BMTC ಬಸ್ ಪಾಸಿಗೆ ಕ್ಯೂನಲ್ಲಿ ನಿಲ್ಲಬೇಡಿ: ಮೊಬೈಲ್ ಮೂಲಕವೇ ಪಾಸ್ ಮಾಡಿಸಿಕೊಳ್ಳಿ...!

|

ಇಂದಿನ ದಿನದಲ್ಲಿ ಪ್ರತಿಯೊಂದು ವಿಷಯವೂ ಆನ್ ಲೈನಿನಲ್ಲಿಯೇ ದೊರೆಯುತ್ತಿದೆ. ಇದು ಒಂದು ಮಾದರಿಯಲ್ಲಿ ಹಲವು ಮಂದಿಗೆ ಉಪಕಾರವಾಗುತ್ತಿದು ಸತ್ಯ. ಇದೇ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬಿಎಂಟಿಸಿ ಈ ಬಾರಿ ತನ್ನ ಬಳಕೆದಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ತನ್ನ ವೆಬ್ ಸೈಟಿನಲ್ಲಿಯೇ ಪಾನ್ ಗಳನ್ನು ವಿತರಿಸಲು ಯೋಜನೆಯೊಂದನ್ನು ತಯಾರಿಸಿ, ಇದರ ಮೊದಲ ಹಂತವಾಗಿ ವಿದ್ಯಾರ್ಥಿಗಳಿಗೆ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸುವಂತಹ ಅವಕಾಶವೊಂದನ್ನು ಸೃಷ್ಟಿಸಿದೆ.

BMTC ಬಸ್ ಪಾಸಿಗೆ ಕ್ಯೂನಲ್ಲಿ ನಿಲ್ಲಬೇಡಿ: ಮೊಬೈಲ್ ಮೂಲಕವೇ ಪಾಸ್ ಮಾಡಿಸಿಕೊಳ್ಳಿ..

ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಮಾಡುತ್ತಿರುವ ಹಿನ್ನಲೆಯಲ್ಲಿ ಅವರಿಗೆ ಸಹಾಯ ಮಾಡಲು ಮತ್ತು ವಿದ್ಯಾರ್ಥಿಗಳನ್ನು ಉದ್ದದ ಕ್ಯೂನಲ್ಲಿ ನಿಲ್ಲಿಸುವುದನ್ನು ತಪ್ಪಿಸುವ ಸಲುವಾಗಿ ಮೊಬೈಲ್ ಮೂಲಕವೇ ಅರ್ಜಿಸಲ್ಲಿಸಿ, ಪಾಸ್ ಪಡೆದುಕೊಳ್ಳುವ ಹೊಸ ಯೋಜನೆಯೊಂದಕ್ಕೆ ಚಾಲನೆಯನ್ನು ನೀಡಿದೆ. ಈ ಕುರಿತು ಮಾಹಿತಿಯೂ ಇಲ್ಲಿದೆ. ಇದರ ಸಹಾಯದಿಂದ ವಿದ್ಯಾರ್ಥಿಗಳಿಗೆ ಸಹಾಯವಾಗುವುದು ನಿಶ್ಚಿತ.

ಮೊಬೈಲ್ ನಲ್ಲಿ ಅರ್ಜಿಸಲ್ಲಿಸುವುದು ಹೇಗೆ..?

ಮೊಬೈಲ್ ನಲ್ಲಿ ಅರ್ಜಿಸಲ್ಲಿಸುವುದು ಹೇಗೆ..?

ನಗರದಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಬಾರಿ ಬಿಎಂಟಿಸಿ ಪಾಸ್ ಗಳನ್ನು ಆನ್ ಲೈನಿನಲ್ಲಿ ನೀಡಲಿದೆ. ಇದಕ್ಕಾಗಿ ಮೊಬೈಲ್ ನಲ್ಲಿಯೇ ಅರ್ಜಿಸಲ್ಲಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ಮೊಬೈಲ್ ನಲ್ಲಿಯೇ ಅರ್ಜಿಸಲ್ಲಿಸಲು ಮೊದಲಿಗೆ ಮೊಬೈಲ್ ನಿಂದ 161 ಸಂಖ್ಯೆಗೆ ಕರೆಯನ್ನು ಮಾಡಬೇಕು.

ನಂತರ ಬಿಎಂಟಿಸಿ ಸೇವೆ:

ನಂತರ ಬಿಎಂಟಿಸಿ ಸೇವೆ:

ಕನ್ನಡವನ್ನು ಆಯ್ಕೆ ಮಾಡಿಕೊಂಡ ನಂತರದಲ್ಲಿ ನಿಮಗೆ ಬಿಎಂಟಿಸಿ ಸೇವೆಗಳನ್ನು ಪಡೆಯುವ ಸಲುವಾಗಿ ನಿಮ್ಮ ಮೊಬೈಲ್ ನಲ್ಲಿ ಸಂಖ್ಯೆ 6 ಅನ್ನು ಒತ್ತಿ, ಇದಾದ ನಂತರದಲ್ಲಿ ನೀವು ವಿದ್ಯಾರ್ಥಿ ಪಾಸ್ ಗಳನ್ನು ಪಡೆದುಕೊಳ್ಳುವ ಸಲುವಾಗಿ ಸಂಖ್ಯೆ 2 ಅನ್ನು ಆಯ್ಕೆ ಮಾಡಿಕೊಳ್ಳಿ.

ಸಂದೇಶ ಬರಲಿದೆ:

ಸಂದೇಶ ಬರಲಿದೆ:

ಹೀಗೆ ನೀವು ವಿದ್ಯಾರ್ಥಿ ಪಾಸ್ ಸೇವೆಯ ಸಂಖ್ಯೆಯನ್ನು ಕ್ಲಿಕ್ ಮಾಡಿದ ನಂತರದಲ್ಲಿ ನಿಮ್ಮ ಅರ್ಜಿ ತುಂಬೇಕಾದ ಲಿಂಕ್ ಸಂದೇಶದ ಮಾದರಿಯಲ್ಲಿ ನಿಮ್ಮ ಮೊಬೈಲ್ ಫೋನ್ ತಲುಲಿದೆ. ಇದರ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ಅರ್ಜಿಯೂ ತೆರೆದುಕೊಳ್ಳಲಿದ್ದು, ಅದರಲ್ಲಿ ನಿಮ್ಮ ಮಾಹಿತಿಗಳನ್ನು ಫಿಲ್ ಮಾಡಬೇಕಾಗಿದೆ. ಹೀಗೆ ಮಾಡಿದರೆ ಮಾತ್ರವೇ ಅರ್ಜಿ ಸಲ್ಲಿಸಲು ಸಾಧ್ಯ, ಇಲ್ಲಾವಾದರೆ ಆಗುವುದಿಲ್ಲ.

ಮೂರು ಆಯ್ಕೆಗಳು:

ಮೂರು ಆಯ್ಕೆಗಳು:

ಸಂದೇಶದಲ್ಲಿ ಬಂದ ಮಾಹಿತಿಯಲ್ಲಿ ಇರುವಂತ ಲಿಂಕ್ ಮೇಲ್ ಕ್ಲಿಕ್ ಮಾಡಿದ ಸಂದರ್ಭದಲ್ಲಿ ಮೂರು ಆಯ್ಕೆಗಳು ಕಾಣಿಸಿಕೊಳ್ಳಲಿದೆ. ಇದರಲ್ಲಿ 10ನೇ ತರಗತಿ, ಪಿಯು ಬೋರ್ಡ್ ಮತ್ತು ಕಾಲೇಜು ವಿದ್ಯಾರ್ಥಿ ಎನ್ನುವ ಆಯ್ಕೆಗಳು ಕಾಣಸಿಗಲಿದ್ದು, ಇದರಲ್ಲಿ ನಿಮ್ಮ ಆಯ್ಕೆ ಮಾಡಿಕೊಂಡು ಮುಂದುವರೆಯಬೇಕು.

ವಿವಿರ ತುಂಬಿರಿ:

ವಿವಿರ ತುಂಬಿರಿ:

ಇದಾದ ನಂತರದಲ್ಲಿ ನೀವು ವಿವರಗಳನ್ನು ತುಂಬ ಬೇಕಾಗಿದೆ. ನಿಮ್ಮ ಆಯ್ಕೆಯನ್ನು ಮಾಡಿಕೊಂಡ ನಂತರದಲ್ಲಿ ಹುಟ್ಟಿದ ದಿನಾಂಕ, ವಿದ್ಯಾರ್ಥಿಗಳ ಐಡಿ ನಂಬರ್ ಗಳನ್ನು ಸೇರಿದಂತೆ ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಬೇಕಾಗಿದೆ. ಇವುಗಳನ್ನು ಭರ್ತಿ ಮಾಡಿದ ನಂತರದಲ್ಲಿ ಸಬಿಟ್ ಮಾಡಬೇಕು.

ಹಣ ಪಾವತಿಸುವ ಬಗೆ:

ಹಣ ಪಾವತಿಸುವ ಬಗೆ:

ಬಿಎಂಟಿಸಿ ಹಣ ಪಾವತಿಸುವ ವಿಧಾನವನ್ನು ಸರಳಗೊಳಿಸಿದ್ದು, ಪಿಯುಸಿ ವರೆಗಿನ ವಿದ್ಯಾರ್ಥಿಗಳು ಪೋಸ್ಟ್ ಮ್ಯಾನ್ ಮೂಲಕ ಹಣವನ್ನು ಪಾವತಿ ಮಾಡುವ ಅವಕಾಶ ಮಾಡಿಕೊಟ್ಟಿದೆ. ಪದವಿ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ತಮ್ಮ ಪಾನ್ ಗೆ ತಗಲುವ ಮೊತ್ತವನ್ನು ಪಾವತಿ ಮಾಡಬೇಕಾಗಿದೆ. ಇದಾದ ನಂತರದಲ್ಲಿ ಸುಲಭವಾಗಿ ನೀವು ಪಾಸ್ ಅನ್ನು ಯಾವುದೇ ಕಿರಿಕಿರಿ ಇಲ್ಲದೇ ಪಡೆದುಕೊಳ್ಳಬಹುದು.

Best Mobiles in India

English summary
How to apply bus pass through mobile. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X