ಜಿಮೇಲ್ ಅಥವಾ ಗೂಗಲ್ ಅಕೌಂಟಿನ ಪಾಸ್ ವರ್ಡ್ ಮರೆತಿದ್ದೀರಾ?

|

ಹಲವು ದಿನಗಳ ನಂತರ ನಾವು ಗೂಗಲ್ ಅಕೌಂಟಿಗೆ ಲಾಗಿನ್ ಆದಾಗ ಖಂಡಿತ ನಾವು ಪಾಸ್ ವರ್ಡ್ ನ್ನು ಮರೆತುಬಿಟ್ಟಿರುತ್ತೇವೆ. ಇದರಲ್ಲಿ ಕೆಟ್ಟ ಪರಿಸ್ಥಿತಿ ಏನೆಂದರೆ ಗೂಗಲ್ ಪಾಸ್ ವರ್ಡ್ ವಿಶ್ವದೆಲ್ಲೆಡೆಯ ಫೇಮಸ್ ಇಮೇಲ್ ಫ್ಲ್ಯಾಟ್ ಫಾರ್ಮ್ ಜಿಮೇಲ್ ಪಾಸ್ ವರ್ಡ್ ಕೂಡ ಆಗಿರುತ್ತದೆ. ಇದಕ್ಕಿಂತ ಅಪಾಯಕಾರಿ ವಿಚಾರವೇನೆಂದರೆ ಗೂಗಲ್(ಅಥವಾ ಜಿಮೇಲ್) ಅಕೌಂಟಿನ ಹ್ಯಾಕರ್ ಗಳಿಂದ ಹ್ಯಾಕ್ ಮಾಡಲ್ಪಟ್ಟಿದ್ದು ಅವರು ನಿಮ್ಮ ಅಕೌಂಟಿನ ಪಾಸ್ ವರ್ಡ್ ನ್ನು ಬದಲಾಯಿಸಿರುವ ಸಾಧ್ಯತೆಯೂ ಇರುತ್ತದೆ.

ಜಿಮೇಲ್ ಅಥವಾ ಗೂಗಲ್ ಅಕೌಂಟಿನ ಪಾಸ್ ವರ್ಡ್ ಮರೆತಿದ್ದೀರಾ?

ಕೆಲವರು ತಮ್ಮ ಎಲ್ಲಾ ಪಾಸ್ ವರ್ಡ್ ಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುವುದಕ್ಕಾಗಿ ಥರ್ಡ್ ಪಾರ್ಟಿ ಅಪ್ಲಿಕೇಷನ್ ನ್ನು ಬಳಕೆ ಮಾಡುತ್ತಾರೆ, ಆದರೆ ಹೆಚ್ಚಿನವರು ಇದನ್ನೂ ಕೂಡ ಮಾಡುವುದಿಲ್ಲ. ಹಾಗಾದ್ರೆ ನಿಮ್ಮ ಪಾಸ್ ವರ್ಡ್ ನ್ನು ಪುನಃ ಪಡೆಯುವುದು ಹೇಗೆ ಅಥವಾ ಹೊಸ ದಾಗಿ ಸೃಷ್ಟಿಸುವುದು ಹೇಗೆ? ಈ ಕೆಳಗಿನ ಸಿಂಪಲ್ ಸ್ಟೆಪ್ ಗಳನ್ನು ಫಾಲೋ ಮಾಡಿ ನಿಮ್ಮ ಅಕೌಂಟ್ ನ್ನು ಮತ್ತೆ ಪಡೆಯಿರಿ

1. ಗೂಗಲ್ ಲಾಗಿನ್ ಪೇಜ್ ನಲ್ಲಿರುವ 'Forgot password?’ನ್ನು ಕ್ಲಿಕ್ಕಿಸಿ.

2. ನಿಮಗೆ ನೆನಪಿರುವ ಕೊನೆಯ ಪಾಸ್ ವರ್ಡ್ ಯಾವುದು ಎಂಬುದನ್ನು ಎಂಟರ್ ಮಾಡಿ. ಒಂದು ವೇಳೆ ನಿಮಗೆ ನೆನಪಿಲ್ಲದೇ ಇದ್ದಲ್ಲಿ 'Try another way’ ಆಯ್ಕೆಯನ್ನು ಕ್ಲಿಕ್ಕಿಸಿ.

3. ಗೂಗಲ್ ನಂತರ ನಿಮ್ಮ ಬಳಿ ಗೂಗಲ್ ಅಕೌಂಟಿಗೆ ಅಸೋಸಿಯೇಟ್ ಆಗಿರುವ ಸ್ಮಾರ್ಟ್ ಫೋನ್ ನಂಬರ್ ಗೆ ವೆರಿಫಿಕೇಷನ್ ಕೋಡ್ ಕಳುಹಿಸಬಹುದೇ ಎಂದು ಕೇಳುತ್ತದೆ.

4. ಒಂದು ವೇಳೆ ನಿಮ್ಮ ಬಳಿ ಸ್ಮಾರ್ಟ್ ಫೋನ್ ಹತ್ತಿರದಲ್ಲಿ ಇಲ್ಲದೇ ಇದ್ದಲ್ಲಿ, ಗೂಗಲ್ ಪರ್ಯಾಯ ಇಮೇಲ್ ಐಡಿಗೆ ವೆರಿಫಿಕೇಷನ್ ಕೋಡ್ ನ್ನು ಕಳುಹಿಸುತ್ತದೆ. ಒಂದು ವೇಳೆ ನಿಮ್ಮ ಬಳಿ ಪರ್ಯಾಯ ಇಮೇಲ್ ಐಡಿ ಇಲ್ಲದೇ ಇದ್ದಲ್ಲಿ 'Try another way’ಯನ್ನು ಮತ್ತೊಮ್ಮೆ ಕ್ಲಿಕ್ಕಿಸಿ.

5. ಗೂಗಲ್ ನಿಮ್ಮ ಬಳಿ ಯಾವುದೇ ಇಮೇಲ್ ಐಡಿಯನ್ನು ಕೇಳುತ್ತದೆ( ನೀವು ಆಕ್ಸಿಸ್ ಮಾಡಲು ಸಾಧ್ಯವಿರುವ ಇಮೇಲ್ ಐಡಿ).ಆ ಮೂಲಕ ನಿಮ್ಮನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತದೆ. ನೀವು ನಮೂದಿಸಿರುವ ಇಮೇಲ್ ಐಡಿಗೆ ವೆರಿಫಿಕೇಷನ್ ಕೋಡ್ ಕಳುಹಿಸಲಾಗುತ್ತದೆ.

6.ಒಮ್ಮೆ ವೆರಿಫಿಕೇಷನ್ ಕೋಡ್ ರಿಸೀವ್ ಮಾಡಿದ ನಂತರ ಅದನ್ನು ಗೂಗಲ್ ಡೈಲಾಗ್ ಬಾಕ್ಸ್ ನಲ್ಲಿ ನಮೂದಿಸಿ.

7.ಇದು ಮುಗಿದ ನಂತರ ನೀವು ಜಿಮೇಲ್ ಅಥವಾ ಗೂಗಲ್ ಅಕೌಂಟ್ ನ್ನು ಆಕ್ಸಿಸ್ ಮಾಡಲು ಅವಕಾಶವಿರುತ್ತದೆ.

ಒಮ್ಮೆ ಲಾಗಿನ್ ಆದ ನಂತರ ನೀವು ನಿಮ್ಮ ಪಾಸ್ ವರ್ಡ್ ನ್ನು ಬದಲಾಯಿಸಿ ಮತ್ತು ಅದನ್ನು ಯಾರೂ ಆಕ್ಸಿಸ್ ಮಾಡಲು ಸಾಧ್ಯವಿಲ್ಲದ ಸೇಫ್ ಜಾಗದಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ. ನೀವು ಇದಕ್ಕಾಗಿ ಥರ್ಡ್ ಪಾರ್ಟಿ ಆಪ್ ಗಳನ್ನು ಉದಾಹರಣೆಗೆ ಲಾಸ್ಟ್ ಪಾಸ್ ಗಳನ್ನು ಬಳಕೆ ಮಾಡಿ ನಿಮ್ಮ ಪಾರ್ಸ್ ವರ್ಡ್ ಗಳನ್ನು ಸೆಕ್ಯೂರ್ ಆಗಿ ಸೇವ್ ಮಾಡಿ ಇಟ್ಟುಕೊಳ್ಳಬಹುದು. ನೀವು ಕ್ರೋಮ್ ನಲ್ಲಿ ಯಾವುದೇ ಸರ್ವೀಸ್ ಗೆ ಲಾಗಿನ್ ಆದಾಗ ಸೇವ್ ಪಾಸ್ ವರ್ಡ್ ನ್ನು ಕ್ಲಿಕ್/ಟ್ಯಾಪ್ ಮಾಡಿದರೆ ಗೂಗಲ್ ನಿಮ್ಮ ಪಾಸ್ ವರ್ಡ್ ನ್ನು ಸೇವ್ ಮಾಡಿ ಇಟ್ಟುಕೊಳ್ಳುತ್ತದೆ ಮತ್ತು ಮುಂದಿನ ಬಾರಿ ಆ ಸೇವೆಗೆ ಲಾಗಿನ್ ಆಗುವಾಗ ಸೇವೆಯನ್ನುತೆರೆಯಲು ಅನುವು ಮಾಡಿಕೊಡುತ್ತದೆ. ಆಪಲ್ ನಲ್ಲೂ ಇದೇ ರೀತಿಯ ತಂತ್ರಜ್ಞಾನವಿದ್ದು ಅದುವೇ “ಐಕ್ಲೌಡ್ ಕೀಚೈನ್”.

ಮುಂದಿನ ಬಾರಿ ಪಾಸ್ ವರ್ಡ್ ಮರೆತರೆ ಚಿಂತಿಸಬೇಡಿ. ಸರಳವಾಗಿ ಈ ವಿಧಾನಗಳನ್ನು ಅನುಸರಿಸಿ.

Most Read Articles
Best Mobiles in India

English summary
Forgot Gmail or Google account password? Here’s how to recover

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X