ಕ್ರೋಮ್ ಪಾಸ್ವರ್ಡ್ ಮ್ಯಾನೇಜರ್ ನಲ್ಲಿ ಪಾಸ್ವರ್ಡ್ ಗಳನ್ನು ಮ್ಯಾನುಯಲಿ ಸೇರಿಸುವುದು ಇಷ್ಟು ಸುಲಭಾನಾ!!!

By Gizbot Bureau
|

ಈಗಂತೂ ನಾವುಗಳೆಲ್ಲರೂ ಒಂದಲ್ಲ ಒಂದು ರೀತಿ ಗೂಗಲ್ ಮೇಲೆ ಅವಲಂಬಿತವಾಗಿ ಬಿಟ್ಟಿದ್ದೇವೆ. ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್ ನಲ್ಲಿ ಹುಡುಕುವುದು ಅನಿವಾರ್ಯವಾಗಿ ಬಿಟ್ಟಿದೆ. ತನ್ನ ಬಳಕೆದಾರರಿಗೆ ಉಪಯುಕ್ತವಾಗಲೆಂದು ಕ್ರೋಮ್ ಗಾಗಿ ಗೂಗಲ್ ಒದಗಿಸಿರುವ ಈ ಫೀಚರ್ ಅಳವಡಿಸಿಕೊಂಡರೆ ನಮಗೆ ಬಹಳ ಸಹಾಯವಾಗುತ್ತದೆ. ಅದೇನೆಂದು ಈ ಲೇಖನದ ಮೂಲಕ ನೋಡೋಣ ಬನ್ನಿ.

Chrome ಪಾಸ್ವರ್ಡ್ ಮ್ಯಾನೇಜರ್ ನಲ್ಲಿ ಪಾಸ್ವರ್ಡ್ ಗಳನ್ನು  ಸೇರಿಸುವುದು ಹೇಗೆ!!

ಗೂಗಲ್ ಇತ್ತೀಚೆಗಷ್ಟೇ ತನ್ನ ಕ್ರೋಮನ್ನು ಅಪ್ಡೇಟ್ ಮಾಡಿದೆ. ಬಿಲ್ಟ್ ಇನ್ ಪಾಸ್ವರ್ಡ್ ಮ್ಯಾನೇಜರ್ ಟೂಲ್ ನ ಸಹಾಯದಿಂದ, ಸೇವೆಗಳಿಗೆ, ಅಪ್ಲಿಕೇಶನ್ ಮತ್ತು ವೆಬ್ಸೈಟ್ ಗಳಿಗೆ ಮ್ಯಾನುಯಲಿ (ಹಸ್ತ ಚಾಲಿತವಾಗಿ) ಪಾಸ್ವರ್ಡ್ ಗಳನ್ನು ಸೇರಿಸಬಹುದಾಗಿದೆ.

ಈ ಸಾಮರ್ಥ್ಯವು ಕ್ರೋಮ್ ನ ಡೆಸ್ಕ್ ಟಾಪ್ ವರ್ಷನ್ ಗೆ ಸ್ವಲ್ಪ ಸಮಯದವರೆಗೆ ಇತ್ತು. ಈಗ ಕಂಪನಿಯು ಕ್ರೋಮ್ ನ ಆಂಡ್ರಾಯ್ಡ್ ವರ್ಷನ್ ಗೆ ಕೂಡ ಈ ವೈಶಿಷ್ಟ್ಯವನ್ನು ತಂದಿದೆ. ಪಾಸ್ವರ್ಡ್ ಗಳನ್ನು ಮ್ಯಾನುಯಲಿ ಸೇರಿಸಬಹುದಾದ ಫೀಚರ್ ನಿಂದ, ಬಳಕೆದಾರರು ಪಾಸ್ವರ್ಡ್ ಗಳನ್ನು ಕ್ರೋಮ್‌ನ ಪಾಸ್ವರ್ಡ್ ಮ್ಯಾನೇಜರ್ ನಲ್ಲಿ ಸೇವ್ ಮಾಡಬಹುದಾದ ಆಯ್ಕೆ ಇದೆ ಆದರೆ ಅದಕ್ಕಾಗಿ ಕ್ರೋಮ್ ನ ಸೇವ್ ಪಾಸ್ವರ್ಡ್ ಪ್ರಾಂಪ್ಟ್ ಗಾಗಿ ಕಾಯುವ ಅಗತ್ಯವೇ ಇಲ್ಲದಂತೆ.

ಕೆಲವು ಸಲ ಕ್ರೋಮ್ ಪ್ರಾಂಪ್ಟ್ ಅನ್ನು ಮಿಸ್ ಮಾಡುವುದರಿಂದ, ಈ ಕಾರ್ಯವಿಧಾನ ಬಳಕೆದಾರರಿಗೆ ಬಹಳ ಉಪಯೋಗವಾಗಿದೆ. ಹೀಗಾಗಿ, ನೀವೇನಾದರೂ ಹೊಸ ಪಾಸ್ವರ್ಡ್ ನ್ನು, ಕ್ರೋಮ್ ಮೂಲಕ ಗೂಗಲ್ ಪಾಸ್ವರ್ಡ್ ಮ್ಯಾನೇಜರ್ ಅಲ್ಲಿ ಮ್ಯಾನುಯಲಿ ಸೇರಿಸಲು

ಪ್ರಯತ್ನಿಸುತ್ತಿದ್ದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ :

ಆಂಡ್ರಾಯ್ಡ್ ನಲ್ಲಿ ಪಾಸ್ವರ್ಡ್ ಗಳನ್ನು ಮ್ಯಾನುಯಲಿ ಸೇರಿಸಲು ಅನುಸರಿಸಬೇಕಾದ ಕ್ರಮಗಳು

1. ಗೂಗಲ್ ಕ್ರೋಮ್ ನ ಹೊಸ/ಇತ್ತೀಚಿನ ವರ್ಷನ್ ನನ್ನು ಅಪ್ಡೇಟ್ ಮಾಡಿಕೊಳ್ಳಿ, ನಂತರ ಅದನ್ನು ಓಪನ್ ಮಾಡಿ.

2. ಬಲಗಡೆಯ ಮೇಲಿನ ತುದಿಯಲ್ಲಿ ಇರುವ ಮೂರು ಚುಕ್ಕಿ ಗಳ ಮೇಲೆ ಈಗ ಟ್ಯಾಪ್ ಮಾಡಿ ಮತ್ತು ಸೆಟ್ಟಿಂಗ್ಸ್ ಅನ್ನು ಒತ್ತಿ.

3. ಕೆಳಗಡೆ ಗೆ ಸ್ಕ್ರೋಲ್ ಮಾಡಿ ಮತ್ತು ಪಾಸ್ವರ್ಡ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

4. ಈಗ ಆಡ್ ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು ವೆಬ್ಸೈಟ್ ಯುಆರ್ ಎಲ್, ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ವಿವರಗಳನ್ನು ನೀಡುತ್ತಾ ಹೋಗಿ.

ಎಲ್ಲಾ ಆದ ನಂತರ ಸೇವ್ ಬಟನ್ ಅನ್ನು ಒತ್ತಿ.

ಡಿಸ್ಕ್ ಟಾಪ್ ನಲ್ಲಿ ಪಾಸ್ವರ್ಡ್ ಗಳನ್ನು ಮ್ಯಾನುಯಲಿ ಸೇರಿಸಲು ಅನುಸರಿಸಬೇಕಾದ ಕ್ರಮಗಳು

1. ಗೂಗಲ್ ಕ್ರೋಮ್ ಬ್ರೌಸರ್ ಅನ್ನು ಓಪನ್ ಮಾಡಿ ಮತ್ತು ಸೆಟ್ಟಿಂಗ್ಸ್ ಒತ್ತಿ.

2. ಅಲ್ಲಿ ಪಾಸ್ವರ್ಡ್ ಎಂಬುವುದರ ಮೇಲೆ ಕ್ಲಿಕ್ ಮಾಡಿ.

3. ಇಲ್ಲಿ ಆಡ್ ಪಾಸ್ವರ್ಡ್ ಎಂಬ ಬಟನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

4. ಹೊಸದೊಂದು ವಿಂಡೋ ಓಪನ್ ಆಗುತ್ತದೆ ಅಲ್ಲಿ ಲಾಗಿನ್ ವಿವರಗಳನ್ನು ನೀಡಿ.

5. ಎಲ್ಲಾ ವಿವರಗಳನ್ನು ಕೊಟ್ಟ ನಂತರ ಸೇವ್ ಬಟನ್ ಮೇಲೆ ಕ್ಲಿಕ್ ಮಾಡಿ.

ಈ ಮಾಹಿತಿ ನಿಮಗೆ ಉಪಯುಕ್ತ ವಾಯಿತೆಂದು ಭಾವಿಸುತ್ತೇವೆ.

Best Mobiles in India

Read more about:
English summary
How To Add Passwords To Chrome Password Manager Manually

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X