ಐಫೋನ್ ನ ಬ್ಯಾಟರಿ ಬದಲಿಸುವುದು ಎಷ್ಟು ಕಷ್ಟ?

By Tejaswini P G

  ಆಪಲ್ ತನ್ನ ಐಫೋನ್ಗಳು ಹಳೆಯ ಬ್ಯಾಟರಿಯೊಂದಿಗೆ ದೀರ್ಘಕಾಲ ಓಡುತ್ತಿದ್ದರೆ ಅದರ ವೇಗ ಕಡಿಮೆಯಾಗುತ್ತದೆ ಎಂದು ಘೋಷಿಸಿದ ಹಿನ್ನಲೆಯಲ್ಲಿ ಐಫೋನ್ ಬಳಕೆದಾರರು ತಮ್ಮ ಬ್ಯಾಟರಿಯನ್ನು ಬದಲಾಯಿಸಿಕೊಳ್ಳಲು ದೇಶದಲ್ಲೆಡೆ ಇರುವ ಆಪಲ್ ಸ್ಟೋರ್ಗಳಿಗೆ ಮುಗಿಬೀಳುತ್ತಿದ್ದಾರೆ. ಇದಕ್ಕಾಗಿ ನೀವು ಬಹಳಷ್ಟು ಕಾಯಬೇಕಾಗಿರುವುದಂತೂ ಖಂಡಿತ. ನೀವು ಈ ಸರದಿಯಲ್ಲಿ ಕಾಯುವುದನ್ನು ತಪ್ಪಿಸಿಕೊಳ್ಳಬೇಕೆಂದಿದ್ದರೆ ನೀವು ನೀವಾಗಿಯೇ ನಿಮ್ಮ ಐಫೋನ್ ನ ಬ್ಯಾಟರಿಯನ್ನು ಬದಲಾಯಿಸಿಕೊಳ್ಳಬಹುದು.

  ಐಫೋನ್ ನ ಬ್ಯಾಟರಿ ಬದಲಿಸುವುದು ಎಷ್ಟು ಕಷ್ಟ?

  ನೀವು ಉತ್ತಮ ಏಕಾಗ್ರತೆ ಮತ್ತು ತಾಳ್ಮೆ ಹೊಂದಿದ್ದರೆ ಐಪೋನ್ ನ ಬ್ಯಾಟರಿಯನ್ನು ಬದಲಿಸುವುದು ಅಷ್ಟೇನೂ ಕಷ್ಟದ ವಿಷಯವಲ್ಲ. ನೀವು ಹಳೆಯ ಬ್ಯಾಟರಿಯ ಬದಲಾಯಿಸಿ ಹೊಸ ಬ್ಯಾಟರಿಯನ್ನೇ ಇರಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹೊಸ ಬ್ಯಾಟರಿ ಮತ್ತು ಅಗತ್ಯ ಸಾಧನಗಳನ್ನು ಪಡೆಯಿರಿ

  ನಿಮ್ಮ ಐಫೋನ್ ನ ಬ್ಯಾಟರಿಯನ್ನು ಬದಲಾಯಿಸಲು ನೀವು ಮೊದಲಿಗೆ ಹೊಸ ಬ್ಯಾಟರಿ ಮತ್ತು ಅಗತ್ಯ ಸಾಧನಗಳನ್ನು ಹೊಂದಿರಬೇಕು. ನೀವು ಸಂಪೂರ್ಣ ಐಫೋನ್ ಬ್ಯಾಟರಿ ರಿಪ್ಲೇಸ್ಮೆಂಟ್ ಕಿಟ್ ಅನ್ನೇ ಖರೀದಿಸಬಹುದು. ಈ ರಿಪ್ಲೇಸ್ಮೆಂಟ್ ಕಿಟ್ ನಲ್ಲಿ ಹೊಸ ಬ್ಯಾಟರಿ ಮತ್ತು ಅಗತ್ಯ ಸಾಧನಗಳೆರಡೂ ಇರುತ್ತದೆ. ಐಫಿಕ್ಸಿಟ್ ನ ರಿಪ್ಲೇಸ್ಮೆಂಟ್ ಕಿಟ್ ನ ವೈಶಿಷ್ಟ್ಯವೇನೆಂದರೆ ಐಫೋನ್ ನ ಬ್ಯಾಟರಿ ಬದಲಿಸುವುದು ಹೇಗೆಂದು ತಿಳಿಸಲು ಕೈಪಿಡಿಯೊಂದನ್ನೂ ಈ ಕಿಟ್ ಒಳಗೊಂಡಿದೆ. ನೀವು ಇದಕ್ಕೆ ಹೊಸಬರಾದರೂ ಬ್ಯಾಟರಿ ಬದಲಾಯಿಸುವ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಲು ಈ ಕೈಪಿಡಿ ಖಂಡಿತ ಸಹಾಯಮಾಡುತ್ತದೆ.

  ಬ್ಯಾಟರಿ ಬದಲಾಯಿಸುವುದು ತುಂಬ ಸರಳವಾದ ಕೆಲಸವಲ್ಲ...

  ನಿಮ್ಮ ಐಫೋನ್ ನಲ್ಲಿರುವ ಸರ್ಕ್ಯೂಟ್ ಗಳು ತುಂಬಾ ಕ್ಲಿಷ್ಟಕರವಾಗಿದೆ. ಅದನ್ನು ದುರಸ್ತಿ ಮಾಡುವುದು ಮಕ್ಕಳಾಟವಲ್ಲ, ಆದರೆ ಈ ಪ್ರಕ್ರಿಯೆಯಲ್ಲಿ ನೀವು ಅದನ್ನೇನೂ ಮುಟ್ಟಬೇಕಾಗಿಲ್ಲ. ನೀವು ಕೇವಲ ಬ್ಯಾಟರಿ ಬದಲಾಯಿಸುವತ್ತ ಗಮನ ಹರಿಸಬೇಕಾಗಿದ್ದು, ಈ ಪೂರ್ತಿ ಪ್ರಕ್ರಿಯೆಯಲ್ಲಿ ನೀವು ಕೇವಲ ಸ್ಕ್ರೂ ಮತ್ತು ಕನೆಕ್ಟರ್ಗಳ ಜೊತೆ ಕೆಲಸಮಾಡಬೇಕಾಗುತ್ತದೆ. ನಿಮ್ಮ ಸಾಧನದ ಬ್ಯಾಟರಿಯನ್ನು 3M ಕಮಾಂಡ್ ಸ್ಟ್ರಿಪ್ ಬಳಸಿ ಜಾಗ್ರತೆಯಿಂದ ಇರಿಸಲಾಗಿದೆ. ಅದನ್ನು ತೆಗೆದ ನಂತರ ಸ್ಕ್ರೂ ಮತ್ತು ಕನೆಕ್ಟರ್ಗಳನ್ನು ತೆಗೆಯಬೇಕಾಗುತ್ತದೆ.

  ಜಿಯೋ ಫೋನಿನಲ್ಲಿ ಫೇಸ್‌ಬುಕ್ ಇನ್ ಸ್ಟಾಲ್ ಮಾಡಿಕೊಳ್ಳುವುದು ಹೇಗೆ..?

  ಈ ಪ್ರಕ್ರಿಯೆಯ ಕೆಲವು ಹಂತಗಳು ಕ್ಲಿಷ್ಟಕರವಾಗಿದೆ..

  ಸ್ಕ್ರೂ ಮತ್ತು ಕನೆಕ್ಟರ್ಗಳ ಜೊತೆ ಕೆಲಸಮಾಡುವುದು ಸರಳವಾದರೂ ಅಂಟುಪಟ್ಟಿಯನ್ನು ಸಂಭಾಳಿಸುವುದು ಸ್ವಲ್ಪ ಕಷ್ಟದ ಕೆಲಸ. ನೀವು ಐಫೋನ್ 7 ಅಥವಾ ಅದಕ್ಕಿಂತ ಹೊಸತಾದ ಮಾಡೆಲ್ಗಳನ್ನು ಹೊಂದಿದ್ದರೆ ನಿಮ್ಮ ಐಫೋನಿನ ಅಂಚನ್ನು ಸ್ವಲ್ಪ ಬಿಸಿ ಮಾಡಿ. ಇದರಿಂದ ಐಫೋನ್ ನ ಸ್ಕ್ರೀನ್ ಅನ್ನು ಅದರ ಇತರ ಭಾಗಗಳೊಂದಿಗೆ ಜೋಡಿಸುವ ಅಂಟುಪಟ್ಟಿ ಸ್ವಲ್ಪ ಮೆದುವಾಗುತ್ತದೆ. ಇದರಿಂದ ಭಯಪಡಬೇಕಾಗಿಲ್ಲ. ಐಫಿಕ್ಸಿಟ್ ನ ಕೈಪಿಡಿ ಬ್ಯಾಟರಿ ಬದಲಾಯಿಸಲು ನಿಮಗೆ ಎಲ್ಲಾ ರೀತಿ ಸಹಾಯಮಾಡುತ್ತದೆ.

  ಐಫೋನ್ ನ ಬ್ಯಾಟರಿ ಬದಲಾಯಿಸುವುದು ಹೇಗೆ?

  ಐಫೋನ್ ನ ಬ್ಯಾಟರಿ ಬದಲಾಯಿಸುವಾಗ ಯಾವುದೇ ರೀತಿ ಅವಸರ ಬೇಡ... ನಿಮಗೆ ಬೇಕಾದಷ್ಟು ಸಮಯವನ್ನು ಬಳಸಿಕೊಂಡು ಸಾಕಷ್ಟು ಸಂಶೋಧನೆ ನಡೆಸಿ. ಬ್ಯಾಟರಿಯನ್ನು ಬದಲಾಯಿಸುವುದು ಖಂಡಿತವಾಗಿಯೂ ಸುಲಭದ ಮಾತಲ್ಲ ಆದರೆ ಅದು ಅಸಾಧ್ಯವದುದೇನೂ ಅಲ್ಲ. ಮೊದಲಿಗೆ ಐಫಿಕ್ಸಿಟ್ ನ ವೆಬ್ಸೈಟ್ ಗೆ ಭೇಟಿ ಮಾಡಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  After Apple has announced that the iPhones will gradually slow down if it keeps on operating on old batteries, the iPhone users have crowded the Apple stores around the country to get the batteries of their phone replaced.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more