ಆಧಾರ್ ಕಾರ್ಡ್ ಕಳೆದು ಹೋಗಿದ್ಯಾ?- ಪುನಃ ಪ್ರಿಂಟ್ ಮಾಡಿಕೊಳ್ಳುವುದು ಹೇಗೆ ಗೊತ್ತಾ?

By Gizbot Bureau
|

UIDAI ಹೊಸದಾಗಿ ಎಂಆಧಾರ್ ಆಪ್ ನ್ನು ಪರಿಚಯಿಸಿದೆ ಮತ್ತು ಇದರ ಜೊತೆಗೆ ಈ ಇಂಟರ್ಫೇಸ್ ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.ಬಳಕೆದಾರರ ಡಾಟಾಕ್ಕೆ ಸಂಬಂಧಿಸಿದ ಕೆಲವು ಸುರಕ್ಷತಾ ಕ್ರಮಗಳನ್ನು ಇದರಲ್ಲಿ ತೆಗೆದುಕೊಳ್ಳಲಾಗಿದೆ.ಅಪ್ ಡೇಟ್ ಆಗಿರುವ ಎಂಆಧಾರ್ ಆಪ್ ಬಳಕೆದಾರರಿಗೆ ತಮ್ಮ ಆಧಾರ್ ಕಾರ್ಡಿನ ಸಾಫ್ಟ್ ಕಾಪಿಯನ್ನು ಪಡೆದುಕೊಂಡು ಎಲ್ಲಿಗೆ ಬೇಕಿದ್ದರೂ ಕೊಂಡೊಯ್ಯುವುದಕ್ಕೆ ಅವಕಾಶ ನೀಡುತ್ತದೆ. ಅಂದರೆ ಹಾರ್ಡ್ ಕಾಪಿಯನ್ನು ನೀವು ಪರ್ಸ್ ನಲ್ಲಿ ಇಟ್ಟುಕೊಂಡು ಓಡಾಡುವ ಅಗತ್ಯವಿಲ್ಲ. ಬಳಕೆದಾರರು ಅಧಿಕೃತವಾಗಿ ಆಧಾರ್ ಕಾರ್ಡ್ ನ್ನು ಬಳಸುವ ಅಗತ್ಯತೆ ಬಂದಾಗ ಆಪ್ ಬಳಸಿಯೇ ತೋರಿಸಬಹುದು.

ಹೊಸ ಆಪ್

ಹೊಸ ಆಪ್ ಬಳಕೆದಾರರಿಗೆ ಆಧಾರ್ ಕಾರ್ಡ್ ಅಪ್ ಡೇಟ್ ಮಾಡುವುದಕ್ಕೆ ಅಥವಾ ವಿಳಾಸದ ಬದಲಾವಣೆಗೆ, ಆಫ್ ಲೈನ್ ಇಕೆವೈಸಿ ಮಾಡಿಸುವುದಕ್ಕೆ, ತಾತ್ಕಾಲಿಕವಾಗಿ ಬಯೋಮೆಟ್ರಿಕ್ ದೃಢೀಕರಣವನ್ನು ನಿರ್ಬಂಧಿಸುವುದಕ್ಕೆ ಸೇರಿದಂತೆ ಹಲವು ಕೆಲಸಗಳನ್ನು ಮಾಡುವುದಕ್ಕೆ ಅವಕಾಶ ನೀಡುತ್ತದೆ.

ಇದರ ಜೊತೆಗೆ ಆಧಾರ್ ಕಾರ್ಡ್ ನ್ನು ರೀಪ್ರಿಂಟ್ ಮಾಡುವುದಕ್ಕೂ ಕೂಡ ಆಪ್ ಅವಕಾಶ ನೀಡುತ್ತದೆ. ಒಂದು ವೇಳೆ ನೀವು ಆಧಾರ್ ಕಾರ್ಡ್ ನ್ನು ಕಳೆದುಕೊಂಡಿದ್ದರೆ ಅಥವಾ ಫಿಸಿಕಲ್ ಆಧಾರ್ ಕಾರ್ಡ್ ನ್ನು ನೀವು ಪಡೆಯದೇ ಇದ್ದಲ್ಲಿ ಎಂಆಧಾರ್ ಆಪ್ ಬಳಸಿ ಆಧಾರ್ ಕಾರ್ಡ್ ನ್ನು ರೀಪ್ರಿಂಟ್ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಹೇಗೆ ರೀಪ್ರಿಂಟ್ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ.

ಪ್ರಮುಖ ಅಗತ್ಯತೆಗಳು:

ಪ್ರಮುಖ ಅಗತ್ಯತೆಗಳು:

* ಎಂಆಧಾರ್ ಆಪ್ ನ ನೂತನ ವರ್ಷನ್ ಬೇಕಾಗುತ್ತದೆ.

* ಕಾರ್ಯ ನಿರ್ವಹಿಸುತ್ತಿರುವ ಅಂತರ್ಜಾಲ ಸಂಪರ್ಕವಿರಬೇಕು.

* ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಆಕ್ಟೀವ್ ಆಗಿದೆಯೇ ಎಂಬ ಬಗ್ಗೆ ಖಾತ್ರಿ ಇರಲಿ.

* 12-ಸಂಖ್ಯೆಯ ಆಧಾರ್ ಕಾರ್ಡ್ ನಂಬರ್ ಅಥವಾ ವರ್ಚುವಲ್ ಆಧಾರ್ ಐಡಿ ಇರಬೇಕು.

ಆಧಾರ್ ರೀಪ್ರಿಂಟ್ ಮಾಡುವುದಕ್ಕೆ ಅನುಸರಿಸಬೇಕಾಗಿರುವ ಹಂತಗಳು:

ಆಧಾರ್ ರೀಪ್ರಿಂಟ್ ಮಾಡುವುದಕ್ಕೆ ಅನುಸರಿಸಬೇಕಾಗಿರುವ ಹಂತಗಳು:

1.ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಬಳಸಿ ಎಂಆಧಾರ್ ಆಪ್ ನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.

2.ಆಪ್ ನ್ನು ತೆರೆಯಿರಿ ಮತ್ತು ಮೊಬೈಲ್ ನಂಬರ್ ಬಳಸಿ ಕಾನ್ಫಿಗರ್ ಮಾಡಿ.

3.‘Services' ಸೆಕ್ಷನ್ ಅಡಿಯಲ್ಲಿ, ‘Order Aadhaar Reprint' ಆಯ್ಕೆಯನ್ನು ಟ್ಯಾಪ್ ಮಾಡಿ.

4.‘Terms & Conditions' ಚೆಕ್ ಬಾಕ್ಸ್ ನ್ನು ಮುಂದಿನ ಪೇಜ್ ನಲ್ಲಿ ಟಿಕ್ ಮಾಡಿ ಮತ್ತು ಓಕೆ ಟ್ಯಾಪ್ ಮಾಡಿ.

5.ಆಧಾರ್ ಕಾರ್ಡ್ ರೀಪ್ರಿಂಟ್ ಮಾಡುವುದಕ್ಕೆ ಯಾವುದಾದರೂ ಒಂದು ಆಯ್ಕೆಯನ್ನು ಸೆಲೆಕ್ಟ್ ಮಾಡಿ- ರಿಜಿಸ್ಟ್ರರ್ ಆಗಿರುವ ಮೊಬೈಲ್ ನಂಬರ್ ಮತ್ತು ಅನ್ ರಿಜಿಸ್ಟ್ರರ್ ಮೊಬೈಲ್ ನಂಬರ್

6.ಒಂದು ವೇಳೆ ಈಗಾಗಲೇ ರಿಜಿಸ್ಟ್ರರ್ ಆಗಿರುವ ಮೊಬೈಲ್ ನಂಬರ್ ಇದ್ದಲ್ಲಿ ಮೊದಲನೇ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತು ಆಧಾರ್ ನಂಬರ್ ಅಥವಾ ವರ್ಚುವಲ್ ಐಡಿ ನಂಬರ್ ಜೊತೆಗೆ ಕ್ಯಾಪ್ಚಾವನ್ನು ಎಂಟರ್ ಮಾಡಿ ಮತ್ತು ಓಟಿಪಿ ಮನವಿಗಾಗಿ ಟ್ಯಾಪ್ ಮಾಡಿ.

7.ಒಂದು ವೇಳೆ ನಿಮ್ಮ ಆಧಾರ್ ನಲ್ಲಿ ರಿಜಿಸ್ಟ್ರರ್ ಆಗಿರುವ ಮೊಬೈಲ್ ನಂಬರ್ ಇಲ್ಲದೇ ಇದ್ದಲ್ಲಿ ಎರಡನೇ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಈ ಕೆಳಗಿನ ವಿವರಗಳನ್ನು ಎಂಟರ್ ಮಾಡಿ-ಆಧಾರ್ ನಂಬರ್/ವಿಐಡಿ, ಕ್ಯಾಪ್ಚಾ, ಯಾವುದೇ ಆಕ್ಟೀವ್ ಮೊಬೈಲ್ ನಂಬರ್ ಮತ್ತು ಓಟಿಪಿ ಬಟನ್ ನ್ನು ಟ್ಯಾಪ್ ಮಾಡಿ.

8.ಪ್ರೊಸೆಸ್ ಸಂಪೂರ್ಣಗೊಳಿಸುವುದಕ್ಕಾಗಿ ನಿಮ್ಮ ಮೊಬೈಲ್ ನಂಬರ್ರಿಗೆ ಬರುವ ಓಟಿಪಿಯನ್ನು ಎಂಟರ್ ಮಾಡಿ.

ಕೆಲವೇ ದಿನಗಳಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನ್ನು ಪಡೆಯುತ್ತೀರಿ.

Most Read Articles
Best Mobiles in India

English summary
Here’s how to get a reprint of lost Aadhaar card via mAadhaar app

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X