ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ!

|

ಮಾಹಿತಿಯ ಕಣಜ ಎನಿಸಿಕೊಂಡಿರುವ ಗೂಗಲ್, ಕೇಳಿದ ಮಾಹಿತಿಯನ್ನು ಕ್ಷಣದಲ್ಲಿ ಒದಗಿಸುತ್ತದೆ. ಹೀಗಾಗಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್‌ ಎರಡರಲ್ಲೂ ಸಹ ಗೂಗಲ್‌ ಸರ್ಚ್‌ನಲ್ಲಿ ಅಗತ್ಯ ಮಾಹಿತಿಯನ್ನು ಪಡೆಯಲು ಜಾಲಾಡುತ್ತಿರುತ್ತಾರೆ. ಆದರೆ ಗೂಗಲ್ ಬಳಕೆದಾರರು ಏನು ಸರ್ಚ್‌ ಮಾಡಿದ್ದಾರೆ ಎಂಬುದನ್ನು ದಾಖಲಿಸಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಸರ್ಚ್‌ ಹಿಸ್ಟರಿ ಆಫ್‌ ಮಾಡುವುದು ನಿಮಗೆ ಗೊತ್ತೆ?

ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ!

ಹೌದು, ಗೂಗಲ್‌ ಸರ್ಚ್‌ ಇಂಜಿನ್‌ ಬಳಕೆದಾರರು ಏನೇ ಸರ್ಚ್‌ ಮಾಡಿಲಿ ಅದನ್ನು ಮತ್ತು ಕೀ ವಲ್ಡ್ಸ್‌ಗಳನ್ನು ಸರ್ಚ್‌ ಹಿಸ್ಟರ್‌ಯಲ್ಲಿ ದಾಖಲಿಸಿಕೊಳ್ಳುತ್ತದೆ. ಹಾಗೆಯೇ ಇನ್ನು ಕೇಲವು ಬಳಕೆದಾರರು ಉತ್ಪನ್ನಗಳ ಆಡ್‌ ಸಹ ನೋಡಿರುತ್ತಾರೆ (ಉದಾಹರಣೆಗೆ-ಶೂ, ಸ್ಮಾರ್ಟ್‌ಫೋನ್‌, ಇತರೆ) ಸರ್ಚ್‌ ಹಿಸ್ಟರಿಯಲ್ಲಿ ಅವುಗಳು ಸಹ ದಾಖಲಾಗಿರುತ್ತದೆ. ಆದರೆ ಇದು ಬಹುತೇಕ ಬಳಕೆದಾರರಿಗೆ ಬೇಡವಾಗಿರುತ್ತದೆ.

ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ!

ಸರ್ಚ್‌ ಹಿಸ್ಟರಿ ಸ್ಟೋರ್‌ ಆಗುವುದರಿಂದ ಮತ್ತೆ ಸರ್ಚ್‌ ಮಾಡುವಾಗ ಗೂಗಲ್ ಹಿಸ್ಟರಿ ಗ್ರಹಿಸಿ ಸರ್ಚ್‌ ಸಮಯದಲ್ಲಿ ಆಯ್ಕೆಗಳನ್ನು ನೀಡುತ್ತದೆ. ಬಳಕೆದಾರರಿಗೆ ಅನುಕೂಲಕ್ಕಾಗಿ ಸರ್ಚ್‌ ಹಿಸ್ಟರಿ ಆಫ್‌ ಮಾಡಿಕೊಳ್ಳುವ ಆಯ್ಕೆಯನ್ನು ಒದಗಿಸಿದ್ದು, ಈ ಮೂಲಕ ಸರ್ಚ್‌ ಹಿಸ್ಟರಿ ಗೂಗಲ್‌ನಲ್ಲಿ ಸ್ಟೋರ್‌ ಆಗುವುದನ್ನು ತಡೆಯಬಹುದಾಗಿದೆ. ಹಾಗಾದರೇ ಗೂಗಲ್‌ ಸರ್ಚ್‌ ಹಿಸ್ಟರಿ ಫೀಚರ್‌ ಆಯ್ಕೆಯನ್ನು ಆಫ್‌ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸರ್ಚ್‌ ಆಧಾರದ ಮೇಲೆ ಜಾಹಿರಾತು

ಸರ್ಚ್‌ ಆಧಾರದ ಮೇಲೆ ಜಾಹಿರಾತು

ಗೂಗಲ್‌ ಸರ್ಚ್‌ ಇಂಜಿನ್‌ನಲ್ಲಿ ಬಳಕೆದಾರರು ಸರ್ಚ್‌ ಮಾಡುವ ಕೀ ವರ್ಡ್ಸ್‌ಗಳ ಆಧಾರದ ಮೇಲೆ ಜಾಹಿರಾತು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಬಳಕೆದಾರರು ಯಾವ ಯಾವ ಮಾಹಿತಿ ಮತ್ತು ಉತ್ಪನ್ನಗಳ ಕುರಿತಾಗಿ ಸರ್ಚ್‌ ಮಾಡುತ್ತಿರುತ್ತಾರೋ, ಅವರಿಗೆ ಆ ಉತ್ಪನ್ನಗಳ ಕುರಿತಾಗಿಯೇ ಹೆಚ್ಚಿನ ಆಡ್ಸ್‌ಗಳ ಕಾಣಿಸಿಕೊಳ್ಳುತ್ತವೆ.

ಲೊಕೇಶನ್ ಮತ್ತು ಯೂಟ್ಯೂಬ್‌ ಹಿಸ್ಟರಿ ಆಫ್‌ ಮಾಡಿ

ಲೊಕೇಶನ್ ಮತ್ತು ಯೂಟ್ಯೂಬ್‌ ಹಿಸ್ಟರಿ ಆಫ್‌ ಮಾಡಿ

ಗೂಗಲ್‌ ಸರ್ಚ್‌ ಹಿಸ್ಟರಿ ದಾಖಲಾಗಬಾರದು ಎನ್ನುವ ಬಳಕೆದಾರರು ಅದನ್ನು ಆಫ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಅದರೊಂದಿಗೆ ಲೊಕೇಶನ್ ಹಿಸ್ಟರಿ ಮತ್ತು ಯೂಟ್ಯೂಬ್ ಹಿಸ್ಟರಿ ಸಹ ಆಫ್‌ ಮಾಡುವ ಆಯ್ಕೆಯು ಒಂದೆಡೆ ಇದ್ದು, ಬೇಕಿದ್ದರೇ ಅವುಗಳನ್ನು ಸಹ ಆಫ್‌ ಮಾಡಿಕೊಳ್ಳಬಹುದಾಗಿದೆ.

ಪಿಸಿಯಲ್ಲಿ ಈ ಹಂತಗಳನ್ನು ಅನುಸರಿಸಿ

ಪಿಸಿಯಲ್ಲಿ ಈ ಹಂತಗಳನ್ನು ಅನುಸರಿಸಿ

* https://myactivity.google.com/myactivity
* ಗೂಗಲ್ ಅಕೌಂಟ್ ಲಾಗಿ ಇನ್‌ ಆಗಿರಿ
* ಲಾಗಿನ್‌ ಆದ ನಂತರ ವೆಬ್‌ ಮತ್ತು ಆಪ್‌ ಆಕ್ಟಿವಿಟಿ ಆಯ್ಕೆ ತೆರೆಯಿರಿ
* ಈ ವೆಬ್‌ ಮತ್ತು ಆಪ್‌ ಆಕ್ಟಿವಿಟಿ ಆಯ್ಕೆಯಲ್ಲಿ toggle ಆಫ್‌ ಮಾಡಿರಿ
* ಹಾಗೆಯೇ ಲೊಕೇಶನ್ ಹಿಸ್ಟರಿ toggle ಆಫ್‌ ಮಾಡಬಹುದು
* ಯೂಟ್ಯೂಬ್‌ ಹಿಸ್ಟರಿ ಆಯ್ಕೆ ಸಹ ನೀವು ಮಾಡಿಕೊಳ್ಳಬಹುದು

ಸ್ಮಾರ್ಟ್‌ಫೋನ್‌ನಲ್ಲಿ ಈ ಹಂತಗಳನ್ನು ಅನುಸರಿಸಿ

ಸ್ಮಾರ್ಟ್‌ಫೋನ್‌ನಲ್ಲಿ ಈ ಹಂತಗಳನ್ನು ಅನುಸರಿಸಿ

* ಗೂಗಲ್ ಆಪ್‌ ತೆರೆಯಿರಿ (ಆಂಡ್ರಾಯ್ಡ್‌/ಐಓಎಸ್‌)
* ನಂತರ ಬಾಟಮ್‌ ನಲ್ಲಿರುವ ಮೋರ್‌(more) ಆಯ್ಕೆಯನ್ನು ಒತ್ತಿರಿ
* ಆನಂತರ ಸರ್ಚ್‌ ಆಕ್ಟಿವಿಟಿ ಆಯ್ಕೆಯನ್ನು ಟ್ಯಾಪ್‌ ಮಾಡಿರಿ
* ವೆಬ್‌ ಮತ್ತು ಆಪ್‌ ಆಕ್ಟಿವಿಟಿ toggle ಅನ್ನು ಆಫ್‌ ಮಾಡಿರಿ

Best Mobiles in India

English summary
Don't want to share your Google search history? Here's how to turn off the feature.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X