ನಿಮ್ಮ ಡ್ರೈವಿಂಗ್ ಲೈಸನ್ಸ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

|

ದಿನಗಳು ಕಳೆದಂತೆ ಭಾರತೀಯರಿಗೆ ಆಧಾರ್ ಕಾರ್ಡ್ ಬಹಳ ಮುಖ್ಯವಾದ ಗುರುತಿನ ಚೀಟಿಯಾಗಿ ಮಾರ್ಪಡುತ್ತಿದೆ.ಇದೀಗ ಲಭ್ಯವಿರುವ ವರದಿಯೊಂದರ ಪ್ರಕಾರ ಯುಐಡಿಎಐ ಮತ್ತು ಕೇಂದ್ರ ಸರ್ಕಾರವು ಆಧಾರ್ ಜೊತೆಗೆ ಡ್ರೈವಿಂಗ್ ಲೈಸನ್ಸ್ ನ್ನು ಕೂಡ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ.

ಪ್ರತಿ ರಾಜ್ಯಗಳಲ್ಲೂ ಡ್ರೈವಿಂಗ್ ಲೈಸನ್ಸ್ ಕಡ್ಡಾಯವೇ ಆಗಿರುವುದರಿಂದಾಗಿ ಯಾವುದೇ ವ್ಯಕ್ತಿಯು ಎರಡೆರಡು ಡ್ರೈವಿಂಗ್ ಲೈಸನ್ಸ್ ಹೊಂದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವ ಉದ್ದೇಶದಿಂದ ಆಧಾರ್ ಜೊತೆಗಿನ ಲಿಂಕ್ ನ್ನು ಮಾಡಲು ಕೇಂದ್ರ ಸರ್ಕಾರ ಇಚ್ಛಿಸಿದೆ ಎಂದು ತಿಳಿದು ಬಂದಿದೆ.

ನಿಮ್ಮ ಡ್ರೈವಿಂಗ್ ಲೈಸನ್ಸ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಆಧಾರ್ ಜೊತೆಗೆ ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವಿಕೆಯಿಂದಾಗಿ ಒಬ್ಬ ವ್ಯಕ್ತಿಯ ಎಲ್ಲಾ ವಯಕ್ತಿಕ ಮಾಹಿತಿಗಳು ಡಾಟಾಬೇಸ್ ನಲ್ಲಿ ದಾಖಲಾಗುತ್ತದೆ ಮತ್ತು ಯಾವುದೇ ವ್ಯಕ್ತಿಯು ಫೇಕ್ ಡ್ರೈವಿಂಗ್ ಲೈಸನ್ಸ್ ಅಥವಾ ಎರಡೆರಡು ಲೈಸನ್ಸ್ ಹೊಂದಿರುವ ಸಾಧ್ಯತೆಯನ್ನು ಇದು ತಡೆಯುತ್ತದೆ.

ರಾಜ್ಯ ಮತ್ತು ಕೇಂದ್ರ ಪ್ರದೇಶದ ರಸ್ತೆ ಸಾರಿಗೆ ಇಲಾಖೆಯಿಂದ ಡ್ರೈವಿಂಗ್ ಲೈಸನ್ಸ್ ನ್ನು ನೀಡಲಾಗುವುದರಿಂದಾಗಿ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುವ ಸಾಧ್ಯತೆ ಇದೆ. ಆದರೆ ಸಾಮಾನ್ಯವಾದ ಕೆಲವು ಹಂತಗಳು ಒಂದೇ ರೀತಿ ಆಗಿರುತ್ತದೆ.

ಒಂದು ವೇಳೆ ನೀವು ಕೂಡ ಡ್ರೈವಿಂಗ್ ಲೈಸನ್ಸ್ ಮತ್ತು ಆಧಾರ್ ಲಿಂಕ್ ಪ್ರಕ್ರಿಯೆಯನ್ನು ಹೇಗೆ ಮಾಡುವುದು ಎಂದು ತಿಳಿಯಲು ಇಚ್ಛಿಸಿದರೆ ಇಲ್ಲಿದೆ ನೋಡಿ ಹಂತಹಂತವಾಗಿರುವ ಮಾಹಿತಿ.

ಪ್ರಮುಖ ಅಗತ್ಯತೆಗಳು :

ಪ್ರಮುಖ ಅಗತ್ಯತೆಗಳು :

- ನಿಮ್ಮ ಡ್ರೈವಿಂಗ್ ಲೈಸನ್ಸ್ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ಇಟ್ಟುಕೊಳ್ಳಿ

- ಕೆಲಸ ನಿರ್ವಹಿಸುತ್ತಿರುವ ಅಂತರ್ಜಾಲ ಸಂಪರ್ಕ

ಅನುಸರಿಸಬೇಕಾಗಿರುವ ಹಂತಗಳು:

ಅನುಸರಿಸಬೇಕಾಗಿರುವ ಹಂತಗಳು:

1.ನಿಮ್ಮ ರಾಜ್ಯ ಸಾರಿಗೆ ಇಲಾಖೆಯ ವೆಬ್ ಸೈಟ್ ಗೆ ತೆರಳಿ.

2.ಲಿಂಕ್ ಆಧಾರ್ ಆಯ್ಕೆಯನ್ನು ಗಮನಿಸಿ

3.ಡ್ರಾಪ್ ಡೌನ್ ಮೆನುವಿನಿಂದ ಡ್ರೈವಿಂಗ್ ಲೈಸನ್ಸ್ ನ್ನು ಆಯ್ಕೆ ಮಾಡಿ

4.ನಿಮ್ಮ ಡ್ರೈವಿಂಗ್ ಲೈಸನ್ಸ್ ನಂಬರ್ ನ್ನು ಎಂಟರ್ ಮಾಡಿ ಮತ್ತು "ಗೆಟ್ ಡೀಟೆಲ್ಸ್" ಆಯ್ಕೆಯನ್ನು ಕ್ಲಿಕ್ಕಿಸಿ .

5.ನಿಮ್ಮ ಡ್ರೈವಿಂಗ್ ಲೈಸನ್ಸ್ ವಿವರಗಳನ್ನು ವೆರಿಫೈ ಮಾಡಿ

6.ಇದೀಗ, 12 ಸಂಖ್ಯೆಯ ಆಧಾರ್ ಕಾರ್ಡ್ ನಂಬರ್ ನ್ನು ಎಂಟರ್ ಮಾಡಿ

7.ಆಧಾರ್ ಜೊತೆಗೆ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ನ್ನು ಎಂಟರ್ ಮಾಡಿ

8.ಸಬ್ಮಿಟ್ ಬಟನ್ ನ್ನು ಕ್ಲಿಕ್ಕಿಸಿ

9.ಇದಾದ ನಂತರ ಒಂದು ಓಟಿಪಿಯನ್ನು ನೀವು ನಿಮ್ಮ ಮೊಬೈಲ್ ನಲ್ಲಿ ರಿಸೀವ್ ಮಾಡುತ್ತೀರಿ.

10.ಪ್ರೊಸೆಸ್ ನ್ನು ಕಂಪ್ಲೀಟ್ ಮಾಡಲು ಓಟಿಪಿಯನ್ನು ಎಂಟರ್ ಮಾಡಿ

ಸೂಚನೆ:

ಸೂಚನೆ:

ನಿಮ್ಮ ರಿಜಿಸ್ಟ್ರೇಷನ್ ಪ್ರೊಸೆಸ್ ನ್ನು ಪೂರ್ಣಗೊಳಿಸುವ ಮುನ್ನ ನಿಮ್ಮ ಎಲ್ಲಾ ವಯಕ್ತಿಕ ಮಾಹಿತಿಗಳನ್ನು ಪರಿಶೀಲಿಸಿ. ಒಂದು ವೇಳೆ ಯಾವುದೇ ಸಮಸ್ಯೆ ನಿಮ್ಮ ವಿವರಗಳಲ್ಲಿ ಇದ್ದಲ್ಲಿ ಅದನ್ನು ಪರಿಹರಿಸಿಕೊಂಡು ನಂತರ ಆಧಾರ್ ಲಿಂಕ್ ಕೆಲಸವನ್ನು ಪೂರ್ಣಗೊಳಿಸಿ.

Best Mobiles in India

Read more about:
English summary
How to link Aadhaar card with your driving license

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X