USB ಡ್ರೈವ್ ಬಳಸಿ ವಿಂಡೋಸ್ ಪಿಸಿ ಲಾಕ್/ಅನ್ಲಾಕ್ ಮಾಡುವುದು ಹೇಗೆ?

ಪ್ರೆಡೇಟರ್ ಟೂಲ್ ಬಳಸಿ ವಿಂಡೋಸ್ ಪಿಸಿ ಅನ್ನು ಲಾಕ್/ಅನ್ಲಾಕ್ ಮಾಡಲು USB ಡ್ರೈವ್ ಅನ್ನು ಕೀ ಆಗಿ ಪರಿವರ್ತಿಸಬಹುದು.

By Tejaswini P G
|

ನಿಮ್ಮ ವಿಂಡೋಸ್ ಪಿಸಿಯನ್ನು ಹೆಚ್ಚಿನ ಸುರಕ್ಷತೆಗಾಗಿ ಕೀ ಬಳಸಿ ಲಾಕ್/ಅನ್ಲಾಕ್ ಮಾಡಬಹುದು ಎನ್ನುವುದು ನಿಮಗೆ ತಿಳಿದಿದೆಯೇ? ಹೌದು. ಈ ಕಾರಣಕ್ಕಾಗಿ ನಿಮ್ಮ ಪೆನ್ ಡ್ರೈವ್ ಅನ್ನು ನಿಮ್ಮ ಕಂಪ್ಯೂಟರ್ ಅನ್ನು ಲಾಕ್/ಅನ್ಲಾಕ್ ಮಾಡುವ ಕೀ ಆಗಿ ಪರಿವರ್ತಿಸಲು ಬಹಳಷ್ಟು ಸಾಧನಗಳು ಆನ್ಲೈನ್ ನಲ್ಲಿ ಲಭ್ಯವಿದೆ. ಈ ಲೇಖನದಲ್ಲಿ ಪೆನ್ ಡ್ರೈವ್ ಬಳಸಿ ಕಂಪ್ಯೂಟರ್ ಅನ್ನು ಲಾಕ್/ಅನ್ಲಾಕ್ ಮಾಡುವ ವಿಧಾನವನ್ನು ನಿಮಗಾಗಿ ಸಂಪಾದಿಸಿದ್ದೇವೆ.

USB ಡ್ರೈವ್ ಬಳಸಿ ವಿಂಡೋಸ್ ಪಿಸಿ ಲಾಕ್/ಅನ್ಲಾಕ್ ಮಾಡುವುದು ಹೇಗೆ?


ಈ ಲೇಖನದಲ್ಲಿ ನಾವು ಪ್ರೆಡೇಟರ್ ಎಂಬ ಉಚಿತ ವಿಂಡೋಸ್ ಸಾಫ್ಟ್ವೇರ್ ಬಗ್ಗೆ ತಿಳಿಸಲಿದ್ದು, USB ಡ್ರೈವ್ ಅನ್ನು ಕಂಪ್ಯೂಟರ್ ನ ಕೀಯಾಗಿ ಪರಿವರ್ತಿಸುವ ಸಾಮರ್ಥ್ಯ ಇದಕ್ಕಿದೆ. ಈ ಸಾಫ್ಟ್ವೇರ್ ಮೂಲಕ USB ಡ್ರೈವ್ ಕಂಪ್ಯೂಟರ್ ನ ಕೀಯಾಗಿ ಕೆಲಸಮಾಡುತ್ತದೆ ಮತ್ತು ಅದನ್ನು ಕಂಪ್ಯೂಟರ್ನಿಂದ ತೆಗೆಯುವ ಮೂಲಕ ಕಂಪ್ಯೂಟರ್ ಅನ್ನು ಲಾಕ್ ಮಾಡಬಹುದು! ಇದನ್ನು ಸಾಧಿಸಲು ಈ ಕೆಳಗಿನ ಸೂಚನೆಗಳನ್ನು ಪಾಲಿಸಿ.

ಹಂತ 1: ಪ್ರೆಡೇಟರ್ ಟೂಲ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ

ಹಂತ 2: ಈಗ ಪ್ರೆಡೇಟರ್ ಟೂಲ್ ಅನ್ನು ಲಾಂಚ್ ಮಾಡಿ ಕಂಪ್ಯೂಟರ್ ಗೆ USB ಫ್ಲ್ಯಾಶ್ ಡ್ರೈವ್ ಅನ್ನು ಪ್ಲಗ್ ಮಾಡಿ. ನಿಮ್ಮ USB ಡ್ರೈವ್ ನಲ್ಲಿರುವ ಡೇಟಾ ಕಳೆದುಹೋಗುವುದೆಂಬ ಭಯ ಬೇಡ. ಈ ಟೂಲ್ನಿಂದ USB ಡ್ರೈವ್ನಲ್ಲಿರುವ ಡೇಟಾ ಗೆ ಯಾವುದೇ ತೊಂದರೆಯಿಲ್ಲ

ಹಂತ 3: USB ಡ್ರೈವ್ ಅನ್ನು ಕಂಪ್ಯೂಟರ್ ಗೆ ಪ್ಲಗ್ ಮಾಡಿದ ತಕ್ಷಣ, ಅನ್ಲಾಕ್ ಮಾಡುವುದಕ್ಕಾಗಿ ಪಾಸ್ವರ್ಡ್ ಸೆಟ್ ಮಾಡುವಂತೆ ಡೈಲಾಗ್ ಬಾಕ್ಸ್ ಒಂದು ನಿಮ್ಮ ಮುಂದೆ ಬರುತ್ತದೆ.

ಹಂತ 4: ಪ್ರಿಫರೆನ್ಸಸ್ ಮೆನುವಿಗೆ ಹೋಗಿ ಹೊಸ ಪಾಸ್ವರ್ಡ್ ಅನ್ನು ಸೆಟ್ ಮಾಡಬಹುದು

ಹಂತ 5: ನೀವು ಬಯಸಿದಲ್ಲಿ "ಆಲ್ವೇಸ್ ರಿಕ್ವೈರ್ಡ್" ಎಂಬ ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಬಹುದು. ಈ ಮೂಲಕ ನೀವು ಪಿಸಿ ಅನ್ನು ಅನ್ಲಾಕ್ ಮಾಡಲು ಪೆನ್ ಡ್ರೈವ್ ಬಳಸಿದಾಗಲೆಲ್ಲಾ ಪಾಸ್ವರ್ಡ್ ಟೈಪ್ ಮಾಡುವಂತೆ ಸೂಚಿಸುತ್ತದೆ.

ಹಂತ 6: ಅಲ್ಲದೆ ಪಾಸ್ವರ್ಡ್ ಸೆಟ್ ಮಾಡುವಾಗ ಫ್ಲ್ಯಾಶ್ ಡ್ರೈವ್ ವಿಭಾಗದಲ್ಲಿ ಸರಿಯಾದ USB ಡ್ರೈವ್ ಅನ್ನೇ ಆಯ್ಕೆ ಮಾಡಿದ್ದೀರೆಂದು ಖಚಿತಪಡಿಸಿಕೊಳ್ಳಿ. ನಂತರ "ಕ್ರಿಯೇಟ್ ಕೀ" ಮೇಲೆ ಕ್ಲಿಕ್ ಮಾಡಿ "ಒಕೆ" ಕ್ಲಿಕ್ ಮಾಡಿ.

ಗೂಗಲ್ ಇನ್ಸ್‌ಟೆಂಟ್ ಆಪ್ ಪ್ಲೇ ಸ್ಟೋರಿನಲ್ಲಿ ಲಭ್ಯ: ವಿಶೇಷತೆ ಏನು..?ಗೂಗಲ್ ಇನ್ಸ್‌ಟೆಂಟ್ ಆಪ್ ಪ್ಲೇ ಸ್ಟೋರಿನಲ್ಲಿ ಲಭ್ಯ: ವಿಶೇಷತೆ ಏನು..?

Best Mobiles in India

English summary
Do you know that you can lock/unlock your PC with a key for better security? In this, we are going to use an app called Predator,that turns your USB drive

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X