ವೋಟ್ ಮಾಡಲು ಮತಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಹೀಗೆ ಪರೀಕ್ಷಿಸಿಕೊಳ್ಳಿ!

By Gizbot Bureau
|

ಪ್ರತಿ ಬಾರಿ ಎಲೆಕ್ಷನ್ ಬಂದಾಗಲೂ ಅದೆಷ್ಟೇ ಜಾಗರೂಕತೆಯಿಂದ ಇದ್ದರೂ ಒಂದಲ್ಲ ಒಂದು ಕಡೆ ಮತಪಟ್ಟಿಯಲ್ಲಿ ನಮ್ಮ ಹೆಸರಿಲ್ಲ ಎಂಬ ಕೂಗು ಕೇಳಿಬರುತ್ತದೆ ಮತ್ತು ಅದಕ್ಕಾಗಿ ಘಂಟೆಗಟ್ಟಲೆ ಮತಘಟ್ಟೆಯಲ್ಲಿ ಗಲಾಟೆಯಾಗುತ್ತದೆ.

ಇದೀಗ ಮತ್ತೆ ಲೋಕಸಭೆ ಎಲೆಕ್ಷನ್ ಹತ್ತಿರವಾಗುತ್ತಿದೆ. ಎಲೆಕ್ಷನ್ ಆರಂಭವಾಗುವ ಮುನ್ನವೇ ನಿಮ್ಮ ವೋಟರ್ ಹೆಸರು ಅಥವಾ ವೋಟರ್ ಐಡಿ ಮತಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದಕ್ಕೆ ನಾವು ಸಹಾಯ ಮಾಡುತ್ತೇವೆ.

ಪ್ರತಿಯೊಂದು ಪ್ರಜಾಪ್ರಭುತ್ವದಕ್ಕೂ ಕೂಡ ಮತದಾನ ಬಹಳ ಮುಖ್ಯ. ಅದಕ್ಕೆ ಭಾರತವೂ ಹೊರತಾಗಿಲ್ಲ. ಹಾಗಾಗಿ ಭಾರತದಲ್ಲಿ ಎಲೆಕ್ಷನ್ ಆರಂಭವಾಗುವ ಮುನ್ನವೇ ಮತಘಟ್ಟೆಯಲ್ಲಿ ನಿಮ್ಮ ಹೆಸರು ನಮೂದಿಸಲ್ಪಟ್ಟಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯ ವಿಚಾರವಾಗಿರುತ್ತದೆ. ಮತದಾರರ ಪಟ್ಟಿಯು ದೇಶದಲ್ಲಿ ಬದಲಾಗುತ್ತಲೇ ಇರುತ್ತದೆ. ಹೊಸಬರು ಸೇರ್ಪಡೆಗೊಳ್ಳುತ್ತಾರೆ. ಕೆಲವರು ಮತಪಟ್ಟಿಯಿಂದ ತೆಗೆಯಲ್ಪಟ್ಟಿರುತ್ತಾರೆ. ಹಾಗಾಗಿ ಈ ಎಲೆಕ್ಟ್ರೋಲ್ ಪೋಲ್ ನಲ್ಲಿ ನಿಮ್ಮ ಹೆಸರನ್ನು ಮೊದಲೇ ಖಾತ್ರಿಗೊಳಿಸಿಕೊಳ್ಳುವುದು ಬಹಳ ಮುಖ್ಯ.

ಮತಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಹೀಗೆ ಪರೀಕ್ಷಿಸಿಕೊಳ್ಳಿ!

ಯಾವುದೇ ಎಲೆಕ್ಷನ್ ನಲ್ಲಿ ನೀವು ಮತದಾನ ಮಾಡಬೇಕು ಎಂದು ಬಯಸಿದರೆ, ರಾಜ್ಯದ ಎಲೆಕ್ಷನ್ ಇರಲಿ ಅಥವಾ ಲೋಕಸಭೆ ಎಲೆಕ್ಷನ್ನೇ ಇರಿಲಿ ಮೊದಲನೆಯದಾಗಿ ನಿಮ್ಮ ಬಳಿ ಚುನಾವಣಾ ಆಯೋಗದಿಂದ ನೀಡಲಾಗುವ ಮತದಾನದ ಗುರುತಿನ ಚೀಟಿ ಖಡ್ಡಾಯವಾಗಿ ಇರಬೇಕಾಗುತ್ತದೆ ಮತ್ತು ಎಲೆಕ್ಟ್ರಾಲ್ ರೋಲ್ಸ್ ನಲ್ಲಿ ನಿಮ್ಮ ಹೆಸರು ಇರಬೇಕಾಗುತ್ತದೆ.

ವೋಟರ್ ಐಡಿ ಇದ್ದ ಕೂಡಲೇ ನೀವು ದೆಹಲಿ, ಬಿಹಾರ, ಪಶ್ಚಿಮ ಬಂಗಾಳ, ತೆಲಂಗಾಣ, ಮಹಾರಾಷ್ಟ್ರ ಅಥವಾ ಯಾವುದೇ ಭಾರತದ ರಾಜ್ಯದಲ್ಲೂ ವೋಟ್ ಮಾಡುವುದಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ನಿಮಗೆ ಬಹಳ ಮುಖ್ಯವಾಗಿ ನಿಮ್ಮ ಹೆಸರು ಎಲೆಕ್ಷನ್ ಆರಂಭವಾಗುವ ಮುನ್ನವೇ ವೋಟರ್ ಲಿಸ್ಟ್ ನಲ್ಲಿ ಇದೆಯಾ ಎಂಬುದು ಖಾತ್ರಿಯಾಗಬೇಕು.

ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡುವುದು ಹೇಗೆ?

ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡುವುದು ಹೇಗೆ?

ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಪರೀಕ್ಷಿಸುವುದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ನ್ಯಾಷನಲ್ ವೋಟರ್ ಸರ್ವೀಸ್ ಪೋರ್ಟಲ್ ಗೆ ತೆರಳಿ. Electoral Search ಪೇಜ್ ಗೆ ತೆರಳಿ.

2. ಇಲ್ಲಿ ನೀವು ಎರಡು ವಿಧಾನದಲ್ಲಿ ನಿಮ್ಮ ಹೆಸರನ್ನು ಹುಡುಕಾಡಬಹುದು.

- ಎಲ್ಲಾ ಮಾಹಿತಿಗಳನ್ನು ಮ್ಯಾನುವಲ್ ಆಗಿ ಎಂಟರ್ ಮಾಡಿ ಹುಡುಕಾಡುವುದು ಅಥವಾ ಕೇವಲ ಎಲೆಕ್ಟ್ರಾಲ್ ಫೋಟೋ ಐಡಿ ಕಾರ್ಡ್(ಎಪಿಕ್ ಕಾರ್ಡ್) ನಂಬರ್ ನ್ನು ಎಂಟರ್ ಮಾಡಿ ಹುಡುಕಾಡುವುದು. EPIC ನಂಬರ್ ನಿಮ್ಮ ವೋಟರ್ ಐಡಿಯಲ್ಲಿ ಬೋಲ್ಡ್ ಲೆಟರ್ ನಲ್ಲಿ ಎಂಟರ್ ಮಾಡಲಾಗಿರುತ್ತದೆ.

NVSP ಎಲೆಕ್ಟ್ರಾಲ್ ಸರ್ಚ್

NVSP ಎಲೆಕ್ಟ್ರಾಲ್ ಸರ್ಚ್

ಒಂದು ವೇಳೆ ನೀವು ವೋಟರ್ ಐಡಿಯಲ್ಲಿರುವ EPIC ನಂಬರ್ ಎಂಟರ್ ಮಾಡಿ ಹುಡುಕಾಡುವ ಮೆಥೆಡ್ ಆಯ್ಕೆ ಮಾಡಿಕೊಂಡಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. NVSP ಎಲೆಕ್ಟ್ರಾಲ್ ಸರ್ಚ್ ಪೇಜ್ ಗೆ ತೆರಳಿ .

2. ಸರ್ಚ್ ಬೈ ಎಪಿಕ್ ನಂಬರ್ ನ್ನು ಕ್ಲಿಕ್ಕಿಸಿ ಅಥವಾ ಟ್ಯಾಪ್ ಮಾಡಿ.

3. ಎಪಿಕ್ ನಂಬರ್ ನ್ನು ಎಂಟರ್ ಮಾಡಿ, ಡ್ರಾಪ್ ಡೌನ್ ಮೆನುವಿನಿಂದ ರಾಜ್ಯವನ್ನು ಆಯ್ಕೆ ಮಾಡಿ. ಇಮೇಜ್ ನಲ್ಲಿ ಕಾಣಲಾಗುವ ಕೋಡ್ ನ್ನು ಕೀಯನ್ನು ಬರೆಯಿರಿ. ಸರ್ಚ್ ಆಯ್ಕೆಯನ್ನು ಕ್ಲಿಕ್ಕಿಸಿ.

4. ಒಂದು ವೇಳೆ ನಿಮ್ಮ ಹೆಸರು ಮತಪಟ್ಟಿಯಲ್ಲಿ ಇದ್ದರೆ ಸರ್ಚ್ ಬಟನ್ ನ ಕೆಳಗಡೆ ಅದನ್ನು ಕಾಣಲು ಸಾಧ್ಯವಾಗುತ್ತದೆ. ಏನೂ ಕಾಣಿಸದೇ ಇದ್ದಲ್ಲಿ ನಿಮ್ಮ ಹೆಸರು ವೋಟರ್ ಲಿಸ್ಟ್ ನಲ್ಲಿ ಇಲ್ಲದೇ ಇರುವ ಸಾಧ್ಯತೆ ಇರುತ್ತದೆ. ಪರೀಕ್ಷಿಸಿಕೊಳ್ಳಿ.

ಒಂದು ವೇಳೆ ಎಪಿಕ್ ನಂಬರ್ ಇಲ್ಲದೇ ಇದ್ದಲ್ಲಿ ಈ ಕೆಳಗಿನ ಹಂತವನ್ನು ಅನುಸರಿಸಿ.

ಒಂದು ವೇಳೆ ಎಪಿಕ್ ನಂಬರ್ ಇಲ್ಲದೇ ಇದ್ದಲ್ಲಿ ಈ ಕೆಳಗಿನ ಹಂತವನ್ನು ಅನುಸರಿಸಿ.

ಒಂದು ವೇಳೆ ನಿಮ್ಮ ಬಳಿ ವೋಟರ್ ಐಡೆಂಟಿಟಿ ಕಾರ್ಡ್ ಇಲ್ಲದೇ ಇದ್ದಲ್ಲಿ ಮತ್ತು ಅದೇ ಕಾರಣಕ್ಕೆ ನಿಮ್ಮ ಬಳಿ ಎಪಿಕ್ ನಂಬರ್ ಇಲ್ಲದೇ ಇದ್ದಲ್ಲಿ ಈ ಕೆಳಗಿನ ಹಂತವನ್ನು ಅನುಸರಿಸಿ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

1. NVSP Electoral Search ಪೇಜ್ ಗೆ ತೆರಳಿ.

2. ಸರ್ಚ್ ಬೈ ಡೀಫಾಲ್ಟ್ ನ್ನು ಕ್ಲಿಕ್ಕಿಸಿ.

3. ಹೆಸರು, ಲಿಂಗ, ವಯಸ್ಸು, ಯಾವ ಕ್ಷೇತ್ರಕ್ಕೆ ಸೇರಿದವರು ಇತ್ಯಾದಿ ಎಲ್ಲಾ ಮಾಹಿತಿಗಳನ್ನು ಪೇಜಿನಲ್ಲಿ ವಿವರಿಸಿದಂತೆ ನೀಡಬೇಕು. ಕ್ಯಾಪ್ಚಾ ಇಮೇಜ್ ನಲ್ಲಿ ಕಾಣುವ ಕೋಡನ್ನು ಕೂಡ ಬರೆಯಿರಿ. ಸರ್ಚ್ ಬಟನ್ ನ್ನು ಕ್ಲಿಕ್ಕಿಸಿ.

4. ಸರ್ಚ್ ಬಟನ್ ಕೆಳಗಡೆ ನೀವು ಫಲಿತಾಂಶ ಗಮನಿಸಿದರೆ ನಿಮ್ಮ ಹೆಸರು ವೋಟರ್ ಲಿಸ್ಟ್ ನಲ್ಲಿ ಇದೆ ಎಂದರ್ಥ. ಒಂದು ವೇಳೆ ಯಾವುದೇ ಫಲಿತಾಂಶ ಇಲ್ಲದೇ ಇದ್ದರೆ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದೇ ಇರುವ ಸಾಧ್ಯತೆ ಇರುತ್ತದೆ.

ಎಪಿಕ್ ನಂಬರ್ ಬಳಸುವ ಮೆಥೆಡ್ ಹೆಚ್ಚು ಸೂಕ್ತ:

ಭಾರತದಲ್ಲಿ ವೋಟರ್ ಐಡೆಂಟಿಟಿ ಕಾರ್ಡ್ ನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ( ಅಕ್ಷರಗಳಲ್ಲಿ ತಪ್ಪು) ಇರುವ ಸಾಧ್ಯತೆ ಇರುತ್ತದೆ.ಹೆಚ್ಚಿನ ಸಂದರ್ಬದಲ್ಲಿ ವೋಟರ್ ಐಡಿಯಲ್ಲಿ ಮತ್ತು ಮತಪಟ್ಟಿಯನ್ನು ಹೆಸರಿನ ಅಕ್ಷರದಲ್ಲಿ ತಪ್ಪಾಗಿರುವ ಸಾಧ್ಯತೆ ಇರುತ್ತದೆ ಮತ್ತು ಅದೇ ಕಾರಣಕ್ಕೆ ನಿಮಗೆ ಮೇಲಿನ ಹಂತಗಳ ಹುಡುಕಾಟದಲ್ಲಿ ಫಲಿತಾಂಶ ಸಿಗದೇ ಇರುವ ಸಾಧ್ಯತೆಯೂ ಇರುತ್ತದೆ.ಅಂದರೆ ಎಲೆಕ್ಷನ್ ಕಮಿಷನ್ನಿನ ಡಾಟಾಬೇಸ್ ನಲ್ಲಿ ನಿಮ್ಮ ಹೆಸರು ಮ್ಯಾಚ್ ಆಗದ ಕಾರಣ ಈ ಸಮಸ್ಯೆ ತಲೆದೋರಿರುತ್ತದೆ. ಅದೇ ಕಾರಣಕ್ಕೆ ನೀವು ಎಪಿಕ್ ನಂಬರ್ ಬಳಸಿ ಹುಡುಕಾಟ ನಡೆಸುವುದು ಹೆಚ್ಚು ಸೂಕ್ತವಾಗಿರುತ್ತದೆ ಮತ್ತು ಫಲಿತಾಂಶ ಪಡೆಯುವುದಕ್ಕೆ ಹೆಚ್ಚು ನಿಖರತೆ ಇರುತ್ತದೆ.

ಎಸ್ಎಂಎಸ್ ಮೂಲಕ ಮತದಾರರ ಪಟ್ಟಿ:

ಆಂಧ್ರ ಪ್ರದೇಶ, ಬಿಹಾರ ಮತ್ತು ತಮಿಳುನಾಡಿನಲ್ಲಿ ಎಸ್ಎಂಎಸ್ ಮೂಲಕ ಕೂಡ ನೀವು ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸುವುದಕ್ಕೆ ಅವಕಾಶ ನೀಡುತ್ತದೆ. ಅದಕ್ಕಾಗಿ ನೀವು ಎಲೆಕ್ಷನ್ ಕಮಿಷನ್ನಿನ ಪೇಜಿಗೆ ತೆರಳಿ ಚೀಫ್ ಎಲೆಕ್ಟ್ರಾಲ್ ಆಫೀಸರ್ಸ್(ಸಿಇಓ) ವೆಬ್ ಸೈಟ್ ಗೆ ತೆರಳಿ ಮತ್ತು ಲಿಸ್ಟ್ ನಲ್ಲಿ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ. ಈ ಲಿಸ್ಟ್ ನಲ್ಲಿ ನಿಮ್ಮ ರಾಜ್ಯದಲ್ಲಿ, ನಿಮ್ಮ ಕ್ಷೇತ್ರದಲ್ಲಿ ಎಸ್ಎಂಎಸ್ ಮೂಲಕ ಲಿಸ್ಟ್ ಚೆಕ್ ಮಾಡುವುದಕ್ಕೆ ಅವಕಾಶವಿದೆಯೇ ಇಲ್ಲವೇ ಎಂದು ತಿಳಿಯಲು ಸಾಧ್ಯವಿದೆ.

Best Mobiles in India

English summary
How to Check if Your Name Is on Electoral Rolls in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X