ನಿಮ್ಮ ವೈರ್ಲೆಸ್ ಕೀಬೋರ್ಡ್ ಮತ್ತು ಮೌಸ್ ಅನ್ನು ಸುರಕ್ಷಿತವಾಗಿರಿಸುವುದು ಹೇಗೆ?

By Tejaswini P G

  ಹ್ಯಾಕರ್ಗಳು ವೈಫೈ ಕನೆಕ್ಷನ್, ಕಂಪ್ಯೂಟರ್ ಮತ್ತು ಸ್ಮಾರ್ಟ್ಫೋನ್ಗಳನ್ನು ಹ್ಯಾಕ್ ಮಾಡಿರುವಂಥ ಹಲವಾರು ಪ್ರಕರಣಗಳನ್ನು ನಾವು ನೋಡಿದ್ದೇವೆ.IoT ಸುರಕ್ಷತಾ ಸಂಸ್ಥೆಯಾದ ಬ್ಯಾಸ್ಟೀಲ್ ನ ವರದಿಯ ಅನುಸಾರ, ವೈರ್ಲೆಸ್ ಕೀಬೋರ್ಡ್ ಮತ್ತು ಮೌಸ್ಗಳು ಇಂತಹ ದಾಳಿಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದ್ದು, ಇದನ್ನು ಮೌಸ್ ಜ್ಯಾಕಿಂಗ್ ಎಂದು ಕರೆಯುತ್ತಾರೆ. ಸಂಶೋಧಕರ ಪ್ರಕಾರ ಈ ಪ್ರಕರಣಗಳಲ್ಲಿ ನಿಮ್ಮ ಸಾಧನಗಳು ಎನ್ಕ್ರಿಪ್ಟೆಡ್ ಆಗಿದ್ದರೂ ಇಂಟರ್ಲೋಪರ್ ಹತ್ತಿರದ ಆಂಟೆನಾ ಮೂಲಕ ಸಾವಿರ ಶಬ್ದಗಳು ಪ್ರತಿ ನಿಮಿಷದ ವೇಗದಲ್ಲಿ ಮೌಸ್ ಚಲನವಲನಗಳನ್ನು ಅಥವಾ ಕೀಸ್ಟ್ರೋಕ್ಗಳನ್ನು ಮಾಡುತ್ತದೆ.

  ನಿಮ್ಮ ವೈರ್ಲೆಸ್ ಕೀಬೋರ್ಡ್ ಮತ್ತು ಮೌಸ್ ಅನ್ನು ಸುರಕ್ಷಿತವಾಗಿರಿಸುವುದು ಹೇಗೆ?

  ಅಂದಾಜು 15 ಗೆರೆಗಳ ಕೋಡ್ ಮೂಲಕ ಹ್ಯಾಕರ್ಗಳು ನಿಮ್ಮ ಸಂಪೂರ್ಣ ಕಂಪ್ಯೂಟರ್ ಸಿಸ್ಟಮ್ ನ ನಿಯಂತ್ರಣವನ್ನು ಪಡೆಯಬಹುದು. ವಿಚಿತ್ರವೆನಿಸದರೂ ಇದು ಸತ್ಯ! ನೀವು ವೈರ್ಲೆಸ್ ಕೀಬೋರ್ಡ್ ಮತ್ತು ಮೌಸ್ ಹೊಂದಿದ್ದು, ಈ ಮೂಲಕ ನಿಮ್ಮ ಕಂಪ್ಯೂಟರ್ ಹ್ಯಾಕ್ ಆಗಬಹುದೆನ್ನುವ ಭಯ ಹೊಂದಿದ್ದರೆ, ಈಗ ನಿಶ್ಚಿಂತರಾಗಿ. ನೀವು ನಿಮ್ಮ ಸಾಧನಗಳ ಸುರಕ್ಷತೆಗಾಗಿ ಪಾಲಿಸಬಹುದಾದ ಹಲವು ವಿಧಾನಗಳನ್ನು ಇಲ್ಲಿ ನೀಡಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸಾಧನದ ಸುರಕ್ಷತೆ

  ಮೊದಲಿಗೆ ನಿಮ್ಮ ಸಾಧನ ಇಂತಹ ಆಕ್ರಮಣಕ್ಕೊಳಗಾಗುವಷ್ಟು ದುರ್ಬಲವಾಗಿದೆಯೇ ಎಂದು ಪರೀಕ್ಷಿಸಿ. ಕೆಲವು ಉತ್ಪಾದಕರು ಸಾಧನದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವುದಿಲ್ಲ. ಇನ್ನು ಕೆಲವು ಉತ್ಪಾದಕರು ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿರುತ್ತಾರೆ. ಆದಷ್ಟು ಉತ್ತಮ ಬ್ರ್ಯಾಂಡ್ ನ ಸಾಧನಗಳನ್ನೇ ಆಯ್ದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ನೋಡಿ

  ಫರ್ಮ್ವೇರ್ ಅಪ್ಡೇಟ್ಗಳು

  ನಿಮ್ಮ ಸಾಧನ ಹ್ಯಾಕರ್ಗಳ ಆಕ್ರಮಣಕ್ಕೆ ತುತ್ತಾಗಿದೆ ಎಂದು ನಿಮಗೆ ತಿಳಿದಾಗ ನೀವೇನು ಮಾಡಬೇಕು? ಮೊದಲಿಗೆ ನಿಮ್ಮ ಸಾಧನದ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ ಈ ತೊಂದರೆಯನ್ನು ಪರಿಹರಿಸುವಂತಹ ಫರ್ಮ್ವೇರ್ ಅಪ್ಡೇಟ್ಗಳು ಲಭ್ಯವಿದೆಯೇ ಎಂದು ಪರೀಕ್ಷಿಸಿ. ಈ ಅಪ್ಡೇಟ್ ನಿಮ್ಮ ತೊಂದರೆಯನ್ನು ಪರಿಹರಿಸುತ್ತದೆಯೇ ಎಂದು ಖಚಿತಪಡಿಸಿಕೊಂಡ ಮೇಲೆ ಅದನ್ನು ಡೌನ್ಲೋಡ್ ಮಾಡಿ

  ವೈರ್ಡ್ ಸಾಧನಗಳಿಗೆ ಆದ್ಯತೆ ನೀಡಿ

  ಈ ಹ್ಯಾಕರ್ಗಳು ಮತ್ತು ಮಾಲ್ವೇರ್ಗಳಿಂದ ಸುರಕ್ಷಿತವಾಗಿರಲು ಉತ್ತಮ ಉಪಾಯವೆಂದರೆ ವೈರ್ಡ್ ಸಾಧನಳನ್ನು ಬಳಸುವುದು. ಹೀಗೆ ಮಾಡುವುದರಿಂದ ಅವರು ವೈಫೈ ಮೂಲಕ ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ಮಾಡುವುದನ್ನು ತಪ್ಪಿಸಬಹುದು. ನಿಮ್ಮ ಕಂಪ್ಯೂಟರ್ ನ ಸುರಕ್ಷತೆಗೆ ಇದೇ ಉತ್ತಮ ಉಪಾಯ.

  ಏನಿದು ಡಿಜಿ ಲಾಕರ್.? ಈ ಆಪ್ ಬಳಕೆಯ ಅನುಕೂಲ-ಅನಾನುಕೂಲಗಳೇನು..?

  Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
  ನಿಮ್ಮ ಪಿಸಿ ಅನ್ನು ಲಾಕ್ ಮಾಡಿ

  ನಿಮ್ಮ ಪಿಸಿ ಅನ್ನು ಲಾಕ್ ಮಾಡಿ

  ನಿಮ್ಮ ಕಂಪ್ಯೂಟರ್ ಹ್ಯಾಕರ್ಗಳ ದಾಳಿಗೊಳಗಾಗಿದೆಯೆಂದು ನಿಮಗೆ ಅನಿಸಿದರೆ ಮೊದಲಿಗೆ ಅಡ್ಮಿನ್ ಸ್ಕ್ರೀನ್ ನಲ್ಲಿ ಕಂಪ್ಯೂಟರ್ ಅನ್ನು ಲಾಕ್ ಮಾಡಿ. ಆದರೆ ಹೀಗೆ ಮಾಡಿದರೂ ಕೀಲಾಗರ್ ಗಳು ನಿಮ್ಮ ಮಾಹಿತಿ ಕದಿಯುವುದನ್ನು ತಪ್ಪಿಸಲಾಗದು

  ಡೇಟಾ ಎನ್ಕ್ರಿಪ್ಶನ್

  ನಿಮ್ಮ ಕಂಪ್ಯೂಟರ್ನಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಅತ್ಯಂತ ಉತ್ತಮ ವಿಧಾನವೆಂದರೆ, ನಿಮ್ಮ ಕಂಪ್ಯೂಟರ್ ನ ಪ್ರತಿಯೊಂದು ಮುಖ್ಯವಾದ ಫೋಲ್ಡರ್ ಅನ್ನು ಪಾಸ್ಕೋಡ್ ಬಳಸಿ ಎನ್ಕ್ರಿಪ್ಟ್ ಮಾಡುವುದು. ನಿಮ್ಮ ಕಂಪ್ಯೂಟರ್ ಈಗಾಗಲೇ ಹ್ಯಾಕ್ ಆಗಿದ್ದರೆ ಈ ಉಪಾಯ ಕೆಲಸಮಾಡದು. ಆದರೆ ಭವಿಷ್ಯದಲ್ಲಿ ಮತ್ತೆ ಹ್ಯಾಕ್ ಆಗುವುದನ್ನು ತಪ್ಪಿಸಲು ಇದು ಉತ್ತಮ ಉಪಾಯ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  We have seen a lot of cases, where hackers hack the Wi-Fi connection, computer systems, and smartphones. If you are having a wireless mouse and keyboard attached to your computer and if you are scared of your computer being hacked, worry not. We have listed a few steps that you can follow to safeguard your system.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more