ಆಟೋ ಪ್ಲೇಯಾಗುವ ವೀಡಿಯೊಗಳನ್ನು ಮ್ಯೂಟ್ ಮಾಡುವುದು ಹೇಗೆ.?

By Precilla Dias
|

ದಿನ ಕಳೆದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಅಲ್ಲದೇ ವೆಬ್ ಸೈಟು ಗಳಲ್ಲಿ ಬರುವಂತಹ ಆಡ್ ಗಳಲ್ಲಿಯೂ ವೀಡಿಯೊ ಹೆಚ್ಚಾಗಿದ್ದು, ನಿಮ್ಮ ಅನುಮತಿಯೂ ಇಲ್ಲದೇ ವೀಡಿಯೊಗಳು ಪ್ಲೇ ಆಗುತ್ತವೆ. ಈ ಹಿನ್ನಲೆಯಲ್ಲಿ ನಿಮ್ಮ ಬ್ರೌಸರ್ ಗಳಲ್ಲಿ ಈ ಆಟೋ ಪ್ಲೇ ವೀಡಿಯೊಗಳನ್ನು ಹೇಗೆ ಮ್ಯೂಟ್ ಮಾಡುವುದು ಎನ್ನುವುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ಕ್ರೋಮ್:

ಕ್ರೋಮ್:

ಆಟೋ ಪ್ಲೇ ವೀಡಿಯೊಗಳನ್ನು ಮ್ಯೂಟ್ ಮಾಡಲು ನೀವು ಸೌಂಡ್ ಬ್ಲಾಕರ್ ಎಕ್ಸ್ ಟೆಷನ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದು ಎಲ್ಲಾ ಟ್ಯಾಬ್ ಗಳನ್ನು ಮ್ಯೂಟ್ ಮಾಡಲಿದೆ. ಇದಲ್ಲದೇ ಕೇಲವು ವೆಬ್ ಸೈಟ್ ಗಳನ್ನು ತಾತ್ಕಾಲಿಕವಾಗಿ ಅನ್ ಮ್ಯೂಟ್ ಮಾಡಿಕೊಳ್ಳಲು ಇದರಲ್ಲಿ ಅವಕಾಶ ನೀಡಲಾಗಿದೆ.

ಆಯ್ಕೆ ಹೀಗಿದೆ:

ಅ) ಯಾವಾಗಲೂ ಅನುಮತಿಸಿ (ವೈಟ್ಲಿಸ್ಟ್ ಸೈಟ್)

ಆ) ಒಮ್ಮೆ ಅನುಮತಿಸಿ (ಮತ್ತೆ ಪ್ರಾಂಪ್ಟ್ ಮಾಡಿ)

ಇ) ಒಮ್ಮೆಗೆ ತಿರಸ್ಕರಿಸಿ (ಮತ್ತೆ ಪ್ರಾಂಪ್ಟ್ ಮಾಡಿ)

ಈ) ಎಂದಿಗೂ ಅನುಮತಿಸಬೇಡ (ಬ್ಲ್ಯಾಕ್ಲಿಸ್ಟ್ ಸೈಟ್)

ಹಲವಾರು ವಿಧಾನಗಳನ್ನು ಸಹ ಹೊಂದಿದೆ:

ಅ) ವೈಟ್ಲಿಸ್ಟ್ ಸೈಟ್ ಮಾತ್ರ ಅನುಮತಿಸಿ

ಆ) ಎಲ್ಲಾ ಸೈಟ್ಗಳನ್ನು ನಿಷೇಧಿಸಿ

ಇ) ಎಲ್ಲಾ ಸೈಟ್ಗಳನ್ನು ಅನುಮತಿಸಿ

ಫೈರ್ ಫಾಕ್ಸ್ ನಲ್ಲಿ:

ಫೈರ್ ಫಾಕ್ಸ್ ನಲ್ಲಿ:

ಇದಲ್ಲದೇ ನೀವು ಫೈರ್ ಫಾಕ್ಸ್ ನಲ್ಲಿ ಆಡ್ ಆನ್ ಹಾಕಿಕೊಳ್ಳಬೇಕಾಗಿದೆ. ಇದಕ್ಕಾಗಿ ಮ್ಯೂಟ್ ಸೈಟ್ ಬೈ ಡಿಫಾಲ್ಟ್ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕಾಗಿದೆ. ಇದು ಎಲ್ಲಾ ವೆಬ್ ತಾಣ ಗಳ ಸೌಂಡ್ ಅನ್ನುಮ್ಯೂಟ್ ಮಾಡಲಿದೆ.

ಸಫಾರಿ:

ಸಫಾರಿ:

ನೀವು ಸಫಾರಿ ಬಳಕೆ ಮಾಡಿಕೊಳ್ಳುತ್ತಿದ್ದರೇ ಅಲ್ಲಿಯೇ ಆಯ್ಕೆಯನ್ನು ನೀಡಲಾಗಿದೆ. ಬ್ಲೂ ಕಲರ್ ನಲ್ಲಿರುವ ಸ್ಪೀಕರ್ ಬಟನ್ ಮೇಲೆ ಡಬ್ಬಲ್ ಕ್ಲಿಕ್ ಮಾಡಿದರೆ ಸಾಕು ಎಲ್ಲಾ ಸೈಟ್ ಗಳು ಮ್ಯೂಟ್ ಆಗಲಿದೆ.

ಒಪೆರಾ:

ಒಪೆರಾ:

ನಿಮ್ಮ ಟ್ಯಾಬ್ ನಲ್ಲಿ ರೈಟ್ ಕ್ಲಿಕ್ ಮಾಡಿ, ಮಾಡಿದ ನಂತರದಲ್ಲಿ ಮ್ಯೂಟ್ ಆದರ್ ಟ್ಯಾಬ್ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ. ಹೀಗೆ ಮಾಡಿಕೊಳ್ಳುವುದರಿಂದ ನೀವು ಎಲ್ಲಾ ಟ್ಯಾಬ್ ಗಳನ್ನು ಮ್ಯೂಟ್ ಮಾಡಬಹುದಾಗಿದೆ.

How To Link Aadhaar With EPF Account Without Login (KANNADA)
ಮೈಕ್ರೋ ಸಾಫ್ಟ್ ಎಡ್ಜ್:

ಮೈಕ್ರೋ ಸಾಫ್ಟ್ ಎಡ್ಜ್:

ವಿಂಡೋಸ್ 10 ಬಳಕೆದಾರರು ಎಲ್ಲಾ ಟ್ಯಾಬ್ ಗಳನ್ನು ಮ್ಯೂಟ್ ಮಾಡುವ ಸಲುವಾಗಿ ಇಯರ್ ಟ್ರಮ್ ಪ್ರಟ್ ಎನ್ನುವ ಪ್ ಅನ್ನು ಹಾಕಿಕೊಳ್ಳಬೆಕಾಗಿದೆ. ಇದು ನಿಮ್ಮ ಬ್ರೌಸರ್ ನಲ್ಲಿರುವ ಸೌಂಡ್ ಅನ್ನುಮ್ಯೂಟ್ ಮಾಡಲಿದೆ.

Best Mobiles in India

English summary
How to mute sites with autoplaying videos to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X