ನಿಮ್ಮ ಡಿವೈಸ್ ನಿಂದ ತುಂಡಾಗಿರುವ ಹೆಡ್ ಫೋನ್ ಜಾಕ್ ನ್ನು ತೆಗೆಯುವುದು ಹೇಗೆ?

  ಸುಮಾರು 150 ವರ್ಷ ಕಳೆದಿದೆ.. ಪ್ರಪಂಚದ ಮೊದಲ ಹೆಡ್ ಫೋನ್ ಬಂದು. ಈಗಿನ ಇಯರ್ ಫೋನ್ ಗಳಿಗೂ ಮೊದಲು ಬಂದ ಆ ಹೆಡ್ ಫೋನ್ ಗೂ ಅಜಗಜಾಂತರ ವ್ಯತ್ಯಾಸವಿದೆ. ನೀವು ನಂಬಿದ್ರೆ ನಂಬಿ,ಮೊದಲ ಇಯರ್ ಫೋನ್ 10 ಪೌಂಡ್ ನಷ್ಟಿತ್ತು ಮತ್ತು ಅದು ಕಿವಿಗೆ ಹಾಕ್ಕೊಂಡ್ರೆ ತಲೆಯಲ್ಲ ಭಾರ ಆಗುವಂತ ತೂಕವಿತ್ತು. ಆದರೆ ಈಗಿನ ಇಯರ್ ಫೋನ್ ಗಳು ತೀರಾ ಲೈಟ್ ವೈಟ್ ಗಳಾಗಿರುತ್ತೆ ಮತ್ತು ಕಿವಿಗೆ ಹಾಕಿದ್ರೆ ಹಾಕಿಕೊಂಡಿದ್ದೀವಿ ಅನ್ನೋ ಫೀಲಿಂಗ್ ಕೂಡ ಇರದಷ್ಟು ಕಡಿಮೆ ತೂಕದ್ದಾಗಿರುತ್ತೆ.

  ನಿಮ್ಮ ಡಿವೈಸ್ ನಿಂದ ತುಂಡಾಗಿರುವ ಹೆಡ್ ಫೋನ್ ಜಾಕ್ ನ್ನು ತೆಗೆಯುವುದು ಹೇಗೆ?

  ಹಾಗಾಗಿ ಇದರ ನಿರ್ವಹಣೆ ಮಾಡುವಾಗ ಹೆಚ್ಚಿನವರು ಎಡವುದುಂಟು. ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಬೇಕಾಗಿರುವ ವಸ್ತುವನ್ನು ಕೇರ್ ಲೆಸ್ ಆಗಿ ಇಟ್ಟುಕೊಂಡಿರುತ್ತೀವಿ. ಇದೇ ಕಾರಣಕ್ಕೆ ನಿಮ್ಮ ಇಯರ್ ಫೋನ್ ನಿಮಗೆ ಒಮ್ಮೊಮ್ಮೆ ಸಮಸ್ಯೆಯುಂಟು ಮಾಡುತ್ತೆ. ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಒಂದು ಸಮಸ್ಯೆಯೆಂದರೆ ಹೆಡ್ ಫೋನ್ ನ ಜಾಕ್ ಸಾಕೆಟ್ ನಲ್ಲಿ ಸಿಕ್ಕಿಹಾಕಿಕೊಳ್ಳುವುದು. ಅದನ್ನು ತೆಗೆಯಲು ಬರದೆ ಪರದಾಡುವುದು. ಹಾಗಾಗಿ 6 ಸರಳ ವಿಧಾನಗಳನ್ನು ಇಲ್ಲಿ ಸೂಚಿಸಿದ್ದೇವೆ. ನಿಮ್ಮ ಸಾಕೆಟ್ ನಿಂದ ಇಯರ್ ಫೋನ್ ಜಾಕ್ ತೆಗೆಯುವುದು ಹೇಗೆ ಎಂದು ತಿಳಿದುಕೊಳ್ಳಿ..

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಪೆನ್ನಿನ ಕಡ್ಡಿಯ ಟ್ಯೂಬ್ ಬಳಕೆ

  ನಿಮ್ಮ ಫೋನಿನ ಒಳಗೆ ಸಿಲುಕಿಹೊಕಿಕೊಂಡಿರುವ ಜಾಕ್ ನ್ನು ನಿಮ್ಮ ಪೆನ್ನಿನ ನಿಬ್ ಅಥವಾ ಟ್ಯೂಬ್ ಬಳಸಿ ತೆಗೆಯಬಹುದು. ಸ್ವಲ್ಪ ತಾಳ್ಮೆ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಪೆನ್ನಿನ ಕಡ್ಡಿಯ ಇಂಕ್ ಇಲ್ಲದ ಭಾಗವನ್ನು ಬಳಕೆ ಮಾಡಿ, ಅಥವಾ ನಿಬ್ ನ ವಿರುದ್ಧ ಭಾಗವನ್ನು ಬಳಸಿ ಈ ಕೆಲಸ ಮಾಡಬಹುದು. ಇಯರ್ ಫೋನಿನ ಸಾಕೆಟ್ ಒಳಗೆ ಇದನ್ನು ಹಾಕಿ,ಜಾಕ್ ನ್ನು ಗ್ರಿಪ್ ಆಗುವಂತೆ ಮಾಡಿ ಎಳೆದರಾಯಿತು.

  ಕೆಲವು ಜಾತಿಯ ಅಂಟುಗಳು

  ಫೆವಿಕ್ವಿಕ್ ನಂತಹ ಅಂಟುಗಳಿಂದ ಈ ಕೆಲಸ ಆಗುವುದಿಲ್ಲ. ಆದರೆ ಕೆಲವು ಅಂಟುಗಳಿರುತ್ತೆ. ಅವು ಕೂಡಲೇ ಅಂಟುವುದಿಲ್ಲ. ಬದಲಾಗಿ ಕೆಲವು ಸೆಕೆಂಡುಗಳ ಸಮಯವನ್ನು ತೆಗೆದುಕೊಳ್ಳುತ್ತೆ. ಇಂತಹ ಅಂಟುಗಳನ್ನ ಇಯರ್ ಫೋನಿನ ಸಾಕೆಟ್ ಗೆ ಹಾಕಿ ಅದನ್ನು ಫೋನಿನಲ್ಲಿ ಸಿಲುಕಿಕೊಂಡಿರುವ ಜಾಕ್ ಗೆ ಅಂಟಿಸಿ. 30 ಸೆಕೆಂಡ್ ಕಾಯಿರಿ. ನಂತರ ಎಳೆಯಿರಿ. ಅಂಟಿನ ಅಂಶ ನಿಮ್ಮ ಜಾಕ್ ನ್ನು ಫೋನಿನಿಂದ ಹೊರ ತೆಗೆಯಲು ಸಹಾಯ ಮಾಡುತ್ತೆ.

  ಥಂಬ್ಟಾಕ್ಸ್ ಅಥವಾ ಗೋಡೆಗೋ ಚುಚ್ಚುವ ಪಿನ್ನುಗಳು, ಇಲ್ಲವೇ ಯಾವುದೇ ರೀತಿಯ ಪಿನ್ನುಗಳು

  ಪಿನ್ನುಗಳ ಬಳಕೆ ಒಂದು ಅತ್ಯುತ್ತುಮ ವಿಧಾನ. ಸಾಕೆಟ್ ಒಳಗೆ ಪಿನ್ನನ್ನು ಹಾಕಿ, ಇಯರ್ ಫೋನ್ ಸಾಕೆಟ್ ನ ಪ್ಲಾಸ್ಟಿಕ್ ಪಾರ್ಟ್ ಗೆ ತಾಗಿದಾಗ ಮುಂದಕ್ಕೆ ತಳ್ಳಿ,ತಿರುಗಿಸಿ ಎಳೆಯಿರಿ. ಈ ವಿಧಾನದಿಂದಲೂ ಈಗ ಇಯರ್ ಫೋನಿನ ಜಾಕ್ ನ್ನು ಹೊರತೆಗೆಯಬಹುದು. ಆದರೆ ಫೋನಿಗೆ ಏನೂ ತೊಂದರೆ ಮಾಡಿಕೊಳ್ಳದೆ ಕೆಲಸ ನಿರ್ವಹಿಸಿ.

  ಟೂತ್ ಪಿಕ್ ಮತ್ತು ಬಿಸಿ ಅಂಟು ಬಳಸಬಹುದು

  ಮರ ಅಥವಾ ಪ್ಲಾಸ್ಟಿಕ್ ನಿಂದ ತಯಾರಿಸಿದ ಟೂತ್ ಪಿಕ್ ಗಳನ್ನು ಬಳಸಿ ಕೂಡ ಈ ಕೆಲಸ ಮಾಡಬಹುದು. ಆದರೆ ಸರಿಯಾದ ಉದ್ದದ ಟೂತ್ ಪಿಕ್ ಬಳಕೆ ಮಾಡಿ, ಇಯರ್ ಫೋನ್ ಜಾಕಿನ ಎರಡು ಅಂಚನ್ನು ತಲುಪುವಂತಿದ್ದರೆ ಒಳಿತು. ನಿಮ್ಮ ಟೂತ್ ಪಿಕ್ ಗೆ ಸ್ವಲ್ಪವೇ ಸ್ವಲ್ಪ ಬಿಸಿ ಅಂಟನ್ನು ಬಳಸಿ, ಒಂದು ನಿಮಿಷ ತಣ್ಣಗಾಗಲು ಬಿಡಿ.ಅದನ್ನು ಫೋನಿನ ಸಾಕೆಟ್ ನಲ್ಲಿ ಹಾಕಿ ಇಯರ್ ಫೋನ್ ಜಾಕನ್ನು ತೆಗೆಯಿರಿ.

  ಪೇಪರ್ ಕ್ಲಿಪ್ ನ್ನು ಬಿಸಿ ಮಾಡಿ ಬಳಸಿ

  ಪೇಪರ್ ಹಾಕುವ ಕ್ಲಿಪ್ ಕೇವಲ ಪೇಪರ್ ಶಿಸ್ತಾಗಿರುವಂತೆ ಬಂಡಲ್ ಮಾಡಿ ಇಡಲು ಮಾತ್ರವಲ್ಲ ಬದಲಾಗಿ ನಿಮ್ಮ ಫೋನ್ ಮತ್ತು ಇಯರ್ ಫೋನಿನ ರಿಪೇರಿ ಕೆಲಸಕ್ಕೂ ಬರಲಿದೆ. ಹೇಗೆ ಅಂತೀರಾ.. ಇಲ್ಲಿದೆ ನೋಡಿ. ಪೇಪರ್ ಪಿನ್ನನ್ನು ಸ್ವಲ್ಪ ಅಗಲಿಸಿ ಸುಮಾರು 90 ಡಿಗ್ರಿಗೆ ಬೆಂಡಾಗಿರಲಿ. ಪೇಪರ್ ಕ್ಲಿಪ್ಪಿನ ಒಂದು ಭಾಗವನ್ನು ಹಿಡಿದು ಸ್ವಲ್ಪ ಬಿಸಿ ಮಾಡಿ, ಅದನ್ನು ಸಾಕೆಟ್ ಒಳಗೆ ಹಾಕಿ, ಮುಂದಕ್ಕೆ ದೂಡಿ, ಹಿಂದಕ್ಕೆ ಎಳೆಯರಿ,. ಸ್ವಲ್ಪವೇ ಸ್ವಲ್ಪ ಸಮಯದಲ್ಲಿ ನಿಮ್ಮ ಫೋನಿನ ಒಳಗೆ ಸಿಲುಕಿಕೊಂಡಿದ್ದ ಇಯರ್ ಫೋನ್ ಜಾಕ್ ನಿಮ್ಮ ಕೈಯಲ್ಲಿರುತ್ತೆ.,

  ವಿಶ್ವದಲ್ಲಿ ಜಿಯೋ ವಿಶೇಷ ದಾಖಲೆ!..ಭಾರತದ ಮೊದಲ ಕಂಪೆನಿಯೊಂದಕ್ಕೆ ಜಗತ್ತಿನಲ್ಲಿ ಮೊದಲ ಸ್ಥಾನ!!

  How to read deleted WhatsApp messages - GIZBOT KANNADA
  ಗ್ರಿಕ್ ಸ್ಟಿಕ್

  ಗ್ರಿಕ್ ಸ್ಟಿಕ್

  ಇದು ನೀವು ಬಳಸಬೇಕಾಗಿರುವ ಕೊನೆಯ ವಸ್ತುವಾಗಿದೆ. ಇದು ಇಯರ್ ಫೋನ್ ಜಾಕ್ ತೆಗೆಯಲೆಂದೇ ತಯಾರಿಸಿರುವ ಟೂಲ್ ಆಗಿದೆ. ಬೆಲೆಯೂ ಕಡಿಮೆಯೇ. ನೀವ ಅಂಗಡಿಗೆ ಹೋಗಿ ಫೋನಿನ ರಿಪೇರಿ ಮಾಡಿಸಿ ಚಾರ್ಜ್ ಮಾಡುವುದಕ್ಕಿಂತ ಇದು ಕಡಿಮೆ ಬೆಲೆಗೆ ನಿಮ್ಮ ಕೈಗೆಟುಕುತ್ತೆ. nightek.com ಮೂಲಕ ಈ ಟೂಲನ್ನು ನೀವು ಖರೀದಿ ಮಾಡಬಹುದು. $24.95 ಇದು ನಿಮ್ಮ ಕೈಗೆ ಸಿಗುತ್ತೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The devices which were the ancestors of modern-day earphones can be traced back to the ancient times of 1881, yes, almost 150 years! The first headphones were quite clunky and weighed more than ten pounds. The modern-day earphones weigh so light you don't even feel them in the palm of your hands. The
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more