ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್... ಹೇಗೆ ಅಂಥಾ ಗೊತ್ತಾ?!

|

ವಿಮಾನಯಾನ ಅನ್ನುವುದು ಒಂದು ದೊಡ್ಡ ವೆಚ್ಚದಾಯಕವಾದ ಪ್ರಯಾಣವಾಗಿರುತ್ತದೆ. ವಿದೇಶಿ ಪ್ರಯಾಣವೇ ಇರಲಿ ಅಥವಾ ನೀವು ಯಾವ ಜಾಗಕ್ಕೆ ಪ್ರಯಾಣಿಸುತ್ತಿದ್ದೀರಿ ಅನ್ನುವುದರ ಆಧಾರದ ಮೇಲೆ ನಿಮ್ಮ ಖರ್ಚು ವೆಚ್ಚ ನಿರ್ಧರಿತವಾಗುತ್ತೆ . ಆದರೂ ನಿಮ್ಮ ಪ್ರಯಾಣದ ಒಂದು ಬಜೆಟ್ಟಿನ ಅರ್ಧದಷ್ಟು ವೆಚ್ಚ ವಿಮಾನಯಾನಕ್ಕೆ ಖರ್ಚಾಗಿರುತ್ತದೆ ಅನ್ನುವುದರಲ್ಲಿ ಅನುಮಾನವೇ ಬೇಡ.

ಹಾಗಾಗಿ ಸ್ವಲ್ಪ ಶ್ರಮ ಹೆಚ್ಚು ಹಾಕಿ ಕಡಿಮೆ ಬೆಲೆಯ ವಿಮಾನದ ಟಿಕೆಟ್ ಗಳನ್ನು ಹುಡುಕಿಕೊಂಡರೆ ನಮ್ಮ ವೆಚ್ಚದಲ್ಲಿ ಅಲ್ಪವನ್ನಾದರೂ ಉಳಿಸಲು ಸಾಧ್ಯವಿದೆ. ವಿದೇಶಿ ವಿಮಾನ ಪ್ರಯಾಣದಲ್ಲಿ ಕಡಿಮೆ ಬೆಲೆಯ ವಿಮಾನ ಟಿಕೆಟ್ ಗಳನ್ನು ಹುಡುಕುವುದು ದೊಡ್ಡ ಕೆಲಸವೇನಲ್ಲ. ಅದಕ್ಕಾಗಿ ನಾವಿಲ್ಲೊಂದಿಷ್ಟು ಸಲಹೆಗಳನ್ನು ನೀಡುತ್ತಿದ್ದೇವೆ. ಆ ಮೂಲಕ ಕಡಿಮೆ ಬೆಲೆಯ ಟಿಕೆಟ್ ನ ವಿಮಾನ ಟಿಕೆಟ್ ಗಳನ್ನು ನೀವು ಹುಡುಕಿಕೊಳ್ಳಲು ಸಾಧ್ಯವಿದೆ. ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿ..

ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್... ಹೇಗೆ ಅಂಥಾ ಗೊತ್ತಾ?!

ಕೆಲವು ಸಾಮಾನ್ಯ ಸಲಹೆಗಳು
ಕಡಿಮೆಬೆಲೆಯ ವಿಮಾನದ ಟಿಕೆಟ್ ಗಳನ್ನು ಹುಡುಕುವ ಮುನ್ನ ಕೆಲವು ವಿಚಾರಗಳನ್ನು ನೀವು ತಿಳಿದಿರಬೇಕು.ನೀವು ನಿಮ್ಮ ಪ್ರವಾಸವನ್ನು ಆಲೋಚಿಸುವಾಗ, ನೀವು ತಲುಪಬೇಕಾಗಿರುವ ನಿರ್ದಿಷ್ಟ ಸ್ಥಳಕ್ಕೆ ತೆರಳಲು ಗರಿಷ್ಟ ಪ್ರಯಾಣಿಕರಿರುವ ಅಥವಾ ಬೇಡಿಕೆ ಹೆಚ್ಚಿರುವ ಸಂದರ್ಬವನ್ನು ಅಥವಾ ಕಾಲವನ್ನು ಆಯ್ಕೆ ಮಾಡಬಾರದು. ಉದಾಹರಣೆಗೆ ಯುರೋಪ್ ಗೆ ತೆರಳಲು ನೀವು ಅಗಸ್ಟ್ ನಲ್ಲಿ ಪ್ಲಾನ್ ಮಾಡಿದರೆ, ದರವು ಆ ಸಂದರ್ಬದಲ್ಲಿ ಅಧಿಕವಾಗಿರುತ್ತೆ ಹಾಗಾಗಿ ಆಗ ಕಡಿಮೆ ಬೆಲೆಯ ವಿಮಾನದ ಟಿಕೆಟ್ ಹುಡುಕುವುದು ಕಷ್ಟವಾಗಬಹುದು. ಹಾಗೊಂದು ವೇಳೆ ಸಿಗಬೇಕು ಎಂದರೆ ನೀವು ಅದೃಷ್ಟವಂತರಾಗಿರಬೇಕು ಅಷ್ಟೇ.

ನೀವು ಬೆಸ್ಟ್ ವಿಮಾನದ ವ್ಯವಹಾರವನ್ನು ಕಾಯುತ್ತಿದ್ದೀರಾದರೆ, ಆದಷ್ಟು ನಿಮ್ಮ ಪ್ರಯಾಣದ ದಿನಕ್ಕೆ ಮತ್ತು ಹೋಗುವ ಜಾಗಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ತಯಾರಿರಬೇಕು. ಕೆಲವು ದಿನ ಕಾದು ತೆರಳಲು ನೀವು ತಯಾರಿದ್ದರೆ ನಿಮಗೆ ತುಂಬಾ ಉತ್ತಮ ಬೆಲೆಯಲ್ಲಿ ವಿಮಾನ ಟಿಕೆಟ್ ಲಭ್ಯವಾಗುವ ಸಾಧ್ಯತೆಗಳಿರುತ್ತೆ. ಅಷ್ಟೇ ಅಲ್ಲ, ನೀವು ತಲುಪಬೇಕಾಗಿರುವ ಜಾಗದ ಹತ್ತಿರದ ಏರ್ ಪೋರ್ಟ್ ಗೆ ತೆರಳಿ ಅಲ್ಲಿಂದ ಮತ್ತೆ ಹೋಗುವ ಅವಕಾಶವನ್ನು ಪಡೆದರೂ ಕೂಡ ಕೆಲವೊಮ್ಮೆ ಲಾಭಗಳಾಗಬಹುದು.

ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್... ಹೇಗೆ ಅಂಥಾ ಗೊತ್ತಾ?!

ಏರ್ ಲೈನ್ಸ್ ನ ಫ್ರೀಕ್ವೆಂಟ್ ಫ್ಲೈಯರ್ ಪ್ರೋಗ್ರಾಮ್ ಗಳನ್ನು ಹೆಚ್ಚು ಆಯ್ಕೆ ಮಾಡಿ. ವಿದೇಶಿ ಪ್ರಯಾಣಗಳಿಗೆ ಇದರಿಂದಾಗಿ ಹೆಚ್ಚು ಲಾಭಗಳಾಗುತ್ತೆ. ಉದಾಹರಣಗೆ ಫ್ರೀ ಫ್ಲೈಟ್ಸ್, ಟಿಕೆಟ್ ಅಪ್ ಗ್ರೇಟ್, ಪ್ರಿಯಾರಿಟಿ ಬೋರ್ಡಿಂಗ್, ಹೆಚ್ಚು ಲಗೇಜ್ ತೆಗೆದುಕೊಂಡು ಹೋಗುವ ಅವಕಾಶ, ಇತ್ಯಾದಿಗಳು. ಇವು ಕಡಿಮೆ ಬೆಲೆಯ ಟಿಕೆಟ್ ಖರೀದಿಸಿ ಹೋಗುವುದೂ ಒಂದೇ,ಈ ಸೌಲಭ್ಯಗಳನ್ನು ಪಡೆದು ಚಲಿಸುವುದೇ ಒಂದೇ ಎಂಬಂತೆ ಎರಡೂ ಸರಿದೂಗಿ ಹೋಗುತ್ತವೆ.

ಕೊನೆಕ್ಷಣದ ಟಿಕೆಟ್ ಬುಕ್ಕಿಂಗ್ ಅಷ್ಟು ಹಿತವಾದುದ್ದಲ್ಲ. Vpn ಮೂಲಕ ಕಡಿಮೆ ಬೆಲೆಯ ಫ್ಲೈಟ್ ಗಳು ಸಿಗುತ್ತವೆ( ಕೆಲವು ಕರೆನ್ಸಿಯಲ್ಲಿ ಏರ್ ಲೈನ್ಸ್ ನಲ್ಲಿ ಒಮ್ಮೊಮ್ಮೆ ಆಫರ್ ಗಳಿರುತ್ತೆ) ಎಂಬುದು ಅಷ್ಟು ಸರಿಯಾದ ಆಯ್ಕೆಯಲ್ಲ. ಈ ವಿಧಾನ ಹಲವು ಬಾರಿ ಸುಮ್ಮನೆ ಕಿರಿಕ್ ಗಳಿಗೆ ಕಾರಣವಾಗುತ್ತೆ. ಕೊನೆ ಕ್ಷಣದ ಲಾಭಗಳಿಕೆ ಒಂದು ಸುಳ್ಳು ಅಷ್ಟೇ. ಕೊನೆಕ್ಷಣದಲ್ಲಿ ಯಾವ ಏರ್ ಲೈನ್ ಕೂಡ ಕಡಿಮೆ ಬೆಲೆಯಲ್ಲಿ ಟಿಕೆಟ್ ನೀಡುವುದಿಲ್ಲ. ಯಾಕೆಂದರೆ ಬ್ಯೂಸಿನೆಸ್ ಟ್ರಾವೆಲರ್ ಗಳು ಹೆಚ್ಚು ಪಾವತಿಸಲು ತಯಾರಿರುವುದರಿಂದಾಗಿ ಕೊನೆಕ್ಷಣದ ಟಿಕೆಟ್ ದರಗಳು ಯಾವಾಗಲೂ ಅಧಿಕವಾಗೇ ಇರುತ್ತೆ.

ಇದೆಲ್ಲವನ್ನೂ ಹೊರತು ಪಡಿಸಿ ನೀವು ಹೇಗೆ ಅಂತರಾಷ್ಟ್ರೀಯ ವಿಮಾನಗಳಲ್ಲಿ ಉತ್ತಮ ವ್ಯವಹಾರವನ್ನು ಮಾಡಬಹುದು ಇಲ್ಲಿದೆ ನೋಡಿ...

1.ಸರ್ಚ್ ಇಂಜಿನ್ ಗಳು

1.ಸರ್ಚ್ ಇಂಜಿನ್ ಗಳು

ಸರ್ಚ್ ಇಂಜಿನ್ ಗಳು ಈ ಸಂದರ್ಬದಲ್ಲಿ ನಿಮ್ಮ ಉತ್ತಮ ಗೆಳೆಯರಾಗಬಲ್ಲವು. ನಾವಿಲ್ಲಿ ಅದರ ಪಟ್ಟಿಯನ್ನು ನಿಮಗೆ ನೀಡುತ್ತಿದ್ದು, ವೈಶಿಷ್ಟ್ಯಗಳನ್ನೂ ಕೂಡ ವಿವರಿಸಿದ್ದೇವೆ. ಗಮನ ಹರಿಸಿ.

2.ಗೂಗಲ್ ಫ್ಲೈಟ್ಸ್

2.ಗೂಗಲ್ ಫ್ಲೈಟ್ಸ್

ಗೂಗಲ್ ಫ್ಲೈಟ್ಸ್ ವಿಶ್ವದಾದ್ಯಂತದ ವಿಮಾನ ದರವನ್ನು ವೇಗವಾಗಿ ಪರೀಕ್ಷಿಸಬಹುದಾದ ಸರ್ಚ್ ಇಂಜಿನ್. ಈ ಇಂಟರ್ ಫೇಸ್ ತುಂಬಾ ಚೆನ್ನಾಗಿದೆ ಮತ್ತು ಫಲಿತಾಂಶವೂ ಬಹಳ ವೇಗವಾಗಿ ಸಿಗಲಿದೆ.

3.ಐಟಿಎ ಮ್ಯಾಟ್ರಿಕ್ಸ್

3.ಐಟಿಎ ಮ್ಯಾಟ್ರಿಕ್ಸ್

ಈ ಸರ್ವೀಸ್ ಕೂಡ ಗೂಗಲ್ ಮಾಲೀಕತ್ವದ್ದು ಮತ್ತು ಗೂಗಲ್ ಫ್ಲೈಟ್ ನ ಪವರ್ ಇರುವಂತದ್ದು., ಹೆಚ್ಚವರಿ ಸರ್ಚ್ ಗಳು ಉದಾಹರಣೆಗೆ ಏರ್ ಪೋರ್ಟ್ ಚೇಂಜ್ ಇತ್ಯಾದಿಗಳಿಗೆ ಇದು ನೆರವಾಗುತ್ತೆ.

4.ಸ್ಕೈ ಸ್ಕ್ಯಾನರ್

4.ಸ್ಕೈ ಸ್ಕ್ಯಾನರ್

ಸ್ಕೈ ಸ್ಕ್ಯಾನರ್ ವಿಮಾನದ ಟಿಕೆಟ್ ಗಳನ್ನು ಹೋಲಿಸಲು ಇರುವ ಪ್ರಸಿದ್ಧ ವೆಬ್ ಸೈಟ್ ಆಗಿದೆ. ಇದು ಸೆಟ್ ಆಫ್ ದರಗಳ ಸೂಚನೆಯನ್ನು ನೀಡುತ್ತಿರುತ್ತೆ ಹಾಗಾಗಿ ನೀವು ಕಡಿಮೆ ಬೆಲೆಯ ವಿಮಾನದ ಟಿಕೆಟ್ ಕಳೆದುಕೊಳ್ಳಲು ಅವಕಾಶವೇ ಇರುವುದಿಲ್ಲ ಅಷ್ಟೇ ಅಲ್ಲ ಇದು ಸ್ಮಾರ್ಟ್ ಫೋನ್ ಆಪ್ ನಲ್ಲೂ ಲಭ್ಯವಿದೆ.

5.ಮೊಮೊಂಡು

5.ಮೊಮೊಂಡು

ಇದು ಕೂಡ ಕಡಿಮೆ ದರದ ವಿಮಾನ ಹುಡುಕಲು ನೆರವು ನೀಡುತ್ತೆ,ಇದೊಂದು ರೀತಿ ಟಾಪ್ 10 ಪಟ್ಟಿ ತಯಾರಿಸಿ ಕೊಟ್ಟಂತೆ ನೀಡುತ್ತೆ. ವಿಮಾನ ಯಾನಕ್ಕೆ ಬೇಕಾಗುವ ಸಮಯ ಮತ್ತು ಅದರ ದರದ ಆಧಾರದ ಅನುಪಾತದ ಪಟ್ಟಿ ನೀಡುತ್ತೆ.

6.ಪ್ರೈಸ್ ಲೈನ್

6.ಪ್ರೈಸ್ ಲೈನ್

ಇದು ಕೂಡ ಮತ್ತೊಂದು ಫ್ಲೈಟ್ ಸರ್ಚ್ ಇಂಜಿನ್ ಆಗಿದ್ದು ಸೈಡ್ ಬಾರ್ ನಲ್ಲಿ ಯಾವುದು ಕಡಿಮೆ ದರ ಹೊಂದಿರುವ ಏರ್ ಲೈನ್ ಎಂದು ವೇಗವಾಗಿ ಗುರುತಿಸಲು ಅವಕಾಶ ವಾಗುವಂತೆ ಡಿಸೈನ್ ಮಾಡಲಿದೆ.

7.ಕಿವಿ

7.ಕಿವಿ

ಕಿವಿ.ಕಾಮ್ ಕೆಲವೊಮ್ಮೆ ಇತರರಿಗೆ ಹೋಲಿಸಿದರೆ ಕಡಿಮೆ ಬೆಲೆಯ ವಿಮಾನವನ್ನು ತೋರಿಸುತ್ತೆ. ಆದರೆ ನಿಮ್ಮ ಟಿಕೆಟ್ ಬುಕ್ಕಿಂಗ್ ಮಾಡುವ ಮುನ್ನ ಪರೀಕ್ಷಿಸಿಕೊಳ್ಳುವುದು ಒಳಿತು.

ಇವೆಲ್ಲವೂ ಒಂದು ವಿಧಾನವಾದರೆ, ನಿಮಗೆ ಇದನ್ನು ಮಾಡಲು ಇಷ್ಟವಿಲ್ಲದೇ ಇದ್ದರೆ ಕೆಲವು ಸರ್ವೀಸ್ ಗಳನ್ನು ಪಡೆಯುವ ಮೂಲಕ ಕಡಿಮೆ ದರದ ವಿಮಾನವನ್ನು ಹುಡುಕಬಹುದು.

ಕಡಿಮೆ ದರದ ವಿಮಾನ ಹುಡುಕಲು ಸಹಾಯ ಮಾಡುವ ಸರ್ವೀಸ್ ಗಳು

ಈ-ಮೇಲ್ ಮೂಲಕ ನಿಮಗೆ ಉತ್ತಮ ಫ್ಲೈಟ್ ಗಳ ಮಾಹಿತಿ ನೀಡುವ ಹಲವಾರು ಸರ್ವೀಸ್ ಗಳನ್ನು ನಾವು ಕಾಣಬಹುದು. ತಮ್ಮ ವ್ಯವಹಾರ ರನ್ ಆಗುವ ಉದ್ದೇಶದಿಂದ ಕೆಲವರು ಕಮಿಷನ್ ಗಾಗಿ ಮಾತ್ರವಲ್ಲದೆ ಉತ್ತಮ ಡೀಲ್ ಗಾಗಿಯೂ ಕೂಡ ಬೆಸ್ಟ್ ಸರ್ವೀಸ್ ನೀಡುತ್ತಾರೆ. ನೀವು ಹೋಗಬಯಸುವ ಮತ್ತು ನೀವಿರುವ ಸ್ಥಳಕ್ಕೆ ಆಧರಿಸಿ ಇವರುಗಳು ಉತ್ತಮ ಡೀಲ್ ಗಳ ಅಲರ್ಟ್ ಗಳನ್ನು ನಿಮಗೆ ಕಳುಹಿಸಿಕೊಡುತ್ತಾರೆ. ಅದಕ್ಕಾಗಿ ನೀವು ನಿಮ್ಮ ಸ್ಥಳವನ್ನು ನಮೂದಿಸಿದರಾಯಿತು ಅಷ್ಟೇ.. ನೀವು ಸಮಯ ಮತ್ತು ಸ್ಥಳದ ವಿಚಾರದಲ್ಲಿ ಫ್ಲೆಕ್ಸಿಬಲ್ ಆಗಿದ್ದಲ್ಲಿ ಇವುಗಳು ಉತ್ತಮ ದರವನ್ನು ನಿಮಗೆ ನೀಡಲಿವೆ.

ಸ್ಕಾಟ್ ಚೀಪ್ ಫ್ಲೈಟ್ಸ್

ಇವರು ನಿಮ್ಮ ಸ್ಥಳದ ಆಧಾರದಲ್ಲಿ ಈಮೇಲ್ ಕಳುಹಿಸುತ್ತಾರೆ.ಈ ಫ್ರೀ ಟಯರ್ ನಲ್ಲಿ ಒಂದಷ್ಟು ಜಾಹೀರಾತುಗಳನ್ನು ಈಮೇಲ್ ಮೂಲಕ ಕಳುಹಿಸಿಕೊಡಲಾಗುತ್ತೆ.ಇದರ ಪ್ರೀಮಿಯಮ್ ಸಬ್ ಸ್ಕ್ರಿಪ್ಶನ್ ದರ ವರ್ಷಕ್ಕೆ 39 ಡಾಲರ್ ಹೆಚ್ಚು ಕಡಿಮೆ 2500 ರುಪಾಯಿಗಳು. ಇವು ಹೆಚ್ಚಾಗಿ ಏಷ್ಯಾ ಬೇಸ್ಡ್ ಡೀಲ್ ಗಳನ್ನು ನೀಡುತ್ತವೆ ಹಾಗಾಗಿ ಭಾರತೀಯರಿಗೆ ಹೆಚ್ಚು ಅನುಕೂಲಕರವಾಗಿರುತ್ತೆ.

ಪ್ಲೈಸೈನ್

ಹೆಚ್ಚು ವಯಕ್ತಿಕ ಸಲಹೆಗಳ ಅಗತ್ಯವಿದೆಯಾ? ಯಾವುದೇ ಪ್ರವಾಸಿ ದಿನಾಂಕಕ್ಕಾದರೂ ಸರಿ ಇವರು ಕಡಿಮೆ ಬೆಲೆಯ ವಿಮಾನವನ್ನು ಹುಡುಕಿಕೊಡಬಲ್ಲರು ಮತ್ತು ಸಲಹೆ ನೀಡುತ್ತಾರೆ. ನೀವು ಅವರಿಗೆ ನಿಮ್ಮ ಪ್ರವಾಸದ ನಿರ್ಧಿಷ್ಟ ತಾಣ ಮತ್ತು ದಿನಾಂಕ ತಿಳಿಸಿದರೆ ಸಾಕು. ಅವರ ತಂಡವೇ ನಿಮಗೆ ಕಡಿಮೆ ಬೆಲೆಯ ಫ್ಲೈಟ್ ಗಳನ್ನು ಹುಡುಕಿ ತಿಳಿಸಲಿವೆ. ಆದರೆ ಇದರ ಸರ್ವೀಸ್ ಚಾರ್ಜ್ ಪ್ರತಿ ರೌಂಡ್ ಟ್ರಿಪ್ ಗೆ 49 ಡಾಲರ್ ಅಂದಪೆ 3150 ರುಪಾಯಿಗಳು.

ಇನ್ನು ಅನೇಕ ಇದೇ ರೀತಿಯ ಸರ್ವೀಸ್ ಗಳಿವೆ. ಗೆಟ್ ಮಿ ಟು ಯುರೋಪ್, ಐ ವಾಟ್ ದಾಟ್ ಫ್ಲೈಟ್ ಇತ್ಯಾದಿಗಳು. ಇವುಗಳೂ ಕೂಡ ಕಡಿಮೆ ಬೆಲೆಯ ವಿಮಾನವನ್ನು ಗುರುತಿಸಲು ನೆರವು ನೀಡುತ್ತವೆ.

ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್... ಹೇಗೆ ಅಂಥಾ ಗೊತ್ತಾ?!

ಗುಪ್ತ ಸಿಟಿ ಟಿಕೆಟಿಂಗ್ ಬಗ್ಗೆ

ಇದೊಂದು ಅಪಾಯಕಾರಿ ಅಭ್ಯಾಸವೆಂದೇ ಹೇಳಬಹುದು.ಕಡಿಮೆ ಬೆಲೆಯ ವಿಮಾನಗಳು ಸಿಕ್ಕಿದರೂ ಹೆಚ್ಚುವರಿ ಸ್ಟಾಪ್ಸ್ ಗಳು ಪ್ರಯಾಣಕ್ಕೆ ತೊಂದರೆ ನೀಡುತ್ತೆ. ಉದಾಹರಣೆ ಸಹಿತ ಹೇಳುವುದಾದರೆ, ನೀವು ಮುಂಬೈ ಯಿಂದ ದೆಹಲಿಗೆ ತೆರಳಬೇಕಾಗಿದೆ. ಕಡಿಮೆ ದರದ ಫ್ಲೈಟ್ ಅಂದರೆ ಅದು ಮುಂಬೈ ಲಕ್ನೋ ಅದು ದೆಹಲಿಯಲ್ಲಿ ನಿಲ್ಲುತ್ತದೆ. ಹಿಡನ್ ಟಿಕೆಟ್ ಬುಕ್ಕಿಂಗ್ ಎಂದರೆ ಮುಂಬೈ - ಲಕ್ನೋ ಟಿಕೆಟ್ ಬುಕ್ ಮಾಡುತ್ತೀರಿ ಮತ್ತು ದೆಹಲಿ ಏರ್ ಪೋರ್ಟ್ ನಲ್ಲಿ ತೆರಳುತ್ತೀರಿ.

ಇದು ಕೇವಲ ನಿಮ್ಮ ಬಳಿ ಕ್ಯಾಬಿನ್ ಬ್ಯಾಗೇಜ್ ಇದ್ದಾಗ ಮಾತ್ರ ವರ್ಕ್ ಔಟ್ ಆಗುತ್ತದೆ. ಯಾಕೆಂದರೆ ಚೆಕ್ಕಿಂಗ್ ಆದ ಬ್ಯಾಗೇಜ್ ಗಳೆಲ್ಲವೂ ನಿಮ್ಮ ಬಳಿ ಇರುವುದಿಲ್ಲ. ಹಾಗಾಗಿ ಈ ಆಯ್ಕೆ ಹೆಚ್ಚು ಪ್ರಶಸ್ತವಾದುದ್ದಲ್ಲ. ನಿಮ್ಮ ಬಳಿ ತೀರಾ ಕಡಿಮೆ ಹಣವಿದೆ ಎಂದಾಗ ಮತ್ತ ಅನಿವಾರ್ಯವಾಗಿ ತೆರಳಬೇಕು ಎಂದಾಗ ಮಾತ್ರ ಆಯ್ಕೆ ಮಾಡುವುದು ಒಳಿತು. ಎನಿ ವೇ, ನಿಮ್ಮದೂ ಒಂದು ವಿಮಾನಯಾನದ ಪ್ಲಾನಿಂಗ್ ಇದ್ದರೆ ಇದನ್ನೆಲ್ಲ ನೆನಪಿಟ್ಟುಕೊಳ್ಳಿ.

Best Mobiles in India

Read more about:
English summary
How to Find Cheapest Flight Tickets for International Travel. To know more this visit kannad.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X