ರಿಲಾಯನ್ಸ್ ಜಿಯೋ ಸಿಮ್ ಮೆನೆಗೆ ಡೆಲಿವರಿ ಪಡೆಯುವುದು ಹೇಗೆ?

ರಿಲಾಯನ್ಸ್ ಜಿಯೋ 4G ಸಿಮ್‌ ಅನ್ನು ಮೆನೆಗೆ ಡೆಲಿವರಿ ಪಡೆಯಲು ಈ ಹಂತಗಳನ್ನು ಫಾಲೋ ಮಾಡಿ.

By Suneel
|

ಇತ್ತೀಚೆಗಷ್ಟೆ ರಿಲಾಯನ್ಸ್ ಜಿಯೋ ಸಿಮ್ ಅನ್ನು ಮನೆಗಳಿಗೆ ಹೋಗಿ ಗ್ರಾಹಕರಿಗೆ ಡೆಲಿವರಿ ಮಾಡುವ ಬಗ್ಗೆ ವರದಿ ಆಗಿದೆ. ಸಿಮ್‌ ಕಾರ್ಡ್‌ ಪಡೆಯಲು ಜಿಯೋ ಸಿಮ್ ಬಳಕೆಯ ಆಕಾಂಕ್ಷಿಗಳು ಮನೆಯಿಂದ ಹೊರಗೆ ಬರುವ ತೊಂದರೆಯೇ ತಪ್ಪಿದಂತಾಗಿದೆ.

ಅಂದಹಾಗೆ ಪ್ರಾಥಮಿಕವಾಗಿ ಕೆಲವು ನಗರಗಳಲ್ಲಿ ಈಗಾಗಲೇ ಜಿಯೋ 4G ಸಿಮ್‌ ಅನ್ನು ಮನೆಗಳಿಗೆ ಡೆಲಿವರಿ ಮಾಡಲಾಗುತ್ತಿದ್ದು, ವೆಲ್ಕಮ್‌ ಆಫರ್‌ ಇರುವಾಗಲೇ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಪಡೆಯಲು ಜಿಯೋ ಸರ್ವೀಸ್ ನೀಡುವವರು ಕೈಗೊಂಡಿರುವ ಇನ್ನೊಂದು ಹೊಸ ಹೆಜ್ಜೆ ಇದಾಗಿದೆ.

ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡುವುದು ಹೇಗೆ?

ನೀವು ಸಹ ರಿಲಾಯನ್ಸ್ ಜಿಯೋ(Jio) ಸಿಮ್‌ ಅನ್ನು ಮನೆಗೆ ಡೆಲಿವರಿ ಪಡೆಯಬೇಕೇ? ಹಾಗಿದ್ದಲ್ಲಿ, ನಾವು ತಿಳಿಸುವ ಹಂತಗಳನ್ನು ಫಾಲೋ ಮಾಡಿ ಜಿಯೋ 4G ಸಿಮ್‌ ಅನ್ನು ಮನೆಗೆ ಡೆಲಿವರಿ ಪಡೆಯಿರಿ.

ಸಿಮ್‌ಗಾಗಿ ಕ್ಯೂನಲ್ಲಿ ನಿಲ್ಲುವುದನ್ನು ನಿಲ್ಲಿಸಿ

ಸಿಮ್‌ಗಾಗಿ ಕ್ಯೂನಲ್ಲಿ ನಿಲ್ಲುವುದನ್ನು ನಿಲ್ಲಿಸಿ

ರಿಲಾಯನ್ಸ್ ಜಿಯೋ ಸಿಮ್ ರಿಲಾಯನ್ಸ್ ಡಿಜಿಟಲ್, ಡಿಜಿಟಲ್ ಎಕ್ಸ್‌ಪ್ರೆಸ್, ಎಕ್ಸ್‌ಪ್ರೆಸ್ ಮಿನಿ ಸ್ಟೋರ್‌ಗಳಲ್ಲಿ ದೇಶದಾದ್ಯಂತ ಲಭ್ಯ. ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ಫೋನ್‌ ಬಳಕೆದಾರರು ಸಹ ಜನವರಿ 2017 ರ ಒಳಗಾಗಿ ಸಿಮ್‌ ಅನ್ನು ಖರೀದಿಸಿ ಪರೀಕ್ಷೆ ಮಾಡಲು ಸಹ ಆಕಾಂಕ್ಷಿಗಳಾಗಿದ್ದಾರೆ. ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಿಲಾಯನ್ಸ್ ಜಿಯೋ ಸ್ವತಃ ಈಗ ಗ್ರಾಹಕರಿಗೆ ಜಿಯೋ ಸಿಮ್‌ ಅನ್ನು ಮನೆಗೆ ಡೆಲಿವರಿ ಮಾಡುವ ಕ್ರಮ ಕೈಗೊಂಡಿದೆ.

ಆಯ್ಕೆಗೊಂಡ ನಗರಗಳಲ್ಲಿ ಮಾತ್ರ ಸಿಮ್‌ ಡೆಲಿವರಿ ಲಭ್ಯ

ಆಯ್ಕೆಗೊಂಡ ನಗರಗಳಲ್ಲಿ ಮಾತ್ರ ಸಿಮ್‌ ಡೆಲಿವರಿ ಲಭ್ಯ

ರಿಲಾಯನ್ಸ್ ಜಿಯೋ ಸಿಮ್‌ ಕೇವಲ ಆಯ್ಕೆ ಮಾಡಿದ ಕೆಲವು ನಗರಗಳಲ್ಲಿ ಮಾತ್ರ ಡೆಲಿವರಿ ಆಗಲಿವೆ. ಮುಂದಿನ ದಿನಗಳಲ್ಲಿ ಹಲವು ನಗರಗಳಲ್ಲಿ ಈ ಸೇವೆಯನ್ನು ವಿಸ್ತರಣೆ ನೀಡಲಾಗುವುದು. ಅಂದಹಾಗೆ ಪ್ರಸ್ತುತದಲ್ಲಿ ಕೊಲ್ಕತ್ತ, ನವದೆಹಲಿ, ಮುಂಬೈ, ಅಮೆದಾಬಾದ್ ಮತ್ತು ಪುಣೆಗಳಲ್ಲಿ ಸಿಮ್‌ ಅನ್ನು ಮನೆಗಳಿಗೆ ಡೆಲಿವರಿ ಮಾಡಲಾಗುತ್ತಿದೆ. ಈ ನಗರಗಳಲ್ಲಿ ಇರುವವರು ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದು ಅಫೀಶಿಯಲ್

ಇದು ಅಫೀಶಿಯಲ್

ಹಲವು ರೀತಿಯಲ್ಲಿ ಸುದ್ದಿಗಳು ಹರಿದಾಡುವಂತೆ ಇದು ಮೋಸದ ಸುದ್ದಿ ಅಲ್ಲ. ರಿಲಾಯನ್ಸ್ ಜಿಯೋ ಸಿಮ್‌ ಅನ್ನು ಮನೆಗೆ ಡೆಲಿವರಿ ಪಡೆಯಲು ನೀವು ರಿಲಾಯನ್ಸ್ ಜಿಯೋ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ವೆಬ್‌ಸೈಟ್‌ ಡೆಲಿವರಿ ಸೇವೆ ಲಭ್ಯವಿರುವ ಸ್ಥಳದಲ್ಲಿ ನೀವು ಇರುವ ಬಗ್ಗೆ ಪರೀಶೀಲಿಸಿ, ನಂತರ ನಿಮ್ಮ ವಿವರ ಕೇಳುತ್ತದೆ. ಹೆಸರು, ವಿಳಾಸ, ಫೋನ್‌ ನಂಬರ್ ಕೇಳಲಾಗುತ್ತದೆ.

ವಿವರಗಳ ಪರಿಶೀಲನೆ

ವಿವರಗಳ ಪರಿಶೀಲನೆ

ಜಿಯೋ ವೆಬ್‌ಸೈಟ್‌ನಲ್ಲಿ ವಿವರ ನೀಡಿದರೆ ನಂತರ ಜಿಯೋ ಟೀಮ್ ನೀವಿರುವ ಸ್ಥಳಕ್ಕೆ ಭೇಟಿ ನೀಡಿ, ವಿವರಗಳನ್ನು ಪರಿಶೀಲನೆ ಮಾಡಿ, ಆಧಾರ್‌ ಕಾರ್ಡ್‌ ಸ್ಕ್ಯಾನ್‌ ಮಾಡಿಕೊಳ್ಳಲಾಗುತ್ತದೆ. ವಿವರ ಪರಿಶೀಲನೆ ಆದ ನಂತರ, ಫಿಂಗರ್‌ ಪ್ರಿಂಟ್ ಅನ್ನು ವೆರಿಫೀಕೇಶನ್‌ಗಾಗಿ ತೆಗೆದುಕೊಳ್ಳಲಾಗುತ್ತದೆ. ಕಡಿಮೆ ಸಮಯದಲ್ಲಿ ಈ ಎಲ್ಲಾ ವಿವರಗಳನ್ನು ಜಿಯೋ ಟೀಮ್‌ ಪಡೆಯುತ್ತದೆ. ಸಮಯ ಹಾಳು ಮಾಡುವುದಿಲ್ಲ.

ಜಿಯೋ ಸಿಮ್ ಡೆಲಿವರಿ

ಜಿಯೋ ಸಿಮ್ ಡೆಲಿವರಿ

ಮೇಲೆ ತಿಳಿಸಿದಂತೆ ವೆರಿಫಿಕೇಶನ್‌ ಮುಗಿದರೆ, ಜಿಯೋ 4G ಸಿಮ್‌ ಅನ್ನು ಪಡೆಯಬಹುದು. ನಂತರ ಕೆಲವೇ ಗಂಟೆಗಳಲ್ಲಿ ಜಿಯೋ ಸಿಮ್‌ ಆಕ್ಟಿವೇಟ್‌ ಆಗುತ್ತದೆ. ಸಿಮ್‌ ಪಡೆದವರು ವೆಲ್ಕಮ್‌ ಆಫರ್'ನಿಂದ ಉಚಿತವಾಗಿ ಅನ್‌ಲಿಮಿಟೆಡ್‌ ಡಾಟಾ, ವಾಯ್ಸ್ ಕರೆ ಮತ್ತು ಮೆಸೇಜ್‌ ಸೇವೆಗಳನ್ನು ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here's How You Can Get Your Reliance Jio SIM Delivered to Your Home. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X