ಗೂಗಲ್‌ ಡ್ರೈವ್‌ ಬಳಸಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡುವುದು ಹೇಗೆ?

|

ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಮೂಲ ದಾಖಲೆಗಳನ್ನು ಸಾಗಿಸುವವರ ಪ್ರಮಾಣ ಕಡಿಮೆಯಾಗಿದೆ. ಏಕೆಂದರೆ ದಾಖಲೆಗಳನ್ನು ಸಾಗಿಸುವಾಗ ಕಳೆದುಕೊಳ್ಳುವ ಆತಂಕ ಇರುತ್ತದೆ. ಇದಕ್ಕೆ ಬದಲಾಗಿ ಮೂಲದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಪಿಡಿಎಫ್‌ ಫೈಲ್‌ ರೂಪದಲ್ಲಿ ಹೆಚ್ಚಿನ ಜನರು ಸಂಗ್ರಹಿಸುತ್ತಾರೆ. ಇದಕ್ಕಾಗಿಯೇ ಕಲವು ಸ್ಕ್ಯಾನ್‌ ಅಪ್ಲಿಕೇಶನ್‌ಗಳನ್ನು ಕೆಲವರು ಬಳಸುತ್ತಾರೆ. ಆದರೆ ನೀವು ನಿಮ್ಮ ದಾಖಲೆಗಳನ್ನು ಗೂಗಲ್‌ ಡ್ರೈವ್‌ನಲ್ಲಿ ಕೂಡ ಸ್ಕ್ಯಾನ್‌ ಮಾಡಬಹುದಾಗಿದೆ.

ಡಾಕ್ಯುಮೆಂಟ್‌

ಹೌದು, ನೀವು ನಿಮ್ಮ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್‌ ಮಾಡಲು ಗೂಗಲ್‌ ಡ್ರೈವ್‌ ಅನ್ನು ಕೂಡ ಬಳಸಬಹುದು. ಗೂಗಲ್‌ ಡ್ರೈವ್‌ನಲ್ಲಿ ಸ್ಕ್ಯಾನ್‌ ಮಾಡುವ ಮೂಲಕ ಸ್ಟೋರೇಜ್‌ ಕೂಡ ಮಾಡಬಹುದು. ಆದರೆ ಐಫೋನ್‌, ಐಪ್ಯಾಡ್‌ ಅಥವಾ ಡೆಸ್ಕ್‌ಟಾಪ್‌ನಲ್ಲಿ ಗೂಗಲ್‌ ಡ್ರೈವ್‌ ಮೂಲಕ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಲು ಸಾಧ್ಯವಿಲ್ಲ. ಹಾಗಾದ್ರೆ ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಗೂಗಲ್‌ ಡ್ರೈವ್‌ ಬಳಸಿ ಸ್ಕ್ಯಾನ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ ಡ್ರೈವ್‌ ಮೂಲಕ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡುವುದು ಹೇಗೆ?

ಗೂಗಲ್‌ ಡ್ರೈವ್‌ ಮೂಲಕ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಡ್ರೈವ್ ಅಪ್ಲಿಕೇಶನ್ ತೆರೆಯಿರಿ
ಹಂತ:2 ಇದರಲ್ಲಿ ಹೋಮ್ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಆಡ್ "+" ಐಕಾನ್ ಮೇಲೆ ಕ್ಲಿಕ್ ಮಾಡಿ
ಹಂತ:3 ನಂತರ "ಸ್ಕ್ಯಾನ್" ಆಯ್ಕೆಯ ಮೇಲೆ ಟ್ಯಾಪ್ ಮಾಡಿ
ಹಂತ:4 ಈಗ ನಿಮ್ಮ ಡಾಕ್ಯುಮೆಂಟ್‌ನ ಚಿತ್ರಗಳನ್ನು ಕ್ಲಿಕ್ ಮಾಡಿ
ಹಂತ:5 ನಂತರ ಸ್ಕ್ಯಾನ್ ಮಾಡಿ, ನಿಮಗೆ ಬೇಕದಂತೆ ಕ್ರಾಪ್ ಟ್ಯಾಪ್ ಮಾಡಿ
ಹಂತ:6 ಇದೀಗ ನಿಮ್ಮ ಡಾಕ್ಯುಮೆಂಟ್‌ ಅನ್ನು ಸೇವ್ ಮಾಡಿ ಮತ್ತು "ಡನ್‌" ಮೇಲೆ ಟ್ಯಾಪ್ ಮಾಡಿ

ಮೈಕ್ರೋಸಾಫ್ಟ್

ಇನ್ನು ಗೂಗಲ್‌ ಡ್ರೈವ್‌ ಮಾತ್ರವಲ್ಲದೆ ಮೈಕ್ರೋಸಾಫ್ಟ್ ಕಂಪೆನಿಯ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆಫೀಸ್ ಲೆನ್ಸ್ ಅಪ್ಲಿಕೇಶನ್ ಮೂಲಕ ಕೂಡ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್‌ ಮಾಡಬಹುದು. ಇದರಲ್ಲಿ ಇಮೇಜ್‌ಗಳನ್ನು ಪಿಡಿಎಫ್, ವರ್ಡ್, ಪವರ್‌ಪಾಯಿಂಟ್ ಮತ್ತು ಎಕ್ಸೆಲ್ ಫೈಲ್‌ಗಳಿಗೆ ಕನ್ವರ್ಟ್‌ ಮಾಡಬಹುದಾಗಿದೆ. ಮುದ್ರಿತ ಅಥವಾ ಕೈಬರಹದ ಪಠ್ಯವನ್ನು ಡಿಜಿಟಲೀಕರಣಗೊಳಿಸಲು ಅವಕಾಶ ಮಾಡಿಕೊಡಲಿದೆ. ಇದಲ್ಲದೆ ಈ ಅಪ್ಲಿಕೇಶನ್‌ನಲ್ಲಿ ನಿಮಗೆ ಒನ್‌ನೋಟ್ ಅಥವಾ ಒನ್‌ಡ್ರೈವ್ ಕ್ಲೌಡ್ ಕ್ರಿಯಾತ್ಮಕತೆಯ ಅಗತ್ಯವಿಲ್ಲದಿದ್ದರೆ ನೀವು ಯಾವುದೇ ಚಿತ್ರವನ್ನು ಸ್ಕ್ಯಾನ್ ಮಾಡಬಹುದು ಮತ್ತು ಪರಿವರ್ತಿಸಬಹುದು.

ಅಡೋಬ್ ಸ್ಕ್ಯಾನ್

ಅಡೋಬ್ ಸ್ಕ್ಯಾನ್

ಅಡೋಬ್‌ ಅಪ್ಲಿಕೇಶನ್‌ ಕೂಡ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡುವುದಕ್ಕೆ ಅವಕಾಶವನ್ನು ನೀಡಲಿದೆ. ಡಾಕ್ಯುಮೆಂಟ್‌ಗಳು, ಫೋಟೋಗಳು, ವ್ಯಾಪಾರ ಕಾರ್ಡ್‌ಗಳು, ವೈಟ್‌ಬೋರ್ಡ್‌ಗಳನ್ನು ಸ್ಕ್ಯಾನ್ ಮಾಡಲು ಇದು ನಿಮಗೆ ಅನುಮತಿಸುತ್ತದೆ. ನಿಮ್ಮ ಸ್ಕ್ಯಾನ್‌ಗಳನ್ನು ಟಚ್-ಅಪ್‌ಗಳು ಮತ್ತು ಇಮೇಜ್ ಮ್ಯಾನಿಪ್ಯುಲೇಷನ್ ಭಾಗದೊಂದಿಗೆ ತೆಗೆದುಕೊಂಡ ನಂತರ ನೀವು ಇವುಗಳನ್ನು ಎಡಿಟ್‌ ಮಾಡಬಹುದಾಗಿದೆ. ನಿಮ್ಮ ಡಾಕ್ಯುಮೆಂಟ್‌ಗಳನ್ನು ಮೂಲದ ಡಿಜಿಟೈಸ್ಡ್ ಪಿಡಿಎಫ್ ಆವೃತ್ತಿಗಳಾಗಿ ಪರಿವರ್ತಿಸಲು ನೀವು ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಅನ್ನು ಸಹ ಬಳಸಬಹುದು.

ಕಾಗಾಜ್ ಸ್ಕ್ಯಾನರ್

ಕಾಗಾಜ್ ಸ್ಕ್ಯಾನರ್

ಇದು ಜಾಹೀರಾತು ಮುಕ್ತ ಇಂಟರ್ಫೇಸ್ ಅನ್ನು ಹೊಂದಿದೆ. ನಿಮ್ಮ ಸ್ಕ್ಯಾನ್‌ಗಳಲ್ಲಿ ಕಸ್ಟಮ್ ವಾಟರ್‌ಮಾರ್ಕ್ ಅನ್ನು ಹೊಂದಿಸಲು ಸಹ ಈ ಅಪ್ಲಿಕೇಶನ್‌ ನಿಮಗೆ ಅನುಮತಿಸುತ್ತದೆ. ಬಳಕೆದಾರರು ತಮ್ಮ ಕ್ಲೌಡ್ ಸೇವೆಗಳಿಗೆ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಅಪ್ಲಿಕೇಶನ್ ಅನ್ನು ಲಾಕ್ ಮಾಡಬಹುದು.

ಟೈನಿ ಸ್ಕ್ಯಾನರ್

ಟೈನಿ ಸ್ಕ್ಯಾನರ್

ಈ ಅಪ್ಲಿಕೇಶನ್‌ ನಿಮ್ಮ ಕಂಪ್ಯೂಟರ್‌ಗೆ ವೈ-ಫೈ ವರ್ಗಾವಣೆ, ಕ್ಲೌಡ್ ಮೂಲಕ ಅಥವಾ ಇಮೇಲ್ ಮೂಲಕ, ಎಐ ಚಾಲಿತ ಒಸಿಆರ್, ಸ್ವಯಂಚಾಲಿತ ಪುಟ ಪತ್ತೆ, ಪಾಸ್‌ಕೋಡ್ ಡಾಕ್ಯುಮೆಂಟ್ ಪ್ರೊಟೆಕ್ಷನ್, ಡಾಕ್ಯುಮೆಂಟ್ ಸೈನಿಂಗ್ ಮತ್ತು ಹೆಚ್ಚಿನ ಫೀಚರ್ಸ್‌ಗಳನ್ನು ಹೊಂದಿದೆ. ಇದರಲ್ಲಿ ತಮ್ಮ ಡಾಕ್ಯುಮೆಂಟ್‌ಗಳನ್ನು ಶೇರ್‌ ಮಾಡಿಕೊಳ್ಳುವ ಮೊದಲು ಫೋಲ್ಡರ್‌ಗಳಲ್ಲಿ ಸಹ ಆಯೋಜಿಸಬಹುದು.

ಇಟ್ಟುಕೊಂಡ

ಇನ್ನು ನೀವು ಸ್ಕ್ಯಾನ್‌ ಮಾಡಿ ಇಟ್ಟುಕೊಂಡ ಪಿಡಿಎಫ್‌ ಫೈಲ್‌ಗಳನ್ನು ಸುಲಭವಾಗಿ ಬೇರೆಯವರು ಪ್ರವೇಶ ಮಾಡದಂತೆ ತಡೆಡಯುವುದಕ್ಕೆ ನೀವು ಪಾಸ್‌ವರ್ಡ್‌ ಸೆಟ್‌ ಮಾಡುವುದು ಉತ್ತಮ. ನೀವು ಸೂಕ್ಷ್ಮ ಮಾಹಿತಿಯನ್ನು ಹೊಂದಿರುವ ವರ್ಡ್ ಡಾಕ್ಯುಮೆಂಟ್ ಅನ್ನು ಸಾರ್ವಜನಿಕ ಫೋಲ್ಡರ್‌ನಲ್ಲಿ ಸಂಗ್ರಹಿಸಬೇಕಾಗಬಹುದು. ಈ ಸಂದರ್ಭದಲ್ಲಿ, ನೀವು ಬಹುಶಃ ಫೈಲ್ ಅನ್ನು ಎನ್‌ಕ್ರಿಪ್ಟ್ ಮಾಡಬೇಕು ಮತ್ತು ಡಾಕ್ಯುಮೆಂಟ್ ಅನ್ನು ಪ್ರವೇಶಿಸಬೇಕಾದವರೊಂದಿಗೆ ಮಾತ್ರ ಪಾಸ್‌ವರ್ಡ್ ಅನ್ನು ಹಂಚಿಕೊಳ್ಳಬೇಕಾಗುತ್ತದೆ.

Best Mobiles in India

Read more about:
English summary
Here are the steps that you can follow to scan important documents via Google Drive.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X