ಸೈಲೆಂಟ್ ಆಗಿರುವ ಐಫೋನ್ ಎಲ್ಲಿದೆ ಎಂದು ಗೊತ್ತಾಗುತ್ತಿಲ್ಲವೇ? ಹೀಗೆ ಮಾಡಿ

By Gizbot Bureau
|

ಸೈಲೆಂಟ್ ಆಗಿರುವ ಐಫೋನ್ ಎಲ್ಲಿದೆ ಎಂದು ಕಂಡುಹಿಡಿಯಲು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮುನ್ನ ಮೊದಲು ಸ್ವಲ್ಪ ಹುಡುಕಾಟ ನಡೆಸಿ. ಸಾಮಾನ್ಯವಾಗಿ ನೀವು ಫೋನ್ ಇಡುವ ಜಾಗಗಳು, ಮಂಚದ ಕೆಳಗೆ, ಸೋಫಾ ಕೆಳಗೆ, ಅಂಗಿಯ ಜೇಬಿನಲ್ಲಿ, ಇತ್ಯಾದಿ ಕಡೆಗಳಲ್ಲಿ ಹುಡುಕಾಡಿ.

ಸೈಲೆಂಟ್ ಆಗಿರುವ ಐಫೋನ್ ಎಲ್ಲಿದೆ ಎಂದು ಗೊತ್ತಾಗುತ್ತಿಲ್ಲವೇ? ಹೀಗೆ ಮಾಡಿ

ಒಂದು ವೇಳೆ ಎಲ್ಲೂ ಸಿಗದೇ ಇದ್ದಲ್ಲಿ ನಿಮ್ಮ ಫೋನಿಗೆ ಮೊದಲು ಕರೆ ಮಾಡಲು ಪ್ರಯತ್ನಿಸಿ. ರಿಂಗ್ ಆಗುತ್ತಿದ್ದು ಶಬ್ದ ಕೇಳಿಸದೇ ಇದ್ದಲ್ಲಿ ಬಹುಶ್ಯಃ ನಿಮ್ಮ ಫೋನ್ ಸೈಲೆಂಟ್ ಮೋಡ್ ಇರುವ ಸಾಧ್ಯತೆ ಇದೆ. ಹಾಗಾದ್ರೆ ಫೋನ್ ಕಂಡುಹಿಡಿಯುವುದಕ್ಕೆ ಪರಿಹಾರ ಏನು? ಕಳೆದು ಹೋಗಿರುವ ಸೈಲೆಂಟ್ ಮೋಡ್ ನಲ್ಲಿರುವ ಐಫೋನ್ ನ್ನು ಹೇಗೆ ಕಂಡುಹಿಡಿಯುವುದು?

ನಾವಿಲ್ಲಿ ಅದಕ್ಕಾಗಿ ಪರಿಹಾರದ ಕೆಲವು ಗೈಡ್ ಲೈನ್ ಗಳನ್ನು ಹೇಳಿದ್ದೇವೆ., ಅಗತ್ಯ ಬಿದ್ದರೆ ಪ್ರಯತ್ನಿಸಿ ನೋಡಬಹುದು.

ಪ್ರಾಥಮಿಕವಾಗಿ ಅಗತ್ಯವಾಗಿರುವ ಅಂಶಗಳು

ಪ್ರಾಥಮಿಕವಾಗಿ ಅಗತ್ಯವಾಗಿರುವ ಅಂಶಗಳು

ಹೆಚ್ಚಿನ ಮಂದಿ ಫೈಂಡ್ ಮೈ ಐಫೋನ್ ಫೀಚರ್ ನ್ನು ತಿಳಿದೇ ಇರುತ್ತೀರಿ. ಇದು ಸಾಮಾನ್ಯವಾಗಿ ಫೋನಿನ ಲೊಕೇಷನ್ ತಿಳಿದುಕೊಳ್ಳುವುದಕ್ಕೆ, ಕಳೆದು ಹೋಗಿರುವ ಡಿವೈಸ್ ನ್ನು ಲಾಕ್ ಮಾಡುವುದಕ್ಕೆ ನೆರವಾಗುತ್ತದೆ. ಆದರೆ ಹೆಚ್ಚಿನವರಿಗೆ ಈ ಫೀಚರ್ ಸೈಲೆಂಟ್ ಮೋಡ್ ಅಥವಾ ಡು ನಾಟ್ ಡಿಸ್ಟರ್ಬ್ ಮೋಡ್ ನಲ್ಲಿರುವ ಫೋನ್ ಕಂಡುಹಿಡಿಯುವುದಕ್ಕೆ ಕೂಡ ನೆರವು ನೀಡುತ್ತದೆ ಎಂಬುದು ತಿಳಿದಿಲ್ಲ.

ಅಗತ್ಯವಾಗಿ ಬೇಕಾಗಿರುವುದು:

ಅಗತ್ಯವಾಗಿ ಬೇಕಾಗಿರುವುದು:

1. ನಿಮ್ಮ ಸ್ಮಾರ್ಟ್ ಫೋನಿಗೆ ಇಂಟರ್ನೆಟ್ ಸಂಪರ್ಕ ಇದೆ ಎಂಬುದು ಖಾತ್ರಿ ಇರಬೇಕು.

2. ಸೆಟ್ಟಿಂಗ್ಸ್ ನಲ್ಲಿ ಫೈಂಡ್ ಮೈ ಫೋನ್ ಫೀಚರ್ ನ್ನು ಬಳಕೆದಾರರು ಆಕ್ಟಿವೇಟ್ ಮಾಡಿರಬೇಕು.

ಅನುಸರಿಸಬೇಕಾಗಿರುವ ಹಂತಗಳು:

ಅನುಸರಿಸಬೇಕಾಗಿರುವ ಹಂತಗಳು:

1.ನಿಮ್ಮ ಮ್ಯಾಕ್ ಅಥವಾ ಪಿಸಿಯ ಮೂಲಕ ‘www.icloud.com' ಗೆ ವಿಸಿಟ್ ಮಾಡಿ.

2.ಅಗತ್ಯ ಕ್ರಿಡೆನ್ಶಿಯಲ್ಸ್ ಬಳಸಿ ಲಾಗಿನ್ ಆಗಿ.

3.ಒಮ್ಮೆ ಲಾಗಿನ್ ಆದ ನಂತರ ಎಡಭಾಗದಲ್ಲಿ ಆ ಆಪಲ್ ಅಕೌಂಟ್ ಗೆ ಕನೆಕ್ಟ್ ಆಗಿರುವ ಎಲ್ಲಾ ಡಿವೈಸ್ ಗಳ ಪಟ್ಟಿ ಇರುತ್ತದೆ.

4.ಐಫೋನ್ ನ್ನು ಗಮನಿಸಿ ಮತ್ತು ಅದನ್ನು ಕ್ಲಿಕ್ಕಿಸಿ.

5.ಬಲಭಾಗದಲ್ಲಿ ಮ್ಯಾಪ್ ಇದ್ದು ಅದನ್ನು ಝೂಮ್ ಇನ್ ಮಾಡಿ ಫೋನಿನ ಲೊಕೇಷನ್ನಿನ 3ಡಿ ರೆಪ್ರಸಂಟೇಷನ್ ನ್ನು ಗಮನಿಸಿ.

6.ಸ್ಕ್ರೀನಿನ ಕೆಳಭಾಗದಲ್ಲಿ ಪ್ಲೇ ಸೌಂಡ್ ಅನ್ನುವ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ಕಿಸಿ.

7.ಒಂದು ವೇಳೆ ಎಲ್ಲವೂ ಸರಿಯಾಗಿದ್ದಲ್ಲಿ ನಿಮ್ಮ ಫೋನ್ ಈಗಲೂ ಅಂತರ್ಜಾಲ ಸಂಪರ್ಕಕ್ಕೆ ಒಳಪಟ್ಟಿದ್ದರೆ, ಅದು ಗಟ್ಟಿಯಾಗಿ ಶಬ್ಧ ಮಾಡಲು ಆರಂಭಿಸುತ್ತದೆ.

8.ಐಫೋನ್ ಕಂಡುಹಿಡಿಯುವುದಕ್ಕಾಗಿ ಶಬ್ದ ಕೇಳಿಸುತ್ತಿರುವ ಜಾಗವನ್ನು ಟ್ರಾಕ್ ಮಾಡಿ.

9.ಒಮ್ಮೆ ಹುಡುಕಿದ ನಂತರ ಸೌಂಡ್ ನ್ನು ಆಫ್ ಮಾಡಿ.

ಇದರ ಬದಲಾಗಿ, ಸೇಮ್ ಆಪಲ್ ಅಕೌಂಟಿಗೆ ಕನೆಕ್ಟ್ ಆಗಿರುವ ಐಪ್ಯಾಡ್ ತೆಗೆದುಕೊಳ್ಳಬಹುದು ಮತ್ತು ಫೈಂಡ್ ಮೈ ಫೋನ್ ಆಯ್ಕೆಗೆ ತೆರಳಬಹುದು ಮತ್ತು ಪ್ಲೇ ಸೌಂಡ್ ಆಯ್ಕೆಯನ್ನು ಟ್ಯಾಪ್ ಮಾಡಿ ಕಳೆದುಹೋಗಿರುವ ಅಥವಾ ಸೈಲೆಂಟ್ ಮೋಡ್ ನಲ್ಲಿದ್ದು ಕೈಗೆ ಸಿಗದೇ ಇರುವ ನಿಮ್ಮ ಐಫೋನ್ ನ್ನು ಕಂಡುಹಿಡಿಯಬಹುದು.

Best Mobiles in India

English summary
How to locate your ‘silent’ iPhone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X