Subscribe to Gizbot

ಆಂಡ್ರಾಯ್ಡ್ ಫೋನ್‌ಗಳ ವೇಗ ಹೆಚ್ಚಿಸಲು ಗೂಗಲ್‌ನಿಂದ ಹೊಸ ಫೀಚರ್!!..ಏನದು ಗೊತ್ತಾ?

Written By:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ವೇಗ ಕಡಿಮೆಯಾಗದಂತೆ ನೋಡಿಕೊಳ್ಳಲು ಗೂಗಲ್ ಮತ್ತೊಂದು ವೈಶಿಷ್ಯವನ್ನು ಪರಿಚಯಿಸಿದೆ.! ಟೆಕ್ ದೈತ್ಯ ಗೂಗಲ್ ಆಪ್‌ಗಳನ್ನು ಡೌನ್‌ಲೋಡ್ ಮಾಡದೆ 'ಆಪ್' ಬಳಕೆ ಮಾಡುವಂತಹ "ಇನ್‌ಸ್ಟಂಟ್ಟ್ ಆಪ್" ತೆರೆಯಬಹುದಾದ ಆಯ್ಕೆ ನೀಡಿ ಆಂಡ್ರಾಯ್ಡ್ ಬಳಕೆದಾರರ ರಕ್ಷಣೆಗೆ ನಿಂತಿದೆ.!!

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗೆ ಹೆಚ್ಚು ಹೊರೆಯಾಗುತ್ತಿರುವ ಆಪ್‌ಗಳಿಂದ ಸ್ಮಾರ್ಟ್ಫೋನ್ ರಕ್ಷಿಸಲು ಗೂಗಲ್ ಈ ಇನ್‌ಸ್ಟಂಟ್ಟ್ ಆಪ್ ತೆರೆಯಬಹುದಾದ ಆಯ್ಕೆ ನೀಡಿದ್ದು, ಈ ಇನ್‌ಸ್ಟಂಟ್ಟ್ ಆಪ್ ಸಹಾಯದಿಂದ ಆಪ್‌ಗಳನ್ನು ಡೌನ್‌ಲೋಡ್ ಮಾಡದೆ ಆಪ್ ಬಳಕೆ ಮಾಡಬಹುದಾದ ಅತ್ಯುತ್ತಮ ಫೀಚರ್ ಲಭ್ಯವಿದೆ.!!

ಆಂಡ್ರಾಯ್ಡ್ ಫೋನ್‌ಗಳ ವೇಗ ಹೆಚ್ಚಿಸಲು ಗೂಗಲ್‌ನಿಂದ ಹೊಸ ಫೀಚರ್!!..ಏನದು ಗೊತ್ತಾ?

ಇತ್ತೀಗೆ ಬಂದಿರುವ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳಲ್ಲಿ ಸೆಟ್ಟಿಂಗ್ಸ್ ಬದಲಾವಣೆ ಮಾಡಿಕೊಳ್ಳುವ ಮೂಲಕ ಈ ಫೀಚರ್ ಅನ್ನು ಬಳಸಬಹುದಾಗಿದ್ದು, ಹಾಗಾದರೆ, ಆಪ್‌ಗಳನ್ನು ಡೌನ್‌ಲೋಡ್ ಮಾಡದೆ ಆಪ್ ಬಳಕೆ ಮಾಡಬಹುದಾದ ಸೆಟ್ಟಿಂಗ್ಸ್ ಹೇಗೆ? ಇದರ ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಇನ್‌ಸ್ಟಂಟ್ಟ್ ಆಪ್?

ಏನಿದು ಇನ್‌ಸ್ಟಂಟ್ಟ್ ಆಪ್?

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಮೆಮೊರಿಯನ್ನು ಆಪ್‌ಗಳು ತುಂಬಿಕೊಳ್ಳುತ್ತಿವೆ ಮತ್ತು ಆಪ್‌ ಇನ್‌ಸ್ಟಾಲ್ ಮಾಡಲು ಕಡಿಮೆ ಮೆಮೊರಿ ಇರುವವರಿಗೆ ಇನ್‌ಸ್ಟಂಟ್ಟ್ ಆಪ್ ಪರಿಹಾರ ನೀಡಿವೆ.! ಹಾಗಾಗಿ, ಫೋನ್‌ನಲ್ಲಿ ಆಪ್‌ ಡೌನ್‌ಲೋಡ್ ಮಾಡದೆ ಆಪ್ ಬಳಕೆ ಮಾಡಬಹುದಾದ ಆಯ್ಕೆ ಈ ಇನ್‌ಸ್ಟಂಟ್ಟ್ ಆಪ್ .!

ಇನ್‌ಸ್ಟಂಟ್ಟ್ ಆಪ್ ಕಾರ್ಯನಿರ್ವಹಣೆ ಹೇಗೆ?

ಇನ್‌ಸ್ಟಂಟ್ಟ್ ಆಪ್ ಕಾರ್ಯನಿರ್ವಹಣೆ ಹೇಗೆ?

ಗೂಗಲ್ ಕ್ರೋಮ್ ಮೂಲಕ ಅಂತರ್ಜಾಲ ವೆಬ್‌ಸೈಟ್ ಹುಡುಕಾಟದಲ್ಲಿ ಲಿಂಕ್ ತೆರೆಯುವಾಗಲೇ ಆ ವೆಬ್‌ಸೈಟ್‌ನ ಇನ್‌ಸ್ಟಂಟ್ಟ್ ಆಪ್ ಒಂದು ನಿಮಗೆ ಕಾಣಿಸಲಿದೆ.! ಇದರಿಂದ ಕ್ರೋಮ್ ಜಾಲತಾಣದಲ್ಲಿಯೇ ಲಿಂಕ್ ಜಾಲತಾಣ ಹಾಗೂ ಇನ್‌ಸ್ಟಂಟ್ಟ್ ಆಪ್ ಬಳಸಬಹುದಾದ ಎರಡು ಆಯ್ಕೆಗಳು ಬಳಕೆದಾರರಿಗೆ ಸಿಗಲಿವೆ.!!

How to create two accounts in one Telegram app (KANNADA)
ಇನ್‌ಸ್ಟಂಟ್ಟ್ ಆಪ್ ಉಪಯೋಗ ಏನು?

ಇನ್‌ಸ್ಟಂಟ್ಟ್ ಆಪ್ ಉಪಯೋಗ ಏನು?

ಗೂಗಲ್ ಇನ್‌ಸ್ಟಂಟ್ಟ್ ಆಪ್ ಅಂತರ್ಜಾಲ ಬಳಕೆದಾರರಿಗೆ ಬಹುಉಪಯೋಗಿ ಆಗಿದೆ. ಆಪ್‌ಗಳನ್ನು ಡೌನ್‌ಲೋಡ್ ಮಾಡದೆ ಕ್ರೋಮ್‌ ಮೂಲಕವೇ ಆಪ್‌ನಲ್ಲಿನ ಸೇವೆಗಳನ್ನು ಬಳಸಬಹುದಾದ ಅತ್ಯುತ್ತಮ ಫೀಚರ್ ಒಂದು ಬಳಕೆದಾರರಿಗೆ ಸಿಗಲಿದೆ.! ಇದರಿಂದ ಫೋನ್ ಮೆಮೊರಿ ಉಳಿತಾಯವಾಗಿ ಫೋನ್ ವೇಗ ಹೆಚ್ಚಾಗಲಿದೆ.!!

ಇನ್‌ಸ್ಟಂಟ್ಟ್ ಆಪ್ ತೆರೆಯುವುದು ಹೇಗೆ?

ಇನ್‌ಸ್ಟಂಟ್ಟ್ ಆಪ್ ತೆರೆಯುವುದು ಹೇಗೆ?

ಗೂಗಲ್ ಈಗಾಗಲೇ ಈ ಫೀಚರ್ ಅನ್ನು ಗ್ರಾಹಕರ ಬಳಕೆಗೆ ನೀಡಿದ್ದು, ಆಂಡ್ರಾಯ್ಡ್ ಫೋನ್ ಸೆಟ್ಟಿಂಗ್ಸ್ ಮೂಲಕ ಇನ್‌ಸ್ಟಂಟ್ಟ್ ಆಪ್ ತೆರೆಯುವಂತೆ ಮಾಡಬಹುದು.!! ನಿಮ್ಮ ಫೋನ್ ಸೆಟ್ಟಿಂಗ್ಸ್ ತೆರೆದು ಅಲ್ಲಿ ಗೂಗಲ್ ಸೆಟ್ಟಿಂಗ್ಸ ಹುಡುಕಿ ಅದರಲ್ಲಿ 'ಇನ್‌ಸ್ಟಂಟ್ಟ್ ಆಪ್' ಸಕ್ರಿಯಗೊಳಿಸಿದರೆ ಈ ಫೀಚರ್ ಕಾರ್ಯ ಆರಂಭವಾಗಲಿದೆ.!!

ಬಳಕೆದಾರರ ಅತ್ಯತ್ತಮ ಫೀಚರ್!!

ಬಳಕೆದಾರರ ಅತ್ಯತ್ತಮ ಫೀಚರ್!!

ಫೋನ್ ಮೆಮೊರಿ ಉಳಿತಾಯವಾಗಿ ಫೋನ್ ವೇಗ ಹೆಚ್ಚಾಗುವ 'ಇನ್‌ಸ್ಟಂಟ್ಟ್ ಆಪ್' ಫೀಚರ್ ಬಳಕೆದಾರರ ಅತ್ಯತ್ತಮ ಫೀಚರ್ ಆಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ನೂರಾರು ಆಪ್‌ಗಳನ್ನು ಹಾಕಿಕೊಳ್ಳುವ ಬದಲಲಿಗೆ ಕ್ರೋಮ್‌ನಲ್ಲಿ ವೆಬ್‌ಸೈಟ್ ಆಪ್ ತೆರೆಯುವ ಈ ಫೀಚರ್ ಆಂಡ್ರಾಯ್ಡ್ ಪ್ರಪಂಚವನ್ನು ಬದಲಾಯಿಸಬಹುದು.!ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮತ್ತು ಟೆಕ್ ಟಿಪ್ಸ್‌ಗಳಿಗಾಗಿ ನಮ್ಮ ಫೇಸ್‌ಬುಕ್ ಪೇಜ್ ಅನ್ನು ಮರೆಯದೇ ಲೈಕ್ ಮಾಡಿ.!!

ಓದಿರಿ:ಶಿಯೋಮಿ ಭಾರತದ ನಂ.1 ಮೊಬೈಲ್ ಕಂಪೆನಿ ಆಗಿದ್ದೇಗೆ!?..ಭವಿಷ್ಯದಲ್ಲಿಯೂ ಮಣಿಸಲು ಸಾಧ್ಯವಿಲ್ಲವೇ?!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
You can try Android’s best new feature right now, as the tech giant Google has finally started to roll out the long-awaited Instant Apps feature.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot