ಸಿರಿ, ಕೋರ್ಟಾನಾಗೆ ಪ್ರತಿಸ್ಪರ್ಧಿಯಾಗಿರುವ ಗೂಗಲ್ ನೌ ಕಾರ್ಡ್

ಗೂಗಲ್ ನೌ ಅಭಿವೃದ್ಧಿಪಡಿಸಿರುವ ಕಾರ್ಡ್ ಮೂಲಕ ನೀವು ಯಾವುದೇ ಸುದ್ದಿ ಮತ್ತು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಆಸಕ್ತಿಗೆ ಅನುಗುಣವಾಗಿರುವ ಸುದ್ದಿ ನಿಮಗೆ ಲಭ್ಯವಾಗಲಿದೆ.

By Shwetha Ps
|

ಸಿರಿ ಮತ್ತು ಕೋರ್ಟಾನಾಗೆ ಸ್ಪರ್ಧೆಯನ್ನು ಒಡ್ಡುವ ಸಲುವಾಗಿ ಅಭಿವೃದ್ಧಿಯನ್ನು ಕಂಡುಕೊಂಡ ಗೂಗಲ್ ನೌ ಈಗ ಬಹಳಷ್ಟು ಪ್ರಗತಿಯನ್ನು ರೂಪಿಸಿಕೊಂಡಿದೆ. ನಿಮಗೆ ಮಾಹಿತಿಯನ್ನು ಒದಗಿಸುವ ಕಾರ್ಡ್‌ಗಳನ್ನು ನೀಡುವವರೆಗೆ ಅದು ಬೆಳೆದು ನಿಂತಿದೆ. ಗೂಗಲ್ ನೌ ಕಾರ್ಡ್‌ಗಳು ಸುದ್ದಿ ಮತ್ತು ಮಾಹಿತಿಯನ್ನೊಳಗೊಂಡು ಬಂದಿದ್ದು ನೀವು ಗೂಗಲ್‌ಗೆ ನೀಡುವ ಮಾಹಿತಿಯನ್ನು ಇದು ಆಧರಿಸಿದೆ.

ಸಿರಿ, ಕೋರ್ಟಾನಾಗೆ ಪ್ರತಿಸ್ಪರ್ಧಿಯಾಗಿರುವ ಗೂಗಲ್ ನೌ ಕಾರ್ಡ್

ಸುದ್ದಿ ಮತ್ತು ಮಾಹಿತಿಯನ್ನು ಮಾತ್ರ ನೀಡುವುದಲ್ಲದೆ, ನಿಮ್ಮ ಜಿಮೇಲ್ ಅನ್ನು ಗೂಗಲ್ ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಇನ್‌ಬಾಕ್ಸ್‌ಗೆ ಬರುವ ದೃಢೀಕರಣ ಸಂದೇಶಗಳಲ್ಲಿ ನಿಮಗೆ ಸಹಕಾರಿಯಾಗಿರುವ ಸೂಚನೆಗಳು ಮತ್ತು ಜ್ಞಾಪನೆಗಳು ಇರುವಂತೆ ನೋಡಿಕೊಳ್ಳುತ್ತದೆ. ನಿಮ್ಮ ಆದ್ಯತೆಗೆ ಅನುಗುಣವಾಗಿ ಕಾರ್ಡ್‌ಗಳನ್ನು ಕಸ್ಟಮೈಸ್ ಮಾಡುವ ಅಂಶವನ್ನು ನೀವು ಪಡೆದುಕೊಂಡಿರಬೇಕು. ಹಾಗಿದ್ದರೆ ಇವುಗಳನ್ನು ಕಸ್ಟಮೈಸ್ ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಹಂತಗಳಲ್ಲಿ ನಾವು ನೀಡಿದ್ದೇವೆ.

ಹಂತ 1:
ಗೂಗಲ್‌ ನೌ ನಲ್ಲಿ ಕಸ್ಟಮೈಸ್ ಮಾಡುವ ಕ್ರಿಯೆಯನ್ನು ಆರಂಭಿಸುವುದಕ್ಕೂ ಮುನ್ನವೇ ಕಾರ್ಡ್‌ಗಳು ಆನ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಹಂತ 2: ಗೂಗಲ್ ಅಪ್ಲಿಕೇಶನ್ ತೆರೆಯಿರಿ

ಹಂತ 3: ಎಡ ಮೇಲ್ಭಾಗದಲ್ಲಿ, ಮೂರು ಹಾರಿಜಾಂಟಲ್ ಗೆರೆಗಳನ್ನು ಸ್ಪರ್ಶಿಸಿ ಇಲ್ಲಿ ಸೆಟ್ಟಿಂಗ್ಸ್ >ಅಕೌಂಟ್ಸ್ ಮತ್ತು ಪ್ರೈವಸಿ >ಗೂಗಲ್ ಆಕ್ಟಿವಿಟಿ ಕಂಟ್ರೋಲ್ಸ್ >ವೆಬ್ ಹಾಗೂ ಅಪ್ಲಿಕೇಶನ್ ಆಕ್ಟಿವಿಟಿ ಆಪ್ಶನ್ ದೊರೆಯುತ್ತದೆ.

ಹಂತ 4: ಈಗ, "ವೆಬ್ ಹಾಗೂ ಅಪ್ಲಿಕೇಶನ್ ಚಟುವಟಿಕೆ" ಆನ್ ಮಾಡಿ.

ಸಿರಿ, ಕೋರ್ಟಾನಾಗೆ ಪ್ರತಿಸ್ಪರ್ಧಿಯಾಗಿರುವ ಗೂಗಲ್ ನೌ ಕಾರ್ಡ್

ಕಸ್ಟಮೈಸ್ ಮಾಡಲು ನೀವು ಸೈಡ್‌ಬಾರ್ ಮೆನುವನ್ನು ಆನ್ ಮಾಡಬೇಕು ಮತ್ತು "ಕಸ್ಟಮೈಸ್" ಕ್ಲಿಕ್ ಮಾಡಿ. ನಿಮಗಿಲ್ಲಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ಗಳು, ಸ್ಪೋರ್ಟ್ಸ್, ಸ್ಟಾಕ್‌ಗಳು ಹೀಗೆ ಆಪ್ಶನ್‌ಗಳು ದೊರೆಯುತ್ತವೆ. ನಿಮ್ಮ ಆಸಕ್ತಿಯನ್ನು ಸೇರಿಸಲು ನೀವು "+" ಅನ್ನು ಟ್ಯಾಪ್ ಮಾಡಿ.

ಇದನ್ನು ಇನ್ನಷ್ಟು ಸರಳವಾಗಿರಿಸಲು ಗೂಗಲ್ ನಿಮಗಿದನ್ನು ಸರ್ಚ್ ರಿಸಲ್ಟ್‌ಗಳಿಂದ ಕಸ್ಟಮೈಸ್ ಮಾಡಲು ಅನುಮತಿಸುತ್ತದೆ.

ಹಂತ 1: Google.com ಗೆ ಹೋಗಿ ಅಥವಾ ಗೂಗಲ್ ಅಪ್ಲಿಕೇಶನ್ ತೆರೆಯಿರಿ

ಹಂತ 2: ನಿಮ್ಮ ಆಸಕ್ತಿಯನ್ನು ಹುಡುಕಿ

ಹಂತ 3: ನಿಮಗೆ ಮೇಲ್ಭಾಗದಲ್ಲಿ ಕಾರ್ಡ್‌ ಕಂಡುಬಂದಲ್ಲಿ ಇಲ್ಲಿ ಸ್ಪರ್ಶಿಸಿ.

ಬಳಸಲು ಸುಲಭ ನೆನಪಿನಲ್ಲಿಟ್ಟುಕೊಳ್ಳಲು ಸರಳ - ಶಾರ್ಟ್‌ಕಟ್ ಕೀಗಳುಬಳಸಲು ಸುಲಭ ನೆನಪಿನಲ್ಲಿಟ್ಟುಕೊಳ್ಳಲು ಸರಳ - ಶಾರ್ಟ್‌ಕಟ್ ಕೀಗಳು

Best Mobiles in India

English summary
Started as a competition to Siri and Cortana, Google Now is much more than that, where it offers cards with information that matters the most to you..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X