ಐಫೋನ್ ನ ಬ್ರೈಟ್ನೆಸ್ ಅನ್ನು ಐಓಎಸ್ ನ ಮಿತಿಗಿಂತಲೂ ಕಡಿಮೆ ಮಾಡುವುದು ಹೇಗೆ?

ಐಫೋನ್ ನಲ್ಲಿ ಐಓಎಸ್ ನೀಡುವ ಬ್ರೈಟ್ನೆಸ್ ನ ಮಿತಿಗಿಂತಲೂ ಕಡಿಮೆ ಬ್ರೈಟ್ನೆಸ್ ಬೇಕಿದ್ದರೆ 'ಆಕ್ಸೆಸಿಬಿಲಿಟಿ' ಫೀಚರ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಅದನ್ನು ಸಾಧಿಸಬಹುದು.

By Tejaswini P G
|

ನೀವು ಐಫೋನ್ ವ್ಯಸನಿಯಾಗಿದ್ದು ಹಗಲಿರುಳು ನಿರಂತರ ಐಫೋನ್ ಬಳಸುತ್ತಿದ್ದರೆ ನಿಮ್ಮ ಕಣ್ಣುಗಳ ಬಗ್ಗೆ ಖಂಡಿತ ಕಾಳಜಿ ವಹಿಸಬೇಕು. ನೀವು ರಾತ್ರಿ ಹೊತ್ತು ಐಫೋನ್ ಬಳಸುತ್ತಿದ್ದರೆ ನಿಮ್ಮ ಕಣ್ಣುಗಳ ರಕ್ಷಣೆಗಾಗಿ ಐಫೋನಿನಲ್ಲಿ ನೈಟ್ ಶಿಫ್ಟ್ ಎಂಬ ಫೀಚರ್ ಇದ್ದರೂ ಅದು ನಿಮ್ಮ ಕಣ್ಣುಗಳ ಸಂಪೂರ್ಣ ರಕ್ಷಣೆ ಮಾಡಲಾಗದು. ಹಾಗಾದರೆ ಈಗ ನೀವೇನು ಮಾಡುತ್ತೀರಿ? ನಿಮ್ಮ ಐಫೋನ್ ನ ಪರದೆಯ ಬ್ರೈಟ್ನೆಸ್ ಅಥವಾ ಹೊಳಪನ್ನು ಐಓಎಸ್ ನ ಮಿತಿಗಿಂತಲೂ ಕಡಿಮೆ ಮಾಡಬಹುದು ಎನ್ನುವುದು ನಿಮಗೆ ಗೊತ್ತೇ? ಅಲ್ಲದೆ ಇದಕ್ಕಾಗಿ ನೀವು ನಿಮ್ಮ ಸಾಧನಕ್ಕೆ ಏನೂ ಹಾನಿಯುಂಟುಮಾಡಬೇಕಾಗಿಲ್ಲ.

ಐಫೋನ್ ನ ಬ್ರೈಟ್ನೆಸ್ ಅನ್ನು ಐಓಎಸ್ ನ ಮಿತಿಗಿಂತಲೂ ಕಡಿಮೆ ಮಾಡುವುದು ಹೇಗೆ?

ನಿಮ್ಮ ಫೋನಿನ ಬ್ರೈಟ್ನೆಸ್ ಅನ್ನು ಅದರ ಕಡಿಮೆ ಮಟ್ಟಕ್ಕೆ ಸೆಟ್ ಮಾಡಿದಾಗ ಹಗಲಿನಲ್ಲಿ ಅಥವಾ ಬೆಳಕು ತುಂಬಿರುವ ಕೊಠಡಿಗಳಲ್ಲಿ ನಿಮಗೆ ಫೋನಿನ ಪರದೆಯ ಮೇಲೆ ಏನೂ ಕಾಣಿಸದು. ಆದರೆ ಕತ್ತಲೆಯಲ್ಲಿ ಇಷ್ಟೇ ಬ್ರೈಟ್ನೆಸ್ ಇದ್ದರೂ ಅದು ನಿಮ್ಮ ಕಣ್ಣುಕುಕ್ಕುವಂತೆ ಅನಿಸಬಹುದು. ಐಓಎಸ್ ನೀಡುವ ಅತ್ಯಂತ ಕಡಿಮೆ ಬ್ರೈಟ್ನೆಸ್ ನ ಸೆಟ್ಟಿಂಗ್ ಕೂಡ ನಿಮಗೆ ಹೆಚ್ಚೆನಿಸದರೆ, ನೀವು 'ಆಕ್ಸೆಸಿಬಿಲಿಟಿ' ಫೀಚರ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಅದಕ್ಕಿಂತಲೂ ಕಡಿಮೆ ಬ್ರೈಟ್ನೆಸ್ ಪಡೆಯಬಹುದು.

ಐಫೋನ್ ನ ಬ್ರೈಟ್ನೆಸ್ ಅನ್ನು ಅದರ ಮಿತಿಗಿಂತಲೂ ಕಡಿಮೆ ಮಾಡುವುದು ಹೇಗೆ?

ಐಫೋನ್ ನ ಬ್ರೈಟ್ನೆಸ್ ಅನ್ನು ಅದರ ಮಿತಿಗಿಂತಲೂ ಕಡಿಮೆ ಮಾಡಲು ನೀವು ಯಾವುದೇ 3rd ಪಾರ್ಟಿ ಆಪ್ ಅನ್ನು ನಿಮ್ಮ ಫೋನ್ ನಲ್ಲಿ ಇನ್ಸ್ಟಾಲ್ ಮಾಡಬೇಕಾಗಿಲ್ಲ. ನೀವು ಸೆಟ್ಟಿಂಗ್ಸ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಷ್ಟೆ. ಅದಕ್ಕಾಗಿ ಈ ಕೆಳಗೆ ನೀಡಿರುವ ಸೂಚನೆಗಳನ್ನು ಅನುಸರಿಸಿ

ಹಂತ 1: ಹೋಮ್ ಸ್ಕ್ರೀನ್ ನಲ್ಲಿ 'ಸೆಟ್ಟಿಂಗ್ಸ್' ತೆರೆದು 'ಜನರಲ್' ಮೇಲೆ ಕ್ಲಿಕ್ ಮಾಡಿ

ಹಂತ 2: 'ಆಕ್ಸೆಸಿಬಿಲಿಟಿ' ಆಯ್ಕೆ ಮಾಡಿ

ಹಂತ 3: 'ವಿಶನ್' ಸೆಟ್ಟಿಂಗ್ಸ್ ನ ಅಡಿಯಲ್ಲಿರುವ 'ಡಿಸ್ಪ್ಲೇ ಅಕೊಮೊಡೇಶನ್ಸ್' ಮೇಲೆ ಕ್ಲಿಕ್ ಮಾಡಿ

ಹಂತ 4: 'ರೆಡ್ಯೂಸ್ ವೈಟ್ ಪಾಯಿಂಟ್' ಎನ್ನುವ ಟಾಗಲ್ ಬಟನ್ ಅನ್ನು 'ಆನ್' ಮಾಡಿ

ಹಂತ 5: ಈಗ 'ರೆಡ್ಯೂಸ್ ವೈಟ್ ಪಾಯಿಂಟ್' ನ ಕೆಳಗೆ 'ಪರ್ಸೆಂಟೇಜ್ ಸ್ಲೈಡರ್' ಒಂದು ಮೂಡುತ್ತದೆ. ಈ ಸ್ಲೈಡರ್ ಅನ್ನು ಅತ್ತಿತ್ತ ಎಳೆಯುವ ಮೂಲಕ ಪರದೆಯ ಬ್ರೈಟ್ನೆಸ್ ಅನ್ನು ಜಾಸ್ತಿ ಅಥವಾ ಕಡಿಮೆ ಮಾಡಬಹುದು.

ಐಫೋನ್ ನ ಬ್ರೈಟ್ನೆಸ್ ಅನ್ನು ಐಓಎಸ್ ನ ಮಿತಿಗಿಂತಲೂ ಕಡಿಮೆ ಮಾಡುವುದು ಹೇಗೆ?

ನೀವು ಆ ಸ್ಲೈಡರ್ ಅನ್ನು 100% ಗೆ ಸ್ಲೈಡ್ ಮಾಡುವ ಮೂಲಕ ಸ್ಕ್ರೀನ್ ನ ಬ್ರೈಟ್ನೆಸ್ ಇನ್ನೂ ಕಡಿಮೆ ಮಾಡಬಹುದು. ಬ್ರೈಟ್ನೆಸ್ ನ ಮಟ್ಟ ಇನ್ನೂ ನಿಮಗೆ ಬೇಕಾದಷ್ಟು ಕಡಿಮೆಯಾಗಿಲ್ಲವೆಂದಾದಲ್ಲಿ "ಕಂಟ್ರೋಲ್ ಸೆಂಟರ್" ನಲ್ಲಿರುವ ಮುಖ್ಯ ಬ್ರೈಟ್ನೆಸ್ ಸ್ಲೈಡರ್ ನ ಮೂಲಕ ಪರದೆಯ ಬ್ರೈಟ್ನೆಸ್ ಅನ್ನು ಮತ್ತಷ್ಟು ಕಡಿಮೆ ಮಾಡಿ. ನೀವು ನಿಮಗೆ ಅಗತ್ಯವಾದಷ್ಟು ಬ್ರೈಟ್ನೆಸ್ ಪಡೆಯಲು ಈ ಸೆಟ್ಟಿಂಗ್ ಗಳ ಮಧ್ಯೆ ಹೊಂದಾಣಿಕೆಯನ್ನು ಮಾಡಬೇಕು.

ಸಾರಾಂಶ

ಈಗ ನೀವು ನಿಮ್ಮ ಅಗತ್ಯಕ್ಕನುಗುಣವಾಗಿ ಸ್ಕ್ರೀನ್ ಬ್ರೈಟ್ನಸ್ ಪಡೆದಿದ್ದರೆ ನಿಮ್ಮ ಮುಂದಿನ ಹೆಜ್ಜೆಯಾಗಿ ಹೋಮ್ ಸ್ಕ್ರೀನ್ ನಲ್ಲಿ ಅಗತ್ಯ ಸೆಟ್ಟಿಂಗ್ ಗಳನ್ನು ಮಾಡಬಹುದು. ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಗೆ ತಕ್ಕಂತೆ ಪರದೆಯ ಬ್ರೈಟ್ನೆಸ್ ಅನ್ನು ಸುಲಭವಾಗಿ ಹೆಚ್ಚು ಅಥವಾ ಕಡಿಮೆ ಮಾಡಲು ಅನುವಾಗುವಂತೆ ಹೋಮ್ ಸ್ಕ್ರೀನ್ ನಲ್ಲಿ ಶಾರ್ಟ್ಕಟ್ ಸೆಟ್ ಮಾಡಬಹುದು.

ಅದಕ್ಕಾಗಿ ಮೊದಲು 'ಆಕ್ಸೆಸಿಬಿಲಿಟಿ' ಸೆಟ್ಟಿಂಗ್ಸ್ ಗೆ ಹೋಗಿ 'ಆಕ್ಸೆಸಿಬಿಲಿಟಿ ಶಾರ್ಟ್ಕಟ್' ಮೇಲೆ ಕ್ಲಿಕ್ ಮಾಡಿ. ಈಗ 'ರೆಡ್ಯೂಸ್ ವೈಟ್ ಪಾಯಿಂಟ್' ಅನ್ನು ಆಯ್ಕೆ ಮಾಡಿ. ಈಗ ಹೋಮ್ ಸ್ಕ್ರೀನ್ ಗೆ ಮರಳಿ. ಈಗ ಹೋಮ್ ಸ್ಕ್ರೀನ್ ಬಟನ್ ಮೇಲೆ ಮೂರು ಬಾರಿ ಒತ್ತುವ ಮೂಲಕ ಬ್ರೈಟ್ನೆಸ್ ಫೀಚರ್ ಅನ್ನು ಆನ್ ಅಥವಾ ಆಫ್ ಮಾಡಬಹುದು!

ಸನ್ನಿಲಿಯೋನ್ ಹಿಂದಿಕ್ಕಿ ಗೂಗಲ್ ಮೋಸ್ಟ್ ಸರ್ಚಿಂಗ್ ಪಟ್ಟ ಪಡೆದಳು 'ವಾರಿಯರ್'!!ಸನ್ನಿಲಿಯೋನ್ ಹಿಂದಿಕ್ಕಿ ಗೂಗಲ್ ಮೋಸ್ಟ್ ಸರ್ಚಿಂಗ್ ಪಟ್ಟ ಪಡೆದಳು 'ವಾರಿಯರ್'!!

Best Mobiles in India

English summary
Well, there is a way by which you can reduce the brightness of your iPhone screen more than the lowest iOS limit. And yes, you don't even need to jailbreak your device for that.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X