ಚೀನಾದಲ್ಲಿ ಐಫೋನ್ ಗಳು ಕಡಿಮೆ ಬೆಲೆಯಲ್ಲಿ ಲಭ್ಯ

By Gizbot Bureau
|

ಚೀನಾದ ಆನ್ ಲೈನ್ ರಿಟೈಲರ್ ಗಳು ಐಫೋನ್ ಗಳಿಗೆ ಈ ವರ್ಷದಲ್ಲಿ ಎರಡನೇ ಬಾರಿಗೆ ಐಫೋನ್ ಗಳಿಗೆ ರಿಯಾಯಿತಿ ಬೆಲೆಯನ್ನು ನೀಡುವುದಕ್ಕೆ ಆರಂಭಿಸಿದೆ. ಆಪಲ್ ಇಂಕ್ ವಿಶ್ವದ ಅತೀ ದೊಡ್ಡ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕುಸಿತವನ್ನು ಕಂಡಿತ್ತು.

ಚೀನಾದಲ್ಲಿ ಐಫೋನ್ ಗಳಿಗೆ ಭರ್ಜರಿ ರಿಯಾಯಿತಿ:

ಚೀನಾದಲ್ಲಿ ಐಫೋನ್ ಗಳಿಗೆ ಭರ್ಜರಿ ರಿಯಾಯಿತಿ:

ಈ ವಾರ ಹಲವು ಎಲೆಕ್ಟ್ರಾನಿಕ್ ವೆಂಡರ್ ಗಳು ಐಫೋನ್ ಗಳಿಗೆ ರಿಯಾಯಿತಿಯನ್ನು ಪ್ರಕಟಿಸಿದ್ದಾರೆ. ಜನವರಿಯಲ್ಲಿ ಆಪಲ್ ಸಂಸ್ಥೆ ಚೀನಾದಲ್ಲಿ ಮುಳುಗಡೆಯಾಗುವ ಹಂತದಲ್ಲಿರುವಾಗ ಭರ್ಜರಿ ರಿಯಾಯಿತಿಯನ್ನು ಪ್ರಕಟಿಸಿತ್ತು.

ಗೆಜೆಟ್ ರೀಟೈಲರ್ ಆಗಿರುವ ಸನ್ನಿಂಗ್.ಕಾಮ್ ಕೋ ಲಿಮಿಟೆಡ್ ಹೇಳಿರುವ ಪ್ರಕಾರ ಐಫೋನ್ ಎಕ್ಸ್ ಎಸ್ ಬೆಲೆ ಅಧಿಕೃತ ಬೆಲೆಗಿಂತ ಸರಿಸುಮಾರು 1,000 ಯಾನ್ ($148.95) ನಷ್ಟು ಇಳಿಮುಖವಾಗಿದೆ. ಜನವರಿಯಲ್ಲಿ ಸನ್ನಿಂಗ್ ಸೇರಿಂದತೆ ಇತರೆ ರಿಟೈಲರ್ ಬಳಿ ಆಪಲ್ ಫೋನ್ ಗಳ ಬೆಲೆ ಇಳಿಕೆಯಾಗಿದ್ದಾಗ ಐಫೋನ್ ಎಕ್ಸ್ಎಸ್ ನ್ನು ಸೇರಿಸಿರಲಿಲ್ಲ.

ಐಫೋನ್ ಎಕ್ಸ್ಎಸ್ ಕೂಡ ಕಡಿಮೆ ಬೆಲೆಯಲ್ಲಿ ಲಭ್ಯ:

ಐಫೋನ್ ಎಕ್ಸ್ಎಸ್ ಕೂಡ ಕಡಿಮೆ ಬೆಲೆಯಲ್ಲಿ ಲಭ್ಯ:

ಪಿನ್ಡುಡೋ ಇಂಕ್, ಕಡಿಮೆ ಬೆಲೆಯ ವಸ್ತುಗಳನ್ನು ಮಾರಾಟ ಮಾಡುವುದರಲ್ಲಿ ಎತ್ತಿದ ಕೈ ಎನ್ನಿಸಿರುವ ಈ ಇ-ಕಾಮರ್ಸ್ ಸೈಟ್ ಅಭಿಪ್ರಾಯ ಪಡುವಂತೆ 64ಜಿಬಿ ಎಡಿಷನ್ನಿನ ಐಫೋನ್ ಎಕ್ಸ್ಎಸ್ ನ ಬೆಲೆ 6,999 ಯಾನ್ ನಷ್ಟು ಇಳಿಕೆಯಾಗಿದೆ ಅಂದರೆ 1,000 ಯಾನ್ ನಷ್ಟು ಅಧಿಕೃತ ಬೆಲೆಗಿಂತ ಕಡಿಮೆಯಾಗಿದೆ ಎಂದು ತಿಳಿಸಿದೆ.

1,700 ಯಾನ್ ನಷ್ಟು ಕಡಿಮೆ:

1,700 ಯಾನ್ ನಷ್ಟು ಕಡಿಮೆ:

ಆನ್ ಲೈನ್ ರಿಟೈಲರ್ ದೈತ್ಯ ಎನ್ನಿಸಿರುವ JD.ಕಾಮ್ ಇಂಕ್ ಹೇಳಿರುವ ಪ್ರಕಾರ ಐಫೋನ್ ಎಕ್ಸ್ಎಸ್, ಎಕ್ಸ್ ಎಸ್ ಮ್ಯಾಕ್ ಸೇರಿದಂತೆ ಇತರೆ ಹಲವು ಆಪಲ್ ಡಿವೈಸ್ ಗಳು 1,700 ಯಾನ್ ನಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಪ್ರಾರಂಭದಲ್ಲಿ ಅಂದರೆ ಜನವರಿಯಲ್ಲಿ ಜೆಡಿ.ಕಾಮ್ ಕೂಡ ಐಫೋನ್ ಎಕ್ಸ್ಎಸ್ ಗೆ ರಿಯಾಯಿತಿಯನ್ನು ನೀಡಿರಲಿಲ್ಲ.

ಸ್ಥಳೀಯ ಫೋನ್ ಗಳಿಗೆ ಬೇಡಿಕೆ ಹೆಚ್ಚು:

ಸ್ಥಳೀಯ ಫೋನ್ ಗಳಿಗೆ ಬೇಡಿಕೆ ಹೆಚ್ಚು:

ಚೀನಾದಲ್ಲಿ ಆಪಲ್ ಫೋನ್ ಗಳ ಮಾರಾಟವು ವರ್ಷಕ್ಕೆ 20 ಪ್ರತಿಶತದಷ್ಟು ಇಳಿಮುಖವಾಗಿದೆ ಎಂದು ಇತ್ತೀಚೆಗಿನ ಆದಾಯಗಳ ವರದಿ ತಿಳಿಸಿದೆ. ಸ್ಮಾರ್ಟ್ ಫೋನ್ ಗಳಿಗೆ ಬೇಡಿಕೆ ಕಡಿಮೆಯಾಗಿರುವುದು ಮತ್ತು ಸ್ಥಳೀಯ ಫೋನ್ ಗಳಿಗೆ ಹೆಚ್ಚು ಬೇಡಿಕೆ ಇರುವ ಕಾರಣದಿಂದಾಗಿ ಆಪಲ್ ಫೋನ್ ಗಳನ್ನು ಚೀನಾದಲ್ಲಿ ಕೇಳುವವರಿಲ್ಲದಂತಾಗಿದೆ. ಅದೇ ಕಾರಣಕ್ಕೆ ಆಪಲ್ ಫೋನ್ ಗಳ ಬೆಲೆ ಚೀನಾದಲ್ಲಿ ಭಾರೀ ಕಡಿಮೆಯಾಗಿದೆ.

ಚೀನಾ ಬ್ಯಾಂಕ್ ಗಳ ಜೊತೆಗೆ ಸಹಭಾಗಿತ್ವ:

ಚೀನಾ ಬ್ಯಾಂಕ್ ಗಳ ಜೊತೆಗೆ ಸಹಭಾಗಿತ್ವ:

ಯು.ಎಸ್ ಕಂಪೆನಿ ಅಧಿಕೃತವಾಗಿ ಸ್ಟಿಕ್ಕರ್ ಬೆಲೆಯನ್ನು ತನ್ನ ಡಿವೈಸ್ ಗಲಿಗೆ ಚೀನಾ ವೆಬ್ ಸೈಟ್ ಗಳನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.ಸದ್ಯಕ್ಕೆ ಕಂಪೆನಿಯು ಆಂಟ್ ಫೈನಾನ್ಶಿಯಲ್, ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಮತ್ತು ಇತರೆ ಹಲವು ರಾಜ್ಯ ಮಾಲೀಕತ್ವದ ಬ್ಯಾಂಕ್ ಗಳ ಜೊತೆಗೆ ಕೈಜೋಡಿಸಿದ್ದು ಐಫೋನ್ ಗಳನ್ನು ಅಂತರ್ಜಾಲ-ಉಚಿತ- ಸಾಲ ಪಡೆದು ಖರೀದಿಸುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.

ನಿಮಗೂ ಐಫೋನ್ ಗಳು ಕಡಿಮೆ ಬೆಲೆಯಲ್ಲಿ ಖರೀದಿಸುವ ಆಸೆ ಇದ್ದರೆ ಚೀನಾಕ್ಕೆ ತೆರಳಬಹುದು ಅಥವಾ ಚೀನಾ ವೆಬ್ ಸೈಟ್ ಗಳಲ್ಲಿ ಕಣ್ಣಾಡಿಸಬಹುದು!

Best Mobiles in India

English summary
How China may have become the 'best place' to buy iPhones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X