ಯುಟಿಎಸ್ ಆಪ್ ನಲ್ಲಿ ರೈಲ್ವೇ ಪಾಸ್ ಪಡೆಯುವುದು ಹೇಗೆ?

By Gizbot Bureau
|

ಸ್ಥಳೀಯ ಭಾರತೀಯ ರೈಲ್ವೇಯಲ್ಲಿ ನೀವು ಆಗಾಗ ಪ್ರಯಾಣಿಸುತ್ತಲೇ ಇರುತ್ತೀರಾದರೆ ನಿಮಗೆ ಹಣವನ್ನು ಉಳಿತಾಯ ಮಾಡುವುದಕ್ಕಾಗಿ ಸೀಸನ್ ಟಿಕೆಟ್ ಲಭ್ಯವಾಗುತ್ತದೆ. ಉದಾಹರಣೆಗೆ ಅಂಧೇರಿಯಿಂದ ಮುಂಬೈನ ಚರ್ಚ್ ಗೇಟ್ ಗೆ ಸ್ಥಳೀಯ ಟ್ರೈನ್ ಬೆಲೆ ಸೆಕೆಂಡ್ ಕ್ಲಾಸ್ ಗೆ 10 ರುಪಾಯಿ, ಫಸ್ಟ್ ಕ್ಲಾಸ್ ಗೆ 105 ರುಪಾಯಿ.ಇದೇ ರೂಟ್ ಗೆ ಮಾಸಿಕ ಪಾಸ್ ಶುಲ್ಕ ಕ್ರಮವಾಗಿ 215 ರುಪಾಯಿ ಮತ್ತು 650 ರುಪಾಯಿಗಳಿವೆ. ಈ ಪಾಸ್ ನಿಮಗೆ ಈ ರೂಟ್ ನಲ್ಲಿ ಎಷ್ಟು ಬಾರಿ ಬೇಕಿದ್ದರೂ ಪ್ರಯಾಣಿಸುವುದಕ್ಕೆ ಅವಕಾಶ ನೀಡುತ್ತದೆ. ಒಂದು ವೇಳೆ ನೀವು 11 ಟ್ರಿಪ್ ನ್ನು ಸೆಕೆಂಡ್ ಕ್ಲಾಸ್ ನಲ್ಲಿ ಅಥವಾ 3 ಟ್ರಿಪ್ ಫಸ್ಟ್ ಕ್ಲಾಸ್ ನಲ್ಲಿ ತೆಗೆದುಕೊಂಡರೂ ಸೀಸನ್ ಟಿಕೆಟ್ ನಿಮಗೆ ಆರ್ಥಿಕ ಉಳಿತಾಯವನ್ನು ಮಾಡುತ್ತದೆ. ಆದರೆ ಇದಕ್ಕಾಗಿ ಅಂದರೆ ಸೀಸನ್ ಟಿಕೆಟ್ ಗಾಗಿ ನೀವು ಕೇವಲ ಐಆರ್ ಸಿಟಿಸಿ ಗೆ ಲಾಗಿನ್ ಆಗಬೇಕು ಎಂದೇನಿಲ್ಲ.

ರೈಲ್ವೇ ಸ್ಟೇಷನ್

ಈ ಮೊದಲು ನೀವು ರೈಲ್ವೇ ಸ್ಟೇಷನ್ ನ ಕೌಂಟರ್ ನಲ್ಲಿ ಸೀಸನ್ ಟಿಕೆಟ್ ಗಾಗಿ ಕಾಯಬೇಕಾಗುತ್ತಿತ್ತು.ಆದರೆ ಈಗ ಹಾಗೆ ಮಾಡುವ ಅಗತ್ಯವೇ ಇಲ್ಲ, ಭಾರತೀಯ ಕೇಂದ್ರ ರೈಲ್ವೇ ಇಲಾಖೆಯ ರೈಲ್ವೇ ಮಾಹಿತಿ ವಿಭಾಗ(ಸಿಆರ್ ಐಎಸ್) ಅಭಿವೃದ್ಧಿ ಪಡಿಸಿರುವ ಯುಟಿಎಸ್ ಆಪ್ ನಿಮಗೆ ಇದನ್ನು ಸುಲಭದಲ್ಲಿ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಯುಟಿಎಸ್ ಆಪ್ ಮೂಲಕ ನೀವು ಟಿಕೆಟ್ ನ್ನು ಡಿಸ್ಪ್ಲೇ ಮಾಡಬಹುದಾಗಿದ್ದು, ಸೀಸನ್ ಟಿಕೆಟ್ ನ ಪ್ರಿಟೆಂಟ್ ಕಾಪಿಯನ್ನು ತೆಗೆದುಕೊಂಡು ಹೋಗುವ ಅಗತ್ಯವೂ ಇಲ್ಲ. ಇದು ವ್ಯವಸ್ಥೆಯನ್ನು ಮತ್ತಷ್ಟು ಸುಲಭವಾಗಿಸಿದೆ ಮತ್ತು ಆನ್ ಲೈನ್ ನಲ್ಲಿ ಸೀಸನ್ ಟಿಕೆಟ್ ಖರೀದಿ ಮಾಡದೇ ಇರುವುದಕ್ಕೆ ಇದೀಗ ಯಾವ ಕಾರಣಗಳೂ ಉಳಿದಿಲ್ಲ.

ಯುಟಿಎಸ್ ಆಪ್

ಯುಟಿಎಸ್ ಆಪ್ ನಲ್ಲಿ ನೀವು ಪೇಪರ್ ಸೀಸನ್ ಟಿಕೆಟ್ ನ್ನು ಕೂಡ ಬುಕ್ ಮಾಡಬಹುದು. ಇದು ರೈಲ್ವೇ ಸ್ಟೇಷನ್ ನ ಕಿಯೋಸ್ಕ್ ನಲ್ಲಿ ಪ್ರಿಂಟ್ ಮಾಡಿಕೊಳ್ಳಬೇಕಾಗುತ್ತದೆ. ಈ ವಿಧಾನವನ್ನು ನಾವು ಮಾಡದೇ ಇರುವುದಕ್ಕೆ ಸಲಹೆ ನೀಡುತ್ತೇವೆ. ಈ ರೀತಿ ಕಿಯೋಸ್ಕ್ ನಲ್ಲಿ ಪ್ರಿಂಟ್ ಮಾಡಿಕೊಳ್ಳುವ ಟ್ರೆಂಡ್ ಕೂಡ ಇದೀಗ ಹಳತಾಗಿದೆ.ಹಾಗಾಗಿ ಕಾಗದ ರಹಿತ ವ್ಯವಸ್ಥೆಗೆ ಮುಂದಾಗುವುದಕ್ಕೆ ನಾವು ನಿಮಗೆ ಸೂಚಿಸುತ್ತಿದ್ದೇವೆ. ಹಾಗಾದ್ರೆ ಯುಟಿಎಸ್ ಆಪ್ ಮೂಲಕ ಟಿಕೆಟ್ ಖರೀದಿಸುವುದಾದರೆ ಏನು ಮಾಡಬೇಕು.ಇಲ್ಲಿದೆ ನೋಡಿ ಹಂತಹಂತವಾಗಿರುವ ಮಾಹಿತಿ.

ಯುಟಿಎಸ್ ಆಪ್ ನಲ್ಲಿ ಕಾಗದ ರಹಿತ ಸೀಸನ್ ಟಿಕೆಟ್ ಬುಕ್ಕಿಂಗ್ ಹೇಗೆ?

ಯುಟಿಎಸ್ ಆಪ್ ನಲ್ಲಿ ಕಾಗದ ರಹಿತ ಸೀಸನ್ ಟಿಕೆಟ್ ಬುಕ್ಕಿಂಗ್ ಹೇಗೆ?

ಈ ಕೆಳಗಿನ ಹಂತಗಳನ್ನು ಯುಟಿಎಸ್ ಆಪ್ ನಲ್ಲಿ ಕಾಗದ ರಹಿತ ಟಿಕೆಟ್ ಬುಕ್ಕಿಂಗ್ ಗಾಗಿ ಅನುಸರಿಸಬೇಕು.

1. ಆಂಡ್ರಾಯ್ಡ್ ಅಥವಾ ಐಫೋನ್ ನಲ್ಲಿ ಯುಟಿಎಸ್ ಆಪ್ ನ್ನು ತೆರೆಯಿರಿ.

2. ಈ ಮುಂಚೆ ನೀವು ಲಾಗಿನ್ ಆಗಿಲ್ಲದೇ ಇದ್ದಲ್ಲಿ, ಆಂಡ್ರಾಯ್ಡ್ ನ ಮೇಲ್ಬಾಗದ ಬಲದಲ್ಲಿರುವ ಲಾಗಿನ್ ಬಟನ್ ನ್ನು ಕ್ಲಿಕ್ಕಿಸಿ. ಐಫೋನ್ ನಲ್ಲಿ ಈ ಬಟನ್ ಆಯಾತಾಕಾರದ ಬಲಮುಖದ ಬಾಣದ ಗುರುತಿನಲ್ಲಿ ಕಾಣಿಸುತ್ತದೆ.

3. ನಿಮ್ಮ ಕ್ರಿಡೆನ್ಶಿಯಲ್ಸ್ ನ್ನು ಎಂಟರ್ ಮಾಡಿ ಮತ್ತು ಲಾಗಿನ್ ಆಗಿ ಬುಕ್ ಟಿಕೆಟ್ ನ್ನು ಟ್ಯಾಪ್ ಮಾಡಿ.

4. ಸೀಸನ್ ಟಿಕೆಟ್ ನ್ನು ಟ್ಯಾಪ್ ಮಾಡಿ.

5. Book & Travel (Paperless) ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಟಿಕೆಟ್ ರಿನ್ಯೂ

6. Issue Ticket ನ್ನು ಟ್ಯಾಪ್ ಮಾಡಿ. ಐಫೋನ್ ನಲ್ಲಿ ಈ ಆಯ್ಕೆಯು Ticket Issue ಎಂದು ಲೇಬಲ್ ಆಗಿರುತ್ತದೆ. ಒಂದು ವೇಳೆ ನೀವು ನಿಮ್ಮ ಟಿಕೆಟ್ ನ್ನು ರಿನ್ಯೂ ಮಾಡಲು ಬಯಸುತ್ತಿದ್ದರೆ ಸರಳವಾಗಿ Renew Ticket ಎಂದು ಆಂಡ್ರಾಯ್ಡ್ ನಲ್ಲಿ ಅಥವಾ Ticket Renew ಐಫೋನ್ ನಲ್ಲಿ ಕ್ಲಿಕ್ಕಿಸಿ. ಹಳೆಯ ಸೀಸನ್ ಟಿಕೆಟ್ ನಲ್ಲಿ ನಮೂದಿಸಲಾಗಿರುವ ಯುಟಿಎಸ್ ನಂಬರ್ ನ್ನು ಎಂಟರ್ ಮಾಡಿ.

7. From Station ಅಡಿಯಲ್ಲಿ ನೀವು ಯಾವ ಸ್ಟೇಷನ್ ನಿಂದ ಬುಕ್ ಮಾಡಲು ಬಯಸುತ್ತೀರೋ ಅದನ್ನು ಸೆಲೆಕ್ಟ್ ಮಾಡಿ. To Station ನ ಅಡಿಯಲ್ಲಿ ನಿಮ್ಮ ತಲುಪಬೇಕಾದ ಸ್ಟೇಷನ್ ನ್ನು ಆಯ್ಕೆ ಮಾಡಿ.

8. Done ಎಂದು ಟ್ಯಾಪ್ ಮಾಡಿ.

9. ಮುಂದಿನ ಸ್ಕ್ರೀನ್ ನಲ್ಲಿ ನಿಮಗೆ ಹಲವು ಆಯ್ಕೆಗಳಿರುತ್ತದೆ. ಅದರಲ್ಲಿ ಸೀಸನ್ ಟಿಕೆಟ್ ನ ಅವಧಿಯೂ ಸೇರಿರುತ್ತದೆ.ಒಂದು ವರ್ಷದ ಅವಧಿಗೆ ನೀವು ಸೀಸನ್ ಟಿಕೆಟ್ ನ್ನು ಖರೀದಿಸಬಹುದು. ಫಸ್ಟ್ ಕ್ಲಾಸ್ ಅಥವಾ ಸೆಕೆಂಡ್ ಕ್ಲಾಸ್, ಎಸಿ ಅಥವಾ ನಾನ್-ಎಸಿ ಟ್ರೈನ್ ಗಳು ಮತ್ತು ಸಾಮಾನ್ಯ ಗುರುತಿನ ಮಾಹಿತಿಗಳನ್ನು ಕೂಡ ಎಂಟರ್ ಮಾಡಬೇಕಾಗುತ್ತದೆ. ಇದೆಲ್ಲಾ ಮುಗಿದ ನಂತರ, ಪಾವತಿ ಗೇಟ್ ವೇಯನ್ನು ಸೆಲೆಕ್ಟ್ ಮಾಡಿ ಮತ್ತು ನಿಮ್ಮ ವಿಳಾಸವನ್ನು ನಮೂದಿಸಿ.ಇದು ನಿಮ್ಮ ಹೊಸ ಪುಟಕ್ಕೆ ಕರೆದುಕೊಂಡು ಹೋಗುತ್ತದೆ.

ಆರ್-ವ್ಯಾಲೆಟ್

10. ಇಲ್ಲಿ ನಿಮ್ಮ ಸಂಪೂರ್ಣ ವಿಳಾಸವನ್ನು ಬರೆಯಿರಿ

11. Doneನ್ನು ಟ್ಯಾಪ್ ಮಾಡಿ.

12. Get Fare ನ್ನು ಟ್ಯಾಪ್ ಮಾಡಿ ಮತ್ತು ಪೇಮೆಂಟ್ ಗೇಟ್ ವೇಯನ್ನು ಸೆಲೆಕ್ಟ್ ಮಾಡಿ.

13. ಒಮ್ಮೆ ಎಲ್ಲಾ ವಿವರಗಳನ್ನು ಪರೀಕ್ಷಿಸಿ ಮತ್ತು ನೀವು ರೆಡಿ ಆದ ನಂತರ ಬುಕ್ ಟಿಕೆಟ್ ನ್ನು ಟ್ಯಾಪ್ ಮಾಡಿ.

14. "undertaking from season ticket holder" ನ್ನು ಓದಿ ಮತ್ತು Acceptನ್ನು ಟ್ಯಾಪ್ ಮಾಡಿ.

15. ನೀವು ಆರ್-ವ್ಯಾಲೆಟ್ ನ್ನು ಸೆಲೆಕ್ಟ್ ಮಾಡಿದರೆ ಇದು ನಿಮ್ಮನ್ನು ಆರ್-ವ್ಯಾಲೆಟ್ ಗೆ ರೀಡೈರೆಕ್ಟ್ ಮಾಡುತ್ತದೆ. ನೀವು ಪಾವತಿ ಗೇಟ್ ವೇ ಆಯ್ಕೆ ಮಾಡಿದರೆ ಯಾವ ಪೇಮೆಂಟ್ ಗೇಟ್ ಬಳಸುತ್ತೀರೋ ಅದನ್ನು ಆಯ್ಕೆ ಮಾಡಿ. ಮೇಕ್ ಪೇಮೆಂಟ್ ನ್ನು ಟ್ಯಾಪ್ ಮಾಡಿ. ಇದೀಗ ಪಾವತಿಯನ್ನು ನೀವು ಪೂರ್ಣಗೊಳಿಸಬಹುದು.

16. ಒಮ್ಮೆ ಮುಗಿದ ನಂತರ ಆಪ್ ನಲ್ಲಿ ನೀವು ಟಿಕೆಟ್ ನ್ನು ನೋಡಬಹುದು. ಇದನ್ನು ಪುನಃ ಆಕ್ಸಿಸ್ ಮಾಡುವುದಕ್ಕಾಗಿ ಜಸ್ಟ್ Show Booked Ticket ನ್ನು ಆಂಡ್ರಾಯ್ಡ್ ನ ಯುಟಿಎಸ್ ಆಪ್ ನ ಹೋಮ್ ಸ್ಕ್ರೀನ್ ನಲ್ಲಿ ಟ್ಯಾಪ್ ಮಾಡಿದರೆ ಸಾಕಾಗುತ್ತದೆ. ಯಾವುದಕ್ಕೂ ಒಮ್ಮೆ ಪ್ರಯತ್ನಿಸಿ ನೋಡಿ.

Best Mobiles in India

Read more about:
English summary
Here's how to book season train ticket on UTS app

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X