EPFO ಪೋರ್ಟಲ್ ನಲ್ಲಿ UAN ಆಕ್ಟಿವೇಟ್ ಮಾಡುವುದು ಹೇಗೆ?

By Gizbot Bureau
|

ಯುನಿವರ್ಸಲ್ ಅಕೌಂಟ್ ನಂಬರ್ (UAN) ನಿಮ್ಮ ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ ನ್ನು ಡೆಪಾಸಿಟ್ ಮಾಡುವ ಅಕೌಂಟ್ ಆಗಿರುತ್ತದೆ. ಹೆಚ್ಚಿನ ಕಂಪೆನಿಗಳಲ್ಲಿ ನೌಕರರ ಸಂಬಳದ ಒಂದು ಭಾಗವಾಗಿ ನೀಡಲಾಗುವ ಇಪಿಎಫ್ ಅವರಿಗೆ ಟ್ಯಾಕ್ಸ್ ನ್ನು ಉಳಿಸುತ್ತದೆ ಮತ್ತು ದೀರ್ಘಾವಧಿ ಉಳಿತಾಯ ಯೋಜನೆಗೆ ಅನುಕೂಲಕರವಾಗಿರುತ್ತದೆ.

ಹೆಚ್ಚಿನ ನೌಕರರಿಗೆ ಪಿಎಫ್ ಡೆಪಾಸಿಟ್ ಹಣವನ್ನು ಜಮೆಗೊಳಿಸಲಾಗುತ್ತದೆ ಎಂಬುದಷ್ಟೇ ತಿಳಿದಿದೆ ಆದರೆ ಅದನ್ನು ಹೇಗೆ ಆಕ್ಸಿಸ್ ಮಾಡುವುದು ಮತ್ತು ಹೇಗೆ ಅದನ್ನು ನೋಡುವುದು ಎಷ್ಟು ಹಣವಿದೆ ಎಂದು ತಿಳಿಯುವುದು ಎಂಬ ಬಗ್ಗೆ ಗೊತ್ತೇ ಇಲ್ಲ. ಪಿಎಫ್ ಬ್ಯಾನೆನ್ಸ್ ನ್ನು ತಿಳಿಯುವುದಕ್ಕಾಗಿ ನೀವು ಮೊದಲು UAN ನಂಬರ್ ನ್ನು ಆಕ್ಟಿವೇಟ್ ಮಾಡಬೇಕಾಗುತ್ತದೆ.

ಇದು ಬಹಳ ಸರಳವಾಗಿರುವ ಒಂದು ಪ್ರೊಸೀಜರ್ ಆಗಿದ್ದು ಇದುವರೆಗೂ ನೀವು UAN ನ್ನು ಆಕ್ಟಿವೇಟ್ ಮಾಡಿಲ್ಲವಾದರೆ ಖಂಡಿತ ಇಲ್ಲಿ ಈ ಬಗ್ಗೆ ತಿಳಿದುಕೊಳ್ಳಬಹುದು.ಒಮ್ಮೆ ನೀವು UAN ನ್ನು ಆಕ್ಟಿವೇಟ್ ಮಾಡಿದರೆ, ನೀವು ಪಿಎಫ್ ಬ್ಯಾಲೆನ್ಸ್ ನ್ನು ಪರೀಕ್ಷಿಸುವುದು ಬಹಳ ಸುಲಭವಾಗುತ್ತದೆ.

UAN ನ್ನು ಹುಡುಕುವುದು ಹೇಗೆ?

UAN ನ್ನು ಹುಡುಕುವುದು ಹೇಗೆ?

ನಿಮ್ಮ ಪೇಸ್ಲಿಪ್ ನಲ್ಲಿ ಸಾಮಾನ್ಯವಾಗಿ ನಿಮ್ಮ UAN ನ್ನು ನಮೂದಿಸಲಾಗಿರುತ್ತದೆ. ಒಂದು ವೇಳೆ ಅದನ್ನು ಡಿಸ್ಪ್ಲೇ ಮಾಡಿಲ್ಲದೇ ಇದ್ದಲ್ಲಿ ನಿಮ್ಮ UAN ತಿಳಿದುಕೊಳ್ಳುವುದಕ್ಕಾಗಿ ನೀವು ಕೆಲಸ ಮಾಡುತ್ತಿರುವ ಕಂಪೆನಿಯ ಫೈನಾನ್ಸ್ ಡಿಪಾರ್ಟ್ ಮೆಂಟ್ ನ್ನು ಸಂಪರ್ಕಿಸಬೇಕಾಗುತ್ತದೆ. ಸಂಬಳದಲ್ಲಿ ಯಾರಿಗೆ ಪಿಎಫ್ ಮೊತ್ತ ಕಟ್ ಆಗುತ್ತಿರುತ್ತದೆಯೋ ಅವರಿಗೆ ಮಾತ್ರವೇ ಇದು ಲಭ್ಯವಾಗುತ್ತದೆ.

UAN ಆಕ್ಟಿವೇಟ್ ಮಾಡುವುದು ಹೇಗೆ?

UAN ಆಕ್ಟಿವೇಟ್ ಮಾಡುವುದು ಹೇಗೆ?

ನೀವು ಯಾವತ್ತೂ ಕೂಡ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿಲ್ಲದೇ ಇದ್ದಲ್ಲಿ ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್(EPFO) ವೆಬ್ ಸೈಟ್ ಮೂಲಕ UAN ಆಕ್ಟಿವೇಟ್ ಮಾಡಿಕೊಳ್ಳಲು ಹೀಗೆ ಪ್ರಯತ್ನಿಸಿ.

1. EPFO website ಗೆ ತೆರಳಿ ಮತ್ತು ಪೇಜಿನ ಕೆಳಭಾಗದ ಬಲಬದಿಯಲ್ಲಿರುವ Activate UAN ನ್ನು ಕ್ಲಿಕ್ಕಿಸಿ.

2. UAN, ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಕ್ಯಾಪ್ಚಾ ಟೆಕ್ಸ್ಟ್ ನ್ನು ಬರೆಯಿರಿ. ನಂತರ Get Authorization Pin ನ್ನು ಕ್ಲಿಕ್ಕಿಸಿ.

3. ಇದೀಗ ನಿಮಗೆ ಒನ್ ಟೈಮ್ ಪಾಸ್ ವರ್ಡ್ ನಿಮ್ಮ ಮೊಬೈಲ್ ನಂಬರ್ ಗೆ ಲಭ್ಯವಾಗುತ್ತದೆ. ಅದನ್ನು ಕಾಪಿ ಮಾಡಿ.

4. EPFO ಪೇಜ್ ನಲ್ಲಿರುವ ಎಲ್ಲಾ ವಿವರಗಳನ್ನು ಪರೀಕ್ಷಿಸಿ ಮತ್ತು ನಂತರದ ಪೇಜ್ ನಲ್ಲಿರುವ I Agree ಚೆಕ್ ಬಾಕ್ಸ್ ನ್ನು ಚೆಕ್ ಮಾಡಿ.

5. Enter OTP ಇರುವ ಜಾಗದಲ್ಲಿ ನಿಮ್ಮ ಫೋನಿಗೆ ಬಂದಿರುವ ಓಟಿಪಿಯನ್ನು ಬರೆದು ಮುಂದುವರಿಯಿರಿ ಮತ್ತು Validate OTP ಮಾಡಿ ಮತ್ತು Activate UAN ಕ್ಲಿಕ್ಕಿಸಿ.

UAN ನಂಬರ್

UAN ನಂಬರ್

ಇದು ನಿಮಗೆ ನಿಮ್ಮ UAN ನಂಬರ್ ನ್ನು ಆಕ್ಟಿವೇಟ್ ಮಾಡುತ್ತದೆ ಮತ್ತು ನಿಮ್ಮ ಮೊಬೈಲ್ ನಂಬರ್ ಗೆ ಪಾಸ್ ವರ್ಡ್ ಲಭ್ಯವಾಗುತ್ತದೆ. ಪಿಎಫ್ ಬ್ಯಾಲೆನ್ಸ್ ನ್ನು ಪರೀಕ್ಷಿಸುವುದಕ್ಕೆ ನೀವು ಆರು ತಾಸುಗಳ ವರೆಗೆ ಕಾಯಬೇಕಾಗುತ್ತದೆ. ಆರು ತಾಸುಗಳ ನಂತರ UAN ಆಕ್ಟಿವೇಟ್ ಆಗುತ್ತದೆ. ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ನ್ನು ಪರೀಕ್ಷಿಸಬಹುದು.

Best Mobiles in India

Read more about:
English summary
How to Activate UAN on EPFO Portal — A Step by Step Guide

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X