Subscribe to Gizbot

ಫೇಸ್‌ಬುಕ್‌ನಲ್ಲಿ ಲೈವ್ ನೋಟಿಫಿಕೇಶನ್ ಸಕ್ರಿಯಗೊಳಿಸುವುದು ಹೇಗೆ?

Posted By: Tejaswini P G

ಸಾಮಾಜಿಕ ಜಾಲತಾಣಗಳು ನಿಧಾನವಾಗಿ ಜನಜೀವನದ ಮಧ್ಯೆ ಬೆರೆತಿದ್ದು ಜನರ ಭೇಟಿ ಮತ್ತು ಸಂವಹನದ ದಿಕ್ಕನ್ನೇ ಬದಲಾಯಿಸುತ್ತಿದೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನ ಲೈವ್ ಫೀಚರ್ ಒಂದೇ ರೀತಿಯದ್ದಲ್ಲವಾದರೂ ಎರಡೂ ತಮ್ಮದೇ ವೈಶಿಷ್ಟ್ಯವನ್ನು ಹೊಂದಿದೆ.

ಫೇಸ್‌ಬುಕ್‌ನಲ್ಲಿ ಲೈವ್ ನೋಟಿಫಿಕೇಶನ್ ಸಕ್ರಿಯಗೊಳಿಸುವುದು ಹೇಗೆ?

ನೀವು ಅಪರೂಪಕ್ಕೆ ಆನ್ಲೈನ್ ಹೋಗುವವರಾದರೂ ನೀವು ಫಾಲೋ ಮಾಡುವ ಪ್ರೊಫೈಲ್ಗಳ ಲೈವ್ ವೀಡಿಯೋಗಳ ಅನುಭವವನ್ನು ಒಮ್ಮೆಯಾದರೂ ಪಡೆದಿರುತ್ತೀರಿ. ತಮ್ಮ ನೆಚ್ಚಿನ ಸೆಲೆಬ್ರಿಟಿಯೊಂದಿಗೆ ನೇರವಾಗಿ ಸಂವಹನ ನಡೆಸುವ ಅದೃಷ್ಟವನ್ನು ಯಾರು ತಾನೆ ಒಲ್ಲೆ ಎಂದಾರು? ಅಥವಾ ಯಾವುದಾದದರೂ ಹೊಸ ಘೋಷಣೆಗಳ ವೇಳೆ ಲೈವ್ ವ್ಯೂವರ್ಗಳಿಗೆ ಮಾತ್ರ ಲಭ್ಯವಿರುವ ಆಫರ್ಗಳನ್ನು ಯಾರು ತಾನೆ ಬೇಡವೆಂದಾರು?

Here's how the Face ID of the newly launched Oppo A83 works (KANNADA)
ಈ ಲೇಖನವನ್ನು ಓದುವ ಮೂಲಕ ನೀವು ಭವಿಷ್ಯದಲ್ಲಿ ಯಾವುದೇ ಲೈವ್ ವೀಡಿಯೋ ಮಿಸ್ ಮಾಡಲಾರಿರಿ. ನೀವು ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡುವ ಪ್ರೊಫೈಲ್ ಗಳು ಲೈವ್ ಬಂದಾಗಲೆಲ್ಲಾ ತಕ್ಷಣ ಲೈವ್ ಅಪ್ಡೇಟ್ ಅಥವಾ ನೋಟಿಫಿಕೇಶನ್ ಪಡೆಯುವುದು ಹೇಗೆಂಬುದನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ.
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್ಬುಕ್ ಲೈವ್ ನೋಟಿಫಿಕೇಶನ್ಗಳು

ಫೇಸ್ಬುಕ್ ಲೈವ್ ನೋಟಿಫಿಕೇಶನ್ಗಳು

ಹಂತ 1: ನಿಮ್ಮ ಫೇಸ್ಬುಕ್ ಖಾತೆಗೆ ಲಾಗಿನ್ ಮಾಡಿ

ಹಂತ 2: ನೀವು ಸದಾ ಫಾಲೋ ಮಾಡಬಯಸುವ ಫೇಸ್ಬುಕ್ ಪೇಜ್ ತೆರೆಯಿರಿ

ಹಂತ 3: 'ಫಾಲೋವಿಂಗ್' ಎಂಬ ಬಟನ್ ನ ಮೇಲೆ ಮೌಸ್ ಪಾಯಿಂಟರ್ ಇರಿಸಿದಾಗ ಡ್ರಾಪ್-ಡೌನ್ ಲಿಸ್ಟ್ ಒಂದು ನಿಮ್ಮ ಮುಂದೆ ತೆರದುಕೊಳ್ಳುತ್ತದೆ

ಹಂತ 4: ಕೆಳಗೆ ಸ್ಕ್ರೋಲ್ ಮಾಡುತ್ತಾ 'ನೋಟಿಫಿಕೇಶನ್ಸ್' ಹುಡುಕಿ

ಹಂತ 5: ನೋಟಿಫಿಕೇಶನ್ಸ್ ನ ಪಕ್ಕದಲ್ಲಿರುವ 'ಎಡಿಟ್' ಬಟನ್ ಒತ್ತಿರಿ

ಹಂತ 6: ಎಲ್ಲಾ ಲೈವ್ ವೀಡಿಯೋಗಳ ನೋಟಿಫಿಕೇಶನ್ ಪಡೆಯಲು 'ಆಲ್ ಲೈವ್ ಪೋಸ್ಟ್ಸ್' ಆಯ್ಕೆ ಮಾಡಿ

ನೀವು ಕೆಲವೇ ಆಯ್ದ ಪ್ರೊಫೈಲ್ಗಳನ್ನಷ್ಟೇ ಫಾಲೋ ಮಾಡಲು ಬಯಸುತ್ತಿದ್ದು, ಯಾರೇ ಲೈವ್ ಬಂದರೂ ನಿಮ್ಮತ್ತ ನೋಟಿಫಿಕೇಶನ್ಗಳ ಮಹಾಪೂರ ಹರಿದು ಬರುವುದು ನಿಮಗಿಷ್ಟವಿಲ್ಲವೆಂದಾದಲ್ಲಿ ಅದಕ್ಕೂ ಬೇಕಾದ ಆಯ್ಕೆಗಳು ಲಭ್ಯವಿದೆ.

ಇತರ ಆಯ್ಕೆಗಳು

ಇತರ ಆಯ್ಕೆಗಳು

• ಲೈವ್ ನೋಟಿಫಿಕೇಶನ್ಸ್ ಟ್ಯಾಬ್ ಗೆ ಭೇಟಿ ನೀಡಿ 'ಆಲ್ ಲೈವ್ ಪೋಸ್ಟ್ಸ್' ಎಂಬ ಆಯ್ಕೆಯನ್ನು ರದ್ದುಮಾಡುವ ಮೂಲಕ ಲೈವ್ ನೋಟಿಫಿಕೇಶನ್ಸ್ ಅನ್ನು ನಿಷ್ಕ್ರಿಯಗೊಳಿಸಬಹುದು

• ಯಾವುದೇ ನಿರ್ದಿಷ್ಟ ಪೇಜ್ ಗೆ ನೋಟಿಫಿಕೇಶನ್ ಗಳ ಸಂಖ್ಯೆಯನ್ನು ದಿನಕ್ಕೆ ಮೂರು ನೋಟಿಫಿಕೇಶನ್ಗಳಂತೆ ಮಿತಿಯನ್ನು ಸೆಟ್ ಮಾಡಬಹುದು. ಆಗ ನೀವು ಕೆಲವು ಆಯ್ದ ಲೈವ್ ವೀಡಿಯೋಗಳಿಗೆ ಮಾತ್ರ ನೋಟಿಫಿಕೇಶನ್ ಪಡೆಯುತ್ತೀರಿ

DL, PAN ಮತ್ತು ಆಧಾರ್ ಸೇವೆ ಪಡೆಯಲು ಇದೊಂದು ಆಪ್ ಸಾಕು..!

ಇನ್ಸ್ಟಾಗ್ರಾಮ್ ಲೈವ್ ನೋಟಿಫಿಕೇಶನ್ಗಳು

ಇನ್ಸ್ಟಾಗ್ರಾಮ್ ಲೈವ್ ನೋಟಿಫಿಕೇಶನ್ಗಳು

ಇನ್ಸ್ಟಾಗ್ರಾಮ್ ನ ಲೈವ್ ನೋಟಿಫಿಕೇಶನ್ಗಳು ಪೂರ್ವನಿಯೋಜಿತವಾಗಿ ಸಕ್ರಿಯವಾಗಿರುತ್ತದೆ. ಇದನ್ನು ಯಾವುದೇ ನಿರ್ದಿಷ್ಟ ಪ್ರೊಫೈಲ್ ಗೆ ಮಾತ್ರ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಲಾಗದು ಎಂಬುದೇ ಇದರ ನ್ಯೂನತೆಯಾಗಿದೆ.

ಇಲ್ಲಿ ಲೈವ್ ನೋಟಿಫಿಕೇಶನ್ಗಳನ್ನು ಎಲ್ಲಾ ಪ್ರೊಫೈಲ್ಗಳಿಗೂ ಸಕ್ರಿಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದಷ್ಟೇ.

ಹಂತ 1: ನಿಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಲಾಗಿನ್ ಮಾಡಿ

ಹಂತ 2: ಇನ್ಸ್ಟಾಗ್ರಾಮ್ ನ ನಿಮ್ಮ ಪ್ರೊಫೈಲ್ ಗೆ ಭೇಟಿ ನೀಡಿ

ಹಂತ 3: ಆಪ್ ಸೆಟ್ಟಿಂಗ್ಸ್ ಗೆ ಹೋಗಿ

ಹಂತ 4: ಕೆಳಗೆ ಸ್ಕ್ರೋಲ್ ಮಾಡುತ್ತಾ "ಪುಶ್ ನೋಟಿಫಿಕೇಶನ್ ಸೆಟ್ಟಿಂಗ್ಸ್" ಮೇಲೆ ಕ್ಲಿಕ್ ಮಾಡಿ

ಹಂತ 5: ಪರದೆಯ ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ 'ಲೈವ್ ವೀಡಿಯೋಸ್' ನ ಮುಂದಿರುವ 'ಆನ್' ಅಥವಾ 'ಆಫ್' ಬಟನ್ ಅನ್ನು ಆಯ್ಕೆ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You can follow the live videos by getting live notifications from Facebook and Instagram profiles that you follow on following these steps.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot