ಆಧಾರ್ ಕಾರ್ಡ್ ಇಲ್ಲದೆಯೇ ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ?

|

ಆಧಾರ್ ಇ-ಕೆವೈಸಿ ವೈಶಿಷ್ಟ್ಯತೆ ಬಗ್ಗೆ ಮತ್ತು ಹೊಸ ಸಿಮ್ ಕಾರ್ಡ್ ಆಕ್ಟಿವೇಷನ್ ಗೆ ಆಧಾರ್ ಬಳಕೆಯ ಕುರಿತಂತೆ ಸಾಕಷ್ಟು ಗೊಂದಲ ಮತ್ತು ಚರ್ಚೆಗಳು ನಡೆಯುತ್ತಿದೆ. ಇದೀಗ ಮತ್ತೆ ಸುಪ್ರೀಂ ಕೋರ್ಟ್ ಸಿಮ್ ಕಾರ್ಡ್ ಆಕ್ಟಿವೇಷನ್ ಮಾಡಿಸುವುದಕ್ಕೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ತೀರ್ಪು ನೀಡಿದೆ. ಹಾಗಾದ್ರೆ ಆಧಾರ್ ಕಾರ್ಡ್ ಅಥವಾ ಆಧಾರ್ ನಂಬರ್ ಇಲ್ಲದೆಯೇ ಹೊಸ ಸಿಮ್ ಕಾರ್ಡ್ ಖರೀದಿಸುವುದು ಹೇಗೆ ಮತ್ತು ಅದನ್ನು ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ವಿವರಣೆ ಇಲ್ಲಿದೆ.

ಆಧಾರ್ ಕಾರ್ಡ್ ಇಲ್ಲದೆಯೇ ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ?

ಸರ್ಕಾರದ ಯಾವುದೇ ಅಧಿಕೃತ ವಿಳಾಸದ ಪುರಾವೆ ಬಳಸಿ :

DoT (department of telecommunication) ಅಧಿಕೃತವಾಗಿ ತಿಳಿಸಿರುವಂತೆ ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಮತ್ತು ವೋಟರ್ ಐಡಿ ಯನ್ನು ಹೊಸ ಸಿಮ್ ಕಾರ್ಡ್ ಕನೆಕ್ಷನ್ ಪಡೆಯಲು ಅಡ್ರೆಸ್ ಪ್ರೂಫ್ ಆಗಿ ಬಳಸುವುದಕ್ಕೆ ಅವಕಾಶವಿರುತ್ತದೆ.

ಸಿಮ್ ಕಾರ್ಡ್ ವೆಂಡರ್ ನಿಮ್ಮ ಅಡ್ರೆಸ್ ಪ್ರೂಫ್ ನ್ನು ಸ್ಕ್ಯಾನ್ ಮಾಡುತ್ತಾರೆ ಮತ್ತು ರಿಜಿಸ್ಟ್ರೇಷನ್ನಿನ ಸಂದರ್ಬದಲ್ಲಿ ಲೈವ್ ಫೋಟೋವನ್ನು ನಿಮ್ಮಿಂದ ತೆಗೆದುಕೊಳ್ಳುತ್ತಾರೆ. ಎಲ್ಲಾ ಕ್ರಮಗಳು ಕೂಡ ಡಿಜಿಟಲಿ ನೆರವೇರುತ್ತದೆ ಮತ್ತು ವೇಗವಾಗಿ ನೆಟ್ ವರ್ಕ್ ಆಕ್ಟಿವೇಷನ್ ಕೆಲಸವು ಸಾಧ್ಯವಾಗುತ್ತದೆ. ಸಿಮ್ ವೆಂಡರ್ ಬಳಿಯಲ್ಲೂ ಕೂಡ ಒಂದು ಯೂನಿಕ್ ಐಡಿ ಇರುತ್ತದೆ. ಇದನ್ನು ಸಿಮ್ ಅಥೆಂಟಿಸಿಟಿಗಾಗಿ ಬಳಕೆ ಮಾಡಲಾಗುತ್ತದೆ ಮತ್ತು ಕೆವೈಸಿ ಪ್ರಕ್ರಿಯೆಯನ್ನು ಇದನ್ನು ಬಳಸಿ ಮಾಡಲಾಗುತ್ತದೆ.

ಟೆಲಿಕಾಂ ಕಂಪೆನಿಗಳಾದ ಭಾರತೀ ಏರ್ ಟೆಲ್ ಮತ್ತು ವಡಾಫೋನ್ ಈಗಾಗಲೇ ಹೊಸ ಡಿಜಿಟಲ್ ಕೆವೈಸಿ ಸಿಸ್ಟಮ್ ನ್ನು ನವದೆಹಲಿ ಮತ್ತು ಯುಪಿಯಂತಹ ನಗರಗಳಲ್ಲಿ ಆರಂಭಿಸಿದೆ.

ಅಷ್ಟೇ ಅಲ್ಲ ಈ ಕಾನೂನು ಆಧಾರ್ ಕೆವೈಸಿ ಪ್ರೊಸೆಸ್ ಕಡ್ಡಾಯವಲ್ಲ ಎಂದು ತಿಳಿಸಿದೆ ಮತ್ತು ನಿಮ್ಮ ಸಿಮ್ ಕಾರ್ಡಿಗೆ ಆಧಾರ್ ಲಿಂಕ್ ಮಾಡುವುದು ಅಗತ್ಯವಿಲ್ಲ ಎಂದು ಹೇಳಿದೆ. ಅಂದರೆ ಒಂದು ವೇಳೆ ನಿಮ್ಮ ಸಿಮ್ಮಿಗೆ ನೀವು ಆಧಾರ್ ಕಾರ್ಡ್ ಲಿಂಕ್ ಮಾಡದೇ ಇದ್ದಲ್ಲಿ ನಿಮ್ಮ ಸಿಮ್ಮನ್ನು ಡಿಆಕ್ಟಿವೇಟ್ ಮಾಡುತ್ತಾರೆ ಎಂಬ ಭಯ ಬೇಡ.

ಆಧಾರ್ ನಂಬರ್ ಬಳಸಿ ಕೂಡ ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳಬಹುದು:

ಬಳಕೆದಾರರು ಯಾವಾಗಲೂ ಹೊಸ ಸಿಮ್ ಕಾರ್ಡ್ ಆಕ್ಟಿವೇಷನ್ ಗೆ ಆಧಾರ್ ನಂಬರ್ ನ್ನು ಬಳಕೆ ಮಾಡುತ್ತಾರೆ. ಹಾಗಂತ ಆಧಾರ್ ನಂಬರ್ ಅಥವಾ ಆಧಾರ್ ಕಾರ್ಡ್ ನಿಂದಾಗಿ ಎದುರಾಗುವ ತೊಂದರೆಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಹೊಸ ಸಿಮ್ ಕಾರ್ಡ್ ಖರೀದಿಸುವಿಕೆಯಿಂದಾಗಿ ಆಧಾರ್ ನಂಬರ್ ಶೇರ್ ಆಗುತ್ತದೆ ಎಂದು ಚಿಂತಿಸುವ ಆಗತ್ಯವಿಲ್ಲ. ಒಂದು ವೇಳೆ ಸಿಮ್ ವೆಂಡರ್ ಯಾವುದೇ ಸರ್ಕಾರದ ಅಧಿಕೃತ ಐಡಿಯನ್ನು ಹೊಂದಿಲ್ಲದೇ ಇದ್ದಲ್ಲಿ ಅಂತಹ ವೆಂಡರ್ ಬಗ್ಗೆ ಗ್ರಾಹಕರು DoT ಗೆ ನೇರವಾಗಿ ದೂರು ನೀಡುವ ಅವಕಾಶವಿರುತ್ತದೆ.

ಈ ವೈಶಿಷ್ಟ್ಯತೆಯನ್ನು ಜಾರಿಗೆ ತರುವ ಮೂಲಕ ಬಳಕೆದಾರರಿಗೆ ಹೊಸ ಸಿಮ್ ಕಾರ್ಡ್ ಲಭ್ಯವಾಗುತ್ತದೆ, ಇಟರ್ನೆಟ್ ಕನೆಕ್ಷನ್ ಅಥವಾ ವೈ-ಫೈ ಕನೆಕ್ಷನ್ ಜೊತೆಗೆ ಯುನಿವರ್ಸಲ್ ಕೆವೈಸಿ ಪ್ರೊಸೆಸ್ ಕೂಡ ನಡೆಯುತ್ತದೆ.

Best Mobiles in India

English summary
How to get a new SIM card without Aadhaar card: The new KYC method

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X