ಇನ್‌ಸ್ಟಾಗ್ರಮ್ ಫೋಟೋಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ..?

By: Tejaswini P G

ಇನ್ಸ್ಟಾಗ್ರಾಮ್ ಒಂದು ಪ್ರಸಿದ್ಧ ಫೋಟೋ ಶೇರಿಂಗ್ ಆಪ್ ಆಗಿದ್ದು, ಪ್ರತಿ ದಿನ ಲಕ್ಷಾಂತರ ಫೋಟೋಗಳು ಈ ಮಾಧ್ಯಮದಲ್ಲಿ ಶೇರ್ ಮಾಡಲ್ಪಡುತ್ತದೆ. ಸೆಪ್ಟೆಂಬರ್ 2017ರಲ್ಲಿ ಈ ಆಪ್ 800 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಒಕ್ಟೋಬರ್ 2015 ರವರೆಗೆ 40 ಬಿಲಿಯನ್ ಫೋಟೋಗಳು ಇನ್ಸ್ಟಾಗ್ರಾಮ್ಗೆ ಅಪ್ಲೋಡ್ ಮಾಡಲ್ಪಟ್ಟಿದೆ. ಇನ್ನು ಏಪ್ರಿಲ್ 2017 ರಲ್ಲಿ ಇನ್ಸ್ಟಾಗ್ರಾಮ್ ಡೈರೆಕ್ಟ್ 375 ಮಿಲಿಯನ್ ಆಕ್ಟಿವ್ ಬಳಕೆದಾರರನ್ನು ಹೊಂದಿದ್ದರೆ, ಜೂನ್ 2017ರಲ್ಲಿ ಇನ್ಸ್ಟಾಗ್ರಾಮ್ ಸ್ಟೋರೀಸ್ 250 ಮಿಲಿಯನ್ ಗೂ ಅಧಿಕ ಆಕ್ಟಿವ್ ಬಳಕೆದಾರರನ್ನು ಹೊಂದಿತ್ತು.

ಇನ್‌ಸ್ಟಾಗ್ರಮ್ ಫೋಟೋಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ..?

ಈ ಫೋಟೋ ಶೇರಿಂಗ್ ಆಪ್ ನಿಮಗೆ ಫೋಟೋ ಲೈಕ್ ಮಾಡುವ ಅಥವಾ ಮತ್ತೊಮ್ಮೆ ಭೇಟಿ ಮಾಡಲು ಅನುವಾಗುವಂತೆ ಬುಕ್ಮಾರ್ಕ್ ಮಾಡುವ ಆಯ್ಕೆಯನ್ನು ನೀಡುತ್ತದೆ. ಕೆಲವೊಮ್ಮೆ ನಿಮಗೆ ಕೆಲವು ಫೋಟೋಗಳು ಎಷ್ಟು ಇಷ್ಟವಾಗಬಹುದೆಂದರೆ ನೀವು ಅದನ್ನು ನಿಮ್ಮ ಮೊಬೈಲ್ ನ ವಾಲ್ ಪೇಪರ್ ಆಗಿ ಇರಿಸಲು ಬಯಸಬಹುದು. ಇಂತಹ ಸಂದರ್ಭಗಳಲ್ಲಿ ನೀವು ಆ ಫೋಟೋ ಅನು ಡೌನ್ಲೋಡ್ ಮಾಡ ಬಯಸುವಿರಿ.

ಆದರೆ ಡೌನ್ಲೋಡ್ ಬಟನ್ ಇರದ ಕಾರಣ ಫೋಟೋ ಅನ್ನು ಡೌನ್ಲೋಡ್ ಮಾಡಲಾಗದೆಂದು ನೀವು ಭಾವಿಸಿದರೆ ಅದು ಖಂಡಿತ ತಪ್ಪು. ಈ ಲೇಖನದಲ್ಲಿ ನೀವು ಇನ್ಸ್ಟಾಗ್ರಾಮ್ ನಿಂದ ಫುಲ್ ರೆಸೊಲ್ಯೂಶನ್ ಫೋಟೋ ಡೌನ್ಲೋಡ್ ಮಾಡಬೇಕಾದರೆ ಅನುಸರಿಸಬೇಕಾದ ವಿಧಾನವನ್ನು ನಿಮಗಾಗಿ ಸಂಪಾದಿಸಿದ್ದೇವೆ.

ಹಂತ 1: ಮೊದಲಿಗೆ ಗೂಗಲ್ ಪ್ಲೇಸ್ಟೋರ್ ನಿಂದ 'InstaPP' ಎಂಬ ಆಪ್ ಅನ್ನು ನಿಮ್ಮ ಆಂಡ್ರಾಯ್ಡ ಫೋನ್ ನಲ್ಲಿ ಇನ್ಸ್ಟಾಲ್ ಮಾಡಿ

ಹಂತ 2: ಈ ಆಪ್ ಅನ್ನು ತೆರೆದಾಗ, ನಿಮ್ಮ ಪರದೆಯ ಮೇಲ್ಭಾಗದಲ್ಲಿ ಸರ್ಚ್ ಬಾರ್ ಒಂದು ನಿಮಗೆ ಕಾಣಸಿಗುತ್ತದೆ.

ಹಂತ 3: ಈ ಸರ್ಚ್ ಬಾರ್ ನಲ್ಲಿ ನಿಮಗಿಷ್ಟವಾದ ಫೋಟೋ ಹೊಂದಿರುವ ಪ್ರೊಫೈಲ್ ನ ಹೆಸರನ್ನು ನಮೂದಿಸಿ

ಹಂತ 4:
ಪ್ರೊಫೈಲ್ ಪಿಕ್ಚರ್ ಸಂಪೂರ್ಣವಾಗಿ ಲೋಡ್ ಆಗುವ ತನಕ ಕಾದು 'ಡೌನ್ಲೋಡ್ ಪಿಕ್ಚರ್' ಮೇಲೆ ಕ್ಲಿಕ್ ಮಾಡಿ

ನೀವು ಇನ್ಸ್ಟಾಗ್ರಾಮ್ ನಿಂದ ಫೋಟೋ ಅನ್ನು ನಿಮ್ಮ ವಿಂಡೋಸ್ ಅಥವಾ ಮ್ಯಾಕ್ ಲ್ಯಾಪ್ಟಾಪ್ ಗೆ ಡೌನ್ಲೋಡ್ ಮಾಡಬಯಸಿದರೆ ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ

ಹಂತ 1: ನಿಮ್ಮ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ನಲ್ಲಿ ಇನ್ಸ್ಟಾಗ್ರಾಮ್ ತೆರೆಯಿರಿ

ಹಂತ 2: ಈಗ ನೀವು ಸೇವ್/ಡೌನ್ಲೋಡ್ ಮಾಡಬಯಸುವ ಫೋಟೋ ಅನ್ನು ಆಯ್ಕೆ ಮಾಡಿ ಅದನ್ನು ಕ್ಲಿಕ್ ಮಾಡಿ

ಹಂತ 3:
ಎಡ್ರೆಸ್ ಬಾರ್ ನಿಂದ ಆ ಫೋಟೋ ವಿನ URL ಅನ್ನು ಕಾಪಿ ಮಾಡಿ

ಹಂತ 4: ಈಗ ಡೌನ್ಲೋಡ್ಗ್ರಾಮ್ ನ ವೆಬ್ಸೈಟ್ ಗೆ (https://downloadgram.com/) ಭೇಟಿ ನೀಡಿ

ಹಂತ 5:
ನೀವು ಕಾಪಿ ಮಾಡಿಕೊಂಡಿರುವ URL ಅನ್ನು ಇಲ್ಲಿ ಪೇಸ್ಟ್ ಮಾಡಿ

ಹಂತ 6: ಡೌನ್ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ನೆಚ್ಚಿನ ಫೋಟೋ ಅನ್ನು ನಿಮ್ಮ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ನಲ್ಲಿ ಸೇವ್ ಮಾಡಿ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?

ಡಿಸ್‌ಪ್ಲೇಯಲ್ಲಿ ತೂತು ಮಾಡಿದ ಸ್ಯಾಮ್‌ಸಂಗ್: ಆಪಲ್ ಸೋಲಿಸಲು ಹೀಗೆ ಮಾಡಿದ್ದ.?

Read more about:
English summary
Instagram is one of the most popular medium, where millions of photos are shared each and every. In this article, we have compiled a list of step that guides you to download the full resolution photo from Instagram.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot