ಗೂಗಲ್ ಅಸಿಸ್ಟೆಂಟ್‌ನಲ್ಲಿ ಒಂದೇ ವಾಯ್ಸ್ ಕಮಾಂಡ್‌ನಲ್ಲಿ ಹಲವು ಟಾಸ್ಕ್!

|

ಈ ವರ್ಷದ ಜೂನ್ ನಲ್ಲಿ ಗೂಗಲ್ ಗೂಗಲ್ ರೂಟೀನ್ಸ್ ನ್ನು ಪರಿಚಯಿಸಿತು. ಈ ವೈಶಿಷ್ಟ್ಯತೆಯು ಕೇವಲ ಒಂದು ವಾಯ್ಸ್ ಕಮಾಂಡ್ ನ್ನು ತೆಗೆದುಕೊಳ್ಳುವ ಮೂಲಕ ಒಂದಾದ ಮೇಲೆ ಒಂದರಂತೆ ಹಲವು ಟಾಸ್ಕ್ ಗಳನ್ನು ನಿರ್ವಹಿಸುತ್ತದೆ. ಭಾರತದ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಕ್ಲಾಕ್ ಅಪ್ಲಿಕೇಷನ್ ನಲ್ಲಿ ಅಲರಾಂಗಳನ್ನು ಹೊಂದಿಸುವಾಗ ಈ ವೈಶಿಷ್ಟ್ಯತೆಯು ಹೆಚ್ಚಾಗಿ ಕಂಡುಬರುತ್ತದೆ.

ಗೂಗಲ್ ಅಸಿಸ್ಟೆಂಟ್‌ನಲ್ಲಿ ಒಂದೇ ವಾಯ್ಸ್ ಕಮಾಂಡ್‌ನಲ್ಲಿ ಹಲವು ಟಾಸ್ಕ್ !

ಇದು ಕೇವಲ ನಿಮ್ಮ ಮಾನ್ಯುವಲ್ ಆಗಿ ಮಾಡಬಹುದಾದ ಕೆಲಸದ ಶ್ರಮವನ್ನು ಮಾತ್ರವೇ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಉಳಿಸುವುದಿಲ್ಲ ಬದಲಾಗಿ ನಿಮ್ಮ ಸಮಯದ ಉಳಿತಾಯವನ್ನು ಕೂಡ ಮಾಡುತ್ತದೆ. ಹಾಗಾದ್ರೆ ಗೂಗಲ್ ರೂಟೀನ್ಸ್ ನ್ನು ಬಳಕೆ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ ನೋಡಿ.

ಕ್ಲಾಕ್ ಆಪ್ ನ ಒಳಗೆ ಗೂಗಲ್ ರೂಟೀನ್ ಸೆಟ್ ಅಪ್ ಮಾಡುವುದು ಹೇಗೆ ಎಂಬ ಹಂತಹಂತವಾಗಿರುವ ಮಾಹಿತಿ ಇಲ್ಲಿದೆ ನೋಡಿ.

ಹಂತ 1

ಅಲಾರಾಂನ್ನು ಸೆಟ್ ಮಾಡುವಾಗ ಗೂಗಲ್ ಅಸಿಸ್ಟೆಂಟ್ ರೂಟೀನ್ ನ್ನು ಟ್ಯಾಪ್ ಮಾಡಿ. ಅಲಾರಾಂನ್ನು ಡಿಸ್ ಮಿಸ್ ಮಾಡಿದ ಕೂಡಲೇ ಅಸಿಸ್ಟೆಂಟ್ ಮಾಡುವ ಎಲ್ಲಾ ಟಾಸ್ಕ್ ಗಳ ವಿವರದ ಪೇಜ್ ತೆರೆದುಕೊಳ್ಳುತ್ತದೆ.

ಹಂತ 2

ನೀವು ಯಾವುದೇ ಟಾಸ್ಕ್ ನ್ನು ಕೂಡ ಟ್ಯಾಪ್ ಮಾಡಬಹುದು ಉದಾಹರಣೆಗೆ ವಾಲ್ಯೂಮ್ ಅಡ್ಜೆಸ್ಟ್ ಮಾಡುವಿಕೆ, ಹವಾಮಾನ ವರದಿ ತಿಳಿಯುವುದು, ಇವತ್ತಿನ ಕ್ಯಾಲೆಂಡರ್ ನ ಮಾಹಿತಿ, ಇವತ್ತಿನ ರಿಮೈಂಡರ್ ಗಳನ್ನು ತಿಳಿಸುವುದು, ಅಥವಾ ಮೊಬೈಲ್ ನ್ನು ಸೈಲೆಂಟ್ ಗೆ ಹಾಕುವುದು ಇತ್ಯಾದಿ.

ಹಂತ 3

ಒಮ್ಮೆ ಸೆಲೆಕ್ಟ್ ಮಾಡಿದ ನಂತರ, ಗೂಗಲ್ ಅಸಿಸ್ಟೆಂಟ್ ತೆಗೆದುಕೊಂಡಿರುವ ಟಾಸ್ಕ್ ನ ಆರ್ಡರ್ ನ್ನು ಚೇಂಜ್ ಮಾಡಬಹುದು

ಹಂತ 4

'And then play...’ ಮೂಲಕ ನೀವು ಯಾವುದಾದರೂ ಒಂದು ಟಾಸ್ಕ್ ನ್ನು ಆಯ್ಕೆ ಮಾಡಬಹುದು. ಇದರಲ್ಲಿ ನ್ಯೂಸ್, ಪಾಡ್ ಕಾಸ್ಟ್, ಆಡಿಯೋ ಬುಕ್ ಮತ್ತು ನಥಿಂಗ್ ಆಯ್ಕೆಗಳಿರುತ್ತದೆ.

ಹಂತ 5

ನ್ಯೂಸ್ ನ್ನು ಅಸಿಸ್ಟೆಂಟ್ ಎಲ್ಲಿಂದ ಓದುತ್ತಿದೆ ಎಂಬುದನ್ನು ಕೂಡ ಆಯ್ಕೆ ಮಾಡಬಹುದು.ಇದು ಪಾಡ್ ಕಾಸ್ಟ್ ಗೂ ಕೂಡ ಅನ್ವಯಿಸುತ್ತದೆ.

ಹಂತ 6

ಒಮ್ಮೆ ಮುಗಿದ ನಂತರ ಮೇಲ್ಬಾಗದ ಬಲತುದಿಯಲ್ಲಿರುವ 'ಟಿಕ್ ಮಾರ್ಕ್’ನ್ನು ಕ್ಲಿಕ್ಕಿಸಿ. ಅಷ್ಟೇ ಅಲ್ಲದೆ ನಿಮಗೆ ಅಸಿಸ್ಟೆಂಟ್ ಲಾಕ್ ಸ್ಕ್ರೀನ್ ನಲ್ಲಿ ಮಾಹಿತಿಯನ್ನು ಎಂಬುದನ್ನು ಪ್ರಾಂಪ್ಟ್ ನಲ್ಲಿ ತಿಳಿಸಲಾಗುತ್ತದೆ.ಅಪ್ರೂ ಮಾಡಲು ಅಲೋ ಕ್ಲಿಕ್ಕಿಸಿ. 7.

ಹಂತ 7

ಇದಿಷ್ಟು ಮಾಡಿದರೆ ಮುಗಿಯಿತು. ನೀವು ಕಲರ್ ಇರುವ ಗೂಗಲ್ ಅಸಿಸ್ಟೆಂಟ್ ರುಟೂನ್ ನ್ನು ಗಮನಿಸುತ್ತೀರಿ ಮತ್ತು ಈ ಐಕಾನ್ ಅಲಾರಾಂನ ಕೆಳಗಿರುತ್ತದೆ. ಇದನ್ನು ರಿಮೂವ್ ಮಾಡಲು “– “ ಚಿಹ್ನೆಯನ್ನು ಕ್ಲಿಕ್ಕಿಸಿ. ಇದೀಗ ಕ್ಲಾಕ್ ಅಪ್ಲಿಕೇಷನ್ ಒಳಗೆ ಗೂಗಲ್ ರೂಟೀನ್ಸ್ ಭಾರತದಲ್ಲಿ ಕಾಣಿಸಿಕೊಳ್ಳುವುದಕ್ಕೆ ಆರಂಭವಾಗುತ್ತದೆ. ಇದೇ ರೀತಿಯ ಏಕೀಕರಣವನ್ನು ಇತರ ಸೇವೆಗಳಲ್ಲೂ ಸಾಧಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

Most Read Articles
Best Mobiles in India

Read more about:
English summary
How to make Google Assistant perform multiple tasks with a single voice command

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X