ಮನೆಯಲ್ಲೇ ಕುಳಿತು ನಿಮಿಷಗಳಲ್ಲಿ 'ವೋಟರ್ ಐಡಿ' ವಿಳಾಸ ಬದಲಾಯಿಸಿ!!

|

ಭಾರತದಲ್ಲಿ ಅತ್ಯಂತ ಮುಖ್ಯ ಗುರುತಿನ ದಾಖಲೆಯಾಗಿರುವ 'ವೋಟರ್ ಐಡಿ' ವಿಳಾಸವನ್ನು ಬದಲಾಯಿಸಲು ಇನ್ಮುಂದೆ ಚಿಂತಿಸಬೇಡಿ. ಏಕೆಂದರೆ, ಭಾರತದ ಚುನಾವಣಾ ಆಯೋಗ (ECI) ವೋಟರ್ ಐಡಿ ಕಾರ್ಡ್‌ ವಿಳಾಸವನ್ನು ಆನ್‌ಲೈನಿನಲ್ಲೇ ಬದಲಾಯಿಸಲು ಅವಕಾಶ ನೀಡಿದೆ. ಇದರಿಂದ ವೋಟರ್ ಐಡಿ ವಿಳಾಸವನ್ನು ಬದಲಾಯಿಸಲು ಈಗ ಅತ್ಯಂತ ಸುಲಭಸಾಧ್ಯವಾಗಿದೆ.

ಹೌದು, ವಿವಿಧ ರೀತಿಯ ಅರ್ಜಿಗಳನ್ನು ಭರ್ತಿಮಾಡುವ ಅಥವಾ ವಿವಿಧ ರಿತಿಯ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಬದಲಾಗಿ ನೀವು ಒಂದೇ ಒಂದು ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್‌ ಭರ್ತಿ ಮಾಡುವ ಮೂಲಕ 'ವೋಟರ್ ಐಡಿ' ವಿಳಾಸವನ್ನು ಬದಲಾಯಿಸಬಹುದಾಗಿದೆ. ಈ ಕೆಲಸವವನ್ನು ನಿರ್ವಹಿಸಲು ನಿಮಗೆ ಸ್ವಲ್ಪ ಸಮಯ ಸಾಕಾಗುತ್ತದೆ ಎಂದರೆ ಆಶ್ಚರ್ಯವೇನಿಲ್ಲ.

ಮನೆಯಲ್ಲೇ ಕುಳಿತು ನಿಮಿಷಗಳಲ್ಲಿ 'ವೋಟರ್ ಐಡಿ' ವಿಳಾಸ ಬದಲಾಯಿಸಿ!!

ಹಾಗಾದರೆ, ಅತ್ಯಂತ ಮುಖ್ಯ ಗುರುತಿನ ದಾಖಲೆಯಾಗಿರುವು 'ವೋಟರ್ ಐಡಿ' ವಿಳಾಸವನ್ನು ಆನ್‌ಲೈನಿನಲ್ಲೇ ಸುಲಭವಾಗಿ ಬದಲಾಯಿಸಲು ಹೇಗೆ? ಕ್ರಮವಾಗಿ ಯಾವ ಯಾವ ಹಂತಗಳನ್ನು ಅನುಸರಿಸಬೇಕು?, ಅರ್ಜಿ ತುಂಬುವುದು ಹೇಗೆ ಎಂಬ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತೇವೆ. ಮುಂದಿನ ಸ್ಲೈಡರ್‌ಗಳಲ್ಲಿ ಇದರ ಪೂರ್ಣ ಮಾಹಿತಿಯನ್ನು ಓದಿ ತಿಳಿಯಿರಿ.

ಹಂತ 1

ಹಂತ 1

ಆನ್‌ಲೈನಿನಲ್ಲಿ 'ವೋಟರ್ ಐಡಿ' ವಿಳಾಸವನ್ನು ಬದಲಾಯಿಸಲುರಾಷ್ಟ್ರೀಯ ಮತದಾರರ ಸೇವೆ ಅಧಿಕೃತ ವೆಬ್‌ಸೈಟ್ ತೆರೆಯಿರಿ.ಈ ಲಿಂಕ್ http://www.nvsp.in ಅನ್ನು ಕ್ಲಿಕ್ ಮಾಡಿ.

ಹಂತ 2

ಹಂತ 2

ರಾಷ್ಟ್ರೀಯ ಮತದಾರರ ಸೇವೆ ಅಧಿಕೃತ ವೆಬ್‌ಸೈಟ್ ತೆರೆದ ನಂತರ 'Apply online for registration of new voter/due to shifting from AC' ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3

ಹಂತ 3

ಇದಾದ ನಂತರ ಒದಗಿಸಿದ ಲಭ್ಯವಿರುವ ಆಯ್ಕೆಗಳಿಂದ ಫಾರ್ಮ್ 6A/8A ಅನ್ನು ಆಯ್ಕೆ ಮಾಡಿ, ನಂತರ ಆನ್ಲೈನ್ ಫಾರ್ಮ್ ಹೊಸ ಟ್ಯಾಬ್‌ನಲ್ಲಿ ನಿಮಗೆ ಗೋಚರಿಸುತ್ತದೆ.

ಹಂತ 4

ಹಂತ 4

ನಿಮ್ಮ ಹೆಸರು ಮತ್ತು ವಿಳಾಸ, ರಾಜ್ಯ, ಕ್ಷೇತ್ರ ಮತ್ತು ನಿಮ್ಮ ಹೊಸ ವಿಳಾಸವನ್ನೂ ಒಳಗೊಂಡಂತೆ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.

ಹಂತ 5

ಹಂತ 5

ನಿಮ್ಮ ಪ್ರಸ್ತುತ ವಿಳಾಸವನ್ನು (ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಅಥವಾ ಯಾವುದೇ ಅಧಿಕೃತ ಡಾಕ್ಯುಮೆಂಟ್) ತಿಳಿಸುವ ಡಾಕ್ಯುಮೆಂಟ್ ಅನ್ನು ಅಪ್ಲೋಡ್ ಮಾಡಿ.

ಹಂತ 6

ಹಂತ 6

ಒಮ್ಮೆ ನೀವು ದಾಖಲೆಗಳನ್ನು ಭರ್ತಿ ಮಾಡಿ ಮತ್ತು ಅಪ್ಲೋಡ್ ಮಾಡಿಕೊಂಡು ಫಾರ್ಮ್ ಅನ್ನು ಆನ್‌ಲೈನಿನಲ್ಲೇ ಸಲ್ಲಿಸಿ. ಇದಕ್ಕಾಗಿ ಸಬ್‌ಮಿಟ್ ಬಟನ್ ಅನ್ನು ಒತ್ತಿರಿ.

ಹಂತ 7

ಹಂತ 7

ನೀವು ಆನ್ಲೈನ್ನಲ್ಲಿ ನಿಮ್ಮ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಲು ಬಳಸಬಹುದಾದ ಉಲ್ಲೇಖ ಸಂಖ್ಯೆಯನ್ನು ನೀವು ಸ್ವೀಕರಿಸುತ್ತೀರಿ. ಇದರಿಂದ ನೀವು ಅರ್ಜಿಯನ್ನು ಟ್ರ್ಯಾಕ್ ಮಾಡಬಹುದು.

ಹಂತ 8

ಹಂತ 8

ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ ಚುನಾವಣಾಧಿಕಾರಿಗಳು ಅದನ್ನು ಪರಿಶೀಲಿಸಲಾಗುತ್ತದೆ. ನಂತರ ನಿಮ್ಮ ಪ್ರಸ್ತುತ ವಿಳಾಸದೊಂದಿಗೆ ID ಕಾರ್ಡ್ ಅನ್ನು ನೀವು ಸ್ವೀಕರಿಸುತ್ತೀರಿ.

Best Mobiles in India

English summary
Changing your residential address on your voter ID card can easily be.. old constituency's electoral list to the new one, with all your details retained. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X