ಆಂಡ್ರಾಯ್ಡ್‌ನಲ್ಲಿ ಲೊಕೇಶನ್‌ ಟ್ರ್ಯಾಕಿಂಗ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಲೊಕೇಶನ್‌ ಟ್ರ್ಯಾಕಿಂಗ್‌ ಫೀಚರ್ಸ್‌ ಸಾಕಷ್ಟು ಅನುಕೂಲಕರವಾಗಿದೆ. ಲೊಕೇಶನ್‌ ಟ್ರ್ಯಾಕಿಂಗ್‌ ಫೀಚರ್ಸ್‌ ಮೂಲಕ ತಾವು ಎಲ್ಲಿದ್ದೇವೆ ಅನ್ನೊದನ್ನ ತಮ್ಮ ಸ್ನೇಹಿತರಿಗೆ ಸುಲಭವಾಗಿ ತಿಳಿಸಬಹುದಾಗಿದೆ. ಆದರೆ ಪ್ರೈವೆಸಿಯ ವಿಚಾರ ಬಂದಾಗ ಲೊಕೇಶನ್‌ ಟ್ರ್ಯಾಕಿಂಗ್‌ ಫೀಚರ್ಸ್‌ ಬಗ್ಗೆ ಯೋಚಿಸಬೇಕಾದ ಅನಿವಾರ್ಯತೆ ಇದೆ. ಆದರಿಂದ ಒಂದು ವೇಳೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್‌ ಟ್ರ್ಯಾಕ್‌ ಅನ್ನು ಸ್ಟಾಪ್‌ ಮಾಡಲು ಬಯಸಿದರೆ ಟ್ರ್ಯಾಕ್‌ ಮಾಡದಂತೆ ಮಾಡಬಹುದಾಗಿದೆ.

ಲೊಕೇಶನ್‌

ಹೌದು, ಸ್ಮಾರ್ಟ್‌ಫೋನ್ ಬಳಕೆದಾರರು ಲೊಕೇಶನ್‌ ಟ್ರ್ಯಾಕಿಂಗ್‌ ಫೀಚರ್ಸ್‌ ಅನ್ನು ಸ್ಟಾಪ್‌ ಮಾಡುವುದಕ್ಕೆ ಅವಕಾಶವಿದೆ. ನಿಮ್ಮ ಲೊಕೇಶನ್‌ ಟ್ರ್ಯಾಕ್ ಮಾಡದಂತೆ ಗೂಗಲ್‌ ನಲ್ಲಿ ಟ್ರ್ಯಾಕಿಂಗ್‌ ಅನ್ನು ಸ್ಟಾಪ್‌ ಮಾಡುವಂತೆ ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಗೂಗಲ್‌ ಲೊಕೇಶನ್‌ ಟ್ರ್ಯಾಕಿಂಗ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌ನಲ್ಲಿ ಲೊಕೇಶನ್‌ ಟ್ರ್ಯಾಕಿಂಗ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ಲೊಕೇಶನ್‌ ಟ್ರ್ಯಾಕಿಂಗ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ನೀವು ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಗೂಗಲ್‌ ಲೊಕೇಶನ್‌ ಟ್ರ್ಯಾಕಿಂಗ್ ಅನ್ನು ಆಫ್ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಹೋಮ್ ಸ್ಕ್ರೀನ್‌ಗೆ ಹೋಗಿ ಮತ್ತು ಕ್ವಿಕ್‌ ಸೆಟ್ಟಿಂಗ್ಸ್‌ ಮೆನು ತೆರೆಯಲು ಕೆಳಗೆ ಸ್ವೈಪ್ ಮಾಡಿ
ಹಂತ:2 ನಂತರ ಲೊಕೇಶನ್‌ ಪೇಜ್‌ ಅನ್ನು ತೆರೆಯಲು ಲೊಕೇಶನ್‌ ಐಕಾನ್ ಅನ್ನು ಲಾಂಗ್‌ ಪ್ರೆಸ್‌ ಮಾಡಿರಿ
ಹಂತ:3 ಇದೀಗ ನೀವು ಹೋಮ್ ಸ್ಕ್ರೀನ್‌ನಲ್ಲಿ ಕೆಳಗೆ ಸ್ವೈಪ್ ಮಾಡಬಹುದು ಮತ್ತು ಸೆಟ್ಟಿಂಗ್‌ಗಳ ಐಕಾನ್ ಮೇಲೆ ಟ್ಯಾಪ್ ಮಾಡಿರಿ.
ಹಂತ:4 ಈಗ ನೀವು ಲೊಕೇಶನ್‌ ಪೇಜ್‌ಗೆ ಹೋಗಲು "ಲೊಕೇಶನ್‌" ಗಾಗಿ ಸರ್ಚ್‌ ಮಾಡಬಹುದು
ಹಂತ:5 ಒಮ್ಮೆ ನೀವು ಲೊಕೇಶನ್‌ ಪೇಜ್‌ನಲ್ಲಿದ್ದರೆ, "ಲೊಕೇಶನ್‌ ಬಳಸಿ" ಆಯ್ಕೆಗಾಗಿ ಟಾಗಲ್ ಅನ್ನು ಆಫ್ ಮಾಡಬೇಕಾಗುತ್ತದೆ.

ಇನ್ನು ಈ ಪೇಜ್‌ನಲ್ಲಿ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌, ಊಬರ್‌, ಕ್ಯಾಮರಾ, ಗೂಗಲ್‌ ಪೇ ಯಂತಹ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಕಾಣಬಹುದು. ಈ ಅಪ್ಲಿಕೇಶನ್‌ಗಳು ನಿಮ್ಮ ಲೊಕೇಶನ್‌ ಟ್ರಾಕ್‌ ಮಾಡುವುದಕ್ಕೆ ನಿಮ್ಮ ಅನುಮತಿಯನ್ನು ಬಯಸುತ್ತವೆ. ಆದರೆ ನಿಮ್ಮ ಇಚ್ಛೆಯಂತೆ ನೀವು ಟಾಗಲ್‌ಗಳನ್ನು ಆನ್ ಮತ್ತು ಆಫ್ ಮಾಡಬಹುದು.

ನಿಮ್ಮ ಕಂಪ್ಯೂಟರ್‌ನಲ್ಲಿ ಗೂಗಲ್‌ ಟ್ರ್ಯಾಕ್ ಅನ್ನು ಸ್ಟಾಪ್‌ ಮಾಡುವುದು ಹೇಗೆ?

ನಿಮ್ಮ ಕಂಪ್ಯೂಟರ್‌ನಲ್ಲಿ ಗೂಗಲ್‌ ಟ್ರ್ಯಾಕ್ ಅನ್ನು ಸ್ಟಾಪ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ಕಂಪ್ಯೂಟರ್‌ನಲ್ಲಿ ವೆಬ್ ಬ್ರೌಸರ್ ಅನ್ನು ಪ್ರಾರಂಭಿಸಿ ಮತ್ತು ನೇರವಾಗಿ Google ವೆಬ್‌ಪುಟಕ್ಕೆ ಹೋಗಿ.
ಹಂತ:2 ನಿಮ್ಮ ಖಾತೆಗೆ ನೀವು ಲಾಗ್-ಇನ್ ಆಗದಿದ್ದರೆ, ಮೊದಲು ಲಾಗ್ ಇನ್ ಮಾಡಿ.
ಹಂತ:3 ಡ್ರಾಪ್‌ಡೌನ್ ಮೆನುಗೆ ನ್ಯಾವಿಗೇಟ್ ಮಾಡಿ ಮತ್ತು "Manage your Google Account" ಟ್ಯಾಪ್ ಮಾಡಿ.
ಹಂತ:4 ನಿಮ್ಮ ಖಾತೆ ಪುಟ ಕಾಣಿಸಿಕೊಂಡಾಗ, "Privacy & Personalization" ಕ್ಲಿಕ್ ಮಾಡಿ.
ಹಂತ:5 ನಂತರ "Data & personalization" ಪುಟಕ್ಕೆ ಹೋಗಿ.

ಇದಾದ

ಹಂತ:6 ಇದಾದ ನಂತರ "Activity controls" ವಿಭಾಗದಲ್ಲಿ, "Web & App Activity" ಕ್ಲಿಕ್ ಮಾಡಿ. ಈ ಸೇವೆಯು ನಿಮ್ಮ ಸರ್ಚ್‌ ಆಕ್ಟಿವಿಟಿಯನ್ನು ಟ್ರ್ಯಾಕ್ ಮಾಡುವ ಮತ್ತು ಸಂಗ್ರಹಿಸುವ ಗೂಗಲ್‌ನ ಸಾಮರ್ಥ್ಯವನ್ನು ಕಂಟ್ರೋಲ್‌ ಮಾಡಲಿದೆ.
ಹಂತ:7 ಗೂಗಲ್‌ ಟ್ರ್ಯಾಕ್ ಮಾಡಲು ನೀವು ಬಯಸದಿದ್ದರೆ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು "pause" ಕ್ಲಿಕ್ ಮಾಡಿ.
ಹಂತ:8 ಇದಾದ ನಂತರ ಬ್ಯಾಕ್‌ ಬಟನ್‌ನೊಂದಿಗೆ ಡೇಟಾ ಮತ್ತು ವೈಯಕ್ತೀಕರಣ ಪುಟಕ್ಕೆ ಹಿಂತಿರುಗಿ.
ಹಂತ:9 ಆಕ್ಟಿವಿಟಿ ಕಂಟ್ರೋಲ್‌ ವಿಭಾಗದಲ್ಲಿ, "Location history" ಕ್ಲಿಕ್ ಮಾಡಿ.
ಹಂತ:10 ನಿಮ್ಮ ಲೊಕೇಶನ್‌ ಟ್ರ್ಯಾಕ್ ಮಾಡಲು ನೀವು ಬಯಸದಿದ್ದರೆ, ಬಟನ್ ಕ್ಲಿಕ್ ಮಾಡುವ ಮೂಲಕ "ಲೊಕೇಶನ್‌ ಹಿಸ್ಟರಿ" ಅನ್ನು ಆಫ್ ಮಾಡಿರಿ.

Best Mobiles in India

English summary
These are the steps that you can follow to turn off location tracking for Google.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X