ಫೇಸ್‌ಬುಕ್‌ನಲ್ಲಿ ಹೆಚ್‌ಡಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದು ಹೇಗೆ?

|

ಮೆಟಾ ಒಡೆತನದ ಫೇಸ್‌ಬುಕ್‌ ಜನಪ್ರಿಯ ಸಾಮಾಜಿಕ ಜಾಲತಾಣವಾಗಿದೆ. ಇಡೀ ವಿಶ್ವದಾದ್ಯಂತ ಬಳಕೆದಾರರನ್ನು ಹೊಂದಿರುವ ಖ್ಯಾತಿಯನ್ನು ಫೇಸ್‌ಬುಕ್‌ ಪಡೆದಿದೆ. ಇನ್ನು ಫೇಸ್‌ಬುಕ್‌ ಕೂಡ ತನ್ನ ಬಳಕೆದಾರರಿಗೆ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರೀಕ್ಷಿಸುತ್ತಾ ಬಂದಿದೆ. ಇನ್ನು ಫೇಸ್‌ಬುಕ್‌ನಲ್ಲಿ ಹೆಚ್ಚಿನ ಜನರು ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್‌ ಮಾಡಲು ಬಯಸುತ್ತಾರೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ನಲ್ಲಿ ಹೆಚ್ಚಿನ ಮಂದಿ ತಮ್ಮ ಪ್ರೀತಿಪಾತ್ರರ ಜೊತೆಗೆ ಫೋಟೋ ಮತ್ತು ವೀಡಿಯೊಗಳನ್ನು ಶೇರ್‌ಮಾಡುತ್ತಾರೆ. ಇದರಲ್ಲಿ ಫೋಟೋಗಳು ಶೇರ್‌ ಮಾಡುವಾಗ ಕಡಿಮೆ ಡೇಟಾವನ್ನು ಬಳಸುತ್ತವೆ. ಆದರೆ ಹೆಚ್ಚಿನ ರೆಸಲ್ಯೂಶನ್‌ ಇಮೇಜ್‌ ಹಾಗೂ ವೀಡಿಯೊಗಳನ್ನು ಶೇರ್‌ ಮಾಡುವಾಗ ಹೆಚ್ಚಿನ ಡೇಟಾ ಬಳಸುತ್ತವೆ. ಅದಕ್ಕಾಗಿಯೇ ಹೆಚ್ಚಿನ ಜನರು ಪ್ರಮಾಣಿತ ಗುಣಮಟ್ಟದ ವೀಡಿಯೊಗಳನ್ನು ಬಳಸಲು ಡೀಫಾಲ್ಟ್ ಮಾಡುತ್ತಾರೆ. ಹಾಗಾದ್ರೆ ನೀವು ಫೇಸ್‌ಬುಕ್‌ನಲ್ಲಿ HD ಗುಣಮಟ್ಟದ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌ನಲ್ಲಿ ಹೆಚ್‌ಡಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದು ಹೇಗೆ?

ಫೇಸ್‌ಬುಕ್‌ನಲ್ಲಿ ಹೆಚ್‌ಡಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಅಪ್ಲಿಕೇಶನ್‌ನ ಕೆಳಗಿನ ಬಲ ಮೂಲೆಯಲ್ಲಿರುವ ಮೂರು ಅಡ್ಡ ರೇಖೆಗಳಿರುವ ಮೆನು ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ:3 ನಂತರ ಸೆಟ್ಟಿಂಗ್ಸ್‌ ಮತ್ತು ಪ್ರೈವೆಸಿ ಆಯ್ಕೆಗೆ ಹೋಗಿ ಮತ್ತು ಬಲಭಾಗದಲ್ಲಿರುವ ಬಾಣದ ಗುರುತನ್ನು ಟ್ಯಾಪ್ ಮಾಡಿ.
ಹಂತ:4 ಈಗ ಸೆಟ್ಟಿಂಗ್ಸ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಪ್ರಾಶಸ್ತ್ಯಗಳ ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಮೀಡಿಯಾ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:6 ಇದರಲ್ಲಿ ನೀವು ವೀಡಿಯೊಗಳು ಮತ್ತು ಫೋಟೋಗಳ ಸೆಟ್ಟಿಂಗ್‌ಗಳ ಪುಟಕ್ಕೆ ಬರುತ್ತೀರಿ.
ಹಂತ:7 ಇದೀಗ ವೀಡಿಯೊ ಗುಣಮಟ್ಟ ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಆಪ್ಟಿಮೈಸ್ಡ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಫೇಸ್‌ಬುಕ್

ಇನ್ನು ನೀವು ಆಪ್ಟಿಮೈಸ್ಡ್ ಆಯ್ಕೆಯನ್ನು ಆರಿಸುವುದರಿಂದ ಬಳಕೆದಾರರ ಡೀಫಾಲ್ಟ್ ವೀಡಿಯೊ ಗುಣಮಟ್ಟವು ಬಳಕೆದಾರರ ನೆಟ್‌ವರ್ಕ್ ಸಂಪರ್ಕವನ್ನು ಆಧರಿಸಿದೆ ಎಂದು ಖಚಿತಪಡಿಸುತ್ತದೆ. ಅಂದರೆ ಬಳಕೆದಾರರು ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕವನ್ನು ಪ್ರವೇಶಿಸಿದಾಗ, ಫೇಸ್‌ಬುಕ್ ಹೆಚ್ಚಿನ ಎಚ್‌ಡಿ ರೆಸಲ್ಯೂಶನ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಒಂದು ವೇಳೆ ಬಳಕೆದಾರರು ನಿಧಾನಗತಿಯ ಇಂಟರ್‌ನೆಟ್ ಸಂಪರ್ಕ ಹೊಂದಿದ್ದರೆ ಕಡಿಮೆ ರೆಸಲ್ಯೂಶನ್‌ ವೀಡಿಯೊವನ್ನು ಅಪ್‌ಲೋಡ್ ಮಾಡುತ್ತದೆ.

ಫೇಸ್‌ಬುಕ್‌ ಪ್ರೊಫೈಲ್‌ ಅನ್ನು ಲಾಕ್‌ ಮಾಡುವುದು ಹೇಗೆ?

ಫೇಸ್‌ಬುಕ್‌ ಪ್ರೊಫೈಲ್‌ ಅನ್ನು ಲಾಕ್‌ ಮಾಡುವುದು ಹೇಗೆ?

ಇದಲ್ಲದೆ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಪ್ರೊಫೈಲ್ ಅನ್ನು ಲಾಕ್ ಮಾಡುವುದಕ್ಕೂ ಅವಕಾಶ ನೀಡಿದೆ. ಇದರಿಂದ ನಿಮ್ಮ ಪ್ರೊಫೈಲ್‌ ಅನ್ನು ನಿಮ್ಮ ಸ್ನೇಹಿತರಲ್ಲದೆ ಬೇರೆಯವರು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನು ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ಲಾಕ್ ಮಾಡುವುದಕ್ಕೆ ಕೆಳಗಿನ ಹಂತಗಳನ್ನು ಅನುಸರಿಸಿ.
* ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ
* ಪ್ರೊಫೈಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ನಂತರ 'Add to Story' ಪಕ್ಕದಲ್ಲಿರುವ ಮೂರು ಡಾಟ್ ಮೆನು ಐಕಾನ್ ಮೇಲೆ ಟ್ಯಾಪ್ ಮಾಡಿ.
* ಬಳಿಕ, ನೀವು ಲಾಕ್ ಪ್ರೊಫೈಲ್ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ.
* ಆ ನಂತರ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಸಂಕ್ಷಿಪ್ತ ವಿವರಣೆಯನ್ನು ನೀವು ಕಾಣಬಹುದು ಮತ್ತು ಕೆಳಭಾಗದಲ್ಲಿ, ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡುವ ಆಯ್ಕೆ ಇರುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ.
* ನೀವು ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಿದ್ದೀರಿ ಎಂದು ಹೇಳುವ ಪಾಪ್-ಅಪ್ ಅನ್ನು ನೀವು ನೋಡುತ್ತೀರಿ, ಸರಿ ಕ್ಲಿಕ್ ಮಾಡಿ.

Best Mobiles in India

English summary
Here's How to upload HD videos on Facebook from Android smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X