ಆಂಡ್ರಾಯ್ಡ್ ಫೋನ್‌ ಅನ್ನು ಐಫೋನ್‌ನಂತೆ ಉಪಯೋಗಿಸುವುದು ಹೇಗೆ ಗೊತ್ತಾ?

|

ಮೊದಲು ಐಫೋನ್ ಯೂಸ್ ಮಾಡಿದ್ದ ಹಲವರಿಗೆ ಆಂಡ್ರಾಯ್ಡ್ ಬಳಕೆ ಬೇಸರ ಮೂಡಿಸುತ್ತದೆಯಂತೆ.! ಹಾಗೆಯೇ ಕೆಲವು ಆಂಡ್ರಾಯ್ಡ್ ಬಳಕೆದಾರರಿಗೂ ಸಹ ಐಫೋನ್ ಬಳಕೆಯಂತೆಯೇ ಆಂಡ್ರಾಯ್ಡ್ ಫೋನ್ ಬಳಕೆ ಮಾಡಬೇಕು ಎನ್ನುವ ಅಭಿಲಾಷೆ ಇರುತ್ತದೆಯಂತೆ.!!

ಹೌದು, ಐಫೋನ್‌ಗಳನ್ನು ಬಿಟ್ಟು ಆಂಡ್ರಾಯ್ಡ್ ಫೋನ್‌ಗಳನ್ನು ಖರೀದಿಸುವವರ ಪ್ರಮಾಣ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಈ ಮೇಲಿನ ಎರಡೂ ತೊಂದರೆಗಳನ್ನು ಸ್ಮಾರ್ಟ್‌ಫೋನ್ ಬಳಕೆದಾರರರು ಎದುರಿಸುತ್ತಿದ್ದಾರಂತೆ. ಮೊಬೈಲ್ ಬಳಕೆದಾರರಲ್ಲಿ ಶೇ.30 ಕ್ಕಿಂತ ಹೆಚ್ಚು ಜನಗಳಲ್ಲಿ ಇಂತಹ ಆಸೆ ಮತ್ತು ತೊಂದರೆ ಇರುತ್ತದೆಯಂತೆ.!!

ಆಂಡ್ರಾಯ್ಡ್ ಫೋನ್‌ ಅನ್ನು ಐಫೋನ್‌ನಂತೆ ಉಪಯೋಗಿಸುವುದು ಹೇಗೆ ಗೊತ್ತಾ?

ಇಂತಹ ಆಸೆ ನಿಮಗೂ ಇದೆಯಾ? ಹಾಗಾದರೆ, ಚಿಂತಿಸಬೇಡಿ.!ಏಕೆಂದರೆ ಆಂಡ್ರಾಯ್ಟ್ ಸ್ಮಾರ್ಟ್‌ಫೋನ್‌ ಅನ್ನು ಐಫೋನ್ ರೀತಿ ಉಪಯೋಗಿಸುವ ಆಸೆ ಈಡೇರಿಸುವ ಸಲುವಾಗಿಯೇ ಹಲವು ಆಪ್‌ಗಳು ಪ್ಲೇಸ್ಟೋರ್‌ನಲ್ಲಿ ಕಾಲಿಟ್ಟಿವೆ.!! ಹಾಗಾದರೆ, ಅಂತಹ ಆಪ್‌ಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

#1 ಕ್ವಿಕ್ ಸೆಟ್ಟಿಂಗ್ಸ್ ಫಾರ್ ಆಂಡ್ರಾಯ್ಡ್!!

#1 ಕ್ವಿಕ್ ಸೆಟ್ಟಿಂಗ್ಸ್ ಫಾರ್ ಆಂಡ್ರಾಯ್ಡ್!!

ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಐಒಎಸ್ ಕಂಟ್ರೋಲ್ ಸೆಂಟರ್‌ಗೆ ಅತ್ಯುತ್ತಮ ಪರ್ಯಾಯ ಆಯ್ಕೆ ಕ್ವಿಕ್ ಸೆಟ್ಟಿಂಗ್ಸ್ ಫಾರ್ ಆಂಡ್ರಾಯ್ಡ್ ಅಪ್ಲಿಕೇಶನ್.!! ಐಓಎಸ್ ಪರದೆಯನ್ನು ಸರಿಸುವುದರ ಮೂಲಕ ಸುಲಭವಾಗಿ ಆಂಡ್ರಾಯ್ಡ್ ಪ್ರವೇಶಿಸಬಹುದಾದ ಆಯ್ಕೆಯನ್ನು ಈ ಆಪ್ ನೀಡುವುದರಿಂದ ಈ ಆಪ್ ಅತ್ಯುತ್ತಮ ಆಯ್ಕೆಯಾಗಬಹುದು.!!

#2 ಐನೋಟಿ 10 (iNoty 10)

#2 ಐನೋಟಿ 10 (iNoty 10)

ಆಂಡ್ರಾಯ್ಡ್ ಫೋನ್‌ಗಳಿಗೆ ಐಒಎಸ್ ತರಹದ ಕಂಟ್ರೋಲ್ ಸೆಂಟರ್ ನೀಡುವ ಮತ್ತೊಂದು ಆಪ್ ಐನೋಟಿ 10.! ಈ ಆಪ್ ಮೊಬೈಲ್‌ನ ಕಂಟ್ರೋಲ್ ಪ್ಯಾನಲ್‌ ಅನ್ನು ಸಕ್ರಿಯಗೊಳಿಸದಿದ್ದರೂ ಸಹ ಸ್ಟೇಸ್ ಬಾರ್, ನೋಟಿಫಿಕೇಶನ್ ಎಲ್ಲವೂ ಐಒಎಸ್ ರೂಪದಲ್ಲಿಯೇ ನಿಮಗೆ ಹಲವು ವೈಶಿಷ್ಟ್ಯಗಳು ಸಿಗುತ್ತವೆ.!!

#3 ಕಂಟ್ರೋಲ್ ಪ್ಯಾನಲ್ (Control Panel)

#3 ಕಂಟ್ರೋಲ್ ಪ್ಯಾನಲ್ (Control Panel)

ಆಂಡ್ರಾಯ್ಸ್ ಸ್ಮಾರ್ಟ್‌ಫೋನ್ ಹೋಮ್‌ಪೇಜ್ ಹಾಗೆಯೇ ಇದ್ದು ಅದರ ಕಾರ್ಯವೈಶಿಷ್ಯಗಳನ್ನು ಐಒಎಸ್ ರೂಪದಲ್ಲಿ ನೀಡುವ ಆಪ್ ಈ ಕಂಟ್ರೋಲ್ ಪ್ಯಾನಲ್.!! ಈ ಆಪ್ ಅನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡರೆ ಈ ಮೊದಲು ಆಪಲ್ ಫೋನ್ ಬಳಕೆ ಮಾಡಿದ್ದವರಿಗೆ ಆಂಡ್ರಾಯ್ಡ್ ಬಳಕೆ ಮಾಡುವುದು ಬೇಸರವಾಗುವುದಿಲ್ಲ.!!

# 4 ಕಂಟ್ರೋಲ್ ಸೆಂಟರ್ IOS 11

# 4 ಕಂಟ್ರೋಲ್ ಸೆಂಟರ್ IOS 11

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್‌ನಲ್ಲಿ ಅತ್ಯುತ್ತಮ ಐಒಎಸ್ 11 ಕಂಟ್ರೋಲ್ ಸೆಂಟರ್ ಬೇಕು ಎಂದರೆ ಕಂಟ್ರೋಲ್ ಸೆಂಟರ್ ಐಒಎಸ್ 11 ನಿಮ್ಮ ಫೋನ್‌ನಲ್ಲಿರಲಿ.! ಈ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಂಡರೆ ಏರೋಪ್ಲೇ ಮೋಡ್, ವೈಫೈ, ಬ್ಲೂಟೂತ್, ಬ್ರೈಟ್‌ನೆಸ್ ಸೆಟ್ಟಿಂಗ್ಸ್ ಹಾಗೂ ಕಂಟ್ರೋಲ್ ಸೆಂಟರ್ IOS 11 ನಿಂದ ನೇರವಾಗಿ ನೀವು ಆಡಿಯೊ ಕೇಳಬಹುದು.!

How to Sharing a Mobile Data Connection with Your PC (KANNADA)
#5 ಓಎಸ್ 11 ಐ ಲಾನ್ಚರ್ ( OS 11 iLauncher)

#5 ಓಎಸ್ 11 ಐ ಲಾನ್ಚರ್ ( OS 11 iLauncher)

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಆಪಲ್ ಐಫೋನಿನ ಸಂಪೂಣ್ ಅನುಭವ ಪಡೆಯಬೇಕೆಂದಿದ್ದರೆ ಓಎಸ್ 11 ಐ ಲಾನ್ಚರ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ.!! ಈ ಲಾಂಚರ್‌ನ ವಿಶೇಷವೆಂದರೆ ಕಡಿಮೆ ಮೆಮೊರಿ ಸಾಮರ್ಥ್ಯದಲ್ಲಿ, ನಿಮ್ಮ ಆಂಡ್ರಾಯ್ಡ್ ನಿಧಾನವಾಗದಂತೆ ಸಂಪೂರ್ಣ ಐಒಎಸ್ ಅನುಭವವನ್ನು ಈ ಆಪ್ ನಿಮಗೆ ನೀಡಲಿದೆ.!!

</a></strong><a class=ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ ಶಿಯೋಮಿ 'ರೆಡ್‌ಮಿ ನೋಟ್ 5' ಬೆಲೆ!!" title="ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ ಶಿಯೋಮಿ 'ರೆಡ್‌ಮಿ ನೋಟ್ 5' ಬೆಲೆ!!" loading="lazy" width="100" height="56" />ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ ಶಿಯೋಮಿ 'ರೆಡ್‌ಮಿ ನೋಟ್ 5' ಬೆಲೆ!!

Best Mobiles in India

English summary
How to Get iOS like Control Center on Android. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X