ಕೊರ್ಟಾನಾ ವನ್ನು ನಿಷ್ಕ್ರಿಯಗೊಳಿಸುವುದು ಅಥವಾ ಮಿತಿಗೊಳಿಸುವುದು ಹೇಗೆ?

By Tejaswini P G

  ಕೊರ್ಟಾನಾ ಮೊದಲ ಬಾರಿಗೆ 2014 ರಲ್ಲಿ ವಿಂಡೋಸ್ ಫೋನ್ಗಳಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಒಂದು ವರ್ಷದ ನಂತರ ಅದು ವಿಂಡೋಸ್ 10 ಗೆ ಪ್ರವೇಶ ಪಡೆಯಿತು. ವಿಂಡೋಸ್ ನ ಈ ವರ್ಚ್ಯುವಲ್ ಪರ್ಸನಲ್ ಅಸಿಸ್ಟೆಂಟ್ ವಾಯ್ಸ್ ಅಸಿಸ್ಟೆನ್ಸ್ ನೀಡುವುದರ ಜೊತೆಗೆ ಕ್ಯಾಲೆಂಡರ್ ನಲ್ಲಿ ಗುರುತಿಸಿರುವ ಕಾರ್ಯಕ್ರಮಗಳನ್ನು ನೆನಪಿಸುವುದು, ನಿಮ್ಮ ಸಾಧನದಲ್ಲಿ ನೀವು ಹುಡುಕುತ್ತಿರುವ ನಿರ್ದಿಷ್ಟ ಫೈಲ್ ಗಳನ್ನು ಹುಡುಕಿಕೊಡುವುದು ಮೊದಲಾದ ಕಾರ್ಯಗಳನ್ನು ನಿರ್ವಹಿಸುತ್ತದೆ.

  ಕೊರ್ಟಾನಾ ವನ್ನು ನಿಷ್ಕ್ರಿಯಗೊಳಿಸುವುದು ಅಥವಾ ಮಿತಿಗೊಳಿಸುವುದು ಹೇಗೆ?

  ಹೀಗೆ ಕೊರ್ಟಾನಾ ದ ಸಾಮರ್ಥ್ಯ ವೈವಿಧ್ಯಮಯವಾಗಿದೆ. ಆದರೆ ಇದರ ಒಂದು ತೊಂದರೆಯೆಂದರೆ ಈ ರೀತಿಯ ತಡೆರಹಿತ ಸೇವೆ ನೀಡಲು ಮೈಕ್ರೋಸಾಫ್ಟ್ ನಮ್ಮ ಮಾಹಿತಿ ಮತ್ತು ಆಯ್ಕೆಗಳನ್ನು ಸಂಗ್ರಹಿಸುತ್ತದೆ.

  ನಮ್ಮ ಪ್ರಯಾಣದ ಮಾಹಿತಿ, ವೈಯುಕ್ತಿಕ ಮಾಹಿತಿ ಇತ್ಯಾದಿಗಳನ್ನು ಇದು ಸಂಗ್ರಹಿಸುತ್ತದೆ. ಇದನ್ನು ತಡೆಗಟ್ಟುವ ಸಲುವಾಗಿ ನೀವು ಕೊರ್ಟಾನಾ ಅನ್ನು ನಿಷ್ಕ್ರಿಯಗೊಳಿಸಲು ಅಥವಾ ಅದರ ಕಾರ್ಯಕ್ಷಮತೆಯನ್ನು ಮಿತಿಗೊಳಿಸಲು ಬಯಸಿದರೆ ಈ ಕೆಳಗಿನ ಸೂಚನೆಗಳನ್ನು ಪಾಲಿಸಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಕೊರ್ಟಾನಾ ವನ್ನು ನಿಷ್ಕ್ರಿಯಗೊಳಿಸುವುದು

  ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿರುವ ಆಯ್ಕೆಗಳತ್ತ ದೃಷ್ಟಿಹಾಯಿಸಿದರೆ ಆಯ್ಕೆಗಳ ಪಟ್ಟಿಯಲ್ಲಿ ಮೊದಲಿಗೆ ಸರಳವಾದ ಆನ್/ಆಫ್ ಸ್ಲೈಡ್ ಬಾರ್ ಒಂದು ನಿಮಗೆ ಕಾಣ ಸಿಗುತ್ತದೆ. ಇದನ್ನು ಆಫ್ ಗೆ ಸೆಟ್ ಮಾಡುವ ಮೂಲಕ ಕೊರ್ಟಾನಾ ವನ್ನು ನಿಷ್ಕ್ರಿಯಗೊಳಿಸಬಹುದು.

  ಆದರೆ ಹೀಗೆ ಮಾಡುವುದರಿಂದ ಕೊರ್ಟಾನಾ ಈಗಾಗಲೇ ಸಂಗ್ರಹಿಸಿರುವ ನಿಮ್ಮ ಮಾಹಿತಿ ಡಿಲೀಟ್ ಆಗುವುದಿಲ್ಲ. ನೀವು ಮತ್ತೆ ಕೊರ್ಟಾನಾ ಅನ್ನು ಆನ್ ಮಾಡುವಾಗ ಕೊರ್ಟಾನಾ ಮತ್ತೆ ನಿಮ್ಮ ಆಯ್ಕೆ ಮತ್ತು ಮಾಹಿತಿಯನ್ನು ನೆನಪಿನಲ್ಲಿರಿಸಿಕೊಂಡು ಅದಕ್ಕೆ ತಕ್ಕುದಾಗಿ ಪ್ರತಿಕ್ರಿಯೆ ನೀಡುತ್ತದೆ. ಕೊರ್ಟಾನಾ ಅನ್ನು ನಿಷ್ಕ್ರಿಯ ಗೊಳಿಸುವುದುರಿಂದ ನಿಮ್ಮ ಸಾಧನದ ಸರ್ಚ್ ಆಯ್ಕೆ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ನೀವು ಹಿಂದಿನಂತೆಯೇ ನಿಮಗೆ ಬೇಕಾದುದನ್ನು ಹುಡುಕಬಹುದು ಮತ್ತು ಇದರಿಂದ ನಿಮ್ಮ ಡೇಟಾದ ಸುರಕ್ಷತೆಯೂ ಸುಧಾರಿಸುತ್ತದೆ.

  ಕೊರ್ಟಾನಾ ನಿಮ್ಮ ಮಾಹಿತಿಯನ್ನು ಸಂಗ್ರಹಿಸುವುದು ನಿಮಗೆ ಇಷ್ಟವಿಲ್ಲದಿದ್ದರೆ, "ವಾಟ್ ಕೊರ್ಟಾನಾ ನೋಸ್ ಅಬೌಟ್ ಮಿ" ಎಂಬುದರ ಕೆಳಗಿರುವ ಲಿಂಕ್ ಒತ್ತಿ. ಅದು ನಿಮ್ಮನ್ನು ವೆಬ್ ಪೇಜ್ ಒಂದಕ್ಕೆ ಕರೆದೊಯ್ಯುತ್ತದೆ. ಇಲ್ಲಿ ನೀವು ಕೊರ್ಟಾನಾ ನಿಮ್ಮ ಬಗ್ಗೆ ಸಂಗ್ರಹಿಸಿರುವ ಮಾಹಿತಿಯನ್ನು ಡಿಲೀಟ್ ಮಾಡಬಹುದು.

  "ಹೇ ಕೊರ್ಟಾನಾ" ಅನ್ನು ನಿಷ್ಕ್ರಿಯಗೊಳಿಸುವುದು

  ವಿಂಡೋಸ್ 10 ಅನ್ನು ಮೊದಲ ಬಾರಿಗೆ ಬಳಸಿದಾಗ ಪೂರ್ವನಿಯೋಜಿತವಾಗಿ ಕೊರ್ಟಾನಾ "ಹೇ ಕೊರ್ಟಾನಾ" ಗೆ ಪ್ರತಿಕ್ರಯಿಸುತ್ತದೆ. ನೀವು ಕೊರ್ಟಾನಾ ವನ್ನು ಭಾಗಶ: ನಿಷ್ಕ್ರಿಯಗೊಳಿಸುವುದರ ಮೂಲಕ ಇದನ್ನು ನಿಷ್ಕ್ರಿಯಗೊಳಿಸಬಹುದು. ಆದರೆ ವಾಯ್ಸ್ ಅಸಿಸ್ಟೆಂಟ್ ಇನ್ನೂ ಸಕ್ರಿಯವಾಗಿರುತ್ತದೆ . ನಿಮ್ಮ ಸಾಧನದಲ್ಲಿ ಹಾಗೂ ಇಂಟರ್ನೆಟ್ ನಲ್ಲಿ ನಿಮಗೆ ಬೇಕಾದುದನ್ನು ಹುಡುಕಲು ಸಹಾಯಮಾಡುತ್ತದೆ.

  ನಿಮ್ಮ ಸಾಧನದಲ್ಲಿ ವಿಂಡೋಸ್ 10 "ಹೇ ಕೊರ್ಟಾನಾ" ಗೆ ಸದಾ ಪ್ರತಿಕ್ರಿಯೆ ನೀಡುತ್ತಿದ್ದರೆ, ನಿಮ್ಮ ಲ್ಯಾಪ್ಟಾಪ್ ನ ಬ್ಯಾಟರಿ ತುಂಬಾ ಬಳಕೆಯಾಗುತ್ತದೆ. ಅಲ್ಲದೆ ನೀವು ಮೈಕ್ ಇಲ್ಲದ ಲ್ಯಾಪ್ಟಾಪ್ ಬಳಸುತ್ತಿದ್ದರೆ ಈ ಫೀಚರ್ ನಿಷ್ಪ್ರಯೋಜಕವಾಗಿದೆ.

  ಕೊರ್ಟಾನಾ ದ ಕಾರ್ಯಕ್ಷಮತೆಯನ್ನು ಮಿತಗೊಳಿಸುವುದು

  ವಿಂಡೋಸ್ 10 ನ ಅನುಭವಕ್ಕೆ ಧಕ್ಕೆ ಬಾರದಂತೆ ಕೊರ್ಟಾನಾ ದ ಕಾರ್ಯಕ್ಷಮತೆಯನ್ನು ಮಿತಗೊಳಿಸಬೇಕಾದರ ಕೊರ್ಟಾನಾ ಹೋಮ್ ಗೆ ಬೇಟಿ ನೀಡಿ ಕೊರ್ಟಾನಾ ಸೆಟ್ಟಿಂಗ್ಸ್ ತೆರೆಯಿರಿ. ಕೊರ್ಟಾನಾ ನಿಮ್ಮ ಮಾಹಿತಿಯನ್ನು ಟ್ರ್ಯಾಕ್ ಮಾಡುವುದನ್ನು ತಡೆಗಟ್ಟಲು ಆ ಫೀಚರ್ ಅನ್ನು ನಿಷ್ಕ್ರಿಯಗೊಳಿಸಬಹುದು. ಅಂತೆಯೇ ಟಾಸ್ಕ್-ಬಾರ್ ಪಾಪ್-ಅಪ್ ಗಳು ಮೊದಲಾದ ಫೀಚರ್ಗಳನ್ನು ನಿಷ್ಕ್ರಿಯಗೊಳಿಸಬಹುದು.

  ಕೊರ್ಟಾನಾ ನಿಮ್ಮ ಮಾಹಿತಿಯನ್ನು ಹೇಗೆ ಸಂಸ್ಕರಿಸುತ್ತದೆ ಎಂದು ತಿಳಿಯಲು ಕೊರ್ಟಾನಾ ದ "ಪರ್ಮಿಶನ್ & ಹಿಸ್ಟರಿ" ವಿಭಾಗಕ್ಕೆ ಭೇಟಿ ನೀಡಿ. ಇಲ್ಲಿ ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸಬಹುದು

  1.ಕೊರ್ಟಾನಾ ಕ್ಲೌಡ್ ಡೇಟಾ ಅನ್ನು ಹೇಗೆ ಸಂಸ್ಕರಿಸುತ್ತದೆ ಎನ್ನುವುದನ್ನು ಬದಲಾಯಿಸಿ.

  2.ಕೊರ್ಟಾನಾ ಈ ಹಿಂದೆ ಏನೆಲ್ಲಾ ಮಾಡಿದೆ ಎಂಬುದನ್ನು ನೋಡಿ

  3.ನಿರ್ದಿಷ್ಟ ವಿಂಡೋಸ್ ಸಾಧನಕ್ಕೆ ಮಿತಿಗಳನ್ನು ಸೆಟ್ ಮಾಡಿ

  4.ಇತರ ಮೈಕ್ರೋಸಾಫ್ಟ್ ಸೇವೆಗಳು ಅಥವಾ ಆಪ್ ಮೂಲಕ ಕೊರ್ಟಾನಾ ಎಷ್ಟು ಮಾಹಿತಿ ಸಂಗ್ರಹಿಸುತ್ತದೆ ಎನ್ನುವುದನ್ನು ಮಿತಿಗೊಳಿಸಿ

  ಮೊಬೈಲ್ ಮೂಲಕವೇ ವಿಡಿಯೊ ವ್ಲೋಗಿಂಗ್ ಮಾಡಿ ಹಣಗಳಿಸಿ!!

  ಕೊರ್ಟಾನಾ ವನ್ನು ಮತ್ತೆ ಸಕ್ರಿಯಗೊಳಿಸುವುದು ಹೇಗೆ?

  1.ಕೊರ್ಟಾನಾ ಹೋಮ್ ಗೆ ಭೇಟಿ ನೀಡಿ

  2.ನೋಟ್ಬುಕ್ ಗೆ ಹೋಗಿ

  3. ಸೆಟ್ಟಿಂಗ್ಸ್ ಅನ್ನು ಆಯ್ಕೆ ಮಾಡಿ

  4. 'ಆನ್' ಆಯ್ಕೆ ಮಾಡಿ

  ಒಂದು ವೇಳೆ ಕೊರ್ಟಾನಾ ಹೈಡ್ ಆಗಿದ್ದರೆ, ಟಾಸ್ಕ್ ಬಾರ್ ಮೇಲೆ ರೈಟ್ ಕ್ಲಿಕ್ ಮಾಡುವ ಮೂಲಕ ಕೊರ್ಟಾನಾ ಮತ್ತು ಸರ್ಚ್ ಬಾಕ್ಸ್ ಅನ್ನು ವ್ಯೂ ಮಾಡಲು ನೀವು ಆಯ್ಕೆ ಮಾಡಿದ್ದೀರಾ ಎಂದು ತಿಳಿಯಬಹುದು.

  ಕೊರ್ಟಾನಾದ ನೋಟ್ಬುಕ್

  ಕೊರ್ಟಾನಾ ನಿಮಗೆ ವೈಯುಕ್ತಿಕ ಅನುಭವವನ್ನು ನೀಡಲು ವಿಫಲವಾಗಿದೆಯೆಂದು ಅನಿಸಿದರೆ ನೋಟ್ಬುಕ್ ನಲ್ಲಿ ನಿಮ್ಮ ಅಭಿರುಚಿಗೆ ಅನುಸಾರ ಹೆಚ್ಚಿನ ಮಾಹಿತಿ ನೀಡಿ. ಈ ಮೂಲಕ ಸಂಗೀತ, ಪ್ರಯಾಣ, ಅಹಾರ ಇತ್ಯಾದಿ ವಿಷಯಗಳಲ್ಲಿ ನಿಮ್ಮ ಅಭಿರುಚಿಗೆ ಅನುಸಾರವಾಗಿ ವಿಂಡೋಸ್ 10 ಮಾಹಿತಿ ನೀಡುತ್ತದೆ.

  ನೋಟ್ಬುಕ್ ಒಂದು ಕೇಂದ್ರೀಕೃತ ಸ್ಥಳವಾಗಿದ್ದು, ಕೊರ್ಟಾನಾ ಅದರಿಂದ ನಿಮ್ಮ ಮಾಹಿತಿಯನ್ನು ಪಡೆದು ನಿಮ್ಮ ಅಭಿರುಚಿಗೆ ಅನುಗುಣವಾಗಿ ಉತ್ತಮ ಅನುಭವವನ್ನು ನೀಡುತ್ತದೆ. ಮೈಕ್ರೋಸಾಫ್ಟ್ ನಿಮ್ಮ ಮಾಹಿತಿಯನ್ನು ಸಂಗ್ರಹಿಸುವುದು ನಿಮಗೆ ಇಷ್ಟವಿಲ್ಲದ ಪಕ್ಷದಲ್ಲಿ ನೀವು ಯಾವಾಗ ಬೇಕಾದರೂ ಕೊರ್ಟಾನಾ ದಿಂದ ನಿಮ್ಮ ಮಾಹಿತಿಯನ್ನು ಡಿಲೀಟ್ ಮಾಡಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Cortana is voice assistant that debuted on Windows Phone-based smartphones in 2014. A year later, the Cortana voice assistant made its way to the Windows 10 devices. It can perform several functionalities but you can disable or limit its ability from the steps detailed in this content to get the desired user experience.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more