ಐಫೋನ್, ಆಂಡ್ರಾಯ್ಡ್‌, ಕಂಪ್ಯೂಟರ್‌ಗಳಲ್ಲಿ ವಾಟ್ಸ್‌ಆಪ್ ಇನ್ಸ್ಟಾಲ್ ಮಾಡುವುದು ಹೇಗೆ ಗೊತ್ತಾ!?

By GizBot Bureau
|

ವಾಟ್ಸ್ ಆಪ್ ಸ್ವಲ್ಪವೂ ಹಣದ ಖರ್ಚಿಲ್ಲದೇ ಮೆಸೇಜ್ ಮಾಡಬಹುದಾದ ಒಂದು ಅಧ್ಬುತ ಆಪ್, ಅದೇ ಕಾರಣಕ್ಕೆ ಮಿಲಿಯನ್ ಗಟ್ಟಲೆ ಬಳಕೆದಾರರು ಇದರ ಮೊರೆ ಹೋಗಿದ್ದಾರೆ ಮತ್ತು ಮೆಸೇಜ್ ಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ. ಅದೇ ಕಾರಣಕ್ಕೆ ಇದು ಅತ್ಯಂತ ಶ್ರೀಮಂತ ಕಮ್ಯುನಿಕೇಷನ್ ಸರ್ವೀಸ್ ಎಂದು ಅನ್ನಿಸಿಕೊಂಡಿದೆ.

ಐಫೋನ್, ಕಂಪ್ಯೂಟರ್‌ಗಳಲ್ಲಿ ವಾಟ್ಸ್‌ಆಪ್ ಇನ್ಸ್ಟಾಲ್ ಮಾಡುವುದು ಹೇಗೆ ಗೊತ್ತಾ!?

ಟೆಕ್ಸ್ಟ್ ಮೆಸೇಜ್ ಗಳು, ಚಿತ್ರಗಳು, ವೀಡಿಯೋಗಳು, ವಾಯ್ಸ್ ನೋಟ್ ಗಳು, ಮತ್ತು ಡಾಕ್ಯುಮೆಂಟ್ ಗಳನ್ನು ಬಹಳ ಸುಲಭದಲ್ಲಿ ಕಳುಹಿಸಬಹುದಾದ ಒಂದು ಅಧ್ಬುತ ಆಪ್ ಇದು. ಅಷ್ಟೇ ಅಲ್ಲದೆ VoIP-based ಆಡಿಯೋ ಮತ್ತು ವೀಡಿಯೋ ಕಾಲ್ ಗಳನ್ನು ಕೂಡ ಸುಲಭದಲ್ಲಿ ಯಾವುದೇ ಹೆಚ್ಚಿನ ಹಣ ಪಾವತಿಸದೇ ಇದರಲ್ಲಿ ಮಾಡಬಹುದು.

ಇತ್ತೀಚೆಗಷ್ಟೇ ವಾಟ್ಸ್ ಆಪ್ ಹಲವು ವಿಶೇಷ ವೈಶಿಷ್ಟ್ಯಗಳನ್ನು ಸೇರಿಸಿಕೊಂಡಿದ್ದು, ವಾಟ್ಸ್ ಆಪ್ ಸ್ಟೋರೀಸ್, ಕಾನ್ಫರೆನ್ಸ್ ಕಾಲಿಂಗ್ ಮತ್ತು ಪೇಮೆಂಟ್ ಅವಕಾಶಗಳ ಜೊತೆಗೆ ಇನ್ನಷ್ಟು ವಿಶೇಷತೆಗಳೂ..

ಐಫೋನ್, ಕಂಪ್ಯೂಟರ್‌ಗಳಲ್ಲಿ ವಾಟ್ಸ್‌ಆಪ್ ಇನ್ಸ್ಟಾಲ್ ಮಾಡುವುದು ಹೇಗೆ ಗೊತ್ತಾ!?

ನೀವು ಇನ್ನೂ ಕೂಡ ಡಿಜಿಟಲ್ ನಾಗರೀಕ ಆಗಿಲ್ಲದೆ ಉಳಿದಿದ್ದರೆ, ಮತ್ತು ಹೇಗೋ ವಾಟ್ಸ್ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡಿದ್ದರೆ, ಇಲ್ಲಿ ವಾಟ್ಸ್ ಆಪ್ ನ್ನು ನಿಮ್ಮ ಡಿವೈಸ್ ಗೆ ಇನ್ಸ್ಟಾಲ್ ಮಾಡುವ ಬಗ್ಗೆ ಒಂದು ಸಣ್ಣ ಮಾಹಿತಿಗಳನ್ನು ನೀಡಲಾಗಿದೆ. ಗಮನಿಸಿ.

ಅಗತ್ಯತೆಗಳು:
• ನಿಮ್ಮ ಡಿವೈಸ್ ನಲ್ಲಿ ಇಂಟರ್ನೆಟ್ ಕನೆಕ್ಷನ್ ಕೆಲಸ ಮಾಡುತ್ತಿರಬೇಕು
• ನಿಮ್ಮ ಆಪರೇಟಿಂಗ್ ಸಿಸ್ಟಮ್ ಸಂಬಂಧಿಸಿದ ಆಪ್ ನ್ನು ಆಪ್ ಸ್ಟೋರ್ ನಿಂದ ಆಕ್ಸಿಸ್ ಮಾಡಲು ಅವಕಾಶ ನೀಡುತ್ತಿರಬೇಕು

ಅನುಸರಿಸಬೇಕಾಗಿರುವ ಹಂತಗಳು:

iPhone (iOS) ಬಳಕೆದಾರರು

iPhone (iOS) ಬಳಕೆದಾರರು

1. ‘App Store' ನ್ನು ನಿಮ್ಮ ಡಿವೈಸ್ ನಲ್ಲಿ ತೆರೆಯಿರಿ

2. ಸ್ಟೋರ್ ಒಳಗೆ ಇರುವ ‘Search' ಐಕಾನ್ ನ್ನು ಟ್ಯಾಪ್ ಮಾಡಿ. ಅಲ್ಲಿ ವಾಟ್ಸ್ ಆಪ್ ಸರ್ಚ್ ಮಾಡಿ 3. ‘Get' ಬಟನ್ ನ್ನು ಕ್ಲಿಕ್ಕಿಸಿ. ಮತ್ತು ಆಪ್ ನ್ನು ನಿಮ್ಮ ಡಿವೈಸ್ ಗೆ ಇನ್ಸ್ಟಾಲ್ ಮಾಡಿ.

4. ನಂತರ, Apple ID ಪಾಸ್ ವರ್ಡ್ ನ್ನು ನಿಮ್ಮ ಡಿವೈಸ್ ನಲ್ಲಿ ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿದ ನಂತರ ಎಂಟರ್ ಮಾಡಿ.

Android ಡಿವೈಸ್ ನ ಬಳಕೆದಾರರು :

Android ಡಿವೈಸ್ ನ ಬಳಕೆದಾರರು :

1. ಗುಗಲ್ ಪ್ಲೇ ಸ್ಟೋರ್ ನ್ನು ತೆರೆಯಿರಿ ಮತ್ತು ವಾಟ್ಸ್ ಆಪ್ ಎಂದು ಸರ್ಚ್ ಮಾಡಿ

2. ಇನ್ಸ್ಟಾಲ್ ಆಯ್ಕೆಯನ್ನು ಕ್ಲಿಕ್ಕಿಸಿ

3. ಪರ್ಮಿಷನ್ ಕೇಳಿದಾಗ ‘Accept' ನ್ನು ಟ್ಯಾಪ್ ಮಾಡಿ,

4. ಆಪ್ ನಿಮ್ಮ ಡಿವೈಸ್ ನಲ್ಲಿ ಅಟೋಮ್ಯಾಟಿಕ್ ಆಗಿ ಡೌನ್ ಲೋಡ್ ಆಗುತ್ತದೆ.

Mac ಆಪರೇಟಿಂಗ್ ಸಿಸ್ಟಮ್ ನಲ್ಲಿ

Mac ಆಪರೇಟಿಂಗ್ ಸಿಸ್ಟಮ್ ನಲ್ಲಿ

1. ಆಪ್ ಸ್ಟೋರ್ ನ್ನು ನಿಮ್ಮ ಲ್ಯಾಪ್ ಟಾಪ್ ನಲ್ಲಿ ತೆರೆಯಿರಿ

2. ‘WhatsApp'ನ್ನು ಸರ್ಚ್ ಮಾಡಿ ಮತ್ತು ‘Get' ಆಯ್ಕೆಯನ್ನು ಕ್ಲಿಕ್ಕಿಸಿ.

3. ಯಾವಾಗ ಅದು ನಿಮ್ಮ ಸಿಸ್ಟಮ್ ನಲ್ಲಿ ಯಶಸ್ವಿಯಾಗಿ ಇನ್ಸ್ಟಾಲ್ ಆಗುತ್ತದೆಯೋ ಆಗ ನಿಮ್ಮ ‘Apple ID' ಯನ್ನು ಬರೆಯಿರಿ

4. ಆಪ್ ನ್ನು ತೆರೆಯಿರಿ ಮತ್ತು QR code ನ್ನು ನಿಮ್ಮ ಸ್ಮಾರ್ಟ್ ಫೋನ್ ಬಳಸಿ ಸ್ಕ್ಯಾನ್ ಮಾಡಿ

Windows ಬಳಕೆದಾರರಿಗಾಗಿ :

Windows ಬಳಕೆದಾರರಿಗಾಗಿ :

1. ವಿಂಡೋಸ್ ಸ್ಟೋರ್ ಅಥವಾ ವಾಟ್ಸ್ ಆಪ್ ಅಫೀಶಿಯಲ್ ವೆಬ್ ಸೈಟ್ ಬಳಸಿ ವಾಟ್ಸ್ ಆಪ್ ವೆಬ್ ಕ್ಲೈಂಟ್ ನ್ನು ಡೌನ್ ಲೋಡ್ ಮಾಡಿ..

2. ಇತರೆ ಸಾಫ್ಟ್ ವೇರ್ ಗಳಂತೆ ಇದನ್ನೂ ಕೂಡ ಇನ್ಸ್ಟಾಲ್ ಮಾಡಿ.

3. ಈಗ ವಾಟ್ಸ್ ಆಪ್ ತೆರೆಯಿರಿ ಮ ತ್ತು QR code ಸ್ಕ್ಯಾನ್ ಬಳಸಿ ವಾಟ್ಸ್ ಆಪ್ ಬಳಸಿ.

Best Mobiles in India

English summary
How to download WhatsApp on PC, Android smartphone and iPhone. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X