ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಸ್ಮಾರ್ಟ್ ಕಂಪೋಸ್ ಫೀಚರ್ ನ್ನು ಆಕ್ಟಿವೇಟ್ ಮಾಡುವುದು ಹೇಗೆ?

By Gizbot Bureau
|

ಕಳೆದ ಹಲವು ವರ್ಷಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್(ಎಐ) ಅಥವಾ ಕೃತಕ ಬುದ್ಧಿಮತ್ತೆಯು ತಂತ್ರಜ್ಞಾನ ಇಂಡಸ್ಟ್ರಿಯಲ್ಲಿ ದೊಡ್ಡ ಟ್ರೆಂಡ್ ಆಗಿ ಗುರುತಿಸಿಕೊಳ್ಳುತ್ತಿದೆ. ಅದು ಆಪಲ್, ಗೂಗಲ್ ಅಥವಾ ಮೈಕ್ರೋಸಾಫ್ಟ್ ಯಾವುದೇ ಸಂಸ್ಥೆ ಇರಲಿ ಎಐ ಹಲವು ಪ್ರೊಡಕ್ಟ್ ಮತ್ತು ಸೇವೆಗಳಲ್ಲಿ ಅಳವಡಿಕೆಯಾಗುತ್ತಿದೆ.ಗೂಗಲ್ ಈಗಾಗಲೇ ತನ್ನ ಸ್ಮಾರ್ಟ್ ಫೋನಿನ ಸಾಫ್ಟ್ ವೇರ್ ಗಳಲ್ಲಿ, ಕ್ಯಾಮರಾ ಮತ್ತು ಆಪ್ಸ್ ಗಳಲ್ಲಿ ಇದನ್ನು ಅಳವಡಿಕೆ ಮಾಡುವುದಕ್ಕೆ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಆ ಮೂಲಕ ಡಿವೈಸ್ ನ ಒಟ್ಟಾರೆ ಕೆಲಸವನ್ನು ಅಭಿವೃದ್ಧಿಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ.

ಜಿಮೇಲ್ ನ ಸ್ಮಾರ್ಟ್ ಕಂಪೋಸ್ ಫೀಚರ್ ಇದೀಗ ನಿಮ್ಮ ಸ್ಮಾರ್ಟ್ ಫೋನ್ ನಲ್ಲೂ ಬರಲಿದೆ

ಇತ್ತೀಚೆಗ ಕಂಪೆನಿಯು ಹೊಸ ಫೀಚರ್ ನ್ನು ತನ್ನ ಇಮೇಲ್ ಕ್ಲೈಂಟ್ ಜಿಮೇಲ್ ಗೆ ಅಳಡಿಸುವುದಕ್ಕೆ ಪ್ರಕಟಿಸಲಾಗಿದ್ದು ಅದುವೇ “ಸ್ಮಾರ್ಟ್ ಕಂಪೋಸ್” ಫೀಚರ್. ಇದು ಬಳಕೆದಾರರಿಗೆ ತಮ್ಮ ಟೈಪಿಂಗ್ ಅನುಭವವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುತ್ತದೆ ಮತ್ತು ಗ್ರಾಹಕರು ಯಾವ ಪದವನ್ನು ಅಥವಾ ವಾಕ್ಯವನ್ನು ಬರೆಯಲು ಮುಂದಾಗುತ್ತಿದ್ದಾರೆ ಎಂಬುದನ್ನು ಇದು ಮುಂದಾಲೋಚಿಸುತ್ತದೆ. ಜಿಮೇಲ್ ವೆಬ್ ವರ್ಷನ್ ನಲ್ಲಿ ಈಗಾಗಲೇ ಈ ಫೀಚರ್ ಲಭ್ಯವಿದೆ ಮತ್ತು ಇದೀಗ ಕಂಪೆನಿಯು ಆಪ್ ನ ಆಂಡ್ರಾಯ್ಡ್ ವರ್ಷನ್ ನಲ್ಲಿ ಇದನ್ನು ಬಿಡುಗಡೆಗೊಳಿಸುವುದಕ್ಕೆ ಪ್ರಯತ್ನಿಸುತ್ತಿದೆ.

ಹಾಗಾದ್ರೆ ಈ ಫೀಚರ್ ನ್ನು ಆಕ್ಟಿವೇಟ್ ಮಾಡುವುದು ಹೇಗೆ ಎಂದು ಆಲೋಚಿಸುತ್ತಿದ್ದೀರಾ. ಇಲ್ಲಿದೆ ನೋಡಿ ಹಂತಹಂತವಾಗಿರುವ ಮಾಹಿತಿ.

ಪ್ರಮುಖ ಅಗತ್ಯತೆಗಳು:

- ಕಾರ್ಯ ನಿರ್ವಹಿಸುವ ಗೂಗಲ್ ಅಕೌಂಟ್

- ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ನೂತನ ವರ್ಷನ್ನಿನ ಜಿಮೇಲ್ ಆಪ್ ನ್ನು ಇನ್ಸ್ಟಾಲ್ ಮಾಡಿಕೊಂಡಿರಬೇಕು

ಅನುಸರಿಸಬೇಕಾಗಿರುವ ಹಂತಗಳು:

ಅಪ್ ಡೇಟ್ ನ ನಂತರ ಜಿಮೇಲ್ ಆಪ್ ನ್ನು ತೆರೆದಾಗ ಸ್ವಯಂಚಾಲಿತವಾಗಿ ಹೊಸ ಇಮೇಲ್ ಕಂಪೋಸ್ ಮಾಡುವ ಸಂದರ್ಬದಲ್ಲಿ ಹೊಸ ಸ್ಮಾರ್ಟ್ ಕಂಪೋಸ್ ಫೀಚರ್ ನ ಪಾಪ್ ಕಾಣಿಸುತ್ತದೆ.

ಇದನ್ನು ಆಕ್ಟಿವೇಟ್ ಮಾಡುವುದಕ್ಕಾಗಿ ಬಳಕೆದಾರರು ತಮ್ಮ ಸ್ಮಾರ್ಟ್ ಫೋನಿನಲ್ಲಿ ಜಿಮೇಲ್ ಆಪ್ ನ್ನು ತೆರೆಯಬೇಕು ಮತ್ತು ಸ್ಕ್ರೀನಿನ ಕೆಳಭಾಗದ ಬಲ ಬದಿಯಲ್ಲಿರುವ + ಐಕಾನ್ ನ್ನು ಕ್ಲಿಕ್ಕಿಸಬೇಕು.

ಆಪ್ ನಲ್ಲಿ ಇದೀಗ ಸ್ಮಾರ್ಟ್ ಕಂಪೋಸ್ ಪಾಪ್ ಅಪ್ ಕಾಣಿಸುತ್ತದೆ ಮತ್ತು ಡಿಸ್ ಮಿಸ್ ಮಾಡಿ ಮತ್ತು ಟೈಪಿಂಗ್ ಸ್ಟಾರ್ಟ್ ಮಾಡಿ.

ಜಿಮೇಲ್ ಆಪ್ ನ ಸೆಟ್ಟಿಂಗ್ಸ್ ಆಯ್ಕೆಗೆ ತೆರಳಿ ಗ್ರಾಹಕರು ಅಗತ್ಯವಿದ್ದರೆ ಈ ಫೀಚರ್ ನ್ನು ಆಕ್ಟಿವೇಟ್ ಮಾಡುವುದು ಮತ್ತು ಬೇಡವೆನ್ನಿಸಿದರೆ ಡಿಆಕ್ಟಿವೇಟ್ ಮಾಡುವುದಕ್ಕೆ ಅವಕಾಶವಿರುತ್ತದೆ.

1.ಜಿಮೇಲ್ ಆಪ್ ನ್ನು ತೆರೆಯಿರಿ ಮತ್ತು ಮೇಲ್ಬಾಗದ ಎಡ ಬದಿಯಲ್ಲಿರುವ ಮೂರು ಲಂಬವಾಗಿರುವ ಬಾರ್ ಗಳನ್ನು ಟ್ಯಾಪ್ ಮಾಡಿ.

2.ಸೆಟ್ಟಿಂಗ್ಸ್ ಆಯ್ಕೆಗೆ ತೆರಳಿ ಮತ್ತು ಇಮೇಲ್ ಅಕೌಂಟ್ ನ್ನು ಆಯ್ಕೆ ಮಾಡಿ.

3.ಜನರಲ್ ಸೆಟ್ಟಿಂಗ್ಸ್ ನ ಅಡಿಯಲ್ಲಿ ಸ್ಮಾರ್ಟ್ ಕಂಪೋಸ್ ಆಯ್ಕೆಯನ್ನು ಗಮನಿಸಿ.

4.ಟಾಗಲ್ ನ್ನು ಹಿಟ್ ಮಾಡುವ ಮೂಲಕ ಫೀಚರ್ ನ್ನು ಆನ್ ಅಥವಾ ಆಫ್ ಮಾಡುವುದಕ್ಕೆ ಅವಕಾಶವಿರುತ್ತದೆ.

Most Read Articles
Best Mobiles in India

English summary
How to activate ‘Smart Compose’ feature on Android smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X