Subscribe to Gizbot

ಲಂಚ ಕೊಡದೆ ಆನ್‌ಲೈನಿನಲ್ಲಿ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಿರಿ..! ಹೇಗೆ..? ಇಲ್ಲಿದೇ ಮಾಹಿತಿ.!

Written By:

ಕಂದಾಯ ಇಲಾಖೆ ಇದೇ ಮೊದಲ ಬಾರಿಗೆ ಡಿಜಿಟಲ್ ಆಗಿರುವುದು ಸಾರ್ವಜನಿಕರ ಬಳಕೆಗೆ ಉಪಯುಕ್ತವಾಗಿದೆ. ಇದೇ ಮೊದಲ ಬಾರಿಗೆ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಜಾತಿ, ಆದಾಯ, ವಾಸಸ್ಥಳ ಪ್ರಮಾಣಪತ್ರಗಳನ್ನು ಆನ್‌ಲೈನಿನಲ್ಲಿಯೇ ನೀಡಲು ಮುಂದಾಗಿದೆ. ಇದರಿಂದಾಗಿ ಸಾರ್ವಜನಿಕರು ಪ್ರಮಾಣ ಪತ್ರಗಳಿಗೆ ಸರಕಾರಿ ಕಛೇರಿಗಳಿಗೆ ಅಲೆದಾಡುವ ಪ್ರಮೇಯವು ತಪ್ಪಲಿದೆ.

ಲಂಚ ಕೊಡದೆ ಆನ್‌ಲೈನಿನಲ್ಲಿ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಿರಿ..! ಹೇಗೆ..?

ನಾಡ ಕಚೇರಿಗಳಲ್ಲಿ ನೀಡಲಾಗಿತ್ತಿದ್ದ ಜಾತಿ, ಆದಾಯ, ವಾಸಸ್ಥಳ ಪ್ರಮಾಣಪತ್ರಕ್ಕಾಗಿ ಸಾರ್ವಜನಿಕರುವ ಹೆಚ್ಚಿನ ಕಾಲ ಕಾಯಬೇಕಾಗಿತ್ತು. ಈ ಹಿನ್ನಲೆಯಲ್ಲಿ ಈ ಸಮಸ್ಯೆಗೆ ಪರಿಹಾರವನ್ನು ನೀಡುವ ಸಲುವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಆನ್​ಲೈನ್ ಮೂಲಕ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆಯನ್ನು ರಾಜ್ಯವು ಜಾರಿ ಮಾಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಾಡಕಚೇರಿಯ ವೆಬ್​ಸೈಟ್ ಮೂಲಕ:

ನಾಡಕಚೇರಿಯ ವೆಬ್​ಸೈಟ್ ಮೂಲಕ:

ಇನ್ನು ಮುಂದೆ ಸಾರ್ವಜನಿಕರು ಜಾತಿ, ಆದಾಯ, ವಾಸಸ್ಥಳ ಪ್ರಮಾಣಪತ್ರಗಳನ್ನು ನಾಡಕಚೇರಿಯ ವೆಬ್​ಸೈಟ್ www.nadakacheri.karnataka.gov.in ನಲ್ಲಿ ಪಡೆಯಬಹುದಾಗಿದೆ. ಇದರಿಂದಾಗಿ ನಾಡ ಕಚೇರಿಗಳ ಮುಂದು ಕ್ಯೂ ನಿಲ್ಲುವುದು ತಪ್ಪಲಿದೆ.

ದೇಶದಲ್ಲೇ ಮೊದಲ ಪ್ರಯತ್ನ:

ದೇಶದಲ್ಲೇ ಮೊದಲ ಪ್ರಯತ್ನ:

ಸಾರ್ವಜನಿಕರು ತಮ್ಮ ಪ್ರಮಾಣ ಪತ್ರಗಳನ್ನು ಆನ್‌ಲೈನಿನ ಮೂಲಕ ಪಡೆದು ತಾವೇ ಮುದ್ರಿಸಿಕೊಳ್ಳುವ ವ್ಯವಸ್ಥೆ ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಜಾರಿಯಾಗುತ್ತಿದೆ. ಇದು ಯಶಸ್ವಿಯಾದರೆ ಮುಂದಿನ ದಿನದಲ್ಲಿ ಬೇರೆ ರಾಜ್ಯಗಳಲ್ಲೂ ಚಾರಿಯಾಗುವ ಸಾಧ್ಯತೆ ಇದೆ.

ಪಡೆಯುವುದು ಹೇಗೆ..?

ಪಡೆಯುವುದು ಹೇಗೆ..?

ಜಾತಿ, ಆದಾಯ, ವಾಸಸ್ಥಳ ಪ್ರಮಾಣಪತ್ರ ಬೇಕಾಗಿರುವವರು www.nadakacheri.karnataka.gov.in ವೆಬ್‌ಸೈಟಿಗೆ ಭೇಟಿ ನೀಡಿ, ನಂತರ ಅಲ್ಲಿ ಅಪ್ಲೈ ಆನ್​ಲೈನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿದೆ. ನಂತರ ಮೊಬೈಲ್ ದಾಖಲಿಸಿನಿಮಗೆ ಅಗತ್ಯವಿರುವ ಮಾಹಿತಿ ಪಡೆಯುವ ವ್ಯವಸ್ಥೆಯನ್ನು ಮಾಡಿಕೊಢಲಾಗಿದೆ.

How to Activate UAN Number? KANNADA
ಆನ್‌ಲೈನಿನಲ್ಲಿಯೇ ಪೇಮೆಂಟ್:

ಆನ್‌ಲೈನಿನಲ್ಲಿಯೇ ಪೇಮೆಂಟ್:

ಇದಲ್ಲದೇ ಜಾತಿ, ಆದಾಯ, ವಾಸಸ್ಥಳ ಪ್ರಮಾಣಪತ್ರಗಳನ್ನು ಪಡೆಯಲು ಅಲ್ಲಿ ಕೇಳುವ ದಾಖಲಾತಿಗಳನ್ನು ಆಪ್‌ಲೋಡ್ ಮಾಡಬೇಕಾಗಿದೆ. ಅಲ್ಲದೇ ನಿಗದಿಪಡಿಸಿರುವ ಶುಲ್ಕ ಪಾವತಿ ಮಾಡಬೇಕಾಗಿದೆ. ಇದಕ್ಕೆ ಆನ್​ಲೈನ್ ಅವಕಾಶ ಮಾಡಿಕೊಡಲಾಗಿದೆ. ಇದಲ್ಲದೇ ನೀವು ಸಲ್ಲಿಸಿರುವ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ನೋಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
How to apply caste, income and residence certificate online. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot