BFF ಅಂತ ಕಾಮೆಂಟ್ ಮಾಡಿದ್ರೆ ಫೇಸ್‌ಬುಕ್‌ ಸೇಫ್‌ ಆಗಲ್ಲ: ಸೆಕ್ಯೂರಿಟಿ ಟಿಪ್ಸ್ ಇಲ್ಲಿದೆ..!

|

ಐದು ಕೋಟಿ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯೂ ಲೀಕ್ ಆಗಿದೆ ಎನ್ನುವ ಮಾಹಿತಿಯೂ ಜಾಗತಿಕವಾಗಿ ಭಾರೀ ಸಂಚಲವನ್ನು ಉಂಟು ಮಾಡಿರುವ ಹಿನ್ನಲೆಯಲ್ಲಿ ನಿಮ್ಮ ಫೇಸ್‌ಬುಕ್‌ ಖಾತೆಯನ್ನು ಡಿಲೀಟ್ ಮಾಡುವುದೇ ಉತ್ತಮ, ಆದರೆ ಅದನ್ನು ಬಿಟ್ಟಿರಲು ಸಾಧ್ಯವಿಲ್ಲ ಎನ್ನುವವರು ತಮ್ಮ ಖಾತೆಯನ್ನು ಭದ್ರಪಡಿಸಿಕೊಳ್ಳುವುದು ಸರಿಯಾದ ಮಾರ್ಗವಾಗಿದೆ. ಇದಕ್ಕಾಗಿ ನೀವು ಏನು ಮಾಡಬೇಕು..?

BFF ಅಂತ ಕಾಮೆಂಟ್ ಮಾಡಿದ್ರೆ ಫೇಸ್‌ಬುಕ್‌ ಸೇಫ್‌ ಆಗಲ್ಲ

ನಿಮ್ಮ ಫೇಸ್‌ಬುಕ್ ನಲ್ಲಿ ಬರುವ ಲಿಂಕ್ ಕ್ಲಿಕ್ ಮಾಡುವಾಗ ಹುಷಾರಾಗಿರಬೇಕು. ಏಕೆಂದರೆ ಹ್ಯಾಕರ್‌ಗಳು ಹರಿಬಿಡುವ ಲಿಂಕ್ ಒಪನ್ ಮಾಡಿದರೆ ನಿಮ್ಮ ಖಾತೆಯೂ ಹ್ಯಾಕ್‌ ಆಗುವುದು ಖಂಡಿತ. ಈ ಹಿನ್ನಲೆಯ್ಲಿ ಫೇಸ್‌ಬುಕ್ ರಕ್ಷಿಸಿಕೊಳ್ಳಲು ಫೇಸ್‌ಬುಕ್‌ನಲ್ಲಿಯೇ ಕೆಲವು ಆಯ್ಕೆಗಳಿದೆ ಅದನ್ನು ಬಳಸಿಕೊಂಡರೆ ನಿಮ್ಮ ಫೇಸ್‌ಬುಕ್ ಸುರಕ್ಷಿತವಾಗಿರಲಿದೆ.

ಸ್ಟ್ರಾಂಗ್ ಪಾಸ್‌ವರ್ಡ್ ನೀಡಿ:

ಸ್ಟ್ರಾಂಗ್ ಪಾಸ್‌ವರ್ಡ್ ನೀಡಿ:

ನೀವು ಫೇಸ್‌ಬುಕ್ ಪಾಸ್‌ವರ್ಡ್‌ ನೀಡುವ ಸಂದರ್ಭದಲ್ಲಿಯೇ ನಿಮ್ಮ ಪಾಸ್‌ವರ್ಡ್‌ ಎಷ್ಟು ಸ್ಟ್ರಾಂಗ್ ಆಗಿದೆ ಎನ್ನುವುದನ್ನು ಫೇಸ್‌ಬುಕ್ ತಿಳಿಸುತ್ತದೆ. ಪಾಸ್‌ವರ್ಡ್‌ ಹೆಚ್ಚು ಸ್ಟ್ರಾಂಗ್‌ ಆಗಿದ್ದಷ್ಟು ನಿಮ್ಮ ಫೇಸ್‌ಬುಕ್ ಹೆಚ್ಚು ಸೇಫ್‌ ಆಗಿರಲಿದೆ. ಇದರಿಂದ ಹ್ಯಾಕರ್ಸ್‌ ನಿಮ್ಮ ಖ್ಯಾತೆಯನ್ನು ಏನು ಮಾಡಲು ಸಾಧ್ಯವಿಲ್ಲ.

ಎರಡು ಹಂತದ ಸುರಕ್ಷತೆ:

ಎರಡು ಹಂತದ ಸುರಕ್ಷತೆ:

ಇದಲ್ಲದೇ ಫೇಸ್‌ಬುಕ್‌ ಎರಡು ಹಂತದ ಸುರಕ್ಷತೆಯ ಸೇವೆಯನ್ನು ನಿಮಗೆ ನೀಡಲಿದೆ. ಒಂದು ಪಾಸ್‌ವರ್ಡ್‌ ಮತ್ತು ನೀವು ಲಾಗ್ ಇನ್ ಆಗಬೇಕಾದರೆ ನಿಮ್ಮ ಫೋನ್ ನಂಬರ್‌ಗೆ OTP ಬರಲಿದೆ ಅದನ್ನು ಹಾಕಿದರೆ ಮಾತ್ರವೇ ನೀವು ಲಾಗ್ ಇನ್‌ ಆಗಲು ಸಾಧ್ಯವಿದೆ.

ಲಾಗ್‌ಇನ್ ಆಲರ್ಟ್:

ಲಾಗ್‌ಇನ್ ಆಲರ್ಟ್:

ಇದಲ್ಲದೇ ನೀವು ಫೇಸ್‌ಬುಕ್‌ ಖಾತೆಗೆ ಲಾಗ್ ಇನ್ ಆದ ಪ್ರತಿ ಸಂದರ್ಭದಲ್ಲಿಯೂ ನಿಮ್ಮ ಮೊಬೈಲ್ ಫೋನ್ ಮತ್ತು ಮೇಲ್ ಐಡಿಗೆ ಲಾಗ್‌ಇನ್ ಆಲರ್ಟ್ ಪಡೆದುಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಖಾತೆಗೆ ನಿಮ್ಮನ್ನು ಬಿಟ್ಟು ಬೇರೆಯಾದರು ಲಾಗ್‌ ಇನ್ ಆದರೆ ನಿಮಗೆ ಬೇಗನೇ ತಿಳಿಯಲಿದೆ.

How To Link Aadhaar With EPF Account Without Login (KANNADA)
ಎಲ್ಲೆಂದರಲ್ಲಿ ಲಾಗ್ ಆಗಬೇಡಿ:

ಎಲ್ಲೆಂದರಲ್ಲಿ ಲಾಗ್ ಆಗಬೇಡಿ:

ಯಾವುದೇ ಅಪರಿಚಿತ ಕಂಪ್ಯೂಟರ್‌ನಲ್ಲಿ ಲಾಗ್‌ ಇನ್ ಆಗುವ ಸಂದರ್ಭದಲ್ಲಿ ಬ್ರೌಸರ್‌ಗಳಲ್ಲಿ ಇನ್‌ಕಾಗ್ನಿಟೋ ಮೋಡ್ ನಲ್ಲಿ ಬ್ರೌಸ್ ಮಾಡಿ. ಈ ಸಂದರ್ಭದಲ್ಲಿ ನಿಮ್ಮ ಮಾಹಿತಿಯೂ ಬ್ರೌಸರ್ ನಲ್ಲಿ ಉಳಿಯುವುದಿಲ್ಲ. ಇದರಿಂದ ನಿಮ್ಮ ಫೇಸ್‌ಬುಕ್‌ ಖಾತೆ ಸೇಫ್‌ ಆಗಲಿದೆ. ನಿಮ್ಮ ಮಾಹಿತಿಯೂ ಲೀಕ್ ಆಗುವುದಿಲ್ಲ.

Best Mobiles in India

English summary
how to make your Facebook account safe

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X