Subscribe to Gizbot

ಹಾಳಾಗಿರುವ SD ಕಾರ್ಡ್ಅನ್ನು ರಿಪೇರ್ ಮಾಡುವುದು ಹೇಗೆ.?

Posted By: Precilla Dias

ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್ ಗಳ ಹಾವಳಿಯೂ ಅಧಿಕವಾದ ಹಿನ್ನಲೆಯಲ್ಲಿ ಹೆಚ್ಚಿನ ಡೇಟಾವನ್ನು ಸೇವ್ ಮಾಡಿಕೊಳ್ಳುವ ಸಲುವಾಗಿ ಮೊಬೈಲ್ ಗಳಲ್ಲಿ SD ಕಾರ್ಡ್ ಅನ್ನು ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಅಧಿಕವಾಗಿದೆ. ಆದರೆ ಕೆಲವು ಸಂದರ್ಭದಲ್ಲಿ SD ಕಾರ್ಡ್ ಹಾಳಾಗುವ ಸಾಧ್ಯತೆಗಳಿದ್ದು, ಅದರಲ್ಲಿದ್ದ ಮಾಹಿತಿಗಳು ದೊರೆಯುವುದಿಲ್ಲ.

ಹಾಳಾಗಿರುವ SD ಕಾರ್ಡ್ಅನ್ನು ರಿಪೇರ್ ಮಾಡುವುದು ಹೇಗೆ.?

ಈ ಹಿನ್ನಲೆಯಲ್ಲಿ ಹಾಳಾಗಿರುವ ನಿಮ್ಮ SD ಕಾರ್ಡ್ಅನ್ನು ರಿಪೇರಿ ಮಾಡುವುದು ಹೇಗೆ ಮತ್ತು ಅದರಲ್ಲಿ ಅಡಕವಾಗಿರುವ ಡೇಟಾವನ್ನು ಸೇವ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಮುಂದೆ ನಿಮ್ಮ SD ಕಾರ್ಡ್ ಹಾಳಾದ ಸಂದರ್ಭದಲ್ಲಿ ಇದರ ಸಹಾಯವನ್ನು ನೀವು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಲೀನ್ ಮಾಡಿ:

ಕ್ಲೀನ್ ಮಾಡಿ:

ಕೆಲವು ಸಂದರ್ಭದಲ್ಲಿ ನಿಮ್ಮ SD ಕಾರ್ಡ್ ಕಾರ್ಯನಿರ್ವಹಿಸುತ್ತಿಲ್ಲ ಎಂದರೆ ಅದರಲ್ಲಿ ಧೂಳು ಕುಳಿತಿರುವ ಸಾಧ್ಯತೆ ಇರಲಿದೆ. ಈ ಹಿನ್ನಲೆಯಲ್ಲಿ ಮೊದಲಿಗೆ ನಿಮ್ಮ SD ಕಾರ್ಡ್ಅನ್ನು ಬಟ್ಟೆಯಿಂದ ಕ್ಲಿನ್ ಮಾಡಿ ನೋಡಿರಿ. ಇದರಿಂದಲೂ ಕಾರ್ಯ ಚಾಲನೆಯಾಗುವ ಸಾಧ್ಯತೆ ಇದೆ.

ಫಾರ್ಮೆಟ್ ಮಾಡಿ:

ಫಾರ್ಮೆಟ್ ಮಾಡಿ:

ನಿಮ್ಮ SD ಕಾರ್ಡ್ ಕ್ರಾಷ್ ಆಗಿದ್ದ ಸಂದರ್ಭದಲ್ಲಿ ಮತ್ತೆ ಕಾರ್ಯ ನಿರ್ವಹಿಸುವಂತೆ ಮಾಡುವ ಸಲುವಾಗಿ ಅದನ್ನು ಕಂಪ್ಯೂಟರ್ ನೊಂದಿಗೆ ಜೋಡಿಸಿ ಫಾರ್ಮೆಟ್ ಮಾಡಿರಿ. ಹೀಗೆ ಮಾಡುವುದರಿಂದಲೂ ಮತ್ತೆ SD ಕಾರ್ಡ್ ಕಾರ್ಯನಿರ್ವಹಿಸಲು ಶಕ್ತವಾಗುತ್ತದೆ.

ಬಜೆಟ್ ಎಫೆಕ್ಟ್: ಬಿಟ್ ಕಾಯಿನ್ ಬೆಲೆಯಲ್ಲಿ ಭಾರೀ ಇಳಿಕೆ.!

ಟ್ರಬಲ್ ಶೂಟ್ ಮಾಡಿ:

ಟ್ರಬಲ್ ಶೂಟ್ ಮಾಡಿ:

ಅಲ್ಲದೇ ನಿಮ್ಮ ಮೆಮೊರಿ ಕಾರ್ಡ್ ನಲ್ಲಿ ಯಾವುದಾರು ತೊಂದರೆಗಳಿದ್ದಲ್ಲಿ ತೋರಿಸುವ ಸಲುವಾಗಿ ನಿಮ್ಮ SD ಕಾರ್ಡ್ ಅನ್ನು ಕಂಪ್ಯೂಟರ್ ನೊಂದಿಗೆ ಜೋಡಿಸಿ ಮತ್ತು ಅದರಲ್ಲಿ ಟ್ರಬಲ್ ಶೂಟ್ ಮಾಡಿರಿ. ಇದರಿಂದಾಗಿಯೂ ನಿಮ್ಮ SD ಕಾರ್ಡ್ ಹಿಂದಿನಂತೆ ಕಾರ್ಯನಿರ್ವಹಿಸಲು ಶುರು ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Repair a Crashed SD Card a using the simple and easy way that will help you to repair a crashed SD Card. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot