TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಆಂಡ್ರಾಯ್ಡ್ ಫೋನ್‌ನಲ್ಲಿ ನಷ್ಟವಾದ ಡೇಟಾ ಮರುಪಡೆದುಕೊಳ್ಳುವುದು ಹೇಗೆ?
ತಮ್ಮ ಫೋನ್‌ಗಳಿಂದ ದಿಢೀರ್ ಆಗಿ ಸಂಪರ್ಕಗಳು, ಫೈಲ್‌ಗಳು ಮತ್ತು ಇತರೆ ಡೇಟಾಗಳು ನಷ್ಟವಾಗಿಬಿಡುತ್ತವೆ. ಇದು ಹೆಚ್ಚು ನೋವನ್ನು ಉಂಟುಮಾಡುವುದು ಖಂಡಿತ. ಆದರೆ ಈ ಡೇಟಾವನ್ನು ನಿಮಿಷಗಳಲ್ಲಿ ಮರುಪಡೆದುಕೊಳ್ಳಬಹುದು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಆಂಡ್ರಾಯ್ಡ್ ರಿಕವರಿ ಯನ್ನು ಬಳಸಿಕೊಂಡು ಫೈಲ್‌ಗಳನ್ನು ಮರುಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಂದಿಲ್ಲಿ ನೋಡೋಣ.
#1
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ನೀವು ಮೊದಲಿಗೆ ಡೀಬಗ್ಗಿಂಗ್ ಮೋಡ್ ಅನ್ನು ಸಕ್ರಿಯಗೊಳಿಸಬೇಕು. ಇದನ್ನು ಮಾಡಲು ಸೆಟ್ಟಿಂಗ್ಸ್ > ಡೆವಲಪರ್ ಆಪ್ಶನ್ > ಯುಎಸ್‌ಬಿ ಡೀಬಗ್ಗಿಂಗ್
#2
ಆಂಡ್ರಾಯ್ಡ್ ರಿಕವರಿ ಚಾಲನೆ ಮಾಡಿ ಮತ್ತು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಯುಎಸ್‌ಬಿ ಮೂಲಕ ಸಂಪರ್ಕಪಡಿಸಿ. ಆನ್‌ಸ್ಕ್ರೀನ್ ಆಪ್ಶನ್ ನಿಮ್ಮ ಫೋನ್‌ನಲ್ಲಿ ಪಾಪ್ ಆಗುತ್ತದೆ. ಯುಎಸ್‌ಬಿ ಸ್ಟೋರೇಜ್ ಆಯ್ಕೆಮಾಡಿ. ನಿಮ್ಮ ಡಿವೈಸ್‌ನಲ್ಲಿ ಆಂಡ್ರಾಯ್ಡ್ ರಿಕವರಿ ನೀವು ಕಾಣುತ್ತೀರಿ ಮತ್ತು ಸ್ಟೋರೇಜ್ ಆಯ್ಕೆ ಲಭ್ಯವಾಗುತ್ತದೆ.
#3
ಡೇಟಾವನ್ನು ರಿಕವರಿ ಮಾಡುವ ಮೀಡಿಯಾ ಸ್ಟೋರೇಜ್ ಅನ್ನು ಆಯ್ಕೆಮಾಡಿ. ಡಿವೈಸ್ ಸ್ಕ್ಯಾನ್ ಮಾಡಲು ಅಪ್ಲಿಕೇಶನ್ ಆರಂಭಿಸುತ್ತದೆ. ಅಂತೆಯೇ ಫೋನ್‌ನಲ್ಲಿರುವ ಎಲ್ಲಾ ಡೇಟಾವನ್ನು ಇದು ಸ್ಕ್ಯಾನ್ ಮಾಡುತ್ತದೆ.
#4
ಸ್ಕ್ಯಾನಿಂಗ್ ಪೂರ್ಣಗೊಂಡ ನಂತರ, ಫೋನ್/ಮೆಮೊರಿ ಕಾರ್ಡ್‌ನಲ್ಲಿರುವ ಪ್ರಸ್ತುತವಿರುವ ಫೈಲ್‌ಗಳ ಪಟ್ಟಿಯನ್ನು ನೀವು ಕಾಣುತ್ತೀರಿ. ಟ್ರಿ ಮಾದರಿಯಲ್ಲಿ ಫೈಲ್‌ಗಳ ಮೂಲಕ ನಿಮಗೆ ಬ್ರೌಸ್ ಮಾಡಬಹುದಾಗಿದೆ ಅಂತೆಯೇ ಅವುಗಳನ್ನು ಪೂರ್ವವೀಕ್ಷಣೆ ಮಾಡಬಹುದಾಗಿದೆ.
#5
ನಿಮಗೆ ಬೇಕಾದ ಫೈಲ್‌ಗಳನ್ನು ನೀವು ಒಮ್ಮೆ ಲೊಕೇಟ್ ಮಾಡಿದ ನಂತರ, ಫೈಲ್ ಹೆಸರುಗಳ ಬದಿಯಲ್ಲಿ ಚೆಕ್ ಬಾಕ್ಸ್‌ಗಳನ್ನು ಮಾರ್ಕ್ ಮಾಡಿ, ಸೇವ್ ಕ್ಲಿಕ್ ಮಾಡುವ ಮೂಲಕ ಪ್ರಕ್ರಿಯೆ ನಡೆಸಿ. ಡೇಟಾವನ್ನು ಎಲ್ಲಿ ಉಳಿಸಬೇಕು ಎಂಬ ಲೊಕೇಶನ್ ಅನ್ನು ನಿರ್ದಿಷ್ಟಪಡಿಸಿ ಮತ್ತು ಮುಂದುವರಿಯಿರಿ.
#6
ರಿಕವರಿ ಯಶಸ್ವಿಯಾಗಿ ಸಂಪೂರ್ಣಗೊಂಡ ನಂತರ, ರಿಕವರಿ ಆಗಿರುವ ಫೈಲ್‌ಗಳ ಸಂಖ್ಯೆಯನ್ನು ನಿಮಗೆ ತೋರಿಸುತ್ತದೆ. ಫೈಲ್‌ಗಳ ಗಾತ್ರ ಮತ್ತು ಅದು ಎಲ್ಲಿ ಉಳಿದಿದೆ ಎಂಬುದನ್ನು ತಿಳಿಸುತ್ತದೆ. ಅಪ್ಲಿಕೇಶನ್‌ನಿಂದ ನೀವು ನೇರವಾಗಿ ಲೊಕೇಶನ್ ಪಾತ್ ಅನ್ನು ತೆರೆಯಬಹುದಾಗಿದೆ.
ಗಿಜ್‌ಬಾಟ್ ಕನ್ನಡ
ನಿಮಗಾಗಿ ಗೂಗಲ್ ಮಾಡಲಿರುವ 10 ಕಾರ್ಯಗಳು
ಲ್ಯಾಪ್‌ಟಾಪ್ ಬ್ಯಾಟರಿ ಲೈಫ್ ಹೆಚ್ಚಿಸಲು ಟಾಪ್ ಟಿಪ್ಸ್‌ಗಳು
ಟೊಮೊಟೊ/ಆಲೂಗೆಡ್ಡೆಯಿಂದ ವಿದ್ಯುತ್ ಉತ್ಪಾದನೆ ಹೇಗೆ?
ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ