2 ನಿಮಿಷದಲ್ಲಿ GIF ಫೈಲ್‌ ಕ್ರಿಯೇಟ್ ಮಾಡುವುದು ಹೇಗೆ?

ನೀವೇ GIF ಫೈಲ್‌ ರಚಿಸಿಕೊಳ್ಳುವುದು ಹೇಗೆ ಎಂದು ಗೊತ್ತಾ?

|

ಫೇಸ್‌ಬುಕ್‌ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಬರುವ GIF ಫಾರ್ಮಾಟ್‌ನ ಫೈಲ್‌ಗಳನ್ನು ನೀವು ನೋಡಿರಬಹುದು. ಚಿತ್ರ ಅಥವಾ ವಿಡಿಯೊ ಫೈಲ್‌ಗಳನ್ನು ಸ್ಲೈಡ್‌ಷೋನಂತೆ ಅಥವಾ ಒಂದು ತುಣುಕು ವಿಡಿಯೋದಂತೆ ರಚಿಸುವ ಫಾರ್ಮಾರ್ಟ್ ಅನ್ನು GIF (Graphics Interchange Format) ಎಂದು ಕರೆಯಬಹುದು.

GIF ಫಾರ್ಮಾಟ್‌ ಬಗ್ಗೆ ಏನೋ ತಿಳಿಯಿತು. ಆದರೆ ನೀವೇ GIF ಫೈಲ್‌ ರಚಿಸಿಕೊಳ್ಳುವುದು ಹೇಗೆ ಎಂದು ಗೊತ್ತಾ? GIF ಫೈಲ್ ರಚಿಸುವುದಕ್ಕೆ ತಾಂತ್ರಿಕ ಸಹಾಯ ಬೇಕಿದೆ. ಆದರೆ, ಆ ತಾಂತ್ರಿಕತೆಯೇ ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಿದೆ.!!

ಹಾಗಾಗಿ, ಬಹಳ ಸುಲಭವಾಗಿ GIF ಫೈಲ್‌ಗಳನ್ನು ರಚಿಸಿ, ಅದನ್ನು ಹಂಚಿಕೊಳ್ಳುವ ಮೂಲಕ ಖುಷಿಯನ್ನು ಅನುಭವಿಸಿ. ಮತ್ತು ಕೆಳಗಿನ ಸ್ಲೈಡರ್‌ಗಳಲ್ಲಿ GIF ಫೈಲ್‌ ಹೇಗೆ ರಚಿಸುವುದು ಎಂಬುದನ್ನು ತಿಳಿಯಿರಿ.

imgflip.com ಜಾಲತಾಣಕ್ಕೆ ಭೇಟಿ ನೀಡಿ.!!

imgflip.com ಜಾಲತಾಣಕ್ಕೆ ಭೇಟಿ ನೀಡಿ.!!

GIF ಫೈಲ್‌ ರಚಿಸಲು ಹಲವು ಆನ್‌ಲೈನ್‌ ಜಾಲತಾಣಗಳು ಇವೆ. ಅದರಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ imgflip.com ಜಾಲತಾಣವನ್ನು ಆಯ್ಕೆ ಮಾಡಿಕೊಂಡರೆ ಉತ್ತವ. ಹಾಗಾಗಿ, imgflip.com ಜಾಲತಾಣಕ್ಕೆ ಭೇಟಿ ನೀಡಿರಿ.!!

GIF ಕ್ರಿಯೇಟ್ ಮಾಡಿ.!!

GIF ಕ್ರಿಯೇಟ್ ಮಾಡಿ.!!

imgflip.com ಜಾಲತಾಣಕ್ಕೆ ಭೇಟಿ ನೀಡಿದ ನಂತರ ನಿಮ್ಮ ಬಲಭಾಗದಲ್ಲಿ Create ಎಂಬ ಆಯ್ಕೆ ಇರುತ್ತದೆ. ಅಲ್ಲಿ ಮೊದಲು ಕ್ಲಿಕ್ಕಿಸಿ. ನಂತರ Make a GIF ಎಂಬಲ್ಲಿ ಕ್ಲಿಕ್ಕಿಸಿ. Images to GIF ಎಂಬ ಆಯ್ಕೆ ಕಾಣುತ್ತದೆ. Images to GIF ಕ್ಲಿಕ್ ಮಾಡಿ ನಿಮ್ಮ ಚಿತ್ರ ತೆರೆದು GIF ಇಮೇಜ್ ತರಾರಿಸಿ.

ವಿಡಿಯೊ GIF ಫೈಲ್‌ ಸಹ!!

ವಿಡಿಯೊ GIF ಫೈಲ್‌ ಸಹ!!

ನೀವು ವಿಡಿಯೊ ಫೈಲ್‌ಗಳನ್ನು GIF ಫಾರ್ಮಾಟ್‌ ಮಾಡಲು ಇಚ್ಚಿಸಿದರೆ Video to GIF ಕ್ಲಿಕ್ಕಿಸಿ. ನಂತರ Upload Video ಮೇಲೆ ಕ್ಲಿಕ್‌ ಮಾಡಿ ವಿಡಿಯೊ ಫೈಲ್‌ ಆಯ್ಕೆ ಮಾಡಿಕೊಳ್ಳಿ. GIF ಆಗಬೇಕಿರುವ ವಿಡಿಯೋ ಜಾಗವನ್ನು ಎಡಿಟ್ ಮಾಡಿ Generate GIF ಎಂಬಲ್ಲಿ ಕ್ಲಿಕ್ಕಿಸಿದರೆ GIF ಫೈಲ್‌ ಸಿದ್ಧ!!

ಡೌನ್‌ಲೋಡ್‌ ಮಾಡಿ ಇಲ್ಲ ಶೇರ್ ಮಾಡಿ.!!

ಡೌನ್‌ಲೋಡ್‌ ಮಾಡಿ ಇಲ್ಲ ಶೇರ್ ಮಾಡಿ.!!

imgflip.com ಜಾಲತಾಣದಲ್ಲಿ GIF ಫೈಲ್‌ಗಳನ್ನು ಕ್ರಿಯೇಟ್ ಮಾಡಿದ ನಂತರ ನೇರವಾಗಿ ಅಲ್ಲಿಂದಲೇ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬಹುದು ಅಥವಾ ಡೌನ್‌ಲೋಡ್ ಮಾಡಿಕೊಳ್ಳಬಹುದು.!!

<strong>ಶಾಕಿಂಗ್ ನ್ಯೂಸ್..ಆಧಾರ್, ಪಾನ್‌ಕಾರ್ಡ್ ಲಿಂಕ್ ಮಾಡಲು ಒಂದು ಮೆಸೇಜ್ ಸಾಕು!!</strong>ಶಾಕಿಂಗ್ ನ್ಯೂಸ್..ಆಧಾರ್, ಪಾನ್‌ಕಾರ್ಡ್ ಲಿಂಕ್ ಮಾಡಲು ಒಂದು ಮೆಸೇಜ್ ಸಾಕು!!

Best Mobiles in India

English summary
GIFs are the condiments of a healthy social media diet. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X