ವಾಟ್ಸಾಪ್ನಲ್ಲಿ ಡಿಲೀಟ್ ಆಗಿರುವ ಮೆಸೇಜ್ಗಳನ್ನು ಓದುವುದು ಹೇಗೆ?

By Tejaswini P G

  2009ರಲ್ಲಿ ಬಿಡುಗಡೆಯಾದ ವಾಟ್ಸಾಪ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಈಗ 8 ವರ್ಷಗಳೇ ಕಳೆದವು. ಇಲ್ಲಿಯವರೆಗೆ ಆಪ್ ಬಹಳಷ್ಟು ಸುಧಾರಿಕೆಗಳನ್ನು ಕಂಡಿದ್ದು ಸ್ಟೇಟಸ್ ಪೋಸ್ಟ್ ಮಾಡುವುದು, ವಾಯ್ಸ್ ಕರೆಗಳು, ವೀಡಿಯೋ ಕರೆಗಳು ಮೊದಲಾದ ಫೀಚರ್ಗಳು ಇದಕ್ಕೆ ಸೇರ್ಪಡೆಯಾಗಿದೆ. ಇತ್ತೀಚೆಗೆ ಕಂಪೆನಿಯು ವಾಟ್ಸಾಪ್ನಲ್ಲಿ 'ಡಿಲೀಟ್ ಫಾರ್ ಎವ್ರಿವನ್' ಎಂಬ ಹೊಸ ಫೀಚರ್ ಅನ್ನು ನೀಡಿದ್ದು, ಈಗ ಬಳಕೆದಾರರು ತಮ್ಮ ಸ್ನೇಹಿತರಿಗೆ ಅಥವಾ ಗ್ರೂಪ್ಗಳಿಗೆ ಚ್ಯಾಟ್ ಮೂಲಕ ಕಳುಹಿಸಿದ ಮೆಸೇಜ್ಗಳನ್ನು ಹಿಂಪಡೆಯಬಹುದಾಗಿದೆ.

  ವಾಟ್ಸಾಪ್ನಲ್ಲಿ ಡಿಲೀಟ್ ಆಗಿರುವ ಮೆಸೇಜ್ಗಳನ್ನು ಓದುವುದು ಹೇಗೆ?

  ನೀವು ತಪ್ಪಿ ಮೆಸೇಜ್ ಅನ್ನು ಬೇರೆ ಗ್ರೂಪ್ ಅಥವಾ ವ್ಯಕ್ತಿಗೆ ಕಳಹಿಸಿದ್ದರೆ ಅಥವಾ ಕಳುಹಿಸಿದ ಮೆಸೇಜ್ನಲ್ಲಿ ಏನಾದರೂ ತಪ್ಪಿದ್ದರೆ, ಅಂತಹ ಸಂದರ್ಭಗಳಲ್ಲಿ ಈ ಫೀಚರ್ ಉಪಯುಕ್ತವೆನಿಸುತ್ತದೆ. ಬ್ಲೂ ಟಿಕ್ ಗಳ ನಂತರ ವಾಟ್ಸಾಪ್ ಪಡೆದ ಮುಖ್ಯ ಬದಲಾವಣೆಗಳಲ್ಲಿ ಇದೂ ಒಂದಾಗಿದೆ. ಕಳುಹಿಸಿದ ಮೆಸೇಜ್ ಅನ್ನು ಹಿಂಪಡೆಯುವುದರ ಕುರಿತು ನಾವು ಈ ಹಿಂದೆ ಚರ್ಚಿಸಿದ್ದೇವೆ.

  ಈಗ ಈ 'ಡಿಲೀಟ್ ಫಾರ್ ಎವ್ರಿವನ್' ಫೀಚರ್ ಅನ್ನು ಮೀರಿ ,ಮೊಬೈಲ್ನಲ್ಲಿ ರೂಟಿಂಗ್ ಮೊದಲಾದ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡದೆ ಹಿಂಪಡೆಯಲಾಗಿರುವ ಮೆಸೇಜ್ ಅನ್ನು ಓದಬಹುದಾದ ಹ್ಯಾಕ್ ಒಂದು ನಮ್ಮ ಕೈಸೇರಿದೆ. ಇದನ್ನು ಮಾಡಲು ಮೊದಲಿಗೆ ನಿಮ್ಮ ಮೊಬೈಲ್ನಲ್ಲಿರುವ ವಾಟ್ಸಾಪ್ ಇತ್ತೀಚಿನ ಆವೃತ್ತಿಯದ್ದು ಎಂದು ಖಚಿತಪಡಿಸಿಕೊಳ್ಳಿ. ನಂತರ ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ.

  How to save WhatsApp Status other than taking screenshots!! Kannada
  ಹಂತ 1: ಮೊದಲಿಗೆ ಗೂಗಲ್ ಪ್ಲೇಸ್ಟೋರ್ ನಿಂದ 'ನೋಟಿಫಿಕೇಶನ್ ಹಿಸ್ಟರಿ' ಎನ್ನುವ ಆಪ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.

  ಹಂತ 2: ಅದು ನಿಮ್ಮ ಬಳಿ ಅನುಮತಿಯನ್ನು ಕೇಳಿದಾಗ 'ಎಲೌ' ಮೇಲೆ ಕ್ಲಿಕ್ ಮಾಡಿ.

  ಹಂತ 3: ಈಗ ನೀವು ವಾಟ್ಸಾಪ್ ನಲ್ಲಿ ಮೆಸೇಜ್ಗಳನ್ನು ಸ್ವೀಕರಿಸಿದಾಗ,'ನೋಟಿಫಿಕೇಶನ್ ಹಿಸ್ಟರಿ' ಆಪ್ ನಿಮಗೆ ಸೂಚನೆಯನ್ನು ನೀಡುತ್ತದಲ್ಲದೆ ಆ ಮೇಸೇಜ್ಗಳನ್ನು ಲಾಗ್ ಫಾರ್ಮಾಟ್ನಲ್ಲಿ ನೀಡುತ್ತದೆ.

  ಹಂತ 4: ಈ ಲಾಗ್ ಮೇಲೆ ಟ್ಯಾಪ್ ಮಾಡಿದರೆ, ಅದು ಅಕ್ಷರ ಮಿತಿಯೊಂದಿಗೆ ಆ ಮೆಸೇಜ್ ಅನ್ನು ತೋರಿಸುತ್ತದೆ.

  ಹಂತ 5: ಒಂದು ವೇಳೆ ಮೆಸೇಜ್ ಕಳುಹಿಸಿದವರು ಆ ಮೆಸೇಜ್ ಅನ್ನು ವಾಟ್ಸಾಪ್ ನಲ್ಲಿ ಡಿಲೀಟ್ ಮಾಡಿದರೆ, 'ನೋಟಿಫಿಕೇಶನ್ ಹಿಸ್ಟರಿ' ಆಪ್ ಅದರ ಸೂಚನೆಯನ್ನು ನಿಮಗೆ ನೀಡುತ್ತದೆ.

  ಹಂತ 6: ಡಿಲೀಟ್ ಆದ ಮೆಸೇಜ್ ಮಾತ್ರವಲ್ಲದೆ, ಆ ಮೆಸೇಜ್ ಅನ್ನು ನೀವು ಸ್ವೀಕರಿಸಿದ ಸಮಯ ,ಆ ಮೆಸೇಜ್ ಅನ್ನು ಡಿಲೀಟ್ ಮಾಡಿದ ಸಮಯ ಇತ್ಯಾದಿ ಮಾಹಿತಿಗಳನ್ನೂ ನೀವು ಈ ಆಪ್ ಮೂಲಕ ನೋಡಬಹುದಾಗಿದೆ.

  ವಾಟ್ಸಾಪ್ ನ "ಡಿಲೀಟ್ ಫಾರ್ ಎವ್ರಿವನ್" ಮೆಸೇಜ್ ಹೇಗೆ ಕೆಲಸಮಾಡುತ್ತದೆ ಎನ್ನುವುದನ್ನು ನಾವು ಈ ಸಂದರ್ಭದಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳೋಣ. ನೀವು ಅಕಸ್ಮಾತ್ ಆಗಿ ತಪ್ಪು ಮೆಸೇಜ್ ಅನ್ನು ಕಳುಹಿಸಿದ್ದರೆ ಅಥವಾ ತಪ್ಪಿ ಬೇರೆ ವ್ಯಕ್ತಿ ಅಥವಾ ಗ್ರೂಪ್ ಗೆ ಕಳುಹಿಸಿದ್ದಲ್ಲಿ ಈ ಫೀಚರ್ ಮೂಲಕ ನೀವು ಆ ಮೆಸೇಜ್ ಅನ್ನು ಹಿಂಪಡೆಯಬಹುದಾಗಿದೆ. ಹೀಗೆ ಡಿಲೀಟ್ ಮಾಡಲು ಈ ಕೆಳಗಿನ ಸೂಚನೆಗಳನು ಅನುಸರಿಸಿ.

  ಹಂತ 1: ಈ ಫೀಚರ್ ಕಾರ್ಯನಿರ್ವಹಿಸಲು ನೀವು ನಿಮ್ಮ ಮೊಬೈಲ್ ನಲ್ಲಿ ವಾಟ್ಸಾಪ್ ನ ಇತ್ತೀಚಿನ ಆವೃತ್ತಿಯನ್ನು ಹೊಂದಿರಬೇಕು. ಅಲ್ಲದೆ ನಿಮ್ಮಿಂದ ಮೆಸೇಜ್ ಪಡೆದವರೂ ಸಹ ಅವರ ಮೊಬೈಲ್ ನಲ್ಲಿ ವಾಟ್ಸಾಪ್ ನ ಇತ್ತೀಚಿನ ಆವೃತ್ತಿ ಹೊಂದಿರಬೇಕು.

  ಹಂತ 2: ನೀವು ಡಿಲೀಟ್ ಮಾಡಬಯಸುವ ಮೆಸೇಜ್ ಅನ್ನು ಆಯ್ಕೆ ಮಾಡಿ.

  ಹಂತ 3: ಪರದೆಯ ಮೇಲ್ಭಾಗದಲ್ಲಿರುವ ಡಿಲೀಟ್ ಐಕಾನ್ ಕ್ಲಿಕ್ ಮಾಡಿ.

  ಹಂತ 4: ಈಗ ಬರುವ ಡೈಲಾಗ್ ಬಾಕ್ಸ್ ನಲ್ಲಿ 'ಡಿಲೀಟ್ ಫಾರ್ ಎವ್ರಿವನ್' ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ.

  ಹಂತ 5: ಈಗ ಆ ಮೆಸೇಜ್ ನಿಮ್ಮ ಮೊಬೈಲ್ ಮತ್ತು ಅದನ್ನು ಸ್ವೀಕರಿಸಿದವರ ಮೊಬೈಲ್ನಿಂದ ಡಿಲೀಟ್ ಆಗುತ್ತದೆ.

  ವೋಟರ್ ಐಡಿಯಲ್ಲಿ ತಪ್ಪಿದ್ದರೆ ಆನ್‌ಲೈನ್‌ ಮೂಲಕ 2 ನಿಮಿಷದಲ್ಲಿ ಸರಿಪಡಿಸಿಕೊಳ್ಳಿ!!..ಹೇಗೆ ಗೊತ್ತಾ?

  Read more about:
  English summary
  It's been eight years since the launch of Whatsapp in the year 2009. Till now, the app has been added with lots of features on the way including posting status, voice calls, video calls and many. Check out the tips for on how to read deleted WhatsApp messages
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more