಾವುದಾದರೂ ಒಂದು ಸಾಧನದಲ್ಲಿ ಮಾತ್ರ ಲೈವ್‌ ಫೀಡ್‌ ವೀಕ್ಷಿಸಬಹುದು ಎಂಬುದನ್ನು ಗಮನಿಸಿ.

Best Mobiles in India

English summary
Convert Old Smartphone As Home Security Camera

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X