ಒಂದು ಫೋನಿನಿಂದ ಮತ್ತೊಂದು ಫೋನಿಗೆ ' ಮೊಬೈಲ್ ಗೇಮ್' ವರ್ಗಾಯಿಸುವುದು ಹೇಗೆ?

|

ಯಾವಾಗ ನಾವು ಹೊಸದಾಗಿ ಒಂದು ಸ್ಮಾರ್ಟ್ ಫೋನ್ ನ್ನು ಖರೀದಿಸುತ್ತೀವೋ ಆಗ ಆಗುವ ದೊಡ್ಡ ತಲೆನೋವಿನ ವಿಚಾರವೆಂದರೆ ನಮ್ಮ ಹಳೆಯ ಫೋನ್ ನಲ್ಲಿರುವ ಡಾಟಾಗಳು, ಗೇಮ್ ಗಳು ಮತ್ತು ಎಲ್ಲಾ ಆಪ್ ಗಳನ್ನು ಆ ಫೋನಿನಿಂದ ಹೊಸ ಫೋನಿಗೆ ಟ್ರಾನ್ಫರ್ ಮಾಡುವುದು ಹೇಗೆ ಎಂಬುದೇ ಆಗಿದೆ. ಆದರೆ ಆಪ್ ಗಳು ಮತ್ತು ಡಾಟಾಗಳು ನಮ್ಮ ಸ್ಮಾರ್ಟ್ ಫೋನಿನಿಂದ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳಬಹುದು ಅಥವಾ ಸುಲಭದಲ್ಲಿ ಟ್ರಾನ್ಫರ್ ಮಾಡಲು ಹಲವು ಆಪ್ ಗಳು ಕೂಡ ಲಭ್ಯವಿದೆ. ಅಷ್ಟೇ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಇದನ್ನು ಸಾಧಿಸಲು ಪ್ರೀಇನ್ಸಾಲ್ಡ್ ಆಪ್ ಗಳು ಕೂಡ ಲಭ್ಯವಿದೆ.

ಒಂದು ಫೋನಿನಿಂದ ಮತ್ತೊಂದು ಫೋನಿಗೆ ' ಮೊಬೈಲ್ ಗೇಮ್' ವರ್ಗಾಯಿಸುವುದು ಹೇಗೆ?

ಆದರೆ ಗೇಮ್ಸ್ ಗಳನ್ನು ಟ್ರಾನ್ಸ್ ಫರ್ ಮಾಡುವುದು ಸ್ವಲ್ಪ ಕಷ್ಟದ ಕೆಲಸ.ಒಂದು ವೇಳೆ ರೀಇನ್ಸ್ಟಾಲ್ ಮಾಡಿಕೊಂಡರೆ ಇದುವರೆಗೆ ನೀವು ಆ ಗೇಮ್ ನಲ್ಲಿ ಸಾಧಿಸಿದ ಪ್ರೊಗ್ರೆಸ್ ಎಲ್ಲವೂ ನಶಿಸಿ ಹೋಗಿರುತ್ತದೆ.

ಇದೀಗ ನಿಮ್ಮ ಮುಂದೆ ಎರಡು ಆಯ್ಕೆಗಳಿದೆ. ಒಂದು ನೀವು ಈ ಮೊದಲು ಸಾಧಿಸಿದ ಎಲ್ಲಾ ಗೇಮಿನ ಸಾಧನೆಯನ್ನು ಕಳೆದುಕೊಂಡು ಹೊಸದಾಗಿ ಇನ್ಸ್ಟಾಲ್ ಮಾಡಿ ಗೇಮ್ ಆರಂಭಿಸುವುದು ಅಥವಾ ಹಳೆಯ ಫೋನಿನಲ್ಲಿರುವುದನ್ನು ಟ್ರಾನ್ಸ್ಫರ್ ಮಾಡಿಕೊಂಡು ಮುಂದುವರಿಯುವುದು. ಖಂಡಿತವಾಗಿಯೂ ಎಲ್ಲರೂ ಎರಡನೆಯದ್ದನ್ನೇ ಆಯ್ಕೆ ಮಾಡಿಕೊಳ್ಳುತ್ತೀರಿ ಅಲ್ಲವೇ?

ಹಾಗಾದ್ರೆ ಎರಡನೆಯದ್ದನ್ನು ಸಾಧಿಸುವುದು ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ನಾವು ವಿವರಣೆ ನೀಡಿದ್ದೇವೆ. ನಿಮ್ಮ ಗೇಮ್ ಗಳನ್ನು ಒಂದು ಫೋನಿನಿಂದ ಇನ್ನೊಂದು ಫೋನಿಗೆ ಟ್ರಾನ್ಫರ್ ಮಾಡಲು ಎರಡು ವಿಧಾನಗಳಿವೆ. ಮುಂದೆ ಓದಿ.

ವಿಧಾನ 1: ಗೂಗಲ್ ಮಾರ್ಗ

ಗೂಗಲ್ ಪ್ಲೇ ಗೇಮ್ಸ್ ಅನ್ನೋ ಆಪ್ ನ್ನು ಬಿಡುಗಡೆಗೊಳಿಸಿದ್ದು ಇದು ಬಳಕೆದಾರರಿಗೆ ತಮ್ಮ ಗೇಮಿನ ಪ್ರೊಗ್ರೆಸ್ ಬಗ್ಗೆ ಟ್ರ್ಯಾಕ್ ಇಟ್ಟುಕೊಳ್ಳುವುದಕ್ಕೆ ಮತ್ತು ಹಲವು ಡಿವೈಸ್ ಗಳಲ್ಲಿ ಗೇಮಿನ ಡಾಟಾವನ್ನು ಸಿನ್ಕ್ರನೈಜ್ ಮಾಡಿಟ್ಟುಕೊಳ್ಳುವುದಕ್ಕೆ ನೆರವಾಗುತ್ತದೆ. ನಿಮ್ಮ ಜಿಮೇಲ್ ಅಕೌಂಟಿಗೆ ಲಿಂಕ್ ಆಗಿರುವ ಎಲ್ಲಾ ಗೇಮಿನ ಪ್ರೊಗ್ರೆಸ್ ನ್ನು ನೀವಿಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಬಹುದು.

ಗೂಗಲ್ ಪ್ಲೇ ಸ್ಟೋರ್ ನಿಂದ ಆಪ್ ನ್ನು ಇನ್ಸ್ಟಾಲ್ ಮಾಡಿ ಮತ್ತು ಡೌನ್ ಲೋಡ್ ಮಾಡಿಕೊಳ್ಳಿ.ಆಂಡ್ರಾಯ್ಡ್ ನ ಹೆಚ್ಚಿನ ಗೇಮ್ ಗಳು ಇಂದಿನ ದಿನಗಳಲ್ಲಿ ಗೂಗಲ್ ಪ್ಲೇ ಸರ್ವೀಸ್ ನ್ನು ರನ್ ಆಗುವುದಕ್ಕಾಗಿ ಬೇಡುತ್ತದೆ. ಈ ಆಪ್ ನೀವಿರುವ ಗೇಮ್ ನ್ನು ಸ್ವಯಂಚಾಲಿತವಾಗಿ ಡಿಟೆಕ್ಟ್ ಮಾಡುತ್ತದೆ ಮತ್ತು ನೀವು ಆಪ್ ಬಳಸಿ ಗೇಮಿನ ಲಾಗಿನ್ ಆಗುವಂತೆ ಹೇಳುತ್ತದೆ.

ಒಂದು ವೇಳೆ ಆಪ್ ನಿಮಗೆ ಲಾಗಿನ್ ಆಗಲು ಹೇಳದೇ ಇದ್ದಲ್ಲಿ ನೀವು ಮಾನ್ಯುವಲ್ ಆಗಿ ಗೂಗಲ್ ಅಕೌಂಟ್ ಬಳಸಿ ಗೇಮಿಗೆ ಲಾಗಿನ್ ಆಗಬಹುದು.ಹಲವಾರು ಗೇಮ್ ಗಳು ಮಾನ್ಯುವಲ್ ಅಪ್ ಲೋಡ್ ನ್ನು ಬೇಡುತ್ತದೆ ಮತ್ತು ಗೂಗಲ್ ಕ್ಲೌಡ್ ನಲ್ಲಿ ಮತ್ತೊಂದು ಡಿವೈಸ್ ಜೊತೆಗೆ ಸಿನ್ಕ್ರನೈಜೇಷನ್ ಗೆ ಸಹಾಯ ಮಾಡುತ್ತದೆ.

ವಿಧಾನ 2: ಸೋಷಿಯಲ್ ಮೀಡಿಯಾ ಮಾರ್ಗ

ಇಂದಿನ ದಿನಗಳಲ್ಲಿ ಹೆಚ್ಚಿನ ಗೇಮ್ ಗಳು ಫೇಸ್ ಬುಕ್ ಅಕೌಂಟ್ ಅಥವಾ ಗೂಗಲ್ ಅಕೌಂಟ್ ಮೂಲಕ ಲಾಗಿನ್ ಆಗುವಂತೆ ಹೇಳುತ್ತದೆ. ಗೇಮ್ ಗಳ ಡಾಟಾ ಸಿನ್ಕ್ರನೈಜೇಷನ್ ಗಾಗಿ ನೀವು ಸೋಷಿಯಲ್ ಮೀಡಿಯಾ ಅಕೌಂಟ್ ಗಳಾದ ಫೇಸ್ ಬುಕ್ ಅಥವಾ ಇತರೆ ಯಾವುದೇ ಅಕೌಂಟ್ ನ್ನು ಸೆಟ್ ಮಾಡಿಕೊಂಡಿಟ್ಟಲ್ಲಿ ಅದು ಸ್ವಯಂಚಾಲಿತವಾಗಿ ಗೇಮ್ ಸಿಂಕ್ ಗೆ ಅವಕಾಶ ನೀಡುತ್ತದೆ.

ಸಿಂಕ್ ಆಗಿರುವ ಡಾಟಾವನ್ನು ಪುನಃ ಹೊಸ ಫೋನ್ ನಲ್ಲಿ ರೀಸ್ಟೋರ್ ಮಾಡುವುದಕ್ಕಾಗಿ ನೀವು ಗೇಮ್ ನ್ನು ತೆರೆಯಿರಿ ಮತ್ತು ನಿಮ್ಮ ಹಳೆಯ ಫೋನ್ ನಲ್ಲಿ ಬಳಸಲಾಗಿದ್ದ ಸೇಮ್ ಮೆಥೆಡ್ ನ್ನು ಬಳಸಿ ಗೇಮಿಗೆ ಲಾಗಿನ್ ಆಗಿ ಮತ್ತು ಡಾಟಾ ಡೌನ್ ಲೋಡ್ ಆಗುವವರೆಗೆ ಸ್ವಲ್ಪ ತಾಳ್ಮೆಯಿಂದ ಇರಿ. ಒಮ್ಮೆ ಮುಗಿದ ನಂತರ ಗೇಮ್ ನ್ನು ರೀಸ್ಟಾರ್ಟ್ ಮಾಡಿ, ಆಟವನ್ನು ಮುಂದುವರಿಸಬಹುದು.

Best Mobiles in India

English summary
How to sync game progress from one smartphone to another

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X