ವಾಟ್ಸ್ ಆಪ್ ಚಾಟ್ ನ್ನು ಹೈಡ್ ಮಾಡುವುದಕ್ಕೆ ಇರುವ ಸಿಂಪಲ್ ಟ್ರಿಕ್ಸ್ ಗಳು

By Gizbot Bureau
|

ಈ ವರ್ಷದ ಆರಂಭದಲ್ಲಿ ವಾಟ್ಸ್ ಆಪ್ ಹೊಸ ಸೆಕ್ಯುರಿಟಿ ಫೀಚರ್ ನ್ನು ತನ್ನ ಚಾಟ್ ಆಪ್ ಗೆ ಪರಿಚಯಿಸಿತ್ತು. ಫೇಸ್ ಐಡಿ ಮತ್ತು ಪಾಸ್ ಕೋಡ್ ಬಳಸಿ ತಮ್ಮ ವಾಟ್ಸ್ ಆಪ್ ಚಾಟ್ ಗಳನ್ನು ಬಳಕೆದಾರರು ಇತರರು ನೋಡದಂತೆ ರಕ್ಷಣೆ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಮಾಡಿಕೊಡಲಾಗಿತ್ತು. ಆದರೆ ಇದುವರೆಗೂ ಈ ಫೀಚರ್ ಕೇವಲ ಐಫೋನ್ ಬಳಕೆದಾರರಿಗೆ ಮಾತ್ರವೇ ಲಭ್ಯವಿತ್ತು.ಆಂಡ್ರಾಯ್ಡ್ ವರ್ಷನ್ ಗಾಗಿ ಈ ಸೇವೆಯು ಇನ್ನೂ ಕೂಡ ಪ್ರಗತಿಯಲ್ಲಿದೆ.

ಚಾಟ್

ಆದರೆ ಆಂಡ್ರಾಯ್ಡ್ ಮತ್ತು ಐಫೋನ್ ಎರಡೂ ಬಳಕೆದಾರರಿಗೆ ಮತ್ತೊಂದು ವಿಧಾನದಿಂದ ತಮ್ಮ ಚಾಟ್ ಗಳನ್ನು ಹೈಡ್ ಮಾಡುವುದಕ್ಕೆ ಅವಕಾಶವಿದೆ. ಅದುವೇ ಆರ್ಕೈವ್ ಚಾಟ್ ಆಯ್ಕೆ. ಹೌದು ಈ ಫೀಚರ್ ಮುಖಾಂತರ ನೀವು ನಿಮ್ಮ ಚಾಟ್ ಸ್ಕ್ರೀನ್ ನ್ನು ಹೈಡ್ ಮಾಡಬಹುದು ಮತ್ತು ಕೆಲವು ಸಮಯದ ನಂತರ ನಿಮಗೆ ಅಗತ್ಯವಿದ್ದಾಗ ಆ ಚಾಟಿನ ಮಾತುಕತೆಗಳನ್ನು ನೋಡುವುದಕ್ಕೆ ಅವಕಾಶವಿರುತ್ತದೆ.

ಗ್ರೂಪ್ ಮತ್ತು ವಯಕ್ತಿಕ ಚಾಟ್ ಗಳು ಎರಡನ್ನೂ ಕೂಡ ಆರ್ಕೈವ್ ಮಾಡುವುದಕ್ಕೆ ಈ ಫೀಚರ್ ನಲ್ಲಿ ಅವಕಾಶವಿರುತ್ತದೆ. ಆರ್ಕೈವ್ ಚಾಟ್ ನಿಮ್ಮ ಚಾಟ್ ನ್ನು ಡಿಲೀಟ್ ಮಾಡುವುದಿಲ್ಲ ಅಥವಾ ಎಸ್ ಡಿ ಕಾರ್ಡ್ ನಲ್ಲಿ ಬ್ಯಾಕ್ ಅಪ್ ಕೂಡ ಮಾಡುವುದಿಲ್ಲ ಎಂಬುದು ನಿಮಗೆ ನೆನಪಿರಲಿ.

ಹಾಗಾದ್ರೆ ಈ ಫೀಚರ್ ನ್ನು ಬಳಕೆ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ನಾವಿಲ್ಲಿ ಹಂತಹಂತವಾಗಿರುವ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇವೆ

ಆಂಡ್ರಾಯ್ಡ್ ನಲ್ಲಿ ಹೇಗೆ ಆರ್ಕೈವ್ ಚಾಟ್ ಮಾಡುವುದು ಹೇಗೆ?

ಆಂಡ್ರಾಯ್ಡ್ ನಲ್ಲಿ ಹೇಗೆ ಆರ್ಕೈವ್ ಚಾಟ್ ಮಾಡುವುದು ಹೇಗೆ?

1. ವಾಟ್ಸ್ ಆಪ್ ನ್ನು ತೆರೆಯಿರಿ

2. ಚಾಟ್ ಸ್ಕ್ರೀನಿನಲ್ಲಿ, ನೀವು ಹೈಡ್ ಮಾಡಬೇಕು ಎಂದು ಬಯಸುವ ಚಾಟ್ ನ್ನು ಟ್ಯಾಪ್ ಮಾಡಿ ಮತ್ತು ಹೋಲ್ಡ್ ಮಾಡಿ.

3. ಮೇಲ್ಬಾಗದ ಬಾರ್ ನಲ್ಲಿ ಆರ್ಕೈವ್ ಐಕಾನ್ ನ್ನು ಸೆಲೆಕ್ಟ್ ಮಾಡಿ.

ಇದೀಗ ಚಾಟ್ ಆರ್ಕೈವ್ ಆಗುತ್ತದೆ ಮತ್ತು ನೀವು ನಿಮ್ಮ ಚಾಟ್ ಸ್ಕ್ರೀನಿನಲ್ಲಿ ನೋಡುವುದಕ್ಕೆ ಸಾಧ್ಯವಿಲ್ಲ. ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ನೀವು ಚಾಟ್ ಸ್ಕ್ರೀನಿನ ಕೆಳಭಾಗದಲ್ಲಿ ಎಲ್ಲಾ ಆರ್ಕೈವ್ ಆಗಿರುವ ಚಾಟ್ ಗಳನ್ನು ಹುಡುಕಬಹುದು.

ಐಫೋನಿನಲ್ಲಿ ಆರ್ಕೈವ್ ಚಾಟ್ ಮಾಡುವುದು ಹೇಗೆ?

ಐಫೋನಿನಲ್ಲಿ ಆರ್ಕೈವ್ ಚಾಟ್ ಮಾಡುವುದು ಹೇಗೆ?

1.ವಾಟ್ಸ್ ಆಪ್ ನ್ನು ತೆರೆಯಿರಿ

2.ಚಾಟ್ ಸ್ಕ್ರೀನಿನಲ್ಲಿ ನೀವು ಆರ್ಕೈವ್ ಮಾಡಬೇಕು ಎಂದಿರುವ ಚಾಟಿನಲ್ಲಿ ಬಲದಿಂದ ಎಡಕ್ಕೆ ನಿಮ್ಮ ಬೆರಳನ್ನು ಸ್ಲೈಡ್ ಮಾಡಿ.

3.ಆರ್ಕೈವ್ ನ್ನು ಟ್ಯಾಪ್ ಮಾಡಿ.

ಐಫೋನಿನಲ್ಲಿ ಆರ್ಕೈವ್ ಚಾಟ್ ನ್ನು ನೋಡುವುದಕ್ಕೆ ಮೇಲ್ಬಾಗವನ್ನು ಸ್ಕ್ರೋಲ್ ಮಾಡಿ ಮತ್ತು ನಂತರ ಕೆಳಭಾಗಕ್ಕೆ ಪುಲ್ ಮಾಡಿ.

ಒಂದು ವೇಳೆ ಸ್ವಲ್ಪ ಸಮಯದ ನಂತರ ನೀವು ನಿಮ್ಮ ಮನಸ್ಸನ್ನು ಬದಲಾಯಿಸಿ ಆರ್ಕೈವ್ ಆಗಿರುವ ಚಾಟ್ ನ್ನು ಅನ್ ಆರ್ಕೈವ್ ಮಾಡಬೇಕು ಎಂದು ಬಯಸಿದರೆ ಹೇಗೆ ಮಾಡುವುದು ಎಂಬ ಹಂತಹಂತವಾದ ಮಾಹಿತಿ ಇಲ್ಲಿದೆ ನೋಡಿ.

ಆಂಡ್ರಾಯ್ಡ್ ನಲ್ಲಿ ಚಾಟ್ ನ್ನು ಅನ್ ಆರ್ಕೈವ್ ಮಾಡುವುದು ಹೇಗೆ?

ಆಂಡ್ರಾಯ್ಡ್ ನಲ್ಲಿ ಚಾಟ್ ನ್ನು ಅನ್ ಆರ್ಕೈವ್ ಮಾಡುವುದು ಹೇಗೆ?

1.ಚಾಟ್ ಸ್ಕ್ರೀನ್ ನ್ನು ಸ್ಕ್ರೋಲ್ ಡೌನ್ ಮಾಡಿ.

2.ಆರ್ಕೈವ್ಡ್ ಚಾಟ್ಸ್ ನ್ನು ಟ್ಯಾಪ್ ಮಾಡಿ.

3.ನೀವು ಅನ್ ಆರ್ಕೈವ್ ಮಾಡಬೇಕು ಎಂದುಕೊಂಡಿರುವ ಚಾಟ್ ನ್ನು ಟ್ಯಾಪ್ ಮಾಡಿ ಮತ್ತು ಹೋಲ್ಡ್ ಮಾಡಿ.

4.ಟಾಪ್ ಬಾರ್ ನಲ್ಲಿ ಅನ್ ಆರ್ಕೈವ್ ನ್ನು ಸೆಲೆಕ್ಟ್ ಮಾಡಿ.

ಐಫೋನಿನಲ್ಲಿ ಚಾಟ್ ನ್ನು ಅನ್ ಆರ್ಕೈವ್ ಮಾಡುವುದು ಹೇಗೆ?

ಐಫೋನಿನಲ್ಲಿ ಚಾಟ್ ನ್ನು ಅನ್ ಆರ್ಕೈವ್ ಮಾಡುವುದು ಹೇಗೆ?

1.ಆರ್ಕೈವ್ಡ್ ಚಾಟ್ ಸ್ಕ್ರೀನಿನಲ್ಲಿ ಬಲದಿಂದ ಎಡಕ್ಕೆ ನಿಮ್ಮ ಬೆರಳನ್ನು ಚಾಟಿನಲ್ಲಿ ಸ್ಲೈಡ್ ಮಾಡಿ.

2.ಅನ್ ಆರ್ಕೈವ್ ನ್ನು ಟ್ಯಾಪ್ ಮಾಡಿ.

Best Mobiles in India

English summary
Did you know you can hide your WhatsApp chats with this trick?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X